Hi Bangalore
Hi Bangalore

Hi Bangalore

This is an e-magazine. Download App & Read offline on any device.

ಸೃಷ್ಟಿ 1023 - ಸಂಪುಟ 20, ಸಂಚಿಕೆ 35, ಮೇ 28, 2015 ಖಾಸ್‌ಬಾತ್ ಅವನನ್ನು ನನ್ನೆದುರಿಗೇ ವಕೀಲರು ಗುಮಿಗುಮಿ ವದ್ದರಲ್ಲ... ಆಗಲೂ! ಅದು ಈಗಿನ ಮಾತಲ್ಲ. ಇಪ್ಪತ್ತು ವರ್ಷದ ಹಿಂದೆ ಪತ್ರಿಕೆ ಆರಂಭವಾದಾಗಲೇ ಒಂದು ಅಂಕಣ ‘ಮೀಡಿಯಾ ಮಸಾಲಾ’ ಅಂತ ಆರಂಭಿಸಿದ್ದೆ. ಸುಮ್ನೆ ಅದೊಂಥರಾ ಗೆಳೆಯನ ಅಂಡು ಚಿವುಟಿದ ಹಾಗೆ. ಕಾಲೆಳೆದ ಹಾಗೆ. Absolutely no venum. ಮನಸಿನಲ್ಲಿ ಕಹಿ ಇಟ್ಟುಕೊಂಡು ಬರೆಯುವಂತಹುದಲ್ಲ. ವಿಷ ಕಾರುವ ಉದ್ದೇಶವಿಲ್ಲ. ಕೊಂಚ fun, ಕೊಂಚ ಗೇಲಿ, ತಮಾಷಿ-ಹೀಗೆ. ಒಂದಷ್ಟು ದಿನ ತೇಜಮ್ಮನನ್ನು ರೇಗಿಸುತ್ತಿದ್ದೆ. ಆಗಿನ್ನೂ ಆಕೆ ಸಂಸದಳಾಗಿರಲಿಲ್ಲ. Mostly, ಉದಯ ಟೀವಿಯಲ್ಲಿದ್ದಳು. ಅದಕ್ಕಿಂತ ಹೆಚ್ಚಾಗಿ ವಿಧಾನ ಸೌಧದಲ್ಲಿರುತ್ತಿದ್ದಳು. ಆಕೆಗೆ ನನ್ನ ಮೇಲೆ ಅದೇನು ಸಿಟ್ಟೋ? ಒಂದಷ್ಟು ಕಿರಿಕ್‌ಗಳಾದವು. ಜಗಳ ಕೋರ್ಟಿಗೂ ಹೋಯಿತು. ಖುದ್ದಾಗಿ ಬಂದು ನ್ಯಾಯಾಲಯದ ಮುಂದೆ ಅಧಿಕೃತವಾಗಿ ಆಕೆ ಮಾತೂ ಆಡಿದಳು. ಆ ಕೇಸು ಅಲ್ಲೇ ನೆಗೆದು ಎಡವಿಕೊಂಡು ಬಿತ್ತು. ನಾನು ಎದ್ದು ಬಂದೆ. ಆದರೆ ಅದೆಲ್ಲ ಆಗಿ, ಸಂಸದೆಯೂ ಆಗಿ ಅದರ ಮುಚ್ಚಟೆಯೂ ಮುಗಿದು ಆಕೆ ಹಿಂತಿರುಗಿದ್ದಳಲ್ಲ? ರವಿ ಬೆಳಗೆರೆ ಸಾಫ್ಟ್‌ಕಾರ್ನರ್ ಒಳ್ಳೆಯತನವೆಂಬುದು ಮೆಡಿಸಿನ್ ಅಲ್ಲವಲ್ಲ? ಹೀಗಾಗಿ ಬಿಡಬಹುದಾ ಅಂತ ಒಂದು ಅನುಮಾನ, ಆತಂಕ ನನ್ನಲ್ಲಿ ಸುಮಾರು ದಿನಗಳಿಂದ ಇತ್ತು. ಅವನಿಗೆ ಹಾಗಂತ ನೇರವಾಗಿ ಹೇಳದಿದ್ದರೂ ಪ್ರತೀ ಸಲ ಮಾತಿಗೆ ಸಿಕ್ಕಾಗ ಆರೋಗ್ಯದ ಬಗ್ಗೆ ವಿಚಾರಿಸುತ್ತಿದ್ದೆ. ಸಿಗರೇಟು ಬಿಡು, ಲಿಕ್ಕರ್‌ನ ತುಂಬ ಮಿತಿಯಾಗಿ ತಗೋ, ಸಿಗರೇಟು ಕೈಯಿಂದ ಮುಟ್ಟಲೂ ಬೇಡ ಅನ್ನುತ್ತಿದ್ದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಮಾಂಸ! “ತಿನ್ನದೇ ಇರಲಿಕ್ಕೆ ಆಗಲ್ಲ ಅನ್ನಿಸಿದರೆ ತಿನ್ನು: just as a pickle" ಅನ್ನುತ್ತಿದ್ದೆ. ನೀವು ಒಮ್ಮೆ ಬಂದು ನಾನು ಮಾಂಸ ತಿನ್ನುವುದನ್ನು ನೋಡಿ. “ಕೊಂಚ ಪ್ರೊಟೀನ್ ಮೈಗೆ ಬೇಕು. ಮಟನ್ ಅಥವಾ ಚಿಕನ್ ತಿನ್ನಿ. ಆದರೆ ಮಾಂಸದಲ್ಲಿ ಕೊಬ್ಬು ಇರಬಾರದು. ಬರೀ muscle ತಿನ್ನಿ" ಅಂದಿದ್ದರು ಡಾಕ್ಟ್ರು. ಇವತ್ತಿಗೂ ಅಪರೂಪಕ್ಕೆ ಹಾಗೆ ತಿನ್ನುತ್ತೇನೆ. ರವಿ ಬೆಳಗೆರೆ ಬಾಟಮ್ ಐಟಮ್ ನಾನೇ ಅವರ ಮನೇಗೆ ಹೋಗಿ ಅವರ ಹೆಂಡ್ತಿಗೆ ಫೋನ್ ಕೊಟ್ಟೆ ಅಂದಿದ್ದ! ಸುಳ್ಳು ಮತ್ತು ಸತ್ಯ ಎರಡರ ಬಗ್ಗೆ ಈಗ ತರ್ಜನೆ-ಭರ್ಜನೆ ಮಾಡಲೇನೂ ನಾನು ಕುಳಿತಿಲ್ಲ. ಗೆರೆಗೀಚಿಕೊಂಡು, ದಾರ ಕಟ್ಟಿಕೊಂಡು ನಾನು ಬದುಕಲಾರೆ. ನನಗೆ ಸತ್ಯ-ಸುಳ್ಳಿನ ನಡುವಿನ ಅಂತರ ಚೆನ್ನಾಗಿ ಗೊತ್ತು. ಹರಿಶ್ಚಂದ್ರನಂತೆ ನಾಟಕ ಮಾಡುವುದಿಲ್ಲ ನಾನು. ಆದರೆ ನಾನು ವಿಪರೀತ ಸುಳ್ಳನಂತೂ ಖಂಡಿತ ಅಲ್ಲ. ಕೆಲಬಾರಿ casual ಆಗೊಂದು ಸುಳ್ಳು ಹೇಳ್ತೇವೆ. ಅನಿವಾರ್ಯವದು. ಸಂಕೋಚದಿಂದ ತಪ್ಪಿಸಿಕೊಳ್ಳೋಕೆ ಸುಳ್ಳು ಹೇಳ್ತೇವೆ. ಮುಖ ಉಳಿಸಿಕೊಳ್ಳಲಿಕ್ಕೆ ಹೇಳುತ್ತೇವೆ. ಇನ್ಯಾರಿಗೋ hurt ಆಗದಿರಲಿ ಅಂತ ಸುಳ್ಳು ಹೇಳ್ತೇವೆ. ಕೆಲವು ಚಟಗಳಿವೆ: ಅವುಗಳಿಗೆ ಬಲಿಯಾದ ಮೇಲೆ ಸುಳ್ಳು ಹೇಳಲೇ ಬೇಕು. ನಮ್ಮ ಕಡೆ ಒಂದು ಮಾತಿದೆ. ‘ತೀರಾ ದನಗಳ ದಲ್ಲಾಳಿ ಥರಾ ಮಾತಾಡಬೇಡ’ ಅನ್ನುತ್ತಾರೆ. ಅದಕ್ಕೂ ಕಾರಣವಿದೆ. ದನದ ಸಂತೆಯಲ್ಲಿ ಒಂದೆರಡು ಹಸು ತಮ್ಮ ಕೈಯಲ್ಲಿ ಮಾರಾಟವಾದರೆ, ದಲ್ಲಾಳಿಗೆ ಬದುಕು. ಬೇರೆ ದಾರಿಯಿಲ್ಲ. ‘ಈ ಹಸು ಹತ್ತು ಲೀಟರ್ ಹಾಲು ಕರಿಯುತ್ತೆ’ ಅಂತಲೇ ಅವನು ಹೇಳೋದು. ‘ಸರಿ, ಹಾಲು ಕರೆದು ತೋರಿಸು’ ಅಂತ ಕೆಲವರಂತಾರೆ. ದಲ್ಲಾಳಿಗೆ ಅದೂ ಗೊತ್ತು. ರವಿ ಬೆಳಗೆರೆ ಹಲೋ ದೇವೆಗೌಡರ ಕಣ್ಣಿಗೆ ಮೋದಿ ಈಗ ವಾಲ್ಮೀಕಿಯಂತೆ ಕಾಣುತ್ತಿರುವುದೇಕೆ? ಮಾಜಿ ಪ್ರಧಾನಿ ದೇವೆಗೌಡ ಇದ್ದಕ್ಕಿದ್ದಂತೆ ತಮ್ಮ ಮಾತಿನ ಧಾಟಿ ಬದಲಿಸಿದ್ದಾರೆ. ಅವರ ಕಣ್ಣಿನಲ್ಲೀಗ ಪ್ರಧಾನಿ ನರೇಂದ್ರ ಮೋದಿ ರಾಮಾಯಣ ಬರೆದ ವಾಲ್ಮೀಕಿ ಇದ್ದಂತೆ. ನಿಮಗೆಲ್ಲ ಗೊತ್ತು. ಆರಂಭದ ದಿನಗಳಲ್ಲಿ ಬೇಟೆಯಾಡುತ್ತಿದ್ದ ಮನುಷ್ಯ, ವಾಲ್ಮೀಕಿಯಾಗಿ ಬದಲಾದ ಮತ್ತು ರಾಮಾಯಣವನ್ನು ಬರೆಸಿದ ಕತೆ. ನನ್ನ ಪ್ರಕಾರ, ಇದು ವ್ಯಕ್ತಿಯ ಅವಸ್ಥಾಂತರವನ್ನು ಸೂಚಿಸುವ ಮತ್ತು ಎಂತಹ ವೃತ್ತಿಯ ವ್ಯಕ್ತಿಯೂ ಎಂತಹ ಪ್ರವೃತ್ತಿಗೆ ಬದಲಾಗಬಲ್ಲ ಎಂಬುದನ್ನು ಹೇಳುವ ಕತೆ. ಆದರೆ ರಾಮಾಯಣ ಬರೆದ ವಾಲ್ಮೀಕಿಯ ಬಗ್ಗೆ ನಾನು ಹೇಳಲು ಹೊರಟಿಲ್ಲ. ಆದರೆ ಕೆಲವೇ ದಿನಗಳ ಹಿಂದೆ ನರೇಂದ್ರ ಮೋದಿಯ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ದೇವೆಗೌಡ ಇದೀಗ ಇದ್ದಕ್ಕಿದ್ದಂತೆ ಅವರ ಬಗ್ಗೆ ವಿಶ್ವಾಸದಿಂದ ಮಾತನಾಡುತ್ತಿದ್ದಾರೆ. 2002ರ ಗೋಧ್ರಾ ಹತ್ಯಾಕಾಂಡದ ಘಟನೆಯಲ್ಲಿ ಕಂಡ ಮೋದಿಗೂ ಈಗಿನ ಮೋದಿಗೂ ವ್ಯತ್ಯಾಸವಿದೆ. ಆಗ ಕಂಡಂತೆ ಅವರು ಈಗ ಕಾಣುತ್ತಿಲ್ಲ. ಬದಲಾಗಿದ್ದಾರೆ ಎಂಬುದು ದೇವೆಗೌಡರ ವರಸೆ. ರವಿ ಬೆಳಗೆರೆ ಮುಖಪುಟ ವರದಿ ರಾಯಲ ಸೀಮೆಯ ರಕ್ತ ಕನ್ನಡ ಸಿನೆಮಾ ತುಂಬ ಹರೀತಾ? ಈಗ ಇದೇ ಕತೆಯನ್ನಿಟ್ಟುಕೊಂಡು ಕನ್ನಡದಲ್ಲಿ ತೆರೆಗೆ ಬರುತ್ತಿರುವ ಸಿನೆಮಾ ‘ಆರ್‌ಎಕ್ಸ್ ಸೂರಿ’ ಎಂಬ ಗುಲ್ಲು ಈಗ ಎದ್ದಿದೆ. ಸಿನೆಮಾದಲ್ಲಿ ಸೂರಿಯ ಪಾತ್ರವನ್ನು ದುನಿಯಾ ವಿಜಿ ಮಾಡಿದ್ದಾನೆ. ಹಾಗಾದರೆ ಪರಿಟಾಲ ರವಿ ಪಾತ್ರವನ್ನು ಬೇಡಿಕೆಯ ಖಳನಟ ರವಿಶಂಕರ್ ಮಾಡಿದ್ದಾನಾ? ಉಹೂಂ ಗೊತ್ತಿಲ್ಲ. ಒಟ್ಟಿನಲ್ಲಿ ಬಿಡುಗಡೆಗೆ ಸಿದ್ಧವಾಗಿರುವ ‘ಆರ್‌ಎಕ್ಸ್ ಸೂರಿ’ ಸಿನೆಮಾ ವಿವಾದಗಳನ್ನು ಹುಟ್ಟು ಹಾಕಿರುವುದಂತೂ ಸತ್ಯ. ಸಿನೆಮಾದ ನಿರ್ಮಾಪಕ ಸುರೇಶ್ ಸೇರಿದಂತೆ ನಟ ವಿಜಯ್‌ಗೂ ಅತ್ತಲಿಂದ ಬೆದರಿಕೆ ಕರೆಗಳು ಬರಲು ಶುರುವಾಗಿರುವ ಕುರಿತು ಸುದ್ದಿ ಹಬ್ಬಿದೆ. ಇದಕ್ಕೆ ಪೂರಕವೆಂಬಂತೆ ವಿಜಿ ಕೂಡ ತನ್ನ ರೆಗ್ಯುಲರ್ ಸಿಮ್ ಬಿಸಾಕಿ ಹೊಸ ಸಿಮ್ಮು ಹಾಕಿಕೊಂಡು ಕತ್ತರಿಗುಪ್ಪೆಯ ಮನೆಯಲ್ಲಿ ಕುಳಿತಿರುವ ವದಂತಿ ಹರಡಿದೆ. ಬ್ಲಾಕ್ ಕೋಬ್ರನಿಗೆ ಆ ಪಾಟಿ ಹೆದರಿಸಿದ್ದಾರಾ...? ಅವರದ್ದು ಬಿಡಿ! ನಿರ್ಮಾಪಕರಿಗೆ ಆಂಧ್ರದ ಮಾಜಿ ಮುಖ್ಯಮಂತ್ರಿಯೊಬ್ಬರು ಯಾವುದೇ ಕಾರಣಕ್ಕೂ ಸಿನೆಮಾವನ್ನು ತೆಲುಗಿಗೆ ಡಬ್ ಮಾಡುವ ಹಾಗಿಲ್ಲ ಅಂತಾ ಅವಾಜು ಕೂಡ ಬಿಟ್ಟಿದ್ದಾರಂತೆ. ಲೋಕೇಶ್ ಕೊಪ್ಪದ್ ರಾಜಕೀಯ ಗಿಮಿಕ್ ಮೋದಿ ಡ್ರಾಮಾ ಕಂಪನಿಗೆ ಟಾಂಗ್ ನೀಡಲಿದೆಯಾ ಅಡ್ವಾಣಿ ಗ್ಯಾಂಗ್! ಈ ಗ್ಯಾಂಗು ಮಾಡುತ್ತಿರುವ ಮೊದಲನೇ ಕೆಲಸವೆಂದರೆ ದೇಶಾದ್ಯಂತ ಇರುವ ರಾಜ್ಯಗಳ ಮೇಲೆ ಹಿಡಿತ ಸಾಧಿಸುವುದು. ಉದಾಹರಣೆಗೆ ಕರ್ನಾಟಕವನ್ನೇ ತೆಗೆದುಕೊಳ್ಳಿ. ಯಡಿಯೂರಪ್ಪ ಈಗಾಗಲೇ ಸುಸ್ತಾಗಿ ಹೋಗಿದ್ದಾರೆ. ಯಾಕೆಂದರೆ ಯುಪಿಎ ಸರ್ಕಾರದ ಅವಧಿಯಲ್ಲಿ ಸಿಬಿಐ ಅವರಿಗೆ ಯಾವ ಪರಿಯ ಕಾಟವನ್ನು ಕೊಟ್ಟಿತೋ? ಅದಕ್ಕಿಂತ ಹೆಚ್ಚಿನ ಕಾಟವನ್ನು ಈಗ ಕೊಡುತ್ತಿದೆ. ಹೀಗಾಗಿ ಕಳೆದ ಒಂದು ವರ್ಷದ ಅವಧಿಯಲ್ಲಿ ಮೋದಿ ಸರ್ಕಾರದ ಬಗ್ಗೆ ಅತ್ಯಂತ ಭ್ರಮನಿರಸನಗೊಂಡ ಕರ್ನಾಟಕದ ನಂಬರ್ ಒನ್ ನಾಯಕರೆಂದರೆ ಯಡಿಯೂರಪ್ಪ. ಆರ್.ಟಿ.ವಿಠ್ಠಲಮೂರ್ತಿ ವರದಿ ಶಿವಮೊಗ್ಗದ ರೌಡಿ ಲೋಕಿ ಓಪನ್ನಾಗೇ ರುಂಡ ಕಡಿದ! ಸತ್ತವ ಸಣ್ಣ ಸೈಜಿನ ರೌಡಿ. ಹತ್ಯೆ ಮಾಡಿದವ ರಾಕ್ಷಸ ರೌಡಿ. ಆ ಮಂಗಳವಾರ ಹಾಗೆ ಹೊಸಮನೆಯ ಚರಂಡಿಯಲ್ಲಿ ರುಂಡವಿಲ್ಲದ ಮುಂಡವಾಗಿ ಬಿದ್ದಿದ್ದ ಶವ ವೆಂಕಟೇಶ ಅಲಿಯಾಸ್ ಮೋಟುವಿನದು ಅಂತ ಗೊತ್ತಾದ ಕ್ಷಣದಲ್ಲೇ ಇದು ಲೋಕಿಯದೇ ಕೆಲಸ ಅಂತ ಪೊಲೀಸರೂ ನಿರ್ಧರಿಸಿಬಿಟ್ಟಿದ್ದರು. ರೌಡಿ ಜಗತ್ತು ಎಂದೋ ಆಗಬೇಕಿದ್ದ ಹತ್ಯೆ ಈಗ ಆಯಿತಲ್ಲ ಎಂದು ನಿಟ್ಟುಸಿರು ಬಿಟ್ಟಿತು. ಹಾಗೆ ವೆಂಕಟೇಶ ಚರಂಡಿ ಹೆಣವಾಗಲು ಕಾರಣವಾದದ್ದು ಆತ ಸವಾರ್‌ಲೈನ್ ರಸ್ತೆಯ ಸೈಂಧವ ರೌಡಿ ತುಳಸಿರಾಮನ ಹತ್ಯೆ ಕೇಸಲ್ಲಿ ಎರಡನೇ ಆರೋಪಿಯಾಗಿದ್ದದ್ದು. ಶೃಂಗೇಶ್ ವರದಿ ಶುರುವಾಯ್ತಾ ಕಂಪ್ಲಿ ಬಾಬು ಕಟ್ಟಾ ರುಬಾಬು? ಏಪ್ರಿಲ್ ತಿಂಗಳ ಕೊನೆಯ ಮಂಗಳವಾರ ಹೊಸಪೇಟೆ ಸಮೀಪದ ಹುಲಿಗಿ ಕ್ಷೇತ್ರದಲ್ಲಿ ಮಾಜಿ ಸಂಸದ ಸಣ್ಣ ಫಕೀರಪ್ಪನವರ ಪೂಜಾಕಾರ್ಯಕ್ರಮ ನಡೆದಿತ್ತು. ಶ್ರೀಹುಲಿಗೆಮ್ಮ ದೇವಿಯ ಆಶೀರ್ವಾದಕ್ಕಾಗಿ ಮಾಂಸದಡುಗೆ ಘಮಘಮಿಸುತ್ತಿತ್ತು. ಫಕೀರಪ್ಪನ ಸಂಬಂಧಿಕರು, ಸ್ನೇಹಿತರೆಲ್ಲಾ ಹುಲಿಗಿಯಲ್ಲಿ ನೆರೆದಿದ್ದರು. ಅಲ್ಲಿಗೆ ಕಂಪ್ಲಿ ಶಾಸಕ ಟಿ.ಹೆಚ್.ಸುರೇಶ್‌ಬಾಬು ಸಹ ಹಾಜರಿದ್ದರು. ಅದೇ ದಿನ ಹೊಸಪೇಟೆಯ ಮೈನ್ಸ್ ಟ್ರೇಡರ್ ಜಿ.ಬಿ.ಶಿವಕುಮಾರ್ ಸಹ ಸ್ನೇಹಿತರೊಂದಿಗೆ ಶ್ರೀಹುಲಿಗೆಮ್ಮ ದೇವಸ್ಥಾನಕ್ಕೆ ತೆರಳಿದ್ದರು. ಅಲ್ಲಿನ ರೇಣುಕಾ ಲಾಡ್ಜ್ ಸಮೀಪದ ಫಂಕ್ಷನ್ ಹಾಲ್‌ನಲ್ಲಿ ಸುರೇಶ್‌ಬಾಬು ಸೇರಿದಂತೆ ಎಲ್ಲರೂ ಊಟಕ್ಕೆ ಕುಳಿತಿದ್ದರು. ಪೂಜೆ ಮುಗಿಸಿ ಅದೇ ರಸ್ತೆಯ ಮೂಲಕ ಹೊಸಪೇಟೆಗೆ ಹೊರಟಿದ್ದ ಜಿ.ಬಿ.ಶಿವಕುಮಾರ್‌ಗೆ ಸುರೇಶ್‌ಬಾಬು ಉಪಸ್ಥಿತಿ ತಿಳಿದಿದೆ. ಸಹಜವಾಗಿಯೇ ಶಿವು ಅಲ್ಲಿಗೆ ತೆರಳಿದ್ದಾರೆ. ಅಷ್ಟರಲ್ಲೇ ಸುರೇಶ್‌ಬಾಬು ಬೆಂಬಲಿಗರು ಸುತ್ತುವರೆದು ಶಿವಕುಮಾರ್‌ಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ತೆಲುಗು ಸಿನೆಮಾದ ವಿಲನ್ ಸ್ಟೈಲ್‌ನಲ್ಲಿ ಎಂಟ್ರಿಯಾದ ಸುರೇಶ್‌ಬಾಬು ತೆಲುಗಿನಲ್ಲೇ ಡೈಲಾಗ್ ಹೊರಡಿಸಿದ್ದಾರೆ. ‘ಲೇ ಲಂಜನಾ ಕೊಡಕ ಸಿಬಿಐ ವಾಳ ದೆಗ್ಗರ ನೇನು ನೀಕು ಇರವೈರೆಂಡು ಕೋಟಿ ಇವ್ವಾಲ ಅನಿ ಮಾಪೈನ ಸ್ಟೇಟ್‌ಮೆಂಟ್ ಇಸ್ತಾವೇಮಲೆ’ ಅಂತ ಶುರುವಿಟ್ಟುಕೊಂಡಿದ್ದಾರೆ. ಸತೀಶ್ ಬಿಲ್ಲಾಡಿ ವರದಿ ತಂಗಡಗಿ ಶಿಷ್ಯ ಹನುಮೇಶನೆಂಬ ಕೊಲೆ ಪಾತಕಿ ಹನುಮೇಶ ನಾಯಕ! ಈ ಹೆಸರು ಕೇಳಿದರೆ ಸಾಕು ಕೊಪ್ಪಳ ಜಿಲ್ಲೆಯ ಕನಕಗಿರಿ ಕ್ಷೇತ್ರದ ಮಂದಿ ಗಡ ಗಡ ನಡುಗ ತೊಡಗುತ್ತಾರೆ. ಜಿಲ್ಲಾ ಉಸ್ತುವಾರಿ ಮಂತ್ರಿ ಶಿವರಾಜ್ ತಂಗಡಗಿ ಎಂಬ ಹೊಲಸು ರಾಜಕಾರಣಿ ಅಡ್ಡಡ್ಡ ಕಾಲಿಗೆ ಬೀಳ್ತಾನೆ. ಕನಕಗಿರಿ ಕ್ಷೇತ್ರಕ್ಕೆ ಶಿವರಾಜ್ ತಂಗಡಗಿ ಶಾಸಕನಾದರೂ ಉಸ್ತುವಾರಿ ಮಾತ್ರ ಖದೀಮ ಹನುಮೇಶ ನಾಯಕನೇ. ಬದ್ಮಾಶ್ ಹನುಮೇಶ ನಾಯಕನ ಮೇಲೆ ಎರಡು ಡಜನ್‌ಗೂ ಅಧಿಕ ಕೇಸುಗಳಿದ್ದರೂ ಕೂಡ ಈತ ಸಚಿವ ಶಿವರಾಜ್ ತಂಗಡಗಿಯ ಬಲಗೈ ಬಂಟ ಎಂಬುವುದನ್ನೇ ಇಲ್ಲಿನ ಪೊಲೀಸರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅದರಲ್ಲೂ ಹುಲಿಹೈದರ ಗ್ರಾಮಕ್ಕೆ ಈತನೇ ಪಾಳೇಗಾರ. ಈ ಪಾಳೇಗಾರನ ಕುಲಪುತ್ರರತ್ನನೊಬ್ಬ ಈಗ ಮರ್ಡರ್ ಕೇಸಿನಲ್ಲಿ ಜೈಲು ಪಾಲಾಗಿದ್ದರೆ, ಇತ್ತ ಅಪ್ಪ ಹನುಮೇಶ ಎಂಬ ನಾಯಕ ಅಂಡು ಸುಟ್ಟ ಬೆಕ್ಕಿನಂತೆ ಓಡಾಡ ತೊಡಗಿದ್ದಾನೆ. ವರದಿಗಾರ ವರದಿ ಹರಪನಹಳ್ಳಿ ಎಮ್ಮೆಲ್ಲೆ ರವೀ ಇದು ಬೇಕಾ ಕೂಳು ಬಾಕರ ಪಡೆ? ಎಂ.ವಿ.ಅಂಜಿನಪ್ಪ ಮತ್ತು ಆತನ ಸಹಚರರಿಂದ ಇಷ್ಟೆಲ್ಲಾ ರಾದ್ಧಾಂತಗಳಾಗುತ್ತಿದ್ದರೂ, ಎಂ.ಪಿ.ರವೀಂದ್ರರು ಏನು ಮಾಡುತ್ತಿಲ್ಲ. ಅಂಜಿನಪ್ಪನಂತವರ ಉಪಟಳಗಳಿಂದ ಜನ ಬೇಸತ್ತಿದ್ದಾರೆ. ಸ್ವತಃ ಕಾಂಗ್ರೆಸ್ ಪಕ್ಷದವರೇ ಹಿಡಿ ಹಿಡಿ ಶಾಪ ಹಾಕುತ್ತಿದ್ದಾರೆ. ಇವರ ಬೆದರಿಕೆ, ದೌರ್ಜನ್ಯಗಳಿಮದ ಪೊಲೀಸ್ ಠಾಣೆಗೆ ದೂರು ಕೊಡಲು ಯಾರೂ ಮುಂದಾಗುತ್ತಿಲ್ಲ. ಒದೆ ತಿಂದ ಪತ್ರಕರ್ತರೆ ದೂರು ನೀಡಲು ಭಯ ಪಡುತ್ತಿದ್ದಾರೆಂದರೆ, ಜನಸಾಮಾನ್ಯರ ಸ್ಥಿತಿ ಆ ದೇವರಿಗೆ ಪ್ರೀತಿ. ಎಂ.ಪಿ.ರವೀಂದ್ರ ಭ್ರಷ್ಠರಲ್ಲ. ಅದನ್ನೂ ಪ್ರೋತ್ಸಾಹಿಸುವುದೂ ಇಲ್ಲ ಎಂಬುದು ನಿಜ. ವಿಚಿತ್ರವೆಂದರೆ ಎಂ.ಪಿ.ರವೀಂದ್ರರ ಆಪ್ತ ಕಾರ್ಯದರ್ಶಿಯದೇ ಕಿರಿಕ್ಕು. ವರದಿಗಾರ ನೇವಿ ಕಾಲಂ ಶಾಪಗ್ರಸ್ತರು ರಾತ್ರಿ ಮನೆಗೆ ಬರಬಾರದು ಶಿವಗಣ ಎಂಬ ಶಪಿತ ಆಕಾಶಮಾರ್ಗವಾಗಿ ತೇಲಿಕೊಂಡು ಹೋಗುತ್ತಿದ್ದ. ಹಿಮಪರ್ವತ ಕ್ರಮೇಣ ಹಿಂದೆ ಹಿಂದೆ ಸರಿದು ಬೆಳ್ಳಿಮೋಡಗಳು ದಟ್ಟೈಸಿ ವಿಚಿತ್ರವಾದ ಬೆಚ್ಚನೆಯ ಅನುಭವವನ್ನು ಕೊಡುತ್ತಿದ್ದವು. ಅದು ನಿಜಕ್ಕೂ ಫಜೀತಿಯ ಕ್ಷಣ. ಕೈಲಾಸ ಪರ್ವತದ ಹಲವು ಗಣಗಳಲ್ಲಿ ತಾನೂ ಒಬ್ಬ. ತನ್ನ ಅನುಭವಕ್ಕನುಗುಣವಾಗಿ ಕ್ರಮೇಣ ಅವನಿಗೂ ವೃತ್ತಿಯಲ್ಲಿ ಮೇಲೆ ಮೇಲೆ ಹೋಗುವುದಕ್ಕೆ ಸಾಧ್ಯವಾಗಿತ್ತು. ಹಿರಿಯ ಗಣಗಳೆಲ್ಲಾ ನಿವೃತ್ತರಾಗಿದ್ದರು. ಸಾಕಷ್ಟು ವರ್ಷಗಳ ಕೆಲಸದಿಂದ ತನಗೆ ಹೇಗೋ ಹಿರಿತನ ಪ್ರಾಪ್ತವಾಗಿತ್ತು. ಹಾಗಾಗಿ ತಾನು ಇದೀಗ ಶಿವನ ಹತ್ತಿರದ ಪರಿಚಾರಕನಾಗಿ ಕೆಲಸ ಮಾಡುವ ಭಾಗ್ಯ ದೊರೆಯಿತು. ಒಬ್ಬ ಅಧಿಪತಿಯ ಅಡಿ ಕೆಲಸ ಮಾಡುವುದು ಭಾಗ್ಯವೋ ದೌರ್ಭಾಗ್ಯವೋ ತನಗೇ ಗೊತ್ತಿಲ್ಲ. ಹೆಚ್ಚುಕಡಿಮೆ ಆದರೆ ಅತಿಯಾದ ಪ್ರೀತಿಯೂ, ಅತಿಯಾದ ಶಿಕ್ಷೆಯೂ ದೊರೆಯುವುದುಂಟು. ತನಗೆ ಸಿಕ್ಕ ಹುದ್ದೆ ಹೇಗೆ ಶಿಕ್ಷೆಯ ಅತಿರೇಕ ಅಂತ ಗೊತ್ತಾಗಿದ್ದೇ ಆವತ್ತು. ನೇವಿ ಜಾನಕಿ ಕಾಲಂ ತಾರುಣ್ಯ ಎಂಬ ಸೂರ್ಯನ ನೆರಳಿಲ್ಲದ ಅಧ್ಯಾಯಗಳು ಒಂದು ಬೋಳುಗುಡ್ಡ. ಅದರ ಬುಡದಲ್ಲಿ ಮತ್ತೊಂದು ಗುಡ್ಡ. ಬುಡದಲ್ಲಿರುವ ಗುಡ್ಡದ ಮೇಲೆ ಹತ್ತಿ ನಿಂತು ನೋಡಿದರೆ, ಬೋಳುಗುಡ್ಡದ ನೆತ್ತಿ ಮಾತ್ರ ಉರುಟಾಗಿ ಕಾಣಿಸುತ್ತಿತ್ತು. ಮುಳಿ ಹುಲ್ಲು ಬೆಳೆದ ನೆತ್ತಿ. ಅದರ ನಡುವೆ ಒಂದೇ ಒಂದು ಅದ್ಯಾವುದೋ ಕಾಲದಲ್ಲಿ ಬೆಳೆದು ನಿಂತ ಹಲಸಿನ ಮರ. ಆ ಹಲಸಿನ ಮರಕ್ಕೆ ಕೊಂಬೆ-ರೆಂಬೆಗಳಿರಲಿಲ್ಲ. ಅದು ಸರೂತ ಬೆಳೆದು ನಿಂತು ಹರಡಿಕೊಂಡಿದ್ದರಿಂದ ಕೊಡೆಯಂತೆಯೇ ಕಾಣುತ್ತಿತ್ತು. ನಾವು ಬೋಳುಗುಡ್ಡದ ಬುಡದಲ್ಲಿರುವ ಗುಡ್ಡದಲ್ಲಿ ಕೂತು ಆ ಗುಡ್ಡವನ್ನು ನೋಡುತ್ತಾ ಇರುತ್ತಿದ್ದೆವು. ಎಷ್ಟೋ ಸಲ ಆ ಗುಡ್ಡ ನಮಗೆ ನಮ್ಮ ಭವಿಷ್ಯದಂತೆ ತೋರುತ್ತಿತ್ತು. ಇದು ಸುಮಾರು ವರುಷಗಳ ಹಿಂದಿನ ಚಿತ್ರ. ಜಾನಕಿ ಅಂಕಣ : ಒಲಿದಂತೆ ಹಾಡುವೆ ಸಂಕಥನ ಎಂಬ ಸಾಂಸ್ಕೃತಿಕ ಸಹಬಾಳ್ವೆ ನಾವು ಎಷ್ಟೆ ಆರೈಕೆ ಮಾಡಿ ನೀರು ಗೊಬ್ಬರ ಹಾಕಿ ಶ್ರದ್ಧೆಯಿಂದ ಬೆಳೆಸಿದರೂ ಗಿಡಮರಗಳಿಗೆ ಬಿರು ಮಳೆಯಲ್ಲಿ ತೊಯ್ದಾಗ ಬರುವ ಮೆರುಗೇ ಬೇರೆ. ಗಿಡಗಂಟಿಗಳಲ್ಲಿ ಆ ಗಾಢ ಹಸಿರು ಹೊಮ್ಮುವಂತೆ ಮಾಡುವುದು ಹುಲು ಮಾನವರಿಂದ ಸಾಧ್ಯವಿಲ್ಲ. ಮೊನ್ನೆ ಶನಿವಾರ ಸುರಿದ ಬಿರು ಮಳೆ ಮತ್ತು ಅದರ ಹಿಂದಿನ ದಿನಗಳಲ್ಲಿ ಬಿದ್ದ ಭೂಮಿ ಹದವಾಗುವ ಮಳೆಯಿಂದಾಗಿ ಇಡೀ ಕಲಾಗ್ರಾಮ ದಟ್ಟ ಹಸಿರಿನಿಂದ ಕಂಗೊಳಿಸುತ್ತಿತ್ತು. ಜೊತೆಗೆ ಹಿಂದಿನ ದಿನದ ಮಳೆಯಿಂದಾಗಿ ಭಾನುವಿಗೂ ಭಾನುವಾರದ ಬೆಂಗಳೂರಿಗರಂತೆ ಹೊರಬರಲು ಆಲಸ್ಯ. ಕತ್ತರಿಸಿ ತಂದಿಟ್ಟ ಮಲೆನಾಡಿನಂತೆ ಕಾಣುತ್ತಿದ್ದ ಕಲಾಗ್ರಾಮದಲ್ಲಿ ಮುಂಜಾವಿನ ಹಕ್ಕಿಗಳ ಕಲರವ. ಜೊತೆಗೆ ಯುವಕ-ಯುವತಿಯರ ಸದ್ದು ಗದ್ದಲ, ಸೆಲ್ಫಿಯ ಸಡಗರ. ಆ ಬೆಳ್ಳಂಬೆಳಗ್ಗೆ ಇಡೀ ವಾತಾವರಣವೇ ಲವಲವಿಕೆಯಿಂದ ಸಂಭ್ರಮಿಸುತ್ತಿತ್ತು. ಚಂದ್ರಶೇಖರ ಆಲೂರು ಅಂಕಣ : ಆಕಾಶಬುಟ್ಟಿ ನೆಮ್ಮದಿಯಾಗಿ ಬಾಳುವುದು ಮನುಷ್ಯನ ಉದ್ದೇಶವೇ... ಪ್ರೀತಿ ಮನುಷ್ಯನನ್ನು ಪೊರೆಯುತ್ತದೆ ಅನ್ನುತ್ತಾರೆ. ಎಲ್ಲರನ್ನೂ ಪ್ರೇಮದಿಂದ ಕಾಣಿ ಅನ್ನುತ್ತಾರೆ. ಬಟ್, ದಿನನಿತ್ಯದ ಬದುಕಿನಲ್ಲಿ ಇಂತಿ ನಿನ್ನ ಪ್ರೀತಿಯ ಎಂಬ ಧಾಟಿಯಲ್ಲಿ ಬದುಕಲು ಸಾಧ್ಯವಾಗುವುದು ಡೌಟು. ನನಗಂತೂ ಎಷ್ಟು ಪ್ರೀತಿಯ ಜೀವಗಳಿವೆಯೋ ಅಷ್ಟೇ ಜನರನ್ನು ತೀವ್ರವಾಗಿ ದ್ವೇಷಿಸುತ್ತೇನೆ. ಕೆಲವು ದ್ವೇಷಗಳಿಗೆ ಕಾರಣಗಳಿವೆ. ಕೆಲವರು ನನಗೆ ಏನೂ ತೊಂದರೆ ಮಾಡಿರುವುದಿಲ್ಲ. ಆದರೂ ಅವರನ್ನು ನೋಡಿದರೆ ಉರಿ ಉರಿ. ನವೆ ನವೆ. ಕಾಲು ಕೆರೆದು ಜಗಳಕ್ಕೆ ಹೋಗಲಾ ಅನ್ನಿಸುತ್ತದೆ. ಅಷ್ಟು ದ್ವೇಷ. ಅಕಾರಣವೋ ಸಕಾರಣವೋ? ಎರಡೂ ದ್ವೇಷಗಳು ನನ್ನನ್ನು ಸಮಾನವಾಗಿ ಸುಟ್ಟಿವೆ. ಇಂತಹ ಒಂದು ಅರ್ಥಹೀನ ದ್ವೇಷವೆಂದರೆ ನಮ್ಮ ಅಜ್ಜಿಯ ಕುರಿತು. ಎಚ್.ಡಿ. ಸುನೀತಾ ಅಂಕಣ : ನೂರು ಮುಖ ಸಾವಿರ ದನಿ ಇದು ವಿಚಿತ್ರ ಆದರೂ ಸತ್ಯ ಇಂಥಾ ಅಮ್ಮಂದ್ರೂ ಇರ್ತಾರೆ! ಗಂಡ-ಹೆಂಡತಿ, ಮೂರು ಮಕ್ಕಳು. ಎರಡು ಗಂಡು, ಒಂದು ಹೆಣ್ಣು. ಗಂಡ ಮೇಷ್ಟ್ರು. ಮೂರೂ ಮಕ್ಕಳನ್ನು ಓದಿಸಿದ. ಮೊದಲನೇ ಗಂಡು ಬಿ.ಎಸ್ಸಿ. ಡಿಗ್ರಿ, ಎರಡನೇ ಗಂಡು ಹೈಸ್ಕೂಲು, ಕೊನೆ ಮಗಳು ಬಿ.ಎ. ಡಿಗ್ರಿ. ಅಚ್ಚುಕಟ್ಟಾದ ಸಂಸಾರ. ಮೇಷ್ಟ್ರು ಹಳ್ಳಿಗಳಲ್ಲಿ ನೌಕರಿ ಮಾಡುವಾಗ ಉಳಿಸಿದ ದುಡ್ಡು ಸೇರಿಸಿ ನಗರವೊಂದರಲ್ಲಿ ಜಾಗ ಕೊಂಡು ಮನೆ ಕಟ್ಟಿಸಿರುತ್ತಾರೆ. ಎರಡು ಪೋರ್ಷನ್ ಮನೆಯಲ್ಲಿ ಒಂದರಲ್ಲಿ ಮೇಷ್ಟ್ರು ಸಂಸಾರ. ಇನ್ನೊಂದರಲ್ಲಿ ಬಾಡಿಗೆದಾರ. ಮಗಳಿಗೆ ಮದುವೆ ಮಾಡಿದರು. ಅಳಿಯ ನೂರು ಕಿ.ಮೀ. ದೂರದ ನಗರವೊಂದರಲ್ಲಿ ಸರ್ಕಾರಿ ನೌಕರ. ಮಗಳು ಡಿಗ್ರಿ ಆಗಿದ್ದರೂ ಸಹ ಮದುವೆ ಕಾಲಕ್ಕೆ ಅಳಿಯ ಸಂಜೆ ಕಾಲೇಜು ಮೂಲಕ ಅಂತಿಮ ಬಿ.ಎ. ವಿದ್ಯಾರ್ಥಿ. ಲಗ್ನದ ಮರು ವರ್ಷ ಅಳಿಯನಿಗೆ ಈ (ಮೇಷ್ಟ್ರು) ಮಾವನ ಊರಿಗೆ ವರ್ಗಾ. ಎಂ.ವಿ. ರೇವಣಸಿದ್ದಯ್ಯ

Hai Bangalore is a mass circulation weekly Kannada language tabloid published in Bangalore.Its editor is journalist Ravi Belagere.