ಹಾಯ್ ಬೆಂಗಳೂರ್! : ಸಂಪುಟ : ೨೦, ಸಂಚಿಕೆ : ೨೧, ಫೆಬ್ರವರಿ ೧೯, ೨೦೧೫ ಬೆಲೆ : ೧೫ ರು ಮುಖಪುಟ ಲೇಖನ: ಪೊರಕೆ ಬೀಸಿದ ಕೇಜ್ರಿವಾಲಾ: ಮಟಾಷ್ ಮೋದಿ! ಇಲ್ಲಿಸಿದ್ರಾಂ ತಂಟೆಗೆ ಹೋಗೋರೆ ಇಲ್ಲ ಇಂತಹ ಪರಿಸ್ಥಿತಿಯಲ್ಲಿ ದಿಲ್ಲಿ ವಿಧಾನಸಭೆಯ ರಿಸಲ್ಟು ಬೇರೆ ಬಂದಿದೆ. ಅನುಮಾನವೇ ಇಲ್ಲದಂತೆ ಬಿಜೆಪಿ ಹಾಗೂ ಕಾಂಗ್ರೆಸ್‌ನ ಮುಖಕ್ಕೆ ಇಕ್ಕಿದೆ. ಇಂತಹ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಆಗಲೀ, ಬಿಜೆಪಿಯಾಗಲಿ ಕರ್ನಾಟಕದ ವಿಷಯದಲ್ಲಿ ತಾವಂದುಕೊಂಡಂತೆ ಮುಂದುವರಿಯಲು ಸಾಧ್ಯವಿಲ್ಲ. ಹೀಗೆ ದಿಲ್ಲಿ ವಿಧಾನಸಭಾ ಚುನಾವಣೆ ಏಕಕಾಲಕ್ಕೆ ಕಾಂಗ್ರೆಸ್ ಹಾಗೂ ಬಿಜೆಪಿಯನ್ನು ಮಣ್ಣು ಮುಕ್ಕಿಸಿರುವುದರಿಂದ ಸಹಜವಾಗಿಯೇ ಸಿದ್ದರಾಮಯ್ಯನವರ ಪರಿಸ್ಥಿತಿ ಉತ್ತಮವಾಗಿದೆ. ನೀಚಭಂಗ ರಾಜಯೋಗ ಎಂಬ ಜ್ಯೋತಿಷ್ಯ ಶಾಸ್ತ್ರದ ಮಾತು ಅವರಿಗೆ ಲಕ್ಕು ಕುದುರಿಸಿದೆ. ಆರ್.ಟಿ.ವಿಠ್ಠಲಮೂರ್ತಿ ಖಾಸ್‌ಬಾತ್ ಇಪ್ಪತ್ತಾರು ವರ್ಷಗಳ ನಂತರ ನಾನು ಮತ್ತೊಮ್ಮೆ ಅಮ್ಮನನ್ನು ಕಳೆದುಕೊಂಡಿದ್ದು She left us. ಕಡೆಗೂ ಆಕೆ ಯಾರ ಕರೆಗೂ ನಿಲ್ಲದೆ ಕೈ ಕೊಡವಿ ಕೊಂಡು ಎದ್ದು ಹೋಗಿಯೇ ಬಿಟ್ಟರು: ಅದಕ್ಕೆಂದೇ ಬಾಗಿಲ ತನಕ ಬಂದ ಸಾವೆಂಬ ಮಾಯಾವಿಯ ಮುಂಗೈ ಹಿಡಿದುಕೊಂಡು ಅನಾಯಾಸವಾಗಿ ಹೊರಟು ಹೋದರು. ನಮಗೆಲ್ಲ ಆಕೆ ಅಮ್ಮ. ಹೆಸರು ಯೇಸು ಪುತ್ರಿ. ತುಂಬ ವಯಸ್ಸೇನೂ ಆಗಿರಲಿಲ್ಲ. ಅರವತ್ತು ದಾಟಿತ್ತು, ಎಪ್ಪತ್ತರ ಅಂಗಿಯ ಚುಂಗು ಇನ್ನೂ ಹಿಡಿದಿರಲಿಲ್ಲ. ಸದಾ ಒಂದು ಸ್ನೇಹಪೂರ್ಣ ನಗೆ ಧರಿಸಿರುತ್ತಿ ದ್ದರು ಅಮ್ಮ. ಹೆಸರಿಗೆ ಆಕೆಗೆ ಒಬ್ಬಳೇ ಮಗಳು: ಜಾಯಲ್. ಆದರೆ ನಾವೇ ಇದ್ದೆವಲ್ಲ ಆಕೆಯ ಹಿಂಡು ಹಿಂಡು ಮಕ್ಕಳು? ಆರ್ .ಬಿ ಬಾಟಮ್ ಐಟಮ್ ಅಪ್ರಾಸಂಗಿಕವಾಗಿಯೇ ಒಮ್ಮೊಮ್ಮೆ ಅಧಿಕಪ್ರಸಂಗಿ ಅನಿಸಿಕೊಳ್ಳುತ್ತಾರೆ “ಶುಭ ನುಡಿಯೋ ಮದುಮಗನೇ ಅಂದ್ರೆ ಹಂದರದ ತುಂಬ ರಂಡೇರು ಅಂದ್ನಂತೆ" ಎಂಬುದು ಬಯಲು ಸೀಮೆಯ ಗಾದೆ. ವಿಧವೆಯರು ಅಪಶಕುನ, ಅಶುಭ ಎಂಬ ಸಂಕುಚಿತ-ವಿಕೃತ ಚಿಂತನೆ. ನನ್ನ ಬಾಲ್ಯದ ಮಾತು ನನಗಿನ್ನೂ ನೆನಪಿದೆ. ಮುಖ್ಯವಾದ ಕೆಲಸಕ್ಕೆ ಹೊರಟಾಗ ಎದುರಿಗೆ ವಿಧವೆ ಹೆಣ್ಣು ಮಗಳು ಬರ ಬಾರದು ಅನ್ನುತ್ತಿದ್ದರು. ರವೀ ಹಲೋ ದೇಶವನ್ನೇ ಅಡ ಇಡಲು ಹೊರಟರೆ ಜನ ಕೇಳುತ್ತಾರಾ ಮೋದೀಜೀ? ಇದು ಎಚ್ಚರಿಕೆ ಎಂಬ ಗಂಟೆಯ ಮೊದಲ ಸದ್ದು! ದಿಲ್ಲಿ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿಯ ಗೆಲುವನ್ನು ನೋಡಿದ ಯಾರಿಗೇ ಆದರೂ ಅನ್ನಿಸುವುದು ಇದೇ. ಕಾಂಗ್ರೆಸ್ ಬಕಾಬೋರಲು ಮಲಗಿರುವ ಪಕ್ಷ ಎಂಬುದು ಗೊತ್ತಿತ್ತು ಬಿಡಿ. ಆದರೆ ದೇಶವನ್ನು ಆಳುವ ಜಾಗಕ್ಕೆ ಬಂದು ಕೂತ ಬಿಜೆಪಿಗೆ ಈ ಥರದ ಹೊಡೆತ ಬೀಳುತ್ತದೆ ಎಂಬುದನ್ನು ಆಮ್ ಆದ್ಮಿ ಪಕ್ಷವೂ ಊಹಿಸಿರಲು ಸಾಧ್ಯವಿಲ್ಲ. ರವಿ ಬೆಳಗೆರೆ ವರದಿ ಬೆಟ್ಟಿಂಗ್ ಶುರುವಾಯ್ತು; ಮ್ಯಾಚ್ ಫಿಕ್ಸ್ ಆಯ್ತು ಉಫ್ ... ಈ ಬಾರಿಯೂ ನಮಗೇ ವಿಶ್ವಕಪ್ ಪವಾಡ ಸಂಭವಿಸಿದರೆ ಮಾತ್ರ ಕ್ರಿಕೆಟ್ಟನ್ನೇ ಉಸಿರಾಡುವ, ಕ್ರಿಕೆಟ್ ಆಟಗಾರರನ್ನು ದೇವರೆಂದು ಆರಾಧಿಸುವ ಈ ದೇಶದ ಜನರು ಇನ್ನೊಂದು ತಿಂಗಳು ಟೀವಿ ಮುಂದೆ ಸ್ತಬ್ಧ ಚಿತ್ರವಾಗಲಿದ್ದಾರೆ. ಸರ್ಕಾರಿ ಆಫೀಸುಗಳಲ್ಲಿ ನೊಣಗಳಷ್ಟೇ ಚುರುಕಾಗಿರುತ್ತವೆ, ಥಿಯೇಟರಲ್ಲಿ ಸೊಳ್ಳೆಗಳಷ್ಟೇ ಸಿನಿಮಾ ನೋಡುತ್ತವೆ, ಮನೆಗಳಲ್ಲಿ ಸೀರಿಯಲ್ ನೋಡುವುದಕ್ಕಾಗದೇ ಹೆಣ್ಮಕ್ಕಳು ವಿಲವಿಲನೆ ಒದ್ದಾಡುವುದಕ್ಕಿದೆ. ಶಾರೂಖ್, ಸಲ್ಮಾನ್ ಖಾನ್ ಜಾಗಗಳನ್ನು ಕೋಹ್ಲಿ, ಧೋನಿಗಳು ಆಕ್ರಮಿಸಲಿದ್ದಾರೆ. ಇಷ್ಟೊಂದು ಜನರ ಆಕರ್ಷಣೆಯ ಕೇಂದ್ರಬಿಂದುವಾಗಿರುವ ವಿಶ್ವಕಪ್ ಕ್ರಿಕೆಟ್ಟಲ್ಲಿ ಕಳೆದ ಬಾರಿಯ ಚಾಂಪಿಯನ್ ಭಾರತ ಗೆಲ್ಲುತ್ತಾ? ಟೀಂ ಇಂಡಿಯಾದ ಇತ್ತೀಚಿನ ಸಾಧನೆ ನೋಡಿದರೆ ಅಂಥ ಸಾಧ್ಯತೆಗಳೇನೂ ಕಾಣಿಸುತ್ತಿಲ್ಲ. ಉದಯ ಮರಕಿಣಿ ವರದಿ ದಾವಣಗೆರ ಡಬಲ್ ಮರ್ಡರ್ : ಬುಳ್ಳಾ ನಾಗನ ಸ್ಕೆಚ್ಚಿಗೆ ನಡುಗಿ ಹೋದ ಸೀನ ಅಜ್ಜಯ್ಯ ಅಲಿಯಾಸ್ ಚಟ್ನಿ ಅಜ್ಜಯ್ಯ ಅದೇ ದಾವಣಗೆರೆಯ ಕೆ.ಟಿ.ಜೆ ನಗರದ ವಾಲ್ಮೀಕಿ ಜನಾಂಗದವನು. ಹೊಟ್ಟೆ ಪಾಡಿಗಾಗಿ ಬಾಪೂಜಿ ಆಸ್ಪತ್ರೆಯ ಎದುರಿಗೆ ಇಡ್ಲಿ ಹೊಟೇಲ್ ನಡೆಸುತ್ತಿದ್ದ ಈತ ಭಲೇ ರುಚಿಯಾದ ಚಟ್ನಿಯನ್ನು ಗಿರಾಕಿಗಳಿಗೆ ಬಡಿಸುತ್ತಿದ್ದರಿಂದ ಈತ ಚಟ್ನಿ ಅಜ್ಜಯ್ಯ ಎಂದೇ ಹೆಸರಾಗಿದ್ದ. ಇಂತಿಪ್ಪ ಅಜ್ಜಯ್ಯ ನಿಧಾನವಾಗಿ ರಾಮೇಗೌಡ ಬಣದ ಕನ್ನಡ ರಕ್ಷಣಾ ವೇದಿಕೆಯಲ್ಲಿ ಗುರುತಿಸಿಕೊಂಡು ಓಡಾಡತೊಡಗಿದ. ನಿಧಾನವಾಗಿ ಕಾಂಗೈನ ಪಡಸಾಲೆಯಲ್ಲಿ ಕಾಣಿಸಿಕೊಂಡ. ಲೋಕೇಶ್ ಕೊಪ್ಪದ್ ವರದಿ ಶಿವಮೊಗ್ಗ ಡಿಸಿಸಿ ಬ್ಯಾಂಕ್‌ಗೆ ವಕ್ಕರಿಸಿದ್ದಾನೆ ಮಹಾಕಂಟಕ ಸಂತೋಷ್! ಡಿಸಿಸಿ ಬ್ಯಾಂಕಿನ ನಗರ ಶಾಖೆಯ ಮ್ಯಾನೇಜರ್ ಶೋಭಾ ಎರಡು ವರ್ಷದಿಂದಲೇ ನಕಲಿ ಬಂಗಾರದ ಗೋಲ್‌ಮಾಲ್ ಮಾಡುತ್ತಿದ್ದಳು. ಅದರ ಹಿಂದೆ ಡಿಸಿಸಿ ಬ್ಯಾಂಕಿನ ಕೆಲವು ಅಧಿಕಾರಿಗಳೂ ಇದ್ದರು. ಸುನೀತಾ ಸಿದ್ರಾಮರ ಬ್ಯಾಂಕ್ ಶಾಖೆಯ ಪರಿಶೀಲನೆ ಮಾಡಿದಾಗ ಹಗರಣ ಹೊರಬಿತ್ತು. ಬ್ಯಾಂಕಿನ ಅಧ್ಯಕ್ಷರು, ಆಡಳಿತ ಮಂಡಳಿ ಹಗರಣಕ್ಕೆ ಜವಾಬ್ದಾರಿ ಆಗುವುದಾದರೆ ಶಾಖೆಯ ನೋಡಲ್ ಆಫೀಸರ್ ಹಾಗೂ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರೂ ಜವಾಬ್ದಾರರಾಗಬೇಕಿತ್ತು. ವರದಿಗಾರ ವರದಿ ಹುಬ್ಬಳ್ಳಿ ಜಯಂತಿಲಾಲ್ ಸಾವಿನ ರಹಸ್ಯ ಗೊತಾ? ಸರಿಸುಮಾರು ಹನ್ನೆರಡು ವರ್ಷಗಳ ಕಾಲ ಅಕ್ಕಿ ಕಳ್ಳತನದಲ್ಲಿ ಕಿಂಗ್ ಆಗಿ ಮೆರೆದವನು ಈ ವಿಮಲಚಂದ್. ಅದೊಂದು ಬಾಬ್ತಿನಿಂದಲೇ ಕೋಟ್ಯಂತರ ರುಪಾಯಿ ಹಣ ದುಡಿದ. ಆದರೆ ಅದೊಂದು ದಿನ ಪೊಲೀಸರ ಕೈಗೆ ಸಿಕ್ಕ ಈತನನ್ನು ಕೈಗೆ ಕೋಳ ಹಾಕಿ ಊರ ತುಂಬ ಮೆರವಣಿಗೆ ಮಾಡಲಾಯಿತು. ಹಾಗೆ ಮಾಡಿದ ನಂತರವೇ ಈತ ಕಳ್ಳದಂಧೆಯನ್ನು ಬಿಟ್ಟುಬಿಟ್ಟ. ಈ ವಿಮಲಚಂದ್‌ನ ಮೂವರು ಮಕ್ಕಳ ಪೈಕಿ ಹಿರಿಯವನೇ ಜಯಂತಿಲಾಲ್. ವರದಿಗಾರ ವರದಿ ಸೊಗಡು ಶಿವಣ್ಣನ ತೆಕ್ಕೆಯಿಂದ ವೀರಶೈವ ಬ್ಯಾಂಕ್ ಬಚಾವಾಗುತ್ತಾ? ಇಪ್ಪತ್ತು ವರ್ಷಗಳಿಂದ ಬ್ಯಾಂಕಿನ ಅಧಿಕಾರವನ್ನು ತಮ್ಮ ಕಪಿಮುಷ್ಟಿಯಲ್ಲಿ ಇಟ್ಟುಕೊಂಡಿರುವ ಸೊಗಡು ಶಿವಣ್ಣ ಇಲ್ಲೀ ತನಕ ಬ್ಯಾಂಕಿಗೆ ಚುನಾವಣೆಯನ್ನೇ ನಡೆಸದೆ ತಮಗೆ ನಿಷ್ಠರಾದ ಹಿಂಬಾಲಕರು, ಬಾಲಬಡುಕರನ್ನೇ ಅಧ್ಯಕ್ಷ, ಉಪಾಧ್ಯಕ್ಷ, ಖಜಾಂಚಿ, ವ್ಯವಸ್ಥಾಪಕ ಮೊದಲಾದ ಹುದ್ದೆಗಳಲ್ಲಿ ಆನಿಸಿಕೊಂಡಿದ್ದರಂತೆ. ಆದರೆ ಇದರಿಂದ ಕುಪಿತರಾದ ಅವರ ಸ್ವಂತ ಭಾವಮೈದುನರಾದ ಬಾವಿಕಟ್ಟೆ ಬ್ರದರ್ಸ್ ಬ್ಯಾಂಕಿನ ಅಧಿಕಾರವನ್ನು ಭಾವನಿಂದ ಕಸಿದುಕೊಳ್ಳಲು ಕುಲಬಾಂಧವ ಜಿ.ಎಸ್.ಬಸವರಾಜು ತೆಕ್ಕೆಗೆ ಬಿದ್ದಿದ್ದಾರಂತೆ ವರದಿಗಾರ ವರದಿ ಡಾನ್ ಬನ್ನಂಜೆ ರಾಜನ ಅರೆಸ್ಟ್ ಹಿಂದೆ ಪ್ರವೀಣ್ ಶೆಟ್ಟಿ! ಬನ್ನಂಜೆ ರಾಜ ಅಲಿಯಾಸ್ ರಾಜೇಂದ್ರ ಕುಮಾರ್ ಅಲಿಯಾಸ್ ಆರ್.ಕೆ. ಮೊರೊಕ್ಕೋದಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವುದು ನಿಕ್ಕಿಯಾಗಿದೆ. ಹಿಂದೆಲ್ಲ ಬನ್ನಂಜೆ ರಾಜಾನ ಬಂಧನದ ಸುದ್ದಿ ಸದ್ದು ಮಾಡಿದ್ದು ನಿಜವೇ ಆದರೂ ಕೊನೆಗದು ಸುಳ್ಳು ವರದಿಯಾಗಿ ಭಾರತೀಯ ಪೊಲೀಸರನ್ನು ನಿರಾಸೆ ಗೊಳಿಸಿತ್ತು. ೨೦೦೯ರಲ್ಲೇ ದುಬೈ ಪೊಲೀಸರು ನಕಲಿ ಪಾಸ್‌ಪೋರ್ಟ್ ವಿಚಾರದಲ್ಲಿ ಬನ್ನಂಜೆಯನ್ನು ಅರೆಸ್ಟ್ ಮಾಡಿದ್ದರಾದರೂ ಕೆಲವು ತಾಂತ್ರಿಕ ಕಾರಣದಿಂದ ಆತನನ್ನು ಭಾರತಕ್ಕೆ ಕರೆತರಲು ಸಾಧ್ಯವಾಗಿರಲಿಲ್ಲ. ದುಬೈನ ಆಸ್ಪತ್ರೆಯಲ್ಲಿ ದಾಖಲಾಗಿದ್ದ ರಾಜ ಪೊಲೀಸ ರಿಗೆ ಚಳ್ಳೆಹಣ್ಣು ತಿನ್ನಿಸಿದ್ದ. ವಸಂಗ್ ಗಿಳಿಯಾರ್ ವರದಿ ಉಡುಪಿ ವಿಜಿ ಹತ್ಯೆ ಹಿಂದೆ ಶರತ್ ಪೂಜಾರಿ ಉಡುಪಿಯ ಕಾರ್ಕಡದಲ್ಲಿ ಭಟ್ಟರ ಹುಡುಗನ ಹೆಣ ಬಿದ್ದಿದೆ! ಅವನ ಹೆಸರು ವಿಜಿ ಅಲಿಯಾಸ್ ವಿಜಯ್ ಕಾರಂತ್. ರಾಜ್ಯಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಆಟಗಾರನಾಗಿದ್ದ. ಒಳ್ಳೆಯ ಎಸೆತಗಾರ. ಅಪ್ಪ ಭಾಸ್ಕರ ಕಾರಂತ ಮತ್ತು ಅಣ್ಣ ಉಮೇಶ್ ಕಾರಂತ ಮಂಗಳೂರಿನ ಗುಡಿಯೊಂದರಲ್ಲಿ ಅರ್ಚಕರಾಗಿ ದುಡಿಯುತ್ತಿದ್ದಾರೆ. ಈಗ್ಗೆ ಕೆಲ ವರ್ಷಗಳ ಹಿಂದೆ ತಾಯಿ ತೀರಿಕೊಂಡಿದ್ದರಾದ್ದರಿಂದ ಮನೆಯಲ್ಲಿ ವಿಜಿ ಕಾರಂತ ಒಂಟಿಯಾಗಿ ವಾಸಿಸು ತ್ತಿದ್ದ. ಕೆಲ ವರ್ಷಗಳ ಹಿಂದೆ ಕಾರ್ಕಡ ಮೂಲದ ಹುಡುಗಿಯೊಬ್ಬಳನ್ನು ಸಿಕ್ಕಾಪಟ್ಟೆ ಹಚ್ಚಿಕೊಂಡಿದ್ದ, ವಸಂತ್ ಗಿಳಿಯಾರ್ ನೇವಿ ಕಾಲಂ; ಅಲ್ಲಿಗೆ ಕತೆ ಮುಗಿಯುತ್ತದೆ. ಅಲ್ಲಿಗೇ ಕತೆ ಮುಗಿಯುತ್ತದಾ? ಒಬ್ಬ ವ್ಯಕ್ತಿ ತನ್ನ ಪಾಲಿಗೆ ಅಥವಾ ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ತನ್ನ ವಲಯಕ್ಕೆ ತುಂಬ ದೊಡ್ಡ ಸಾಧಕನಾಗುತ್ತಾನೆ. ನಮ್ಮ ಊರಿನ ಲ್ಲಿರುವ ಜೋಯಿಸರೊಬ್ಬರು ಆ ವಲಯದಲ್ಲಿ ನಿಮಿತ್ಯ ನೋಡುವುದರಲ್ಲಿ ಎಷ್ಟು ಜನಪ್ರಿಯರೆಂದರೆ ಅಮಾವಾಸ್ಯೆ, ಹುಣ್ಣಿಮೆ, ಹಬ್ಬ -ಹರಿದಿನಗಳಲ್ಲಿ ಅವರ ಮನೆಗೆ ಬರುವವರ ಸಂಖ್ಯೆ ಅತ್ಯಧಿಕ. ಆವತ್ತಿನ ಆ ಕಾರಣಕ್ಕಾಗಿ ಬಸ್ಸಿಗೆ ಒಂದಿಷ್ಟು ಹೆಚ್ಚುವರಿ ವ್ಯಾಪಾರವಾಗುತ್ತದೆ. ಆ ಊರಿಗೆ ಹಾದು ಬರ ಬೇಕಾದ ಕೆಲ ಪ್ರದೇಶಗಳಲ್ಲಿ ಹಣ್ಣು-ಕಾಯಿ ಇತ್ಯಾದಿ ಗಳು ವ್ಯಾಪಾರವಾಗುತ್ತವೆ. ನೇವಿ ಜಾನಕಿ ಕಾಲಂ ಆಕಾಶದ ಪಿಸುಮಾತು ಕತೆ ಅಂದ್ರೇನು? ಹಾಗಂತ ಕೇಳಿದವರಿಗೆ ಉತ್ತರಿಸುವುದು ಕಷ್ಟ. ನಡೆದದ್ದನ್ನು ಹೇಳುವುದು ಅನ್ನಬಹುದಾ? ಅದು ವರದಿ. ನಡೆಯದೇ ಇದ್ದಿದ್ದನ್ನು ಹೇಳುವುದಾ? ಅದು ಸುಳ್ಳು. ಯಾವತ್ತೂ ನಡೆಯಲಿಕ್ಕೇ ಸಾಧ್ಯವಿಲ್ಲದ ಸಂಗತಿ ಯನ್ನು ಹೇಳಿದರೆ ಅದು ಕಲ್ಪನೆ. ಏನೇನೋ ಗ್ರಹಿಸಿ ಕೊಂಡರೆ ಅದು ಭ್ರಮೆ. ಏನೇನೋ ಊಹಿಸಿಕೊಂಡು ಹೇಳಿದರೆ ಅದು ತರಲೆ. ಹಾಗಿದ್ದರೆ ಕತೆ ಯಾವುದು? ರಾಮಾಯಣ, ಮಹಾಭಾರತದ ಕತೆಯನ್ನು ಭಕ್ತಿಯಿಂದ ಕೇಳುವುದರಲ್ಲೇ ಸುಖವಿದೆ. ಅದರ ಸತ್ಯಾ ಸತ್ಯತೆಯನ್ನು ಪ್ರಶ್ನಿಸುವುದೇ ತಪ್ಪೇನೋ? ಜಾನಕಿ
Hai Bangalore is a mass circulation weekly Kannada language tabloid published in Bangalore.Its editor is journalist Ravi Belagere.