Hi Bangalore
Hi Bangalore

Hi Bangalore

This is an e-magazine. Download App & Read offline on any device.

Preview

ಹಾಯ್ ಬೆಂಗಳೂರ್! : ಸಂಪುಟ : ೨೦, ಸಂಚಿಕೆ : ೧೩, ಡಿಸೆಂಬರ್ ೨೫, ೨೦೧೪ ಬೆಲೆ : ೧೫ ರು ಮುಖಪುಟ ಲೇಖನ: ರಜನಿ ಲಿಂಗಾ ರಾಕ್‌ಲೈನ್ ಸೇಫ್; ಗೋಕುಲ್ ಢಮಾರ್! ನೂರು ಕೋಟಿಯ ಸಿನೆಮಾಗೆ ಏನಾಯು? ‘ಲಿಂಗಾ’ ಚಿತ್ರದ ಮೊದಲಾರ್ಧದಲ್ಲಿ ರಜನಿಯ ಕಾಮಿಡಿ ಹಾಗೂ ಆಕ್ಷನ್‌ಗೆ ಒತ್ತು ಕೊಟ್ಟರೆ, ದ್ವಿತೀಯಾರ್ಧದಲ್ಲಿ ರಜನಿ ಸೀರಿಯಸ್ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ. ಇನ್ನು ಮೋಹಕ ತಾರೆ ಅನುಷ್ಕಾ ಶೆಟ್ಟಿಯಂತೂ ಪತ್ರಕರ್ತೆಯ ಗೆಟಪ್ಪಿನಲ್ಲಿ ಸಖತ್ ಮಿಂಚಿದ್ದಾರೆ. ಆಕೆಯನ್ನು ತೆರೆಯ ಮೇಲೆ ಕಣ್ತುಂಬಿಕೊಳ್ಳುವುದಕ್ಕೆ ಪ್ರೇಕ್ಷಕ ಕಾದು ಕುಳಿತವನಂತೆ ಭಾಸವಾಗುತ್ತಾನೆ. ಅದೇ ರೀತಿ ಹಳ್ಳಿಯ ಮುಗ್ಧೆಯಾಗಿ ಮತ್ತೊಬ್ಬ ನಾಯಕಿ ಸೋನಾಕ್ಷಿ ಸಿನ್ಹಾ ಕೂಡ ಗಮನ ಸೆಳೆಯುತ್ತಾಳೆ. ಲೋಕೇಶ್ ಕೊಪ್ಪದ್ ಖಾಸ್‌ಬಾತ್ ನಿಂತರೆ ಕುಂತರೆ ಈ ಪುಣ್ಯಾತ್ಮರು ಅದೆಲ್ಲಿಂದ ಸುದ್ದಿ ಹಬ್ಬಿಸುತ್ತಾರೋ? ಹಾಂ, ಎಂಬಂತೆ ಆ ಹುಡುಗಿ ನೆನಪಾದಳು. ದೊಡ್ಡ ಹುದ್ದೆಯಲ್ಲ. ನಮ್ಮ ಕಂಪ್ಯೂಟರ್ ವಿಭಾಗದಲ್ಲಿ ಆಕೆಯದು ಕಂಪೋಜಿಂಗ್ ಕೆಲಸ. ಈ ಇಪ್ಪತ್ತು ವರ್ಷಗಳಲ್ಲಿ ಸುಮ್ಮನೆ ಗಮನಿಸುತ್ತ ಬಂದಿದ್ದೇನೆ. ನಾನು ಇದೆಲ್ಲೋ ಮೂಲೆಯಲ್ಲಿ ಕುಳಿತು ಅಗಸರ ಕತ್ತೆಯಂತೆ ಮೇವು ತಿಂದು, ಅದನ್ನು ನಿಧಾನವಾಗಿ ಮತ್ತೆ ಬಾಯಿಗೆಳೆದುಕೊಂಡು ಮೆಲುಕು ಹಾಕುತ್ತಾ ಇರುತ್ತೇನೆ ಅಂತ ಸಿಬ್ಬಂದಿಯ ಗೆಳೆಯರಿಗೆ ಅನ್ನಿಸುತ್ತಿ ರುತ್ತದೆ. ಆದರೆ ಈ ಕತ್ತೆಗೆ ತೀರ ಮನುಷ್ಯರಷ್ಟಲ್ಲದಿದ್ದರೂ, ಸಾಕಷ್ಟು ಬುದ್ಧಿವಂತಿಕೆ ಇದೆ. ಆರ್.ಬಿ ಹಲೋ ಅಧಿವೇಶನದ ಹೆಸರಿನಲ್ಲಿ ಶುದ್ಧಯಲ್ಲಮ್ಮನ ಜಾತ್ರೆ! ನಮ್ಮ ಜನಪ್ರತಿನಿಧಿಗಳಿಗೆ ಅದೇನು ರೋಗ ಬಡಿದಿದೆ? ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ವಿಧಾನಮಂಡಲ ಅಧಿವೇಶನ ನಡೆಸುತ್ತೇವೆ ಅಂತ ಹೋಗಿ ವಿನಾಕಾರಣ ಟೈಮು ಕಳೆಯುತ್ತಿದ್ದಾರೆ. ಇಂತಹ ಅಧಿವೇಶನ ನಡೆಸುವ ಬದಲು ಸುಮ್ಮನೆ ತಮ್ಮ ತಮ್ಮ ಕ್ಷೇತ್ರಗಳಲ್ಲಿ ತಿರುಗಿ ಕೆಲಸ ಮಾಡಿದ್ದರೆ ಚೆನ್ನಾಗಿರುತ್ತಿತ್ತೇನೋ. ಆದರೆ ಕ್ಷೇತ್ರದಲ್ಲಿದ್ದರೆ ಹಲವು ಸಮಸ್ಯೆಗಳು ಕೇಳಿ ಬರುತ್ತವೆ. ರವಿ ಬೆಳಗೆರೆ ಬಾಟಮ್ ಐಟಮ್ ಉಳಿದೆಲ್ಲವೂ ಅಷ್ಟೆ! ಪ್ರೀತಿ -ಪ್ರೇಮಗಳು ಮತ್ತೂ ಅಪಾಯ ಒಂದು ಚಟ! ಅದು ಇಲ್ಲೇ ಕಾಯುತ್ತಿರುತ್ತದೆ, ಗಂಟಲಲ್ಲಿ. ವಿಶೇಷವಾಗಿ ತಂಬಾಕು ಸಂಬಂಧಿ ಚಟಗಳು ವಿಪ ರೀತ ಜಿಡ್ಡು. ಬಡಪೆಟ್ಟಿಗೆ ಬಿಟ್ಟು ಹೋಗುವಂತ ಹವಲ್ಲ. ನಾನು ಸಹಸ್ರ-ಸಹಸ್ರ ಜನರನ್ನು ನೋಡಿ ದ್ದೇನೆ. ಸಿಗರೇಟು ‘ಬಿಟ್ಟೇ ಬಿಟ್ಟೆ!’ ಅಂತ ಢಾಣಾ ಡಂಗೂರ ಹೊಡೆಸುತ್ತಾರೆ. ಅವರಲ್ಲಿ ಕೆಲವರು ಬಿಟ್ಟೂ ಬಿಡುತ್ತಾರೆ. ಆದರೆ ಅವರ ಕುತ್ತಿಗೆ-ಶ್ವಾಸಕೋಶ ಇತ್ಯಾದಿಗಳು ಎಡಗೈಯಷ್ಟು ಹತ್ತಿರ ಚಣ-ಚಣ ಅಂತ ಹುಯ್ದಾಡಿ ಕಾಯುತ್ತಲೇ ಇರುತ್ತವೆ. ರವೀ ವರದಿ ಈಗ ಡಾನ್ ರವಿ ಪೂಜಾರಿ ಎಂಟ್ರಿ? ಈ ಸತೀಶ್ ಶೆಟ್ಟಿ, ಕೃಷ್ಣಮೂರ್ತಿ ಕುಟುಂಬದ ಆಪ್ತ. ನಂದಿತಾ ವಿಷ ಕುಡಿದು ಆಸ್ಪತ್ರೆಗೆ ಸೇರಿದಾಗಿನಿಂದ ಕುಟುಂಬದವರ ಜೊತೆಗಿದ್ದವ. ಮಣಿಪಾಲ್‌ನಲ್ಲಿ ನಂದಿತಾ ಸಾವು ಕಂಡಾಗಲೂ ಅಲ್ಲಿದ್ದವರು ಸತೀಶ್ ಶೆಟ್ಟಿಯೇ. ನಂದಿತಾ ತಂದೆಯಿಂದ ಸುಳ್ಳು ದೂರು ಕೊಡಿಸಿದರಂತೆ ಎಂಬುದಾಗಿ ಪ್ರಚಾರವೂ ನಡೆದಿತ್ತು. ಆದರೆ ಘಟನಾವಳಿಗಳೆಲ್ಲ ಸಂಭವಿಸಿ ಸಿಐಡಿ ತನಿಖೆ ನಡೆಯಿತಲ್ಲ, ಆಗ ಈ ಪಿ.ಸಿ.ಸತೀಶ್ ಶೆಟ್ಟಿ ಸಿಐಡಿ ಅಧಿಕಾರಿಗಳಿಗೆ ಹೇಳಿಕೆ ನೀಡಿ ನಂದಿತಾ ಇಲಿ ಪಾಶಾಣದಂತಹ ವಿಷ ಸೇವಿಸಿದ್ದಳು. ವರದಿಗಾರ ವರದಿ ಕ್ರಿಮಿನಲ್ ದಳವಾಯಿಗೆ ಪಟ್ಟ ಶಿಷ್ಯನೇ ಸ್ಕೆಚ್ಚಿಟ್ಟ! ಕಳೆದ ಭಾನುವಾರ ಅಂದರೆ ಡಿಸೆಂಬರ್ ಹದಿನಾಲ್ಕರಂದು ಸಾಯಂಕಾಲ ಈಶ್ವರ ನಗರದ ಗಣೇಶ ಕಾಲೋನಿಯ ಜನ ಗುಡಿ ಕಟ್ಟಿಸುವ ಸಲುವಾಗಿ ಸಭೆ ಸೇರಿದ್ದರು. ರಾತ್ರಿ ೮.೨೦ರ ಸುಮಾರಿಗೆ ತನ್ನ ಸಾಯಿನಗರ ರಿಯಲ್ ಎಸ್ಟೇಟ್ ಕಚೇರಿಯಿಂದ ಹೊರಟ ಕಲ್ಲಪ್ಪ ಆ ಸಭೆಯಲ್ಲಿ ಭಾಗವಹಿಸಿದ್ದ. ಅಲ್ಲಿಗೆ ಬಂದ ಸಂತೋಷ್ ಮತ್ತು ಪರಶುರಾಮ ಕಲ್ಲಪ್ಪನೊಂದಿಗೆ ಕದನಕ್ಕೆ ಇಳಿದಿದ್ದಾರೆ. ಸಭೆ ಸೇರಿದ್ದ ಜನ ಇವರ ಜಗಳದಿಂದ ಹೆದರಿ ಓಡಿ ಹೋಗಿದ್ದಾರೆ. ಅಷ್ಟರಲ್ಲೇ ತಮ್ಮ ಬಳಿ ಇದ್ದ ಪಂಚು ತೆಗೆದ ಸಂತೋಷ್ ಮತ್ತು ಪರಶುರಾಮ ಕಲ್ಲಪ್ಪನ ಹೊಟ್ಟೆಗೆ ಚುಚ್ಚಿದ್ದಾರೆ. ವರದಿಗಾರ ವರದಿ ಕಂಟಕ ಅಂತ ಮನೆಯೇ ಬಿಟ್ಟರು ಕಿಲಿಕಿಲಿ ಗೌಡ! ತಮಗೆ ಬರುತ್ತಿರುವ ಕಂಟಕಗಳಿಗೆ ವಾಸ್ತು ದೋಷವೇ ಕಾರಣವಿರಬೇಕು ಎಂಬ ಕಾರಣಕ್ಕಾಗಿ ಸದಾನಂದಗೌಡ ಈಗಿರುವ ಮನೆ ಖಾಲಿ ಮಾಡಿದ್ದಾರೆ. ದಿಲ್ಲಿಯಲ್ಲಿ ಕೊಟ್ಟಿರುವ ಬಂಗಲೆಯ ವಾಸ್ತು ಸರಿಪಡಿಸಲು ಹೊರಟಿದ್ದಾರೆ. ಆದರೆ ತಮ್ಮ ಬೆನ್ನಿಗೆ ಕಾಲ ಕಾಲಕ್ಕೆ ನಿಂತವರಿಗೆ ಕೈ ತೋರಿಸಿದರೆ ಸಮಾ ಹೊಡೆತ ಬೀಳುತ್ತದೆ ಎಂಬುದನ್ನು ಅರ್ಥ ಮಾಡಿಕೊಂಡು ಅವರು ಹೆಜ್ಜೆ ಇಡದಿದ್ದರೆ ಪರಿಸ್ಥಿತಿ ಕಷ್ಟಕರವಾಗಲಿದೆ. ಆರ್.ಟಿ.ವಿಠ್ಠಲಮೂರ್ತಿ ವರದಿ ಕಾಶೀನಾಥ್‌ನನ್ನು ಹತ್ಯೆ ಮಾಡಿದ ಶಿವಕುಮಾರ ಮರ್ಮಾಂಗವನ್ನೇಕೆ ಕತ್ತರಿಸಿದ್ದ? ದಾವಣಗೆರೆ-ಹರಿಹರದ ಜನ ಬೆಚ್ಚಿಬಿದ್ದಿದ್ದರು. ಹರಿಹರ ಪಟ್ಟಣದ ಹೊಸಪೇಟೆ ರಸ್ತೆಯ ಹಂಪಸಾಗರ ಕಾಂಪೌಂಡ್‌ನಲ್ಲಿ ಅರವತ್ತು ವರ್ಷ ವಯಸ್ಸಿನ ಕಾಶೀ ನಾಥ್ ದೇಶಮಾನೆ ಎಂಬುವವರ ಭೀಕರ ಹತ್ಯೆಯಾ ಗಿತ್ತು. ಆದರೆ ಆ ಹತ್ಯೆ ಅದೆಷ್ಟು ಭೀಕರವಾಗಿತ್ತು ಎಂದರೆ ಕೊಲೆಯಾದ ಕಾಶೀನಾಥ್‌ರ ಮರ್ಮಾಂಗ ವನ್ನೇ ಕತ್ತರಿಸಿ ತೆಗೆದುಕೊಂಡು ಹೋಗಲಾಗಿತ್ತು. ಹತ್ಯೆ ಗಮನಿಸಿದ ಪೊಲೀಸರಿಗೆ ಇದೊಂದು ಅನೈತಿಕ ಸಂಬಂ ಧದ ಕೊಲೆ ಅನ್ನಿಸಿದರೂ ಕೂಡ ಅರವತ್ತು ವರ್ಷದ ವೃದ್ಧ ಅದೆಂತಹ ಅನೈತಿಕ ಸಂಬಂಧ ಇಟ್ಟುಕೊಳ್ಳಲು ಸಾಧ್ಯ ಎಂಬ ಅನುಮಾನವೂ ಕಾಡತೊಡಗಿತು. ಕಾಂತರಾಜ್ ಅರಸ್ ವರದಿ ರೈಲ್ವೇ ಪೊಲೀಸರು ಮುಚ್ಚಿ ಹಾಕಿದ್ದ ಕೊಲೆ ಕಡೆಗೂ ಬಹಿರಂಗ ರೈಲ್ವೇ ಹಳಿಗೆ ತಲೆ ಕೊಟ್ಟು ಅದೆಷ್ಟೋ ಜನ ಆತ್ಮ ಹತ್ಯೆ ಮಾಡಿಕೊಳ್ಳುತ್ತಾರೆ. ಇನ್ನು ಕೆಲವರನ್ನು ಎಲ್ಲೋ ಕೊಂದು ರೈಲ್ವೇ ಹಳಿಯ ಮೇಲೆ ತಂದು ಬಿಸಾಕ ಲಾಗುತ್ತದೆ. ಆದರೆ ಸರಿಯಾದ ತನಿಖೆ ಮಾಡುವಷ್ಟು ವ್ಯವಧಾನವಿಲ್ಲದ ರೈಲ್ವೇ ಪೊಲೀಸರು ಬಹುತೇಕ ಪ್ರಕರಣಗಳಿಗೆ ಅಸಹಜ ಸಾವು ಎಂದು ನಮೂದಿಸಿ ಪ್ರಕ ರಣವನ್ನು ಮುಚ್ಚಿ ಹಾಕುವುದು ಹಳೆಯ ಸಂಗತಿ. ಇದೇ ರೀತಿ ದಾವಣಗೆರೆಯಲ್ಲೂ ನಡೆದ ಪ್ರಕರಣ ಈಗ ಹೊಸ ತಿರುವು ಪಡೆದಿದೆ. ಮುಚ್ಚಿ ಹೋಗಿದ್ದ ಪ್ರಕರಣಕ್ಕೆ ಮರುಜೀವ ಬಂದಿದೆ. ಕಾಂತರಾಜ್ ಅರಸ್ ವರದಿ ಗುರು-ಶಿಷ್ಯರಮುನಿಸು; ಸಿದ್ದು ಜಾರಕಿಹೊಳಿ ಮಧ್ಯೆ ಫಿಟ್ಟಿಂಗ್ ತಮ್ಮ ನೆಚ್ಚಿನ ಶಿಷ್ಯ ಸಚಿವ ಸತೀಶ್ ಜಾರಕಿ ಹೊಳಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ದೂರ ಮಾಡುತ್ತಿದ್ದಾರಾ? ಮುಖ್ಯಮಂತ್ರಿಯ ಆಪ್ತ ವಲಯದಲ್ಲಿರುವ ಕೆಲವು ಸಚಿವರೇ ಅಂತಹದೊಂದು ಘಟನೆಗೆ ಕಾರಣರಾಗಿದ್ದಾರಾ? ಅಥವಾ ತಾವು ಅಂದುಕೊಂ ಡಿದ್ದ ಖಾತೆ ತಮಗೆ ಸಿಗಲಿಲ್ಲ ಎಂಬ ಅಸಮಾಧಾನದಿಂದಾಗಿ ಸ್ವತಃ ಸತೀಶ್ ಜಾರಕಿಹೊಳಿಯೇ ಮುಖ್ಯಮಂತ್ರಿಯ ಆಪ್ತ ವಲಯದಿಂದ ದೂರವಾಗುತ್ತಿ ದ್ದಾರಾ? ಗೊತ್ತಿಲ್ಲ ರವಿ ಕುಲಕರ್ಣಿ ವರದಿ ಕಸ್ತೂರಿ ರಂಗನ್ ವರದಿಯ ಸಾಧಕ-ಬಾಧಕಗಳ ಸುತ್ತ ಕಸ್ತೂರಿ ರಂಗನ್ ವರದಿ! ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಪ್ರತಿಭಟನೆಗಳು ನಡೆಯತೊಡಗಿವೆ. ರಂಗನ್ ವರದಿ ಸಹಜವಾಗಿಯೇ ಈ ಭಾಗ ದಲ್ಲಿ ದೊಡ್ಡ ಮಟ್ಟದ ಸದ್ದನ್ನು ಮಾಡ ತೊಡಗಿದೆ. ಇದು ರಾಜ್ಯದ ನಿರ್ಲಜ್ಜ ರಾಜಕಾರಣಿಗಳ ಉದಾಸೀನದ ಪರಿ ಣಾಮ ಎಂದರೂ ತಪ್ಪಾಗಲಾರದು. ಈ ವರದಿಯ ಪ್ರಕಾರ ಆನೆ ಕಾರಿಡಾರ್ ಯೋಜನೆ ಮತ್ತು ಹುಲಿ ಯೋಜನೆಗೆ ಒಳಪಡುವುದರಿಂದಾಗಿ ಮಲೆಕುಡಿಯ ಜನಾಂಗದವರು ಬಹು ತೇಕವಾಗಿ ಸಮಸ್ಯೆಯ ಸುಳಿಗೆ ಸಿಲುಕು ತ್ತಾರಲ್ಲದೇ ಬಹುತೇಕ ಅರಣ್ಯ ಸಮೀಪದಲ್ಲಿ ವಾಸಿ ಸುವ ಕುಟುಂಬಗಳಿಗೆ ಇದರಿಂದ ಹಲವಾರು ರೀತಿಯ ಸಮಸ್ಯೆಗಳು ಕಾಡತೊಡಗಿವೆ. ವಸಂತ್ ಗಿಳಿಯಾರ್ ನೇವಿ ಕಾಲಂ ಎಲ್ಲಿಂದಲೋ ಹಾರಿ ಬರುವ ಅಡ್ರೆಸ್ಸು ಚೀಟಿ ಮತ್ತು ಇತರೆ ಕತೆಗಳು ಇಂಥದೇ ಒಂದು ಗಡಗಡ ಚಳಿಗಾಲದಲ್ಲಿ ಬೆಂಗಳೂರಿಗೆ ಬಂದ ಅನುಭವ. ಚಳಿಗಾಳಿ, ಒಣಹವೆ, ಕೈ ಮೇಲೆ ಬಿಳಿ ಹುಡಿ, ಮೈಯೆಲ್ಲಾ ಯಾವುದೋ ನವಿರೊಂದು ಹರಿದಾಡಿದ ಅನು ಭವ, ಊರಿನ ನೆನಪು, ಬೆಂಗಳೂರಿನ ಒನಪು, ಆಟೋ ರಿಕ್ಷಾವಾಲಾನ ಆರ್ಭಟ, ಟೋಪಿ ಹಾಕೋ ದಕ್ಕೆ ನಮ್ಮ ತಲೆಯನ್ನು ಬಗ್ಗಿಸಿಕೊಂಡಂತೆ ಕಾಣುತ್ತಿ ರುವ ಶಹರ. ಇಂಥ ಪುರಪ್ರವೇಶದ ನಂತರ ಶುರು ವಾಗುವುದು ನಿಮ್ಮದೇ ಪರ್ಮನೆಂಟ್ ಅಡ್ರೆಸ್ ಒಂದಕ್ಕಾಗಿ ಹುಡುಕಾಟ ಅಥವಾ ಪರದಾಟ. ನೇವಿ ಜಾನಕಿ ಕಾಲಂ ತೂಕದ ಯಂತ್ರಗಳ ನಡುವೆ ತೂಕದ ಮನುಷ್ಯರು ಬೆಳಗ್ಗೆ ಐದುಗಂಟೆಗೆಲ್ಲ ಬೇಡವೆಂದರೂ ಎಚ್ಚ ರಾಗುತ್ತಿತ್ತು. ನನ್ನ ರೂಮಿನ ಹೊರಗಿರುವ ಮರದ ಮೇಲೆ ಕೂತ ಹಕ್ಕಿಗಳು ಒಂದೇ ಸಮನೆ ಗಲಾಟೆ ಶುರು ಮಾಡುತ್ತಿದ್ದವು. ಎದ್ದ ತಕ್ಷಣ ಉಲ್ಲಸಿತವಾಗಿದ್ದ ಮನಸ್ಸಿಗೆ ಥಟ್ಟನೆ ಕಾಫಿ-ಟೀ ಸಿಗುವುದಿಲ್ಲ, ಸಿಗರೇ ಟಿಲ್ಲ ಅನ್ನುವುದು ಹೊಳೆಯಿತು. ಅಂಥ ಸ್ಥಿತಿಯಲ್ಲಿ ಕಾಲ ಕಳೆಯುವುದಕ್ಕಿಂತ ಮತ್ತಷ್ಟು ಹೊತ್ತು ಮಲಗು ವುದೇ ವಾಸಿ ಅಂದುಕೊಂಡು ಮತ್ತೆ ಹೊದ್ದು ಮಲಗಲು ಹೋದೆ. ಜಾನಕಿ ಒಲಿದಂತೆ ಹಾಡುವೆ ಕಾಲಂ ಸ್ಕಾಚ್ ಏರಿಸಿ ಭಿಕ್ಷೆ ಬೇಡುತ್ತಿದ್ದ ಮಹಾರಾಜ! ಇದಾರ್‌ನ ಮಹಾರಾಜ ಹಿಮ್ಮತ್ ಸಿಂಗ್ ಭಾರತೀಯ ಸಂಸ್ಥಾನಗಳಲ್ಲಿ ಅತ್ಯಂತ ಪ್ರಬಲರಾದ ರಾಜರಲ್ಲಿ ಒಬ್ಬನಾಗಿದ್ದ. ಈತ ಜೋಧ್‌ಪುರದ ರಜಪೂತ ಮಹಾರಾಜರ ವಂಶಸ್ಥ. ಬ್ರಿಟಿಷ್ ದೊರೆಯ ಸಿಂಹಾಸನಾರೋಹಣ ಸಂದರ್ಭದಲ್ಲಿ ಆಹ್ವಾನಿತರಾದ ಗಣ್ಯ ವ್ಯಕ್ತಿಗಳಲ್ಲಿ ಈತನೂ ಒಬ್ಬನಾಗಿದ್ದ. ಲಂಡನ್‌ನ ಬ್ರಿಟಿಷ್ ಸಮಾಜದಲ್ಲಿ ಚಿರಪರಿಚಿತನಾಗಿದ್ದ ಈತ ಬ್ರಿಟಿಷ್ ಸಂಸ್ಕೃತಿ ಹಾಗೂ ಬ್ರಿಟಿಷ್ ಮಹಿಳೆಯರಲ್ಲಿ ಅನುರಕ್ತನಾಗಿದ್ದ. ರಾಜಧಾನಿ ಹಿಮ್ಮತ್ ನಗರದಲ್ಲಿ ಮಾತ್ರವಲ್ಲದೆ ಬಾಂಬೆ, ಪೂನಾಗಳಲ್ಲಿಯೂ ಇವನ ಅರಮನೆಗಳಿದ್ದವು. ಚಂದ್ರಶೇಖರ ಆಲೂರು

Hai Bangalore is a mass circulation weekly Kannada language tabloid published in Bangalore.Its editor is journalist Ravi Belagere.