ಹಾಯ್ ಬೆಂಗಳೂರ್! : ಸಂಪುಟ : ೧೯, ಸಂಚಿಕೆ : ೩೭, ಜೂನ್ ೧೨, ೨೦೧೪ ಬೆಲೆ : ೧೫ ರು ಮುಖಪುಟ ಲೇಖನ : ಇನ್ಫಿ ಎಂಬ ಆಲಕ್ಕೆನೇಣು ಬಿದ್ದ ನಾಣಿ! ಸದ್ದು ಮಾಡದೆ ಹೊರ ನಡೆದ ಬಿ.ಜಿ. ಏಳೇ ಏಳು ಜನ ಬುದ್ಧಿವಂತ ಯುವಕರು ನಾರಾಯಣ ಮೂರ್ತಿ ಮತ್ತು ನಂದನ್ ನಿಲೇಕಣಿಯೆಂಬ ಪ್ರಚಂಡರ ಸಾರಥ್ಯದಲ್ಲಿ ಕಟ್ಟಿ ಬೆಳೆಸಿದ ಇನ್ಫೋಸಿಸ್‌ನ ಸಾಹಸಗಾಥೆ ಭಾರತದ ಕಾರ್ಪೊರೇಟ್ ವಲಯದ ಹೆಮ್ಮೆಯ ಕಥೆ. ಅಜಮಾಸು ವರ್ಷಕ್ಕೆ ಐವತ್ತೈದು ಸಾವಿರ ಕೋಟಿಯಷ್ಟು ವ್ಯವಹಾರ ಮಾಡುವ ಮಟ್ಟಿಗೆ ಇನ್ಫಿ ಬೆಳೆದದ್ದು ಕಾಕತಾಳೀಯವೇನಲ್ಲ. ಅದು ಶರವೇಗದಲ್ಲಿ ಬೆಳೆದು ನಿಂತ ಪರಿಯನ್ನ ಫ್ಲೂಕ್ ಎನ್ನುವ ಹಾಗೂ ಇಲ್ಲ. ತನ್ನ ಸುತ್ತ ಭಯಂಕರ ಬುದ್ಧಿವಂತರ ಮತ್ತು ಕೆಲಸಬಾಕರ ಪಡೆಯನ್ನ ಕಟ್ಟಿಕೊಂಡು ಕಣ್ಣಿಗೆ ಎಣ್ಣೆಬಿಟ್ಟುಕೊಂಡು ದುಡಿದ ಇನ್ಫಿಯ ಪ್ರತಿ ಮುಖ್ಯಸ್ಥನ ಕೆಲಸ ಕಾರ್ಯಗಳಿಂದ ಈ ಪಾಟಿ ಬೆಳವಣಿಗೆಯಾಗಿರೋದು ಸತ್ಯ. ಆರ್.ಲತಾ ಖಾಸ್‌ಬಾತ್ ಈ ಪತ್ರಿಕೋದ್ಯಮವೆಂಬುದು ಕೂಡ ಒಂದು ರೀತಿ ಯ ಧ್ಯಾನದಂತಹುದೇ! ಹಿಮಾ, I feel... ರಾಜಕಾರಣದಲ್ಲಿ ಏನೋ ತುಂಬ ಗಂಭೀರವಾದದ್ದು ಘಟಿಸಲಿದೆ. ಎಲ್ಲೋ ಏನೋ ನಡೀತಿದೆ. ಕಾರ್ತಿಕುಮಾರ್ ಕಾಣಿಸ್ತಾ ಇಲ್ಲ. ಅವನ ಪಕ್ಷದವರ‍್ಯಾರೂ ಕಾಣಿಸ್ತಿಲ್ಲ. ಫೋನಿಗೂ ಸಿಕ್ತಿಲ್ಲ. ಚೌಡೂರಪ್ಪ ತಮ್ಮ ಬಂಗಲೆಯಲ್ಲಿಲ್ಲ. ತುಂಬ ದೊಡ್ಡ ಮಟ್ಟದಲ್ಲಿ ಸರ್ಕಾರವನ್ನ ಕೆಡವೋ ಮಸಲತ್ತು ನಡೀತಿದೆಯಾ ಅಂತ ನನಗೆ ಅನುಮಾನ. ನಿನ್ನೆ ರಾತ್ರಿ ತಂಕಾ ಉಜ್ವಲ್ ಲಾರ್ಡ್ ಫೋನಿಗೆ ಸಿಗ್ತಾ ಇದ್ದ. ಇದ್ದಿದ್ದರಲ್ಲೇ ಸ್ವಲ್ಪ ನಂಬಬಹುದಾದ ಮನುಷ್ಯ. ಉಳಿದ ಪಾಲಿಟೀಷಿಯನ್ಸ್‌ಗಿಂತ ಡಿಫರೆಂಟ್ ಫೆಲೋ. ಆರ್.ಬಿ ಹಲೋ ಅನುಕಂಪದ ಅಲೆ ಎಂಬುದು ಬಹಳ ದಿನ ಇರುವುದಿಲ್ಲವಲ್ಲವೇ? ಮನುಷ್ಯನಿಗೆ ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ ಎನ್ನುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗಿಂತ ಉತ್ತಮ ಉದಾಹರಣೆ ಬೇರೊಬ್ಬರಿಲ್ಲ. ಅವರನ್ನು ಕೇಳಿ ನೋಡಿ. ಇಡೀ ದೇಶದಲ್ಲೇ ಕಾಂಗ್ರೆಸ್ ಬಕ್ಕ ಬೋರಲು ಮಲಗಿರುವಾಗ ನಾವು ಒಂಬತ್ತು ಸೀಟು ಗೆದ್ದಿದ್ದೇವೆ. ಉಳಿದ ಮೂವತ್ತೈದು ಸೀಟುಗಳನ್ನು ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷ ಗೆದ್ದಿದೆ ಎಂದು ಹೇಳುತ್ತಾರೆ. ರವಿ ಬೆಳಗೆರೆ ಬಾಟಮ್ ಐಟಮ್ ಕಾಲನ ಹೊಡೆತಕ್ಕೆ ಪ೦ಕ್ಚರ್ ಆದ ಅಂಬಾಸಡೆರ್ End of the road. ನಿನ್ನ ಬದುಕಿನ ಎಲ್ಲಾ ದಾರಿಗಳು ಮುಚ್ಚಿ ಹೋದವು, ಇನ್ನು ನಿನ್ನ ಕತೆ ಮುಗಿದಂತೆ ಅನ್ನುವುದಕ್ಕೆ ಆಂಗ್ಲಭಾಷೆಯಲ್ಲಿ ಹಾಗನ್ನುತ್ತಾರೆ. ಅಂಬಾಸೆಡರ್ ಕಾರಿನ ಪಾಲಿಗೆ ಇದು ಅಕ್ಷರಶಃ ನಿಜವಾಗಿದೆ. ಇನ್ನು ನಮ್ಮ ಹೆದ್ದಾರಿಗಳಲ್ಲಿ ಅಂಬಾಸೆಡರ್ ಓಡುವುದಿಲ್ಲ, ನಮ್ಮೂರಿನ ಕೊಳಕು ರಸ್ತೆಗಳಲ್ಲಿ ಅದರ ಚಕ್ರಗಳ ಗುರುತು ಕಾಣುವುದಿಲ್ಲ. ಮೊನ್ನೆ ಮೇ ಇಪ್ಪತ್ತೈದರಿಂದ ಈ ಕಾರಿನ ನಿರ್ಮಾಣವನ್ನು ಸ್ತಗಿತಗೊಳಿಸಿರುವುದಾಗಿ ಹಿಂದುಸ್ತಾನ್ ಮೋಟರ್ಸ್ ಕಂಪನಿ ಹೇಳಿದೆ. ಎಂಬಲ್ಲಿಗೆ ಐದೂವರೆ ದಶಕಗಳ ಕಾಲ ಭಾರತದ ರಸ್ತೆಗಳನ್ನು ರಾಜನಂತೆ ಆಳಿದ ಒಂದು ಕಾರು ಇತಿಹಾಸದ ಗರಾಜು ಸೇರಿದೆ. ರವೀ ವರದಿ ಅಂಬಿಗೆ ಕೊಕ್ ಕೊಟ್ರೆ ರಮ್ಯಾಗೆ ಬರುತ್ತೆ ಹೊಸ ಲುಕ್! ಮಂಡ್ಯ ಜಿಲ್ಲೆಯ ಕಾಂಗ್ರೆಸ್ ಅಂಗಳದಲ್ಲೀಗ ಅಲ್ಲೋಲ-ಕಲ್ಲೋಲ ಸ್ಥಿತಿ. ಲೋಕಸಭಾ ಚುನಾವಣೆಯ ಅಖಾಡಾದಲ್ಲಿ ಪಕ್ಷದ ಅಭ್ಯರ್ಥಿ ರಮ್ಯಾ ಮಕಾಡೆ ಮಲಗುತ್ತಿದ್ದಂತೆ ಆಕೆಯ ವಿರೋಧಿ ಪಡೆ ಗೆದ್ದ ಜೆಡಿಎಸ್ ಅಭ್ಯರ್ಥಿ ಪುಟ್ಟರಾಜು ಸಂಭ್ರಮಿಸಿದ್ದ ಕ್ಕಿಂತಲೂ ಹೆಚ್ಚೇ ಖುಷಿಪಟ್ಟಿದ್ದರು. ಜಂಭದ ಕೋಳಿಯನ್ನು ಮಂಡ್ಯ ಜಿಲ್ಲೆಯಿಂದಲೇ ಹೊರ ಹಾಕಿದೆವೆಂಬ ಹರ್ಷದಲ್ಲಿ ಅಂಬಿಯ ಅಭಿಮಾನಿ ಸೈನ್ಯದ ಮುಂಚೂಣಿಯ ಲ್ಲಿದ್ದ ನೈಸ್ ಧಣಿ ಅಶೋಕ್ ಖೇಣಿಯ ಅಂತರಂಗದ ಶಿಷ್ಯ ಸಚ್ಚಿದಾನಂದ ಕುಣಿದು ಕುಪ್ಪಳಿಸಿದ್ದ. ಲಕ್ಷ್ಮೀಸಾಗರ ಸ್ವಾಮಿಗೌಡ ವರದಿ ಸ್ಯಾಂಡಲ್‌ವುಡ್‌ಗೆ ಬಂದ ಮನೋರಂಜನ್ ಎಂಬ ಮರಿ ರಣಧೀರ ರಣಧೀರ ಕಮ್ಸ್ ಬ್ಯಾಕ್! ಯೆಸ್, ರವಿಚಂದ್ರನ್ ಮತ್ತೆ ರಣಧೀರನಾಗಿ ಬರುತ್ತಿದ್ದಾರೆ; ಅವರ ಮಗನ ಮೂಲಕ. ಕನಸುಗಾರ ರವಿಚಂದ್ರನ್ ಬದಲಾಗಿಲ್ಲ; ಬದಲಾಗುವುದೂ ಇಲ್ಲ ಎಂಬುದಕ್ಕೆ ಈ ಸಿನೆಮಾವೇ ಸಾಕ್ಷಿ. ಮೊನ್ನೆ ಮೇ ಮೂವತ್ತರಂದು ಬೆಂಗಳೂರಿನ ನೈಸ್ ರಸ್ತೆಯಲ್ಲಿ ‘ರಣಧೀರ’ನ ಲಾಂಚ್ ಅದ್ಧೂರಿಯಾಗಿಯೇ ನಡೆಯಿತು. ಸಾವಿರಾರು ಅಭಿಮಾನಿಗಳು ದೂರದೂರುಗಳಿಂದ ಬಂದು ಕನಸುಗಾರನನ್ನು, ಆತನ ಮಗನನ್ನೂ ಹರಸಿ ಹಾರೈಸಿದರು. ವಿಶೇಷವೆಂದರೆ ಅವತ್ತೇ ರವಿಚಂದ್ರನ್ ಬರ್ತ್‌ಡೇ ಕೂಡ. ಬಹುದಿನಗಳಿಂದ ತನ್ನ ಮಗ ಮನೋರಂಜನ್‌ನನ್ನು ನಾಯಕನಾಗಿ ಕರೆತರುವ ಕನಸು ಹೊಂದಿದ್ದ ಕನಸುಗಾರ ರವಿಯ ಕನಸು ಈಗ ಈಡೇರಿದೆ. ಲೋಕೇಶ್ ಕೊಪ್ಪದ್ ಎಲ್ಲಿಂದ ಹುಟ್ಟಿ ಬಂದೆಯೋ ಚಕ್ಕೋಡು ಬೈಲಿನ ಗಾಂಧಿ! ಕವಲೆ ದುರ್ಗದ ರಾಜರು ಕಾಸರವಳ್ಳಿಗೆ ಕುದುರೆ ಮೇಲೆ ಹೋಗುವಾಗ ಚಕ್ಕೋಡು ಬೈಲಿನ ಜಾಗವೊಂದರಲ್ಲಿ ತಂಗುತ್ತಿದ್ದು , ಅಲ್ಲೊಂದು ಪುರಾತನ ದೇವಸ್ಥಾನವಿದೆ. ಈ ದೇವಸ್ಥಾನವನ್ನೊಳಗೊಂಡ ಜಾಗ ಖಾಸಗಿ ಕುಟುಂಬದ ಕಬ್ಜದಲ್ಲಿದ್ದು ಜಾಗದ ಕುರಿತು ಕುಟುಂಬದಲ್ಲೇ ವಿವಾದವಿದೆ. ಈ ಸಂಬಂಧ ವಿವಾದ ಠಾಣೆಯ ಮೆಟ್ಟಿಲೇರಿತ್ತು ಎನ್ನಲಾಗಿದೆ. ಈ ಜಾಗ ತಮ್ಮದೆನ್ನುವ ಕುಟುಂಬದ ಧರ್ಮಸಾಯಿಗೆ ಮೊದಲು ಬೇರೆ ಹೆಸರಿತ್ತು. ಆಕೆ ಮೈಸೂರು-ಕಾರವಾರ ಮತ್ತಿತರ ಕಡೆ ಓದಿ ಕಾಲೇಜು ಅಧ್ಯಾಪಕಿಯಾಗಿದ್ದು, ನಂತರ ಧರ್ಮಸಾಯಿ ಹೆಸರಲ್ಲಿ ತಾನೊಬ್ಬಳು ಯೋಗಿನಿ ಎಂದು ತನ್ನನ್ನು ಕರೆದುಕೊಂಡು ನಾಲ್ಕೈದು ವರ್ಷದ ಹಿಂದೆ ಚಕ್ಕೋಡು ಬೈಲಿಗೆ ಬಂದಳು ಎನ್ನಲಾಗಿದೆ. ಹೀಗೆ ಬಂದ ಧರ್ಮಸಾಯಿ ಜೊತೆಗೆ ಮಹಾರಾಜ ಗಾಂಧಿ ಎಂಬ ಐಟಮ್ಮು ತೀರ್ಥಹಳ್ಳಿಗೆ ಎಂಟ್ರಿ ಕೊಟ್ಟಿದೆ. ವರದಿಗಾರ ಬೆಂಗಾಲಿ ಬಾಬು ಬಿಸ್ವಾಸ್ ಉಂಡೂ ಹೋದ ಕೊಂಡೂ ಹೋದ! ಒಬ್ಬ ರಂಗುರಂಗಿನ ಮನುಷ್ಯ ಕೊನೆಗೂ ಬಳ್ಳಾರಿ ಜಿಲ್ಲೆಯಿಂದ ತೊಲಗಿದ್ದಾನೆ. ಆತನನ್ನು ಮೊದಲು ಗುಲಾಮ ಅಂದರು. ನಂತರ ಹಿಟ್ಲರ್ ಅಂದರು. ಕೊನೆ ಕೊನೆಗೆ ಆತನಲ್ಲೂ ಅಂತಃಕರಣವಿದೆ ಅಂತ ನುಡಿದರು. ಹೀಗೆ ಕೊನೆಗೂ ಆತ ಯಾರಿಗೂ ಅರ್ಥವಾಗದೆ ಜಿಲ್ಲೆ ಯಿಂದ ಹೊರನಡೆದ. ಆ ರಂಗುರಂಗಿನ ಮನುಷ್ಯನೇ ಬಳ್ಳಾರಿ ಜಿಲ್ಲೆಯ ಡೀಸಿಯಾಗಿದ್ದ ಆದಿತ್ಯ ಆಮ್ಲಾನ್ ಬಿಸ್ವಾಸ್. ಬಳ್ಳಾರಿ ಜಿಲ್ಲೆಯ ಮೊಟ್ಟ ಮೊದಲ ಜಿಲ್ಲಾಧಿಕಾರಿ(ಕಲೆಕ್ಟರ್)ಯಾಗಿದ್ದ ಸರ್ ಥಾಮಸ್ ಮನ್ರೋ, ಆ ನಂತರ ಸ್ವತಂತ್ರ ಭಾರತದಲ್ಲಿ ಗೌರಿ ಎಸ್. ತ್ರಿವೇದಿ ಬಿಟ್ಟರೆ ಅತ್ಯಂತ ಪ್ರಖ್ಯಾತಿ ಪಡೆದವರು ಇದೇ ಬಿಸ್ವಾಸ್. ಸತೀಶ್ ಬಿಲ್ಲಾಡಿ ವರದಿ ಗಿಂಡಿಮಾಣಿ ಅನಂತ್ ಗೆಲುವಿಗೆ ಮೋದಿ ಅಲೆಯೊಂದೇ ಕಾರಣವಲ್ಲ! ಈ ಬಾರಿ ಗೆಲುವು ಸಾಧ್ಯವೇ ಇಲ್ಲ ಎಂಬುದಾಗಿ ರಾಜಕೀಯ ವಲಯದಲ್ಲಿ ಚರ್ಚೆಗೊಳಗಾಗಿದ್ದ ಅನಂತಕುಮಾರ್ ಹೆಗಡೆ ಕೆನರಾ ಲೋಕಸಭಾ ಕ್ಷೇತ್ರದಿಂದ ಗೆದ್ದಿ ದ್ದಾರೆ. ಮೊದಲ ಚುನಾವಣೆಯಲ್ಲಿ ಭಟ್ಕಳದ ಚಿತ್ತರಂಜನ್ ಹತ್ಯೆಯ ಕಾವು ಹಾಗೂ ಹಿಂದೂ ಜಾಗರಣಾ ವೇದಿಕೆಯ ಪುಂಡಾಟಿಕೆಯ ಫಲವಾಗಿ ಗೆದ್ದಿದ್ದ ಅನಂತಕುಮಾರ್ ಹೆಗಡೆಗೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಯಡಿಯೂರಪ್ಪನವರ ಪ್ರಭಾವ ಕೈ ಹಿಡಿದಿತ್ತು. ಈ ಬಾರಿ ಮೋದಿ ಅಲೆಯಿಂದ ಗೆಲುವು ಸಿಕ್ಕಿದೆ. ಪ್ರತಿ ಲೋಕಸಭಾ ಚುನಾವಣೆಯಲ್ಲೂ ಅನಂತಕುಮಾರ್ ಹೆಗಡೆಗೆ ಅದೃಷ್ಟ ಒಲಿಯುವ ಈ ಪರಿ ಕ್ಷೇತ್ರದಲ್ಲಿ ಬಿಜೆಪಿಯೊಳಗಿರುವ ಹೆಗಡೆ ವಿರೋಧಿಗಳನ್ನೇ ಕಂಗಾಲಾಗಿಸಿದೆ. ವರದಿಗಾರ ಮೋದಿ ಎದಿರು ಖರ್ಗೆ: ದೂರ ಹೋದ ದಲಿತರಿಗೆ ಗಾಳ ಹಾಕಿದಳು ಆಕ್ಕಯ್ಯ! ಲೋಕಸಭಾ ಚುನಾವಣೆಯ ನಂತರ ಖರ್ಗೆ ಹೆಸರು ಸಿಎಂ ಹುದ್ದೆಗೆ ಕೇಳಿ ಬರತೊಡಗಿತ್ತು. ಖುದ್ದು ಖರ್ಗೆ ಅವರೇ, ನಾನು ಸಿಎಂ ಕ್ಯಾಂಡಿಡೇಟ್ ಅಲ್ಲ. ಆ ಜಾಗದಲ್ಲಿ ಈಗಾಗಲೇ ಸಿದ್ದರಾಮಯ್ಯ ಕುಳಿತಿದ್ದಾರೆ. ನಾನು ಸಿಎಂ ಕ್ಯಾಂಡಿಡೇಟ್ ಅನ್ನುವ ಮೂಲಕ ಕ್ಷೇತ್ರದಲ್ಲಿ ನನ್ನ ಸೋಲಿಗೆ ಸಂಚು ಮಾಡಲಾಯಿತು ಎಂದು ಆರೋಪಿಸಿದರೂ ಅದನ್ನು ನಂಬುವ ಸ್ಥಿತಿಯಲ್ಲಿ ಯಾರೂ ಇರಲಿಲ್ಲ. ಇಂತಹ ಸಂದರ್ಭದಲ್ಲೇ ಖರ್ಗೆ ಅವರನ್ನು ಪಕ್ಷದ ಲೋಕಸಭೆ ಅಧ್ಯಕ್ಷರನ್ನಾಗಿ ಮಾಡುವ ಮೂಲಕ ಎಐಸಿಸಿ ಅಧಿನಾಯಕಿ ಸೋನಿಯಾಗಾಂ ಒಂದು ಕಲ್ಲಿಗೆ ಎರಡು ಹಕ್ಕಿ ಹೊಡೆಯಲು ಹೊರಟಿರುವುದು ಕುತೂಹಲಕಾರಿ. ಆರ್.ಟಿ.ವಿಠ್ಠಲಮೂರ್ತಿ ವರದಿ ಗುಲ್ಬರ್ಗಾ:ಖಾಸಿಂ ಅಲಿಯ ರಾಬರಿ ಗ್ಯಾಂಗು ಬೋನಿಗೆ ಬಿತ್ತು! ಗುಲ್ಬರ್ಗಾ ಮತ್ತು ಯಾದಗಿರಿ ಜಿಲ್ಲೆಯ ಹೋಲ್ ಸೇಲ್ ವ್ಯಾಪಾರಸ್ಥರು ಸಮಾಧಾನದ ನಿಟ್ಟುಸಿರುಬಿಟ್ಟಿದ್ದಾರೆ. ಈಗ್ಗೆ ಎರಡು ವರ್ಷದಿಂದ ಎರಡೂ ಜಿಲ್ಲೆಯ ವ್ಯಾಪಾರಸ್ಥರಿಗೆ ತಲೆಬೇನೆ ತಂದಿಟ್ಟಿದ್ದ ಅಲ್ಲಿನ ಕುಖ್ಯಾತ ದರೋಡೆಕೋರ ಖಾಸಿಂ ಅಲಿಯ ಗ್ಯಾಂಗು ಗುಲ್ಬರ್ಗಾದ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದೆ. ಗುಲ್ಬರ್ಗಾ ಮತ್ತು ಹೈದರಾಬಾದ್ ಹೆದ್ದಾರಿಯಲ್ಲಿ ಅಡ್ಡಾಡುವ ಲಾರಿಗಳನ್ನು ತಡೆದು ದೋಚುವುದು ಈ ಗ್ಯಾಂಗಿನ ಅಸಲಿ ಕಸಬು. ಆದರೆ, ಖಾಸಿಂ ಅಲಿಯ ಗ್ಯಾಂಗು ದೋಚುವುದರ ಜೊತೆಗೆ ಲಾರಿಯನ್ನೂ ಹೊತ್ತೊಯ್ದು ವ್ಯಾಪಾರಿಗಳನ್ನಷ್ಟೇ ಅಲ್ಲ, ಖುದ್ದು ಲಾರಿಗಳ ಮಾಲೀಕರಲ್ಲೂ ಭಯ ಹುಟ್ಟಿಸಿಬಿಟ್ಟಿದ್ದರು. ರವಿ ಕುಲಕರ್ಣಿ ವರದಿ ಬಳ್ಳಾರಿ: ಅಣ್ಣಾವ್ರ ಮಗ ಶಿವಣ್ಣ ಈಗ ಗೌ-ಡಾ ಕಣ್ರೀ... ಇದು ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕರ್ಮಕಾಂಡ. ವಿ.ವಿ. ಆರಂಭವಾಗಿ ಸರಿಯಾಗಿ ನಾಲ್ಕು ವರ್ಷ ಕಳೆದಿಲ್ಲ. ಆಗಲೇ ನಾನಾ ಹಗರಣಗಳು, ಕೊಚ್ಚೆಗಿಂತ ಕೀಳಾದ ಜಗಳಗಳು ಶುರುವಾಗಿ ಜಗಜ್ಜಾಹೀರಾಗಿವೆ. ಇವುಗಳ ಮಧ್ಯದಲ್ಲೇ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಹಾಗು ಚಲನಚಿತ್ರ ನಟ ಶಿವರಾಜ್‌ಕುಮಾರ್‌ಗೆ ಡಾಕ್ಟರೇಟ್ ಪದವಿ ಕೊಡುವ ಚಿಂತನೆ ಮಾಡಿದೆ. ಈ ವಿಚಾರಕ್ಕೆ ಜನ ಹೆಮ್ಮೆ ಪಡುತ್ತಾರೆ ಎಂಬುದರಲ್ಲಿ ದುಸರಾ ಮಾತಿಲ್ಲ. ಆದರೆ ವಿ.ವಿ.ಯ ನಿರಂತರ ಕಚ್ಚಾಟಗಳ ಮಧ್ಯದಲ್ಲೇ ಡಾಕ್ಟರೇಟ್ ಪದವಿ ಪ್ರದಾನ ವಿಚಾರವೂ ವಿವಾದದ ಅಂಗಳಕ್ಕೆ ಬರುವ ಸಾಧ್ಯತೆಯಿದೆಯಾ? ಎಂಬ ಆತಂಕವಿದೆ. ಸತೀಶ್ ಬಿಲ್ಲಾಡಿ ವರದಿ ಸಿಕ್ಕಿಬಿದ್ದ ನಕಲಿ ಡಿವೈಎಸ್ಪಿ ಗ್ಯಾನನಗೌಡ ಪಾಟೀಲ ಎಂಥವನು ಗೊತ್ತಾ? ವಿಜಾಪುರದ ಗೋಳಗುಮ್ಮಟ ಠಾಣೆಯ ಮಾಸ್ಟರ್ ಇನ್‌ವೆಸ್ಟಿಗೇಟರ್ ರವೀಂದ್ರ ಶಿರೂರು ಭಾರೀ ಮಿಕವೊಂದಕ್ಕೆ ಕ್ಯಾಚ್ ಹಾಕಿದ್ದಾರೆ. ಅಮಾಯಕ ಯುವಕರಿಗೆ ಪೊಲೀಸು ಇಲಾಖೆಯಲ್ಲಿ ನೌಕರಿ ಕೊಡಿಸುತ್ತೇನೆಂದು ತಿರುಪತಿ ನಾಮ ಹಾಕಿದ್ದ ನಕಲಿ ಡಿವೈಎಸ್ಪಿ ಗ್ಯಾನನಗೌಡ ಪಾಟೀಲ ಮತ್ತವನ ರಖಾವು ಮಂಜುಳಾ ಅಲಿಯಾಸ್ ವಂದನಾಳನ್ನು ಹೆಡೆಮುರಿಗೆ ಕಟ್ಟಿ ಹೊತ್ತೊಯ್ದು ಅಲ್ಲಿನ ದರ್ಗಾ ಜೈಲಿಗೆ ಬಿಟ್ಟು ಬಂದಿದ್ದಾರೆ. ಅಸಲಿಗೆ ಅವತ್ತು ತಮ್ಮ ಬಳಿ ಬಂದ ಮಿಸ್ಸಿಂಗ್ ಕೇಸಿನ ಕುರಿತು ಇಲ್ಲಿನ ಎ.ಪಿ.ಎಂ.ಸಿ. ಠಾಣೆಯ ಖಡಕ್ಕು ಪಿ.ಎಸ್ಸೈ ವೀಣಾನಾಯಕ್ ಕೊಂಚ ಆಸಕ್ತಿ ತೋರದಿದ್ದರೆ ಖತರ್‌ನಾಕ್ ವಂಚಕ ಗ್ಯಾನನಗೌಡ ಮತ್ತವನ ಸಖಿ ಮಂಜುಳಾ ಪೊಲೀಸರ ಕೈಗೆ ಸಿಕ್ಕಿಬೀಳುತ್ತಲೇ ಇರಲಿಲ್ಲ. ರವಿ ಕುಲಕರ್ಣಿ ಕೆಎಲ್‌ಇ ಆಸ್ಪತ್ರೆಯ ಬೆಡ್ಡಿನ ಮೇಲೆ ಅಡ್ಡಾದಿಡ್ಡಿ ಮಲಗಿದ ಯತ್ನಾಳ್ ಮಾಜಿ ಕೇಂದ್ರಮಂತ್ರಿ ಬಸನಗೌಡ ಪಾಟೀಲ ಯತ್ನಾಳ ರಿಗೆ ಜೈಲು ಭಯ. ಅದೊಂದೇ ಕಾರಣಕ್ಕೆ ಅವರೀಗ ಬೆಳಗಾವಿಯ ಕೆ.ಎಲ್.ಇ. ಆಸ್ಪತ್ರೆಯ ಹಾಸಿಗೆ ಮೇಲೆ ಅಂಗಾತ ಮಲಗಿದ್ದಾರೆ. ಅದಿಲ್ಲದಿದ್ದರೆ ವಿಜಾಪುರದ ಪೊಲೀಸರು ಅವರನ್ನು ಹೊತ್ತೊಯ್ದು ವಿಜಾಪುರದ ದರ್ಗಾ ಜೈಲಿಗೆ ಬಿಟ್ಟು ಬರುವುದು ಸತ್ಯ. ಅಸಲಿಗೆ, ನರೇಂದ್ರ ಮೋದಿ ಪ್ರಮಾಣವಚನ ಸ್ವೀಕರಿಸುವ ದಿವಸ ಮೈಮೇಲೆ ದೆವ್ವ ಹೊಕ್ಕವರಂತೆ ಯತ್ನಾಳ್ ಇಡೀ ವಿಜಾಪುರಕ್ಕೆ ಕೋಮು ದ್ವೇಷದ ಬೆಂಕಿ ಇಟ್ಟುಬಿಟ್ಟಿದ್ದರು. ವರದಿಗಾರ ನೇವಿ ಕಾಲಂ ಬೆಟ್ಟದಿಂದ ಜಾರಿ ಬಂತು ಕುಲಶೇಖರನ ಕ ಣ್ಮರೆಯ ಸಾಕ್ಷ್ಯ ಷಣ್ಮುಖಪ್ಪ ಸಾಹೇಬರಿಂದ ವಿಚಾರಣೆಗೊಳಪಟ್ಟು ವಾಪಸಾದ ಸುಮಂಗಲಾ, ಪದ್ಮಾಂಬಿಕೆ ದೃಷ್ಟಿ ಯಿಂದ ಇನ್ನೂ ಅನುಮಾನಾಸ್ಪದವಾಗಿಯೇ ತೋರುತ್ತಿ ದ್ದಳು. ಕುಲಶೇಖರ ಮತ್ತು ಸುಮಂಗಲಾ ಮಧ್ಯೆ ಅದೆಂಥದ್ದೋ ಕುತೂಹಲಕರ ಸತ್ಯಗಳು ಅಡಗಿವೆ, ಅದು ಮಗನ ಕಣ್ಮರೆಯ ಕಾರಣಗಳನ್ನು ಅಡಗಿಸಿಟ್ಟು ಕೊಂಡಿದೆ ಎಂದೇ ನಿನ್ನೆಯಿಂದ ಪದ್ಮಾಂಬಿಕೆಗೆ ಬಲವಾಗಿ ಅನ್ನಿಸತೊಡಗಿತ್ತು. ಇಲ್ಲದೇ ಹೋಗಿದ್ದರೆ ಮಗ ಕಾಣೆಯಾದ ಈ ಹೊತ್ತಿಗೇ ಮದುವೆಯಾದವಳೊಬ್ಬಳು ಹೀಗೆ ಅಚಾನಕ್ ಯಾಕೆ ಹುಡುಕಿಕೊಂಡು ಬರುತ್ತಾಳೆ, ಅವಳ ಗಂಡನ ಮನೆಯವರ ಪಾಲಿಗೂ ಸುಮಂಗಲಾ ಸದ್ಯ ಕಾಣೆಯಾದ ವ್ಯಕ್ತಿಯೇ ಅಲ್ಲವೇ ಎಂದೆಲ್ಲಾ ಹುಳು ಕೊರೆಯಲಾರಂಭಿಸಿತ್ತು ನೇವಿ
Hai Bangalore is a mass circulation weekly Kannada language tabloid published in Bangalore.Its editor is journalist Ravi Belagere.