ಶಾದಿ ಭಾಗ್ಯ ಅನ್ನ ಭಾಗ್ಯ ; ಮಕಾಡೆ ಬಿದ್ದ ಸಿದ್ದು ಕರ್ನಾಟಕದಲ್ಲಿ ಅಹಿಂದ ವರ್ಗಗಳು ಈಗ ಕಾಂಗ್ರೆಸ್ ಜೊತೆಗಿವೆ. ನಾವು ಅನ್ನಭಾಗ್ಯ ಯೋಜನೆ ಜಾರಿ ಮಾಡಿದ್ದೀವಲ್ಲ? ಅದು ಎಂಬತ್ತು ಲಕ್ಷ ಕುಟುಂಬಗಳಿಗೆ ತಲುಪುತ್ತದೆ. ಒಂದು ಕಾರ್ಡಿಗೆ ಎರಡು ವೋಟು ಬಂದರೂ ಒಂದು ಕೋಟಿ ಅರವತ್ತು ಲಕ್ಷ ಮತಗಳು ನಮಗೆ ಸಿಗುತ್ತವೆ. ಅದರಿಂದಲೇ ಇಷ್ಟು ಮತಗಳು ಬಂದರೆ ಉಳಿದಂತೆ ಎಲ್ಲ ಸೇರಿ ಮಿನಿಮಮ್ ಇಪ್ಪ ತ್ತೆರಡು ಸೀಟು ಗೆದ್ದು ಬಿಡುತ್ತೇವೆ. ಹೀಗಾಗಿ ಕರ್ನಾಟಕದ ವಿಷಯದಲ್ಲಿ ಡೋಂಟ್‌ವರಿ. ಇಪ್ಪತ್ತೆರಡು ಸೀಟು ಗೆಲ್ಲಿಸಿಕೊಡುವುದು ನನ್ನ ಜವಾಬ್ದಾರಿ. ಉಳಿದಂತೆ ನೀವು ಹೇಗಾದರೂ ಮಾಡಿ ನೂರರ ಗಡಿ ದಾಟಿ. ಆಗ ಕೇಂದ್ರದಲ್ಲಿ ಮತ್ತೆ ಯುಪಿಎ ಸರ್ಕಾರ ಬರುವಂತೆ ಮಾಡಬಹುದು. ಹಾಗಂತ ಹೇಳಿದ್ದ ಸಿದ್ದರಾಮಯ್ಯನವರ ಮಾತನ್ನು ಮೇಡಮ್ ಸೋನಿಯಾ ಮತ್ತು ರಾಹುಲ್‌ಗಾಂ ನಂಬಿದ್ದರು. ಹೀಗಾಗಿ ರಾಜ್ಯದ ಕಾಂಗ್ರೆಸ್ ಉಸ್ತುವಾರಿ ವಹಿಸಿಕೊಂಡ ದಿಗ್ವಿಜಯ್‌ಸಿಂಗ್ ಪದೇಪದೇ, ಪರಮೇಶ್ವರ್ ಅವರನ್ನು ಡಿಸಿಎಂ ಹುದ್ದೆಯಲ್ಲಿ ಕೂರಿಸದಿದ್ದರೆ ದಲಿತರು ಬಂಡಾಯ ಏಳುತ್ತಾರೆ ಎಂದ ಮಾತೂ ಅವರಿಗೆ ಕೇಳದೆ ಹೋಯಿತು.
Hai Bangalore is a mass circulation weekly Kannada language tabloid published in Bangalore.Its editor is journalist Ravi Belagere.