skb
ಲೋಕ ಶಿಕ್ಷಣ ಟ್ರಸ್ಟ್ ಒಂದು ಸಾರ್ವಜನಿಕ ದತ್ತಿ ಸಂಸ್ಥೆಯಾಗಿದ್ದು ಸಮಾಜಕ್ಕೆ ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಿದೆ.ಪ್ರತಿಷ್ಠಾನವು ‘ಸಂಯುಕ್ತ ಕರ್ನಾಟಕ’ ದಿನಪತ್ರಿಕೆ , ‘ಕರ್ಮವೀರ’ ವಾರ ಪತ್ರಿಕೆ ಮತ್ತು ‘ಕಸ್ತೂರಿ’ ಮಾಸಪತ್ರಿಕೆಗಳನ್ನು ಪ್ರಕಟಿಸುತ್ತಿದೆ.ಲೋಕ ಶಿಕ್ಷಣ ಟ್ರಸ್ಟ್ ೮೫ ವರ್ಷಗಳ ದೀರ್ಘ ಇತಿಹಾಸ ಹೊಂದಿದ್ದು ತನ್ನ ಪ್ರಕಟಣೆಗಳ ಮೂಲಕ ಸ್ವಾತಂತ್ರ್ಯ ಹೋರಾಟದಲ್ಲಿ ರಾಷ್ಟ್ರವಾದ, ದೇಶ ಭಕ್ತಿ ಮತ್ತು ಗಾಂಧೀಜಿಯವರ ಮೌಲ್ಯಗಳನ್ನು ಪ್ರಜ್ವಲನಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದು ಅದೇ ಮೌಲ್ಯಗಳನ್ನು ಇಂದು ಯುವಜನಾಂಗಕ್ಕೆ ಪ್ರಸರಿಸುತ್ತಿದೆ.ಹಾಗೆಯೇ ಕರ್ನಾಟಕ ಏಕೀಕರಣದಲ್ಲಿ ಕನ್ನಡ ಪತ್ರಿಕೆಗಳ ಹಿರಿಯಣ್ಣನಾಗಿ ಮುಂಚೂಣಿಯಲ್ಲಿ ಇದ್ದು ಏಕೀಕರಣ ಚಳುವಳಿಯ ನೇತೃತ್ವ ವಹಿಸಿ ಕರ್ನಾಟಕ ಏಕೀಕರಣದ ಕನಸು ನನಸಾಗಿಸಿದ ಶ್ರೇಯಸ್ಸು ಪಡೆದಿದೆ.