Hi Bangalore
Hi Bangalore

Hi Bangalore

This is an e-magazine. Download App & Read offline on any device.

ಹಾಯ್ ಬೆಂಗಳೂರ್! : ಸಂಪುಟ : ೧೯, ಸಂಚಿಕೆ : ೧೨, ಡಿಸೆಂಬರ್ ೧೯, ೨೦೧೩ ಬೆಲೆ : ೧೫ ರು ಮುಖಪುಟ ಲೇಖನ ಎಲ್ಲಿ ರಾಜ್ಯ ಎಲ್ಲಿ ಅರಸ ಇಂಥ ಗೋಳೇಕೆ? ಪ್ರಜೆ ಶ್ರೀಕಂಠದತ್ತನ ಸಾವಿನ ಬಗ್ಗೆ ಸಿದ್ದರಾಮಯ್ಯ ಅತಿ ದೊಡ್ಡ ಯಡವಟ್ಟು ಮಾಡಿದ್ದಾರೆ. ಅವರಿಗೆ ಹಳೆ ಮೈಸೂರಿನ, ವಿಶೇಷವಾಗಿ ಮೈಸೂರು-ಆಸುಪಾಸಿನ ಭಾವುಕ ಅಮಾಯಕರನ್ನು ಸಂತುಷ್ಟಪಡಿಸುವ ಹುಚ್ಚು ತವಕ. ಅವರ ಸುತ್ತಲಿರುವ ಬುದ್ಧಿ ಜೀವಿಗಳ think tank ಅದೇನು ಲದ್ದಿ ಹಾಕಿತ್ತೋ, ಕಾಣೆ. ಮೈಸೂರಿನ ಪ್ರಜೆಯಾಗಿದ್ದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಎಂಬಾತನ ಸಾವಿಗೆ, ಅದೊಂದು ರಾಷ್ಟ್ರೀಯ ನಷ್ಟವೇನೋ, ಭರಿಸಲಾಗದ ಅಪಘಾತವೇನೋ ಎಂಬಂತೆ ಎರಡು ದಿನಗಳ ಶೋಕಾಚರಣೆ, ರಜೆ ಇತ್ಯಾದಿ ಘೋಷಿಸಿದ್ದಾರೆ. ರವಿ ಬೆಳಗೆರೆ ಖಾಸ್‌ಬಾತ್ ಓಡಿ ಹೋದ ಹಂತಕ ಅದೇ ಮನೆಯ ಟೆರೇಸಿನ ಮೇಲೆ ಅಂಗಾತ ಮಲಗಿದ್ದ ಮೊಟ್ಟ ಮೊದಲ ತನಿಖಾಧಿಕಾರಿ, ಉತ್ತರ ಪ್ರದೇಶ್ ಪೊಲೀಸ್ ಪಡೆಯ ದಾತಾರಾಮ್ ನೌನಾರಿಯಾ ಕಿವಿಯಲ್ಲಿ ಅಧಿಕಾರಿಗಳು ಅದೇನು ಮಂತ್ರ ಹೇಳಿದ್ದರೋ ಗೊತ್ತಿಲ್ಲ : ಆತ ಅವಸರವಸರವಾಗಿ ಪಂಚನಾಮೆ ಮುಗಿಸಿ ಆರುಷಿಯ ಶವ ಸಾಗಿಸುವ ಮುನ್ನ ಅದೇಕೋ ಒಮ್ಮೆ ಮೆಟ್ಟಿಲು ಹತ್ತಿ ಮನೆಯ ಟೆರೇಸನ್ನು ನೋಡಿ ಬಿಡೋಣ ಎಂದು ಹೊರಡುತ್ತಾನೆ. “ಟೆರೇಸ್‌ನ ಬಾಗಿಲಿಗೆ ಹಾಕಿದ ಬೀಗದ ಚಾವಿ ಕೊಡಿ" ಎಂದು ಡಾ.ರಾಜೇಶ್ ತಲವಾರ್‌ರನ್ನು ಕೇಳುತ್ತಾನೆ. ಆದರೆ ರಾಜೇಶ್ ತಲವಾರ್ ಕೊಡುವುದಿಲ್ಲ. ಆರ್.ಬಿ ಸಾಫ್ಟ್ ಕಾರ್ನರ್ ಎಂಭತ್ಮೂರನೇ ಸಂಚಿಕೆ ಕಣ್ತೆರೆಯುವ ಘಳಿಗೆ ನಾನು ಪರಮ ಹುಂಬ. ಹದಿನೆಂಟು ವರ್ಷ ಗಳಿಂದ ನೋಡುತ್ತಾ ಬಂದಿರುವ ನಿಮಗೆ ಇದು ಗೊತ್ತಿಲ್ಲದ ವಿಷಯವೇನಲ್ಲ. ಎಂಭತ್ತು ಸಂಚಿಕೆಗಳಷ್ಟೇ ಹೊರಬಂದಿದ್ದವು; ಆದರೆ ‘ಓ ಮನಸೇ..’ ಎಂಟನೆಯ ಸಂಚಿಕೆಯ ಹೊತ್ತಿಗೆ ಕರ್ನಾಟಕದಲ್ಲಿ ಮನೆಮಾತಾಗಿತ್ತು. ಅದನ್ನು ಪ್ರಕಟಿಸದೆ ಇದ್ದುದಕ್ಕೆ, ಪ್ರಕಟಣೆ ನಿಲ್ಲಿಸಿದುದಕ್ಕೆ ಕಾರಣ ಹಲವಾರಿವೆ. ಬೆಳಗೆರೆ ಹಲೋ ಮಾಡಿದ ಯಡವಟ್ಟು ಮಾನ ಹರಾಜು ಹಾಕಿತು! ಐದು ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಈ ದೇಶದ ರಾಜಕೀಯ ಚಿತ್ರ ಬದಲಾಗಲಿದೆ ಎಂಬುದಕ್ಕೆ ಸ್ಪಷ್ಟ ಸೂಚನೆಯಂತೆ ಕಾಣುತ್ತಿದೆ. ಅಂದ ಹಾಗೆ ಕಳೆದ ಒಂಭತ್ತೂವರೆ ವರ್ಷಗಳಿಂದ ರಾಷ್ಟ್ರದ ಅಕಾರ ಚುಕ್ಕಾಣಿ ಹಿಡಿದಿರುವ ಯುಪಿಎ ಮೈತ್ರಿಕೂಟ ಜನರ ವಿಶ್ವಾಸ ಕಳೆದುಕೊಂಡಿರುವುದಕ್ಕೆ ಹಲವು ಕಾರಣಗಳಿವೆ. ರವಿ ಬೆಳಗೆರೆ ಬಾಟಮ್ ಐಟಮ್ ಬದುಕಿನ ಪ್ರತಿ ಕ್ಷಣವೂ ದಿವ್ಯ ಕ್ಷಣ ಅಂದುಕೊಂಡರೆ... ದೊಡ್ಡವರು ಸತ್ತು ಹೋಗುತ್ತಾರೆ. ಎಂಥ ದೊಡ್ಡವರೇ ಆದರೂ ಸತ್ತು ಹೋಗಲೇಬೇಕು. ಗಾಂ, ನೆಹರೂ, ಇಂದಿರಾ, ರಾಜ್‌ಕುಮಾರ್, ಕುವೆಂಪು, ಬೇಂದ್ರೆ ಹೀಗೆ ಹಿರಿಯರೆನ್ನಿಸಿಕೊಂಡ ಯಾರೇ ತೀರಿ ಹೋದರೂ ಮನಸು ಮಂಕಾಗುತ್ತದೆ. ಪ್ರತಿಯೊಬ್ಬ ಹಿರಿಯನ ಸಾವೂ ಒಂದು ಶೂನ್ಯವನ್ನು ಸೃಷ್ಟಿಸುತ್ತದೆ. ಕವಿ ನರಸಿಂಹ ಸ್ವಾಮಿಗಳು ತೀರಿಕೊಂಡಾಗ ಮತ್ತೆ ಅಂಥ ಪ್ರೇಮಗೀತೆಗಳನ್ನು ಬರೆಯುವವರು ಯಾರು ಅಂತ ಪ್ರಶ್ನೆ ಕಾಡಿತ್ತು. ಪ್ರತಿ ಸಾವೂ ಇಂತಹುದೊಂದು ಪ್ರಶ್ನೆ ಬಿಟ್ಟು ಹೋಗುತ್ತದೆ. ರವೀ ವರದಿ ಹುಬ್ಬಳ್ಳಿ:ನಿಮಗೆ ಗೊತ್ತಿಲ್ಲದ ಮಾಂಸದ ಮನೆಯೊಡತಿ ನೀಲಾ! ಹುಬ್ಬಳ್ಳಿ ಹೆಣ್ಣುಮಕ್ಕಳ ಮಾರಾಟ ದಂಧೆಯ ಅಸಲಿ ಕಿಂಗ್‌ಪಿನ್ ಡಾ.ನೀಲಾ ಸವಣೂರ ಎಂಬ ಸುಕನಾತಿಗಿತ್ತಿ ನಾಟಿ ವೈದ್ಯೆ ಖಾಸಗಿ ವಾಹಿನಿಯವರ ಹಿಡನ್ ಕೆಮೆರಾದೆದಿರು ಪಿಗ್ಗಿ ಬಿದ್ದು ಬೆತ್ತಲಾಗಿ ಹೋಗಿದ್ದಾಳೆ. ನಾಟಿ ವೈದ್ಯೆ ಎಂಬ ಗೆಟಪ್ಪು ಧರಿಸಿ ಆಕೆ ನಡೆಸುತ್ತಿದ್ದ ಮದುವೆ ಬ್ರೋಕರುಗಿರಿ, ವೇಶ್ಯಾವಾಟಿಕೆ, ರಿಯಲ್ ಎಸ್ಟೇಟ್ ದಂಧೆಯ ಜೊತೆಗೆ ಸುಳ್ಳು ಜ್ಯೋತಿಷ್ಯದ ಪಾಂಡಿತ್ಯವೂ ರಾಜ್ಯದ ಜನರ ಎದುರಿಗೆ ಬಯಲಾಗಿ ಹೋಗಿದೆ. ರವಿ ಕುಲಕರ್ಣಿ ವರದಿ ಮಲೆನಾಡಿನ ಹಿರಿಮೆಯ ಸಾಹಿತಿ ನಾ.ಡಿಸೋಜ ಕಥೆಗಾರ ನಾ.ಡಿಸೋಜ ಮಡಿಕೇರಿಯಲ್ಲಿ ನಡೆಯಲಿರುವ ಎಂಭತ್ತನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಸಾಮಾಜಿಕ ಸಂದರ್ಭಗಳಿಗೆ ಸದಾ ಸ್ಪಂದಿಸುವ ನಾ.ಡಿಸೋಜರ ಆಯ್ಕೆ ಹೆಮ್ಮೆ ಮತ್ತು ಸಂತೋಷದ ಸಂಗತಿಯೇ ಆಗಿದೆ. ಶೃಂಗೇಶ್ ವರದಿ ನರ್ಸ್ ಜಯಲಕ್ಷ್ಮಿ: ಆಹಾ ಟೀವೀಲಿ ಮದ್ವೆಯಂತೆ! ‘ಝೀ ಕನ್ನಡ’ ವಾಹಿನಿಯಲ್ಲಿ ಸದ್ಯದಲ್ಲೇ ನರ್ಸ್ ಜಯಲಕ್ಷ್ಮಿಯ ‘ಸ್ವಯಂವರ’ ರಿಯಾಲಿಟಿ ಶೋ ಆರಂಭವಾಗುವ ಲಕ್ಷಣಗಳು ಕಾಣುತ್ತಿವೆ. ಈ ವಿಚಾರವಾಗಿ ಝೀ ಕನ್ನಡ ವಾಹಿನಿ ಹಾಗೂ ಜಯಲಕ್ಷ್ಮಿಮಧ್ಯೆ ಮಾತುಕತೆ ಕೂಡ ನಡೆಯುತ್ತಿದೆ. ಎಲ್ಲವೂ ಅಂದುಕೊಂಡಂತೆ ಆದಲ್ಲಿ ಶೀಘ್ರದಲ್ಲಿ ನರ್ಸ್ ಜಯಲಕ್ಷ್ಮಿಯ ‘ಸ್ವಯಂವರ’ ಪ್ರಸಾರವಾಗಲಿದೆ. ಲೋಕೇಶ್ ಕೊಪ್ಪದ್ ವರದಿ ದೊಡ್ಡೇರಿ ಮಠದ ನಿಧಿಕಳ್ಳನ ವಿರುದ್ಧ ದಂಗೆಯೆದ್ದ ಜನ ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪನವರ ಪರಮ ಗುರು, ಚಳ್ಳಕೆರೆಯ ದೊಡ್ಡೇರಿ ಮಠದ ಪರಮ ಲಂಪಟ ಸ್ವಾಮಿ ಅಪ್ಪಾಜಿಯ ನಸೀಬು ಗಟ್ಟಿ ಇದೆ. ಈಗ್ಗೆ ಕೆಲದಿನಗಳ ಹಿಂದೆ ಚಳ್ಳಕೆರೆಯ ಪೊಲೀಸರು ಈತನ ಮಠದ ಸುತ್ತ ಪಹರೆ ಕಾಯದಿದ್ದರೆ ದೊಡ್ಡೇರಿಯ ಸುತ್ತಲಿನ ಹತ್ತಳ್ಳಿಗಳ ಜನ ಅಪ್ಪಾಜಿ ಉಟ್ಟ ಕಾವಿಯ ಸಮೇತ ಆತನನ್ನು ಮಠದಿಂದ ಎತ್ತಿ ಹೊರಹಾಕಿ ಬಿಡುತ್ತಿದ್ದರು. ವರದಿಗಾರ ವರದಿ ಮತ್ತೆ ಮೈನ್ಸ್ ಧೂಳು; ಆದರೆ ಮುಕ್ಕಿದ್ದು ಮಣ್ಣು! ಬಳ್ಳಾರಿ ಮೈನ್ಸ್ ಮಗ್ಗಲು ಬದಲಿಸಿದೆ. ದೇಶದ ಆರ್ಥಿಕ ಸೂಚ್ಯಂಕ ರೇಖೆಯನ್ನು ಎತ್ತರಿಸಿದ್ದ, ಒಂದು ಹಂತದಲ್ಲಿ ರಾಜ್ಯ ವಿಧಾನಸಭೆಯನ್ನೇ ಆಳಿದ್ದ, ಐಟಿ- ಸಿನೆಮಾ ಸೇರಿದಂತೆ ಬಹುತೇಕ ಎಲ್ಲಾ ವ್ಯವಹಾರಗಳಲ್ಲೂ ಮೂಗು ತೂರಿಸಿದ್ದ, ಕಟ್ಟಕಡೆಗೆ ಅಕ್ರಮ ವೆಸಗಿದವರನ್ನೆಲ್ಲಾ ಜೈಲಿಗೆ ಕಳುಹಿಸಿದ ಬಳ್ಳಾರಿ ಮೈನ್ಸ್ ಇದೀಗ ಕಪ್ಪೆ ನುಂಗಿದ ಹಾವಿನಂತೆ ಮೆಲ್ಲನೆ ತೆವಳುತ್ತಿದೆ. ಸತೀಶ್ ಬಿಲ್ಲಾಡಿ ವರದಿ ಸುವರ್ಣನ ಸುಂದರ ಜಗತ್ತು ಇವತ್ತು ರಾತ್ರಿ ಹನ್ನೆರಡು ಗಂಟೆಗೆ ಸರಿಯಾಗಿ ನನಗೊಂದು ಕನಸು ಬೀಳುವುದಕ್ಕಿದೆ, ಆ ಕನಸಲ್ಲಿ ನನ್ನ ಮೊಬೈಲ್ ರಿಂಗ್ ಆಗುತ್ತದೆ, ಎತ್ತಿ ಕೊಂಡಾಕ್ಷಣ ಆ ಕಡೆಯಿಂದ ‘ಉದಯರೇ..’ ಅನ್ನುವ ಧ್ವನಿ ಕೇಳಿಸುತ್ತದೆ. ಆಮೇಲೆ ಸತತ ಒಂದು ಗಂಟೆಯ ಕಾಲ ಆ ಧ್ವನಿ ಮಾತಾಡುತ್ತಾ ಹೋಗುತ್ತದೆ. ಹೂಂ ಅನ್ನುವುದಷ್ಟೇ ನನ್ನ ಕೆಲಸ ಉದಯ ಮರಕಿಣಿ ನೇವಿ ಕಾಲಂ ಕಾಣೆ ಪ್ರಕರಣ ಕಲಿಸಿದ ಪಾಠ ಒಂದು, ಎರಡು, ಮೂರು ಷಣ್ಮುಖಪ್ಪ ಸಾಹೇಬರು ಈ ಪ್ರಕರಣವನ್ನು ಕೈಗೆತ್ತಿಕೊಂಡಾಗ ಅವರ ಮುಂದೆ ಅಂಥ ಒತ್ತಡಗಳೇನೂ ಇರಲಿಲ್ಲ. ಹುಡುಕಿ ಕೊಡಿ ಎನ್ನುವ ಆರ್ತತೆಯಲ್ಲಿ ಮಗ ಕುಲಶೇಖರನ ಕಾಣೆ ಪ್ರಕರಣವನ್ನು ಪದ್ಮಾಂಬಿಕೆ ಇವರ ಮಡಿಲಿಗೆ ಹಾಕಿ ಹೋದ ಮೇಲೆ ಯಾಕೋ ಅವರಿಗೇ ಇದನ್ನು ತುಂಬ ಗಂಭೀರವಾಗಿ ಪರಿಗಣಿಸಬೇಕು ಅಂತ ಅನ್ನಿಸಿತು. ನೇವಿ ಜಾನಕಿ-ಅಂಕಣ ನಾನೂ ಅವನೂ ಮತ್ತು ಹೇಳದೇ ಉಳಿದ ಕಥೆ ಚಳಿಗಾಲ ಕೊನೆಯಾಗುತ್ತಾ ಬರುತ್ತಿರುವ ಒಂದು ಮುಸ್ಸಂಜೆಯಲ್ಲಿ ನಾನೂ ಅವನೂ ಕತೆ ಹೇಗೆ ಹುಟ್ಟುತ್ತದೆ ಎಂದು ಮಾತಾಡುತ್ತಾ ಕೂತೆವು. ವಿಧಾತ್ರಿಯ ನಿಟ್ಟುಸಿರಿಗೆ ಮೋಹನನ ಪ್ರೀತಿ ಆವಿಯಾಗಿ ಹೋಯಿತು ಎಂಬ ಒಂದೇ ಒಂದು ಸಾಲು ಬರೆದು ನಾನು ಸುಮ್ಮನೆ ಕೂತಿದ್ದೆ. ಮುಂದಿನ ಸಾಲುಗಳಿಗಾಗಿ ಮನಸ್ಸು ತಡಕಾಡುತ್ತಿತ್ತು. ಜಾನಕಿ ಮರೆತ ಭಾರತ-ಅಂಕಣ ನೀರ‍್ಗಂಟಿ ಕರಿಯನುಮಪ್ಪನ ಗಡ್ಯಾರ ನಾನು ಚಿಕ್ಕವನಿದ್ದಾಗ ಅಂದರೆ ನಲವತ್ತೈದು- ಐವತ್ತು ವರ್ಷಗಳ ಹಿಂದೆ ನಮ್ಮ ಬಯಲು ಸೀಮೆಯ ಹಳ್ಳಿಗಾಡಿನ ಬದುಕಿನಲ್ಲೂ ಸಹಕಾರ ಮತ್ತು ಸ್ವಾಲಂಬನೆಗಳು ಹೆಜ್ಜೆಹೆಜ್ಜೆಗೂ ಕಾಣಸಿಗುತ್ತಿದ್ದವು. ಕೃಷಿ ಚಟುವಟಿಕೆಗಳಲ್ಲಂತೂ ಇದು ಹೆಚ್ಚಾಗಿ ನೆಲೆಯೂರಿತ್ತು. ಕೃಷಿ ಸಲಕರಣೆ, ಎತ್ತು, ಗಾಡಿ, ನೊಗ, ನೇಗಿಲು ಇತ್ಯಾದಿಗಳನ್ನು ಒಬ್ಬರಿಗೊಬ್ಬರು ಕೊಟ್ಟು ತೆಗೆದುಕೊಳ್ಳುತ್ತಿದ್ದರು. ಅಂತೆಯೇ ಒಬ್ಬರಿಗೊಬ್ಬರು ‘ಮುಯ್ಯಿ ಆಳು’ಗಳಾಗಿ ಕೆಲಸ ಮಾಡುತ್ತಿದ್ದರು. ಕೇಶವರೆಡ್ಡಿ ಹಂದ್ರಾಳ ಕೋಟೆ ಕಾಯ್ದ ತಾಯಂದಿರು-ಅಂಕಣ ಮುಖ್ಯಮಂತ್ರಿ ಸತಿಯ ಹೆಸರೇ ಪದ್ಮಾವತಿ! ಆಗಷ್ಟೇ ಹದಿಹರೆಯಕ್ಕೆ ಕಾಲಿಡುತ್ತಿದ್ದ ಮುದ್ದಿನ ಮಗಳು ಅದೊಂದು ದಿನ ಗಟ್ಟಿ ಮನಸ್ಸು ಮಾಡಿ ಅಮ್ಮನ ಎದಿರು ಕುಳಿತುಬಿಟ್ಟಿದ್ದಳು. ಅಮ್ಮನ ಮನಸ್ಸಿ ನಲ್ಲಿ ಏನೋ ಆತಂಕ. ಮನೆಯಲ್ಲಿ ಯಾರೋ ಮಗಳಿಗೆ ಬೈದಿರಬೇಕು, ಆದ್ದರಿಂದಲೇ ಮಗಳ ಕಣ್ಣುಗಳಲ್ಲಿ ದುಗುಡವಿದೆ, ಎದಿರು ಕುಳಿತವಳಿಗೆ ಒಂದಿಷ್ಟು ಸಮಾ ಧಾನದ ಮಾತು ಹೇಳಿ ಕಳುಹಿಸಿದರೆ ಸರಿ ಹೋಗು ತ್ತಾಳೆಂದು, ‘ಏನಾಯ್ತು ಮಗಳೇ?’ ಎಂದು ಕೇಳುವಷ್ಟ ರಲ್ಲೇ ಅಮ್ಮನ ಬಾಯಿಂದ ಇಂತಹದೊಂದು ಮಾತು ಹೊರಬೀಳಲೆಂದೇ ಜಾತಕ ಪಕ್ಷಿಯಂತೆ ಕಾಯುತ್ತಿದ್ದ ಈ ಯುವತಿ ಮುಂದಾಗುವ ಪರಿಣಾಮವನ್ನು ಲೆಕ್ಕಿ ಸದೇ “ಅಮ್ಮ, ನಾನು ಸಿನೆಮಾ ಸೇರಬೇಕು. ಅಲ್ಲಿ ಉತ್ತಮ ಪಾತ್ರಗಳಲ್ಲಿ ಅಭಿನಯಿಸಿ ದೊಡ್ಡ ನಟಿಯಾಗಬೇಕು ಎಂಬಾಸೆ. ಇದಕ್ಕೆ ನಿನ್ನ ಒಪ್ಪಿಗೆ ಇದೆಯೇ?" ಎಂದು ಲಕ್ಷ್ಮೀಸಾಗರ ಸ್ವಾಮಿಗೌಡ

Hai Bangalore is a mass circulation weekly Kannada language tabloid published in Bangalore.Its editor is journalist Ravi Belagere.