ಸೃಷ್ಟಿ 1030 : ಸಂಪುಟ 20, ಸಂಚಿಕೆ 42, ಜುಲೈ 16, 2015 ಖಾಸ್‌ಬಾತ್ ಒಂದೇ ಒಂದು ಘಮ ಸಾಕು: ಅದು ಎಲ್ಲೆಲ್ಲಿಯವೋ ನೆನಪು ಹೊತ್ತು ಬರುತ್ತದೆ! ನಿಮಗಾದ ಅನುಭವವೇ ನನಗೂ ಆಗುತ್ತಾ? ನಂಗದು ಗೊತ್ತಿಲ್ಲ. ಈ ಪ್ರಶ್ನೆಯನ್ನು ಉಲ್ಟಾ ಹಾಕಿ ನೋಡಿದರೆ...? ಆಗಲೂ ಅಷ್ಟೆ. I am not sure. ಕೆಲವರು ಹಾಗೆ sensitive ಆಗಿರಲಾರರೇನೋ? ಒಂದು ಸಂಗತಿ ಹೇಳ್ತೇನೆ, ಗಮನಿಸಿ. ಆಗಿನ್ನೂ ನಾನು ಒಂಬತ್ತನೇ ಕ್ಲಾಸಿನಲ್ಲಿದ್ದೆ ಅಂತ ಕಾಣುತ್ತೆ. ಹೆಚ್ಚೆಂದರೆ ಎಸ್ಸೆಸೆಲ್ಸಿ ಫೇಲಾಗಿದ್ದೆ. ಆ ಮನೆಗೆ ಅಮ್ಮ ಹೋಗುತ್ತಿದ್ದಳು. ಅದೊಂದೇ ಕಾರಣಕ್ಕೆ ನಾನು ಹೋಗುತ್ತಿದ್ದೆ. ಅದು ಗ್ರಹಾಂ ರೋಡ್‌ನಲ್ಲಿತ್ತು. ಒಂಥರಾ ಮೂಲೆ ಮನೆ. ಎಲ್ಲಿಂದಲೋ ಬಂದು ಇನ್ನೊಂದು ರಸ್ತೆ ಗ್ರಹಾಂ ರೋಡ್‌ಗೆ ತಾಕುತ್ತಿತ್ತು. ಆ ಮನೆ ದೊಡ್ಡದಿತ್ತು. ಆದರೆ ತುಂಬ ಕುಳ್ಳ ಮನೆ. ಮನೆಯಲ್ಲಿದ್ದವರು, ಯಾವುದೋ ಹಳ್ಳಿಯ ಶಾನುಭೋಗರಾ? ನೆನಪಿಲ್ಲ. ರವಿ ಬೆಳಗೆರೆ ಸಾಫ್ಟ್‌ಕಾರ್ನರ್ ಅವರಿವರ ಮಾತೇಕೆ ನೀವು ಬನ್ನಿ ಸಾಕು! ಅವತ್ತು ವಿಶೇಷ ದಿನ. ನನಗೆ ಯಾವ ದಿನವೂ ವಿಶೇಷವಲ್ಲ, ಕೆಟ್ಟ ದಿನವಲ್ಲ, ಶುಭ-ಅಶುಭಗಳೆರಡೂ ಅಲ್ಲ. ಅವರಿವರದಿರಲಿ, ನನ್ನದೇ ಬರ್ತ್ ಡೇ ಮರೆತು ಹೋಗುತ್ತೇನೆ. ಮಕ್ಕಳ ಜನ್ಮದಿನ ನೆನಪಿರುವುದಿಲ್ಲ. ಹೆಚ್ಚೆಂದರೆ, ನನ್ನ ಕೋರ್ಟು ಕಚೇರಿಗಳ ಮುಖ್ಯವಾದ date ನೆನಪಿರುತ್ತದೆ. ಆದರೂ ಕೆಲವು ದಿನಗಳು ನಮಗೆ ಗೊತ್ತಿಲ್ಲದೇನೇ ಕೊರಳಿಗೆ ಬೀಳುತ್ತವೆ. ಬೆನ್ನಿಗೆ ತಗುಲಿಕೊಳ್ಳುತ್ತವೆ. ಬೇಡವೆಂದರೂ ನೆನಪಿನಲ್ಲಿ ಉಳಿಯುತ್ತವೆ. ನಟ್ಟ ನಡುರಾತ್ರಿ ಎಬ್ಬಿಸಿ ಕೂಡಿಸಿ ಕಾಡುತ್ತವೆ. ಅಂಥ ದಿನಗಳ ಚಿಕ್ಕದೊಂದು ಪಟ್ಟಿ ಈಗ ನನ್ನ ಎದುರಿನಲ್ಲಿ ಇದೆ. ಸೆಪ್ಟಂಬರ್ ೪. ಅವತ್ತು ನಾನು ಕೊಂಚ ಮೌನಿ. ನನ್ನ ಪಾಡಿಗೆ ನಾನಿರುವ ದಿನ. ಎಲ್ಲೋ ಕಾಡಿಗೆ ಹೋಗುತ್ತೇನೆ. ಸಮುದ್ರ ದಡವಾದರೂ ಸರಿ. ನಾನು ಬೇರೆ ಏನನ್ನೂ ಮಾಡುವುದಿಲ್ಲ. ಫೋನ್ off ಮಾಡಿಡುತ್ತೇನೆ. ರವಿ ಬೆಳಗೆರೆ ಬಾಟಮ್ ಐಟಮ್ ಸರಿಯುವ ಕಾಲದ ಜೊತೆ ರೇಸಿಗೆ ಬೀಳಬೇಕು ಅಂದರೆ... ಇದು ನಿಮಗೆ ಅರ್ಥವಾಗುವುದಿಲ್ಲ ಬಿಡಿ! ಯಾರಾದರೂ ಹಾಗಂದಾಕ್ಷಣ ಪಿತ್ತ ನೆತ್ತಿಗೇರುತ್ತದೆ. ಅರೆ, ಇವನು ನನ್ನನ್ನು ಇಷ್ಟೊಂದು ಅಂಡರ್ ಎಸ್ಟಿಮೇಟ್ ಮಾಡ್ತಿದಾನಲ್ಲ, ಇವನಿಗೊಂದು ಬುದ್ಧಿ ಕಲಿಸಬೇಕು ಎಂದು ಮನಸ್ಸು ಹೇಳುತ್ತದೆ. ಎಲವೋ ಅವಿವೇಕಿ, ನಿನಗಿಂತ ಮೊದಲು ಈ ಭೂಮಿಗೆ ಬಂದವನು ನಾನು, ನನ್ನ ಅನುಭವದಷ್ಟು ನಿಂಗೆ ವಯಸ್ಸಾಗಿಲ್ಲ, ನನ್ನನ್ನೇ ಹೀಯಾಳಿಸ್ತೀಯಾ ಎಂದು ರೇಗೋಣ ಅನಿಸುತ್ತದೆ. ನಮ್ಮ ವಯಸ್ಸು, ಅನುಭವ, ಖ್ಯಾತಿ, ಸ್ಥಾನಮಾನ ಎಲ್ಲವೂ ಒಮ್ಮೆ ಕಣ್ಣಮುಂದೆ ಮೆರವಣಿಗೆ ಹೊರಡುತ್ತದೆ. ಆದರೆ ನಾಲಿಗೆ ಮಾತ್ರ ಸುಮ್ಮನಿರುತ್ತದೆ. ಯಾಕೆಂದರೆ ನಿಜಕ್ಕೂ ಅದು ನಮಗೆ ಅರ್ಥವಾಗಿರುವುದಿಲ್ಲ. ಆದರೆ ಆ ಸತ್ಯವನ್ನು ಒಪ್ಪಿಕೊಳ್ಳುವುದಕ್ಕೆ ಮನಸ್ಸು ಹಿಂದೇಟು ಹಾಕುತ್ತದೆ, ಅಹಂ ನಿರಾಕರಿಸುತ್ತದೆ. ರವಿ ಬೆಳಗೆರೆ ಹಲೋ ಮೇಲಿನ ಹಂತದಲ್ಲಿ ಭ್ರಷ್ಟಾಚಾರ ಹೆಚ್ಚಿದರೆ ಕೆಳ ಹಂತದಲ್ಲಿ ಬದುಕು ದುಸ್ತರವಾಗುತ್ತದೆ ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರ ರಾವ್ ಪುತ್ರ ಅಶ್ವಿನ್ ರಾವ್ ಹೆಸರು ಒಂದು ಕೋಟಿ ರುಪಾಯಿ ಲಂಚ ಕೇಳಿದ ಪ್ರಕರಣದಲ್ಲಿ ಸಿಲುಕುತ್ತಿದ್ದಂತೆಯೇ ರಾಜ್ಯಾದ್ಯಂತ ವ್ಯಾಪಕ ಹೋರಾಟ ಆರಂಭವಾಗಿದೆ. ಅಂದ ಹಾಗೆ ಈ ವಿಷಯದಲ್ಲಿ ಸಿದ್ದರಾಮಯ್ಯ ಸರ್ಕಾರ ಅನಗತ್ಯವಾಗಿ ತಿಪ್ಪೆ ಸಾರಿಸುತ್ತಿರುವುದು ಮತ್ತು ತಮ್ಮ ವಿರುದ್ಧ ಕಳಂಕದ ಮಾತು ಕೇಳಿ ಬಂದ ಕೂಡಲೇ ಗೌರವಯುತವಾಗಿ ರಾಜೀನಾಮೆ ನೀಡುವುದು ಲೋಕಾಯುಕ್ತರ ಕೆಲಸವಾಗಿತ್ತು. ಅಂದ ಹಾಗೆ ಲೋಕಾಯುಕ್ತ ಹಾಗೂ ನ್ಯಾಯಾಂಗದ ವಿಷಯದಲ್ಲಿ ವ್ಯವಸ್ಥೆಗೆ ಇನ್ನೂ ಗೌರವ ಉಳಿದುಕೊಂಡಿದೆ. ರಾಜಕಾರಣಿಗಳ ಕುರಿತು ಮಾತನಾಡಿದಷ್ಟು ಸುಲಭವಾಗಿ ಯಾರೂ ಈ ಸಂಸ್ಥೆಗಳ ವಿರುದ್ಧ ಮಾತನಾಡುವುದಿಲ್ಲ. ಅದರರ್ಥ, ರಾಜಕಾರಣದಲ್ಲಿ ಒಳ್ಳೆಯವರೇ ಇಲ್ಲವೆಂದಲ್ಲ. ಬಹುತೇಕ ಮಂದಿ ಇದ್ದಾರೆ. ಆದರೆ ಅವರ ಪ್ರತಿಯೊಂದು ಹೆಜ್ಜೆಗಳ ಕುರಿತೂ ಜನ ಒಂದು ಕಣ್ಣಿಟ್ಟೇ ಇರುತ್ತಾರೆ. ಈ ಹೆಜ್ಜೆಗಳ ಪೈಕಿ ಯಾವುದು ಸರಿ, ಯಾವುದು ತಪ್ಪು ಎಂದು ವಿಶ್ಲೇಷಿಸುತ್ತಾರೆ. ಅದೇನೂ ತಪ್ಪಲ್ಲ. ಜನತಂತ್ರ ವ್ಯವಸ್ಥೆಯಲ್ಲಿ ಜನರಿಂದ ಆಯ್ಕೆಯಾದವರು ಪದೇಪದೆ ಇಂತಹ ಅಗ್ನಿಪರೀಕ್ಷೆಗೆ ಗುರಿಯಾಗಬೇಕಾಗುತ್ತದೆ. ರವಿ ಬೆಳಗೆರೆ ಮುಖಪುಟ ವರದಿ ಲೋಕಾ ಎಂಬ ಹುತ್ತಕ್ಕೆ ಹೊಟ್ಟೆ ಕೃಷ್ಣನೇ ಕರಿ ನಾಗರ! ಲೋಕಾಯುಕ್ತ ಸಂಸ್ಥೆಯ ವ್ಯವಸ್ಥೆಯನ್ನ ಬುಡಮೇಲು ಮಾಡಿ ಲೋಕಾ ನ್ಯಾಯಮೂರ್ತಿ ವೈ.ಭಾಸ್ಕರರಾವ್‌ರವರಿಗೆ ಶನಿ ಸಂತತಿಯಂತೆ ಹೆಗಲೇರಿದ್ದು ಖತರ್ನಾಕ್ ಸುಲಿಗೆಕೋರರ ಹಿಂಡು. ದಶಕಗಳ ಹಿಂದೆ ಪ್ಲೇಟ್ ಊಟಕ್ಕೂ ತಟ್ಟಾಡಿ ಈಗ ನೂರಾರು ಕೋಟಿ ಒಡೆಯನೆನಿಸಿಕೊಂಡಿರುವ ಹೊಟ್ಟೆ ಕೃಷ್ಣ ಅಲಿಯಾಸ್ ಕೆ.ಕೆ.ಕೃಷ್ಣ, ಭಾಸ್ಕರ ಅಲಿಯಾಸ್ ನಿವಾರಣ ಭಾಸ್ಕರ ಅಲಿಯಾಸ್ 420 ಭಾಸ್ಕರ ಅಂಡ್ ಟೀಮ್. ಆಯಾಕಟ್ಟಿನ ಅಧಿಕಾರಿಗಳನ್ನು ಲೋಕಾ ಹೆಸರಿನಲ್ಲಿ ಬ್ಲಾಕ್‌ಮೇಲ್ ಮಾಡಿ ಈ ತನಕ ನೂರಾರು ಕೋಟಿಗೂ ಅಧಿಕ ಮೊತ್ತವನ್ನು ಸುಲಿಗೆ ಮಾಡಿದ್ದಾರೆ. ಈ ಖದೀಮರು ಹೊಟ್ಟೆ ಕೃಷ್ಣ ಮತ್ತು ನಿವಾರಣ ಭಾಸ್ಕರ ಎಂಬ ಐನಾತಿಗಳ ಹಿಂದಿನ ಮತ್ತು ಇಂದಿನ ಐಷಾರಾಮಿ ಜೀವನ ಶೈಲಿಯ ಹಿನ್ನೆಲೆ ಕೆದಕುತ್ತಾ ಹೋದರೆ, ಖತರ್ನಾಕ್ ಹೆಸರುಗಳು ಕೇಳಿ ಬರುತ್ತವೆ. ಲೋಕೇಶ್ ಕೊಪ್ಪದ್ ರಾಜಕೀಯ ಉತ್ತರದಲ್ಲಿ ಮೋದಿಯ ಕಮಲ ಉದುರುತ್ತಿದೆ ಅದಕ್ಕಾಗೇ ಬಿಜೆಪಿಗೀಗ ದಕ್ಷಿಣ ಬೇಕಾಗಿದೆ ಹೀಗೆ ಮೋದಿ ಗ್ಯಾಂಗಿನ ಆಟಾಟೋಪ ಮುಗಿಲು ಮುಟ್ಟಿರುವ ಪರಿಣಾಮವಾಗಿ ಉತ್ತರ ಪ್ರದೇಶದಿಂದ ಹಿಡಿದು, ಬಿಜೆಪಿ ಅಧಿಕಾರದಲ್ಲಿರುವ ಬಹುತೇಕ ರಾಜ್ಯಗಳಲ್ಲಿ ಕಳೆದ ಬಾರಿಯಂತೆ ಬಂಪರ್ ಸೀಟುಗಳನ್ನು ಗಳಿಸುವುದು ಅಸಾಧ್ಯದ ಮಾತು ಎಂಬುದು ಅಮಿತ್ ಷಾಗೇ ಮನವರಿಕೆಯಾಗಿ ಹೋಗಿದೆ. ಹೀಗಾಗಿಯೇ ಪಶ್ಚಿಮ ಬಂಗಾಳದಲ್ಲಿ ಕಮ್ಯೂನಿಸ್ಟರನ್ನು ಬಗ್ಗು ಬಡಿದು ಅಧಿಕಾರಕ್ಕೆ ಬಂದಿರುವ ಮಮತಾ ಬ್ಯಾನರ್ಜಿ ಜೊತೆಗೆ, ಗಣಿ ಹಗರಣದಲ್ಲಿ ಸಿಲುಕಿಕೊಳ್ಳುವ ಎಲ್ಲ ಅರ್ಹತೆಯನ್ನು ಪಡೆದಿರುವ ಒರಿಸ್ಸಾದ ನವೀನ್ ಪಾಟ್ನಾಯಕ್ ಜೊತೆಗೆ ಸಂಬಂಧವನ್ನು ಸುಧಾರಿಸಿಕೊಳ್ಳುತ್ತಿರುವ ಮೋದಿ ಗ್ಯಾಂಗಿಗೆ ಮೂಲ ಆಸರೆಯಂತೆ ಕಾಣುತ್ತಿರುವುದು ದಕ್ಷಿಣ ಭಾರತವೇ. ಆರ್.ಟಿ.ವಿಠ್ಠಲಮೂರ್ತಿ ವರದಿ ಪ್ರೇಮಿಗಳನ್ನು ಬೆತ್ತಲೆ ಮಾಡಿ ಕಾಡಿದರು: ಆಗೊಂದು ಹೆಣ ಬಿತ್ತು! ಪ್ರೇಮಿಗಳ ಕಾಮಕೇಳಿಯನ್ನ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡ ಪುಂಡರು ಅಷ್ಟಕ್ಕೇ ಸುಮ್ಮನಾಗಲಿಲ್ಲ. ನೀನು ಸರಿಯಾಗಿ ಸೆಕ್ಸ್ ಮಾಡುತ್ತಿಲ್ಲ. ಹೇಗೆ ಮಾಡಬೇಕು ಎಂಬುದನ್ನ ನಾನು ಕಲಿಸಿಕೊಡುತ್ತೀನಿ ಅಂತ ಶಶಿಕಾಂತ್ ಬಡಿಗೇರ ತನ್ನ ಬಟ್ಟೆ ಕಳಚಿ ರೇಣುಕಾಳ ಮೇಲೆ ಎರಗಲು ಹೋದ. ಆಗ ಕನಲಿ ಕೆಂಡವಾಗಿ ಹೋದ ಶರೀಫ್ ಖಾನ್ ತನ್ನ ಕುತ್ತಿಗೆಗೆ ಚಾಕು ಹಿಡಿದಿದ್ದ ಮಾರುತಿ ಬಡಿಗೇರನ ಕೈಗೆ ಜೋರಾಗಿ ಹೊಡೆದಿದ್ದಾನೆ. ಆಗ ಮಾರುತಿ ಕೈಯ್ಯಲ್ಲಿದ್ದ ಚಾಕು ಕೆಳಗೆ ಬಿದ್ದಿದೆ. ಕೂಡಲೇ ಅದನ್ನ ಎತ್ತಿಕೊಂಡ ಶರೀಫ್ ಖಾನ್ ಶಶಿಕಾಂತ್ ಬಡಿಗೇರನ ಹೊಟ್ಟೆಗೆ ಚುಚ್ಚಿದ್ದಾನೆ. ಇದನ್ನ ನೋಡಿದ ಮಾರುತಿ ಬಡಿಗೇರ ಅಲ್ಲಿಂದ ಓಡಿಹೋಗಿದ್ದಾನೆ. ಅಷ್ಟಕ್ಕೆ ಸುಮ್ಮನಾಗದ ಶರೀಫ್ ಖಾನ್, ಕೆಳಗೆ ಬಿದ್ದಿದ್ದ ಶಶಿಕಾಂತ್‌ನ ಎದೆ ಭಾಗಕ್ಕೆ ಇರಿದಿದ್ದಾನೆ. ಎಂ.ಶಿರಸಂಗಿ ವರದಿ ಉಮ್ರಾ ಡೆವಲಪರ್ಸ್ ಎಂಬ ಪೀಡೆಗೆ ಎಸಿ ನಾಗರಾಜ್ ಇಟ್ಟರು ರಿವಿಟ್ ಸರ್ಕಾರಿ ಭೂಮಿ, ಗೋಮಾಳ, ಕೆರೆಗಳ ಒತ್ತುವರಿ ಸೇರಿದಂತೆ ಬರೋಬ್ಬರಿ ಐದು ಸಾವಿರ ಎಕರೆ ಜಮೀನನ್ನು ಸರ್ಕಾರದ ಸುಪರ್ದಿಗೆ ವಹಿಸಿಕೊಟ್ಟಂತಹ ದಕ್ಷ, ಪ್ರಾಮಾಣಿಕ, ನಿಷ್ಠೂರ ಅಧಿಕಾರಿ ಎಂದೇ ನಾಡಿನಾದ್ಯಂತ ಬಿಂಬಿಸಿಕೊಂಡಿರುವ ಬೆಂಗಳೂರು ದಕ್ಷಿಣ ತಾಲೂಕಿನ ಉಪವಿಭಾಗಾಧಿಕಾರಿ ಎಲ್.ಸಿ.ನಾಗರಾಜು ಅವರ ಕಚೇರಿಗೆ ಮೊನ್ನೆ ಏಕಾಏಕಿ ನುಗ್ಗಿದ ‘ಉಮ್ರಾ ಡೆವಲಪರ್ಸ್’ನ ಮಾಲಿಕ ಇಮ್ರಾನ್ ಅಲಿಯಾಸ್ ಉಮ್ರಾ ತನ್ನ ಕಡತಗಳಿಗೆ ಸಹಿ ಹಾಕುವಂತೆ ತಾಕೀತು ಮಾಡಿದ್ದಾನೆ. ಜನಪರ ನೀತಿ-ನಿಯಮಗಳ ಮೂಲಕವೇ ಗಮನ ಸೆಳೆದಿರುವ ಎಲ್.ಸಿ.ನಾಗರಾಜುರವರು ಸ್ಥಳ ಪರಿಶೀಲನೆ ಮಾಡುವವರೆಗೂ ಯಾವ ಫೈಲ್‌ಗಳಿಗೂ ಸಹಿ ಮಾಡುವ ಜಾಯಮಾನ ನನ್ನದಲ್ಲ ಅಂದಿದ್ದಾರೆ. ಅಷ್ಟಕ್ಕೇ ನಾಯಿಗೊಡೆಯುವ ಕೋಲಿನಂತಿರುವ ‘ಉಮ್ರಾ ಡೆವಲಪರ್ಸ್’ನ ಲುಚ್ಚ ಇಮ್ರಾನ್ ಅಲಿಯಾಸ್ ಉಮ್ರಾ ಅಕ್ಕನ್... ಅಮ್ಮನ್.. ತೆಗೆದು ಬಿಡ್ತೀನಿ ಅಂತೆಲ್ಲಾ ಕಚೇರಿ ತುಂಬಾ ಹೂಂಕರಿಸಿದ್ದಾನೆ. ವಿಷಯ ತಿಳಿದ ನೂರಾರು ಜನ ವಕೀಲರು ಕೂಡಲೇ ನಾಗರಾಜುರವರ ಬೆಂಬಲಕ್ಕೆ ನಿಂತಿದ್ದಾರೆ. ಸೌಮ್ಯ ಸ್ವಭಾವದ ವ್ಯಕ್ತಿತ್ವದವರಾದ್ದರಿಂದ ಗಲಾಟೆಗೆ ಆಸ್ಪದ ನೀಡದ ಎಸಿ ನಾಗರಾಜುರವರು ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ‘ಉಮ್ರಾ ಡೆವಲಪರ್ಸ್’ ಮಾಲಿಕನ ವಿರುದ್ಧ ದೂರು ನೀಡಿದ್ದಾರೆ. ಏನಾದರೂ ಅಂದು ನಾಗರಾಜ್‌ರವರ ಸಹನೆಯ ಕಟ್ಟೆಯೊಡೆದಿದ್ದರೆ ಇಷ್ಟೊತ್ತಿಗಾಗಲೇ ಕಚಡ ಉಮ್ರಾನನ ತಿಂಗಳ ತಿಥಿಯೂ ಮುಗಿದು ಬಿಡುತ್ತಿತ್ತು. ಲೋಕೇಶ್ ಕೊಪ್ಪದ್ ವರದಿ ಮಣಿಪಾಲ: ಪೈಟು ಪೈ ಧಣಿಗಳಿಗೆ ಈಗಿದು ತತ್ತರಿಸೋ ಕಾಲ ಒಂದು ಸಾವಿರದ ನೂರಾ ಇಪ್ಪತ್ಮೂರು ಕೋಟಿ ಫೆನಾಲ್ಟಿ! ಇದು ಸ್ಪೆಕ್ಟ್ರಮ್ ಹಗರಣದ ಆರೋಪಿಗೆ ಸುಪ್ರೀಂ ಕೋರ್ಟ್ ಹಾಕಿದ ಫೈನ್ ಅಲ್ಲ, ಮಣಿಪಾಲದ ಪೈ ಸಾಮ್ರಾಜ್ಯಕ್ಕೆ ಸರ್ಕಾರ ಹಾಕಿದ ದಂಡ. ನಿಮಗೆ ಮಣಿಪಾಲದ ಪೈ ಸಾಮ್ರಾಜ್ಯದ ಒಂದು ಮುಖದ ಪರಿಚಯ ಮಾತ್ರ ಇದೆ. ಆದರೆ ಸರ್ಕಾರಿ ಜಾಗದ ಗೋಲ್‌ಮಾಲ್ ಸ್ಟೋರಿ ಈಗಷ್ಟೇ ಬಯಲಾಗುತ್ತಿದೆ. ವಿಶ್ವದಾದ್ಯಂತ ಅತ್ಯಂತ ದೊಡ್ಡ ಹೆಸರನ್ನ ಹೊಂದಿರುವ ಮಣಿಪಾಲ ಪೈ ಸಾಮ್ರಾಜ್ಯದ ವಹಿವಾಟು ಕೆಲವು ಸಾವಿರ ಕೋಟಿ ರುಪಾಯಿಗಳಷ್ಟು. ಉಡುಪಿಯಿಂದ ಕೆಲವೇ ಕಿಲೋಮೀಟರ್ ಅಂತರದ ಮಣಿಪಾಲ ದಿನೇದಿನೆ ಒಂದಿಲ್ಲೊಂದು ಕಾರಣದಿಂದ ಹೆಸರು ಮಾಡುತ್ತಲೇ ಇದೆ. ಡ್ರಗ್ಸು, ಸೆಕ್ಸು, ಕಿಕ್ಕು, ಕಿರಿಕ್ಕು ಇಲ್ಲಿ ಸರ್ವೇಸಾಮಾನ್ಯ. ವಸಂತ್ ಗಿಳಿಯಾರ್ ವರದಿ ಭೀಮಾತೀರದಲ್ಲಿ ಬಾಗಪ್ಪ ಹರಿಜನನ ಕೋಳದ ಸದ್ದು! ವಿಜಯಪುರ ಪೊಲೀಸರು ಸ್ವಲ್ಪ ಯಾಮಾರಿದ್ದರೂ ಕೂಡ ಅವತ್ತು ಭೀಮಾತೀರದಲ್ಲಿ ನಡೆಯಬಾರದ ರಕ್ತಪಾತವೊಂದು ನಡೆದು ಹೋಗುತ್ತಿತ್ತು. ಆದರೆ ವಿಜಯಪುರದ ಎಸ್ಪಿ ಡಿ.ಪ್ರಕಾಶ್‌ರವರ ಸಮಯ ಪ್ರಜ್ಞೆ ಹಾಗೂ ಅಲಮೇಲ ಪೊಲೀಸರ ಕರ್ತವ್ಯ ನಿಷ್ಠೆಯಿಂದ ಭೀಮಾತೀರದ ಹಂತಕ ಬಾಗಪ್ಪ ಹರಿಜನ ಕಡೆಗೂ ಪೊಲೀಸರ ಕೈಗೇ ಸಿಗೇ ಬಿದ್ದಿದ್ದಾನೆ. ನಡೆಯಲಿದ್ದ ಭಾರೀ ಅನಾಹುತವೊಂದು ತಪ್ಪಿದೆಯಾದರೂ ಮುಂದೆ ಏನು ನಡೆಯಲಿದೆ ಎಂಬುದು ಖುದ್ದು ಭೀಮಾ ತೀರಕ್ಕೆ ತಿಳಿಯುತ್ತಿಲ್ಲ. ಇಷ್ಟಕ್ಕೂ ಅಂದು ನಡೆದಿದ್ದಾದರೂ ಏನು? ವಿನಯ್ ನೇವಿ ಕಾಲಂ ಅವಳ ಭವದ ಕೇಡು ಮತ್ತು ಅವನು ಕೇಳದ ಹಾಡು ಅವಳು ಅನ್ನದೊಲೆಯ ಮುಂದೆ ಕುಳಿತುಕೊಂಡಳು. ಒಲೆಯ ಕೆಂಡದುಂಡೆಗಳು ಚೆನ್ನಾಗಿದ್ದೀಯಾ ಅಂತ ಕೇಳಿದವು. ಅವಳು ಆಗಷ್ಟೇ ನೆಲದಲ್ಲಿ ತೆವಳಿಕೊಂಡೇ ಹೋಗಿ ಹೆಚ್ಚಿಟ್ಟು ಬಂದ ಈರುಳ್ಳಿಯ ಘಾಟಿಗೆ ಇನ್ನೂ ಹಾಗೇ ಕಣ್ಣೀರಿಡುತ್ತಾ, ನಾನು ಚೆನ್ನಾಗಿದ್ದೀನಿ, ನೀನು ಚೆನ್ನಾಗಿದ್ದೀಯಾ ಅಂತ ಕೇಳಿ ಊದುಗೊಳವೆಯಲ್ಲಿ ಸೊರಸೊರನೆ ಊದಿದಳು. ಅವಳ ಉಸಿರಿನ ಜೊತೆ ಕೆಮ್ಮು, ದಮ್ಮುಗಳೂ ಸೇರಿಕೊಂಡು ಅವಳು ಆ ಅಡುಗೆ ಕೋಣೆಯ ಬಿರುಕು, ಹೆಂಚಿನ ಸಂದಿನ ಗೆದ್ದಲು, ಒಡೆದ ಹೆಂಚಿನ ಮಾಡಿಗೆ ತುಂಬ ವಿಶಿಷ್ಟವಾಗಿ ಕಂಡಳು. ನೇವಿ ಜಾನಕಿ ಕಾಲಂ ಅನಿಲ್ ಅಮೆರಿಕನ್ ಆದ ಕಥೆ ನನ್ನ ಗೆಳೆಯರಾಗಿರುವ, ಹಲವಾರು ವರುಷ ನನ್ನ ಬಾಸ್ ಆಗಿದ್ದ, ಉದಯ ಮರಕಿಣಿ ಗೊತ್ತಿಲ್ಲದೇ ಅನೇಕ ತಪ್ಪುಗಳನ್ನು ಮಾಡುತ್ತಿರುತ್ತಾರೆ. ಅವರ ಜೊತೆಯಲ್ಲಿದ್ದಾಗ ಅಂಥ ಅನೇಕ ತಪ್ಪುಗಳಿಗೆ ನಾನು ಬಲಿಯಾಗಿದ್ದೂ ಇದೆ. ವಯಸ್ಸಾಗುತ್ತಾ ಆಗುತ್ತಾ ಮನುಷ್ಯ ತಪ್ಪುಗಳನ್ನು ಮಾಡುವುದನ್ನು ಕಮ್ಮಿ ಮಾಡುತ್ತಾ, ಸ್ವಕೇಂದ್ರಿತನೂ ಸ್ವಮೋಹಿಯೂ ಆಗುತ್ತಾನೆ ಎಂಬ ನನ್ನ ನಂಬಿಕೆ ಸುಳ್ಳಾಗುವಂತೆ ಉದಯ ಮರಕಿಣಿ ಮತ್ತೆ ತಪ್ಪು ಮಾಡಿದ್ದಾರೆ. ಆ ತಪ್ಪಿನ ಫಲ ನಿಮ್ಮ ಮುಂದಿದೆ. ಪತ್ನಿಗೆ ನೆರವಾಗಲೆಂದು ತಾನಿರುವ ಹುದ್ದೆ ಬಿಟ್ಟು ಅಮೆರಿಕಕ್ಕೆ ಹೊರಟು ನಿಂತ, ಅಲ್ಲಿಗೆ ಹೋದ ಮೇಲೂ ಇಂಡಿಯಾದ ಗೆಳೆಯರ ಜೊತೆ ಸದಾ ಸಂಪರ್ಕದಲ್ಲಿದ್ದು ತನ್ನ ಹುಮ್ಮಸ್ಸು, ತುಂಟತನ ಮತ್ತು ಸ್ವಪತ್ನಿ ಪ್ರೀತಿಯನ್ನು ಉಳಿಸಿಕೊಂಡಿರುವ ಅನಿಲ್ ಭಾರದ್ವಾಜ್ ಎಂಬ ಪರಮಸೋಮಾರಿಯ ಕೈಯಲ್ಲಿ ಮುನ್ನೂರು ಪುಟಗಳನ್ನು ಬರೆಯುವ ತಪ್ಪನ್ನು ಮಾಡಿಸಿದವರು ಉದಯ ಮರಕಿಣಿ. ಜಾನಕಿ ಅಂಕಣ : ಒಲಿದಂತೆ ಹಾಡುವೆ ಆತ್ಮೀಯ ಮಿತ್ರನ ನಿವೃತ್ತಿ ಮತ್ತು ಚಿಗುರೊಡೆದ ಪ್ರವೃತ್ತಿ ಅಂದು ವೇದಿಕೆಯ ಮೇಲೆ ಇದ್ದವರು ನಮ್ಮ ಪ್ರೀತಿಯ ಗುರುಗಳಾದ ಶ್ರೀ ಸಿದ್ಧಲಿಂಗಯ್ಯ ಹಾಗೂ ಶ್ರೀ ಬಸವರಾಜ ಕಲ್ಗುಡಿಯವರು. ಅವರೊಂದಿಗೆ ಅವರ ಶಿಷ್ಯರಾದ ನಾವು. ನಾವೆಲ್ಲ ಅವರ ಬಳಿ ತರಗತಿಯಲ್ಲಿ ಪಾಠ ಕಲಿತಿದ್ದು ಸುಮಾರು ಮೂವತ್ತೈದು ವರ್ಷಗಳ ಹಿಂದೆಯಾದರೂ ಈಗಲೂ ನಾವು ಅವರ ನಿರಂತರ ಶಿಷ್ಯರು. ನಮಗೆಲ್ಲ ಇಂದಿಗೂ ಅವರ ಬಗ್ಗೆ ಅದೇ ಪ್ರೀತಿ-ಗೌರವ. ಅವರಿಗೂ ನಮ್ಮ ಬಗ್ಗೆ ಅದೇ ಅಕ್ಕರೆ, ಅಭಿಮಾನ, ವಯಸ್ಸಾಗುವುದನ್ನೆಲ್ಲ ನಮಗೇ ಬಿಟ್ಟು ಈ ಇಬ್ಬರೂ ಈಗಲೂ ಹಾಗೇ ಕಾಣುತ್ತಾರೆ ಎಂಬುದು ಮಾತ್ರ ನಮ್ಮ ಪಾಲಿಗೆ ಸ್ವಲ್ಪ ಕಹಿಯಾದ ವಿಚಾರ! ಈ ಗುರುಗಳೊಂದಿಗೆ ಅಂದು ವೇದಿಕೆಯ ಮೇಲಿದ್ದವರು ಅಂದಿನ ಕಾರ್ಯಕ್ರಮಕ್ಕೆ ಕಾರಣನಾಗಿದ್ದ ಗೆಳೆಯ, ಕವಿ ಕಟಾವೀರನಹಳ್ಳಿ ಜನ್ನಪ್ಪ, ಪ್ರಸಿದ್ಧ ಕವಯಿತ್ರಿ ಎಂ.ಆರ್. ಕಮಲ ಹಾಗೂ ಮತ್ತೊಬ್ಬ ಆತ್ಮೀಯ ಮಿತ್ರ ಭಕ್ತರಹಳ್ಳಿ ಕಾಮರಾಜ್ ಮತ್ತು ನಾನು. ನಾಲ್ವರೂ ಸಹಪಾಠಿಗಳು. ಚಂದ್ರಶೇಖರ ಆಲೂರು ಅಂಕಣ : ಆಕಾಶಬುಟ್ಟಿ ಪಾರ್ಟ್ ಟೈಮ್ ಲಿವಿಂಗ್ ಇವತ್ತು ಕಾರಣಾಂತರಗಳಿಂದ ಕೆಲಸಕ್ಕೆ ಹೋಗಲು ಆಗಲಿಲ್ಲ. ನಾನು ಕಾಲೇಜಿಗೆ ಹೋಗಲಿಲ್ಲ ಅಂತ ಚಿಕ್ಕಮಗನಿಗೆ ಸ್ಕೂಲಿಗೆ ಹೋಗಲು ಬಿಡಲಿಲ್ಲ. ಅವನಿಗೂ ರಜೆ ಹಾಕಿಸಿ ಮನೆಯಲ್ಲಿರಿಸಿಕೊಂಡೆ. ಹ್ಯಾಗೂ ಫ್ರೀ ಇದ್ದೀನಲ್ಲ ಅಂತ ಹರಳೆಣ್ಣೆ ಬಿಸಿ ಮಾಡಿ ವಿಪ್ಪಿ(ಚಿಕ್ಕ ಮಗ)ಗೆ ತಲೆ ಮೈಗೆ ಹರಳೆಣ್ಣೆ ತಿಕ್ಕಿದೆ. ಏನಮ್ಮಾ ಏನೇನೋ ಮಾಡ್ತಿದ್ದೀಯ ಅಂದ. ಹಿಂಗೆ ವಾರ ಹದಿನೈದು ದಿನಕ್ಕೊಮ್ಮೆ ಸ್ನಾನ ಮಾಡಿಸಿದರೆ ಒಳ್ಳೆಯದು. ನಾನು ಮಾಡಿಸುತ್ತಿಲ್ಲ ಅಷ್ಟೇ ವಿಪ್ಪಿ ಅಂದೆ ಒಂಥರಾ ಗಿಲ್ಟಿನಲ್ಲಿ. ಎಚ್.ಡಿ. ಸುನೀತಾ ಅಂಕಣ : ನೂರು ಮುಖ ಸಾವಿರ ದನಿ ಅತಿರಥ ಮಹಾರಥರೊಡನೆ ಅಭಿಮನ್ಯು ಗೆಲುವಿನ ಹೋರಾಟ ಹನ್ನೊಂದು ವರ್ಷಗಳ ನ್ಯಾಯಾಂಗ ಸೇವೆಯ ಅವಧಿಯಲ್ಲೇ ಎಸೆಸೆಲ್ಸಿಯಲ್ಲಿ ಉಳಿದಿದ್ದ ಎರಡು ಪಾರ್ಟುಗಳು, ನಂತರ ನೌಕರಿ ಮತ್ತು ಡೇ ಕಾಲೇಜು, ಜೊತೆಜೊತೆಗೇ ಡಬಲ್ ಆಕ್ಟಿಂಗ್‌ನಲ್ಲಿ ಪಿಯುಸಿ, ತದನಂತರ ಸಂಜೆ ಕಾಲೇಜುಗಳಲ್ಲಿ ಬಿಎ ಹಾಗೂ ಎಲ್‌ಎಲ್‌ಬಿ ಪದವಿಗಳನ್ನು ಪಡೆದು 1979ರಲ್ಲಿ ದಾವಣಗೆರೆಯಲ್ಲಿ ವಕೀಲನಾಗಿ ಪ್ರ್ಯಾಕ್ಟೀಸು ಆರಂಭಿಸಿ ಎರಡು ವರ್ಷಗಳಾಗಿರಬಹುದು. ಆರಡಿ ಎತ್ತರದ ವ್ಯಕ್ತಿಯೊಬ್ಬ ನನ್ನ ಛೇಂಬರಿಗೆ ಬಂದು ನ್ಯಾಯಾಲಯದಲ್ಲಿ ನಡೆಯುತ್ತಿದ್ದ ಪ್ರಕರಣವೊಂದರ ಫೈಲನ್ನು ಮುಂದಿಟ್ಟ. ಅದರ ಜೊತೆಗೆ ಅದುವರೆಗೆ ಆ ಕೇಸು ನಡೆಸುತ್ತಿದ್ದ ವಕೀಲರ ಎನ್‌ಒಸಿ ಇರುವ ವಕಾಲತ್ತು ಇತ್ತು. ಆತನ ಹೆಸರು ಜಗದೀಶ್ ಹನಗೋಡಿಮಠ್. ಎಂ.ವಿ. ರೇವಣಸಿದ್ದಯ್ಯ
Hai Bangalore is a mass circulation weekly Kannada language tabloid published in Bangalore.Its editor is journalist Ravi Belagere.