logo

Get Latest Updates

Stay updated with our instant notification.

logo
logo
account_circle Login
Hi Bangalore
Hi Bangalore

Hi Bangalore

By: Bhavana Prakashana
15.00

Single Issue

15.00

Single Issue

About this issue

ಹಾಯ್ ಬೆಂಗಳೂರ್! : ಸಂಪುಟ : ೧೯, ಸಂಚಿಕೆ : ೧೩, ಡಿಸೆಂಬರ್ ೨೬, ೨೦೧೩ ಬೆಲೆ : ೧೫ ರು ಮುಖಪುಟ ಲೇಖನ ಭಜರಂಗಿ ಮತ್ತೊಂದು ಜೋಗಿ ಶಿವಣ್ಣನಿಗೆ ಜೀವ! ಬೇಡವೆಂದ ಸುದೀಪ ಎಂಥಾ ಮೂರ್ಖ? ಶಿವಣ್ಣ ಗೆದ್ದಿದ್ದಾರೆ. ನಿರ್ದೇಶಕ ಹರ್ಷ ಮಾಡಿದ ಮೋಡಿಗೆ ಕನ್ನಡಿಗರು ಫುಲ್ ಖುಷ್ ಆಗಿದ್ದಾರೆ. ನಿರ್ಮಾಪಕರಾದ ಮಂಜುನಾಥ್ ಮತ್ತು ನಟರಾಜ್ ಗೌಡ ಹಾಕಿದ ಬಂಡವಾಳಕ್ಕೆ ಬಡ್ಡಿ ಸಮೇತ ವಸೂಲಿ ಮಾಡಿಕೊಂಡಿದ್ದಾರೆ. ಹಲವು ದಿನಗಳಿಂದ ಮಂಕುಕವಿದಿದ್ದ ಕನ್ನಡ ಚಿತ್ರರಂಗ ಕಂಗೊಳಿಸುತ್ತಿದೆ. ಅದಕ್ಕೆಲ್ಲ ಕಾರಣವಾಗಿರುವುದು “ಭಜರಂಗಿ"ಯ ಬಂಪರ್ ಹಿಟ್. ಆದರೆ “ಭಜರಂಗಿ" ಈ ಮಟ್ಟದ ಯಶಸ್ಸು ಗಳಿಸಲು ಕಾರಣವೇನು? ಎಂಬುದೇ ಕುತೂಹಲ ಸುನೀಲ್ ಹೆಗ್ಗರವಳ್ಳಿ ಖಾಸ್‌ಬಾತ್ ಇದ್ದುದನ್ನೆಲ್ಲ ಕಳೆದುಕೊಂಡು ಮತ್ತೆ ಎದ್ದು ನಿಂತ ಘಳಿಗೆಗಳ ಬಗ್ಗೆ... ದಿವ್ಯ ಪದನುಗೊಂಡ ಮನಸ್ಸಿಗೆ, ಚೇತರಿಸಿಕೊಂಡ ಆರೋಗ್ಯಕ್ಕೆ ಇದೊಂದು booster dose ಬೇಕಾಗಿತ್ತು. ‘ಓ ಮನಸೇ...’ ಬಿಡುಗಡೆ, ಅದರ ಪುನರಾರಂ ಭದ ಬಗ್ಗೆ ನಾನು ಮತ್ತು ಉದಯ ಮರಕಿಣಿ ದಿನಗಟ್ಟಲೆ, ನೂರಾರು ಗಂಟೆಗಳ ಚರ್ಚೆ ನಡೆಸಿ ಅದಕ್ಕೊಂದು ಹೊಸ ರೂಪು, final form ಕೊಡಲು ತೀರ್ಮಾನಿಸಿದ್ದೆವು. ಅದಕ್ಕೊಂದು ಸಮಾರಂಭ ಮಾಡಬೇಕಾ? ಯಾರನ್ನಾದರೂ ಅತಿಥಿಗಳನ್ನಾಗಿ ಕರೆಯಬೇಕಾ ಎಂದೆಲ್ಲ ಅಂದುಕೊಂಡಿದ್ದೆವು. ಆರ್.ಬಿ ಹಲೋ ಸಿಇಟಿ ರದ್ದಾದರೆ ಬಡಮಕ್ಕಳ ಗತಿ ಏನು? ಕಾಲಮುಂದಿನ ವರ್ಷ ವೃತ್ತಿಪರ ಶಿಕ್ಷಣ ಕೋರ್ಸುಗಳಿಗೆ ಸೇರಲು ಬಡ, ಮಧ್ಯಮ ಕುಟುಂಬದ ಮಕ್ಕಳಿಗೆ ಸಾಧ್ಯವೇ? ಜಾಗತೀಕರಣದ ಈ ಘಟ್ಟದಲ್ಲಿ, ಕೃಷಿ ವ್ಯವಸ್ಥೆಯನ್ನು ಅದು ಬಡಿದು ಹಾಕುತ್ತಾ ನಡೆದಿರುವ ಕಾಲಘಟ್ಟದಲ್ಲಿ ನಮ್ಮ ಮಕ್ಕಳು ಹೆಚ್ಚೆಚ್ಚು ಅವಲಂಬನೆಗೆ ಒಳಗಾಗುತ್ತಿರುವುದು ಕೈಗಾರಿಕಾ ವಲಯಕ್ಕೆ ಮತ್ತು ಸೇವಾವಲಯಕ್ಕೆ ಎಂಬುದು ರಹಸ್ಯದ ವಿಷಯವೇ ನಲ್ಲ. ರವಿ ಬೆಳಗೆರೆ ಬಾಟಮ್ ಐಟಮ್ ಮಗಳ ಮನದ ಹಿತ್ತಲಿಗೆ ಕಳ್ಳ ಬೆಳದಿಂಗಳು ಬಂದು ಬಿದ್ದಾಗ ನನ್ನ ಇಬ್ಬರೂ ಹೆಣ್ಣುಮಕ್ಕಳಿಗೆ ನಾನು ತುಂಬ ಹಿಂದೆ ಹೇಳಿದ್ದೆ: ನೀವೀಗ ದೊಡ್ಡವರಾಗತೊಡಗಿದ್ದೀರಿ. ಅದರರ್ಥ, ದೊಡ್ಡವರಾಗಿ ಬಿಟ್ಟಿದ್ದೀರಿ ಅಂತ ಅಲ್ಲ. ದೊಡ್ಡವರಾಗತೊಡಗುವ ಮತ್ತು ಪ್ರೌಢರಾಗಿ ಬಿಡುವ ನಡುವಿನ ಅಂತರ ಬರೀ ಎರಡು ವರ್ಷದ್ದಷ್ಟಾಗಿರುತ್ತದೆ. ರವೀ ವರದಿ ಕನ್ನಡದ ಗೋಪಿ ಅದೆಂಥಾ ಸಾವು ಸತ್ತ ಪಾಪಿ! ನಾ. ಗೋಪಿ. ಕನ್ನಡ ಚಳವಳಿಯ ಹೋರಾಟಗಾರರ ಮಧ್ಯೆ ಗೋಪಿಯ ಹೆಸರಿಗೆ ಗೌಪ್ಯತೆ ಎಂಬ ಮತ್ತೊಂದು ಹೆಸರಿದೆ. ಹುಟ್ಟು ಹೋರಾಟಗಾರ ವಾಟಾಳ್ ನಾಗರಾಜರಿಗೆ ಈತ ಪಟ್ಟ ಶಿಷ್ಯ. ಪಕ್ಕದಲ್ಲಿ ಗೋಪಿ ಇಲ್ಲದ ವಾಟಾಳ್‌ರನ್ನು ನೆನಪಿಸಿಕೊಳ್ಳುವುದೂ ಕಷ್ಟ. ಅವರ ವಿಶಿಷ್ಟ ಚಳವಳಿ, ಹೋರಾಟಕ್ಕೆ ಆಡು, ಹಂದಿ, ಕತ್ತೆ, ಕುದುರೆ, ಎತ್ತು, ಕೋಣಗಳನ್ನು ಎಲ್ಲಿಂದಲೋ ಹುಡುಕಿ ಎಳೆದು ತರುತ್ತಿದ್ದವನೇ ಈತ. ಲಕ್ಷ್ಮೀಸಾಗರ ಸ್ವಾಮಿಗೌಡ ವರದಿ ನಕ್ಸಲ್ ಸಿರಿಮನೆ ನಾಗರಾಜ್, ನೂರ್ ಆಡಿದ ಮೊದಲ ಮಾತು ಅಲ್ಲಿ ಮಲೆನಾಡಿನ ಕಾಡುಗಳಲ್ಲಿ ಹಲವು ತಿಂಗಳ ವಿರಾಮದ ನಂತರ ನಕ್ಸಲ್ ತಂಡ ಓಡಾಟ ಚುರುಕುಗೊಳಿಸಿ ಆಕ್ಷನ್‌ಗೆ ಇಳಿದಿರುವಾಗಲೇ ಇತ್ತ ಮಾವೋವಾದಿ ಕ್ರಾಂತಿಕಾರಿಗಳ ಮತ್ತೊಂದು ಬಣ ಸಶಸ್ತ್ರ ಹೋರಾಟವನ್ನು ಬದಿಗಿಟ್ಟು ಪ್ರಜಾತಾಂತ್ರಿಕ ಚೌಕಟ್ಟಿ ನಲ್ಲಿ ಹೋರಾಟ ಮುಂದುವರೆಸಲು ಬದ್ಧ ಎಂದು ಘೋಷಿಸಿದೆ. ಶೃಂಗೇಶ್ ವರದಿ ಕೂಡ್ಲಿಗಿ:ಲೂಸ್ ಪೈಜಾಮ ನಬಿ ಮತ್ತು ಇತರೆ ಚಟುವಟಿಕೆ ಬಳ್ಳಾರಿಯ ಮಾಜಿ ಸಚಿವ ಎನ್.ಎಂ.ನಬಿ ಜಿಲ್ಲೆಯಲ್ಲಿ ಪುಂಡಾಟಿಕೆ ಶುರು ಹಚ್ಚಿಕೊಂಡಿದ್ದಾನೆ. ಈತನ ದಾಂಧಲೆಗಳು ಹಾಗೂ ದಂಧೆ ಗಳನ್ನು ನೋಡುತ್ತಾ ಬಂದಿರುವ ಕೂಡ್ಲಿಗಿ ಭಾಗದ ಜನತೆ ಈಗಿನ ಹೊಸ ಅವತಾರ ನೋಡಿ ಅವಕ್ಕಾಗಿದ್ದಾರೆ. ಎಲ್ಲೆಡೆಯೂ ಇರುವಂತೆ ಬಳ್ಳಾರಿ ಜಿಲ್ಲೆಯ ರಾಜಕಾರಣದಲ್ಲೂ ಗುಜರಿ ಅಂಗಡಿ ಇದೆ. ಸತೀಶ್ ಬಿಲ್ಲಾಡಿ ವರದಿ ತುಮಕೂರು ಪಾರ್ಲಿಮೆಂಟ್ ಟಿಕೆಟ್‌ಗಾಗಿ ಶೀತಲ ಸಮರ ತುಮಕೂರು ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳು ಇನ್ನಿಲ್ಲದ ಹುರುಪಿನೊಂದಿಗೆ ರೆಡಿಯಾಗತೊಡಗಿದ್ದಾರೆ. ಅದರಲ್ಲೂ ಕಾಂಗೈ ಪಾಳಯದಲ್ಲಿ ಟಿಕೆಟ್‌ಗಾಗಿ ತೀವ್ರ ಪೈಪೋಟಿಯೇ ನಡೆಯತೊಡಗಿದೆ. ಅತ್ತ ನರೇಂದ್ರ ಮೋದಿಯ ಅಲೆಯಲ್ಲಿ ತೇಲುತ್ತಿರುವ ಬಿಜೆಪಿ ಪಾಳಯದಲ್ಲೂ ಕೂಡ ಟಿಕೆಟ್ ಫೈಟ್ ಗಾದಿ ಶುರುವಾಗಿದ್ದರೆ, ದಳದ ಕಡೆಯಿಂದ ಮಾತ್ರ ಅಂತಹ ಲವಲವಿಕೆ ಕಾಣಿಸುತ್ತಿಲ್ಲ. ಲೋಕೇಶ್ ಕೊಪ್ಪದ್ ವರದಿ ಬಿಜೆಪಿ ಪಾಲಿಗೆ ರಾಮುಲು -ಯಡ್ಡಿಯೇ ದೊಡ್ಡ ಶಕ್ತಿ! ಉತ್ತರ ಭಾರತದಲ್ಲಿ ವಿಜಯ ಪತಾಕೆ ಹಾರಿಸಿದ ಬೆಳವಣಿಗೆಯ ಹಿನ್ನೆಲೆಯಲ್ಲಿಯೇ ಬಿಜೆಪಿಯ ಮಾಜಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಕರ್ನಾಟಕದ ಮಾಜಿ ಸಿಎಂ ಯಡಿಯೂರಪ್ಪ ಮತ್ತು ಬಿಎಸ್ಸಾರ್ ಕಾಂಗ್ರೆಸ್ ಅನಾಯಕ ಶ್ರೀರಾಮುಲು ಜತೆ ನಡೆಸಿರುವ ರಹಸ್ಯ ಚರ್ಚೆ ಗಮನಾರ್ಹವಾಗಿದೆ. ಆರ್.ಟಿ.ವಿಠ್ಠಲಮೂರ್ತಿ ವರದಿ ಕಮೀಷನರ್ ರವೀಂದ್ರ ಪ್ರಸಾದ್‌ರನ್ನು ತಂದು ಕೂರಿಸಿದ್ದು ಯಾರು? ಹುಬ್ಬಳ್ಳಿಯ ಪೊಲೀಸರಿಗೀಗ ಫುಲ್ ಕನ್‌ಫ್ಯೂಷನ್. ಅವರಿಗೀಗ ಅವಳಿ ನಗರದ ಕಾನೂನು ಸುವ್ಯವಸ್ಥೆಯ ಡಿಸಿಪಿ ಸುಭಾಷ್ ಗುಡಿಮನಿಯೋ? ಇಲ್ಲಾ ಅಲ್ಲಿನ ಮಾಜಿ ರೌಡಿಶೀಟರ್ ವಾಂಟೆಡ್ ಅಸದ್‌ನೋ? ಎನ್ನುವ ಗೊಂದಲ. ಅಸಲಿಗೆ ಇವತ್ತು ಅವಳಿ ನಗರದ ಡಿಸಿಪಿ ಸುಭಾಷ್ ಗುಡಿಮನಿಯ ಪಕ್ಕ ನಿಂತು ಊರಿನ ಎಲ್ಲಾ ಕಳ್ಳ ದಂಧೆಗಳನ್ನು ಸಂಭಾಳಿಸುತ್ತಿರುವ ಅಸದ್ ಹುಬ್ಬಳ್ಳಿ ಶಹರ ಪೊಲೀಸ್ ಠಾಣೆಯ ಮಾಜಿ ರೌಡಿ. ವರದಿಗಾರ ವರದಿ ಅವಿವೇಕಿ ಅಮೇರಿಕೆಯಲ್ಲಿ ದೇವಯಾನಿ ಬೆತ್ತಲಾ? ದುರಹಂಕಾರಿ ಅಮೇರಿಕೆ ಮತ್ತೆ ತನ್ನ ಆಟ ಶುರು ಹಚ್ಚಿಕೊಂಡಿದೆಯಾ? ಭಾರತೀಯ ಸಂಜಾತೆ, ಭರತ ದೇಶದ ಉನ್ನತ ಅಧಿಕಾರಿಯೊಬ್ಬಳನ್ನ ಹಿಂಸ್ರ ಪಶುವಿನಂತೆ ನಡೆಸಿಕೊಂಡಿದೆಯಾ? ನಮ್ಮ ವಿದೇಶಾಂಗ ಸಚಿವಾಲಯ ಏಕೆ ಹೆಡೆಮುರಿ ಕಟ್ಟಿ ಅಮೇರಿಕೆಗೆ ಅವಾಜ್ ಹಾಕುತ್ತಿದೆ? ಅಂತಹದ್ದೇನಾಯಿತು ಅಮೇರಿಕಾದಲ್ಲಿ? ಶೈಲಾಭಾನು ನೇವಿ ಕಾಲಂ ಜಟಿಲ ಕೇಸೊಂದು ಸರಳವಾಗುವುದಕ್ಕೆ ಶುರುವಾಗಿ.. ಷಣ್ಮುಖಪ್ಪ ಸಾಹೇಬರು ಮರುದಿನ ತಮ್ಮದೇ ಯಾವುದೋ ಟ್ರಾನ್ಸ್‌ಫರ್ ತಲೆ ಬಿಸಿಯಲ್ಲಿ ಮಧ್ಯಾಹ್ನ ಕುಳಿತಿದ್ದಾಗ ಅವರನ್ನು ಹುಡುಕಿಕೊಂಡು ಹೆಂಗಸೊಬ್ಬಳ ಪ್ರವೇಶವಾಗಿದೆ ಅಂತ ಕಾನ್‌ಸ್ಟೆಬಲ್ ಬಂದು ಹೇಳಿದ. ಯಾರಿರಬಹುದು ಅಂದ ಅವರಿಗೆ ಏನೋ ಗೊತ್ತಾ ದಂತಾಗಿ ಬಂದು ನೋಡಿದರೆ ಹೌದು, ಪದ್ಮಾಂಬಿಕೆಯೇ ನೇವಿ ಜಾನಕಿ-ಅಂಕಣ ನೆರಳುಗಳ ಬೆನ್ನು ಹತ್ತಿದವರ ಬೆಳಕಿನ ಚಿತ್ರಗಳು ೧೯೮೬ ಇರಬೇಕು. ನಾನು ಮತ್ತು ಗೆಳೆಯ ಗೋಪಾಲಕೃಷ್ಣ ಕುಂಟಿನಿ ಮಂಗಳೂರು ವಿಶ್ವವಿದ್ಯಾಲಯದ ಸಮೀಪ ಸುಳಿದಾಗೆಲ್ಲ ಕೇಳಿಸುತ್ತಿದ್ದ ಹೆಸರು ಸಿಎನ್ನಾರ್. ನಮ್ಮ ಸಾಹಿತ್ಯಿಕ ಗುರುಗಳಾದ ವೆಂಕಟರಮಣ ಬಳ್ಳ ಅವರ ಹೆಸರನ್ನು ಆಗಾಗ ಜಪಿಸುತ್ತಿದ್ದರು. ಅಷ್ಟು ಹೊತ್ತಿಗಾಗಲೇ ಇಂಗ್ಲಿಷ್ ಎಂಎ ಮಾಡುವ ಆಸೆ ಕೈ ಬಿಟ್ಟಿದ್ದ ನಮಗೆ ಇಂಗ್ಲಿಷ್ ವಿಭಾಗದ ಮೇಲೂ ಇಂಗ್ಲಿಷ್ ಮೇಷ್ಟರುಗಳ ಮೇಲೂ ಅಸಾಧ್ಯ ಸಿಟ್ಟು ಶುರುವಾಗಿತ್ತು. ಜಾನಕಿ ಮರೆತ ಭಾರತ-ಅಂಕಣ ನ್ಯಾತನಾಯ್ಕನ ಚಿಲ್ರೆ ಅಂಗಡಿ ಖರೀದಿಸಿದ ಸರಕುಗಳಿಗೆ ನ್ಯಾತನಾಯ್ಕನಿಗೆ ದುಡ್ಡೇ ಕೊಡಬೇಕೆಂದೇನೂ ಇರಲಿಲ್ಲ. ದುಡ್ಡು ಇಲ್ಲದ ಹುಡುಗರು, ಹೆಂಗಸರು ರಾಗಿ, ಭತ್ತ, ಹುರುಳಿ, ಬೆಲ್ಲ, ಕಡ್ಲೆಕಾಯಿ ಮುಂತಾದವು ಗಳನ್ನು ಕೊಟ್ಟು ತಮಗೆ ಬೇಕಾದ ವಸ್ತುಗಳನ್ನು ಕೊಂಡು ಹೋಗುತ್ತಿದ್ದರು. ನ್ಯಾತನಾಯ್ಕ ಅದಕ್ಕಾಗಿಯೇ ಏಳೆಂಟು ಗಡಿಗೆಗಳನ್ನು ಇಟ್ಟಿದ್ದ. ಕೇಶವರೆಡ್ಡಿ ಹಂದ್ರಾಳ ಕೋಟೆ ಕಾಯ್ದ ತಾಯಂದಿರು-ಅಂಕಣ ಲೇಖನಿಗೆ ಸೂರ್ತಿ ತುಂಬಿದ ಹಂಸ ಇವರು! ಮಗಳು ಹಾಡು ಹಕ್ಕಿ. ಎಳವೆಯಲ್ಲಿಯೇ ಅವಳಿಗೇತಕೆ ಮದುವೆ ಎಂಬುದು ಅಮ್ಮನ ಚಿಂತೆ. ಅಣ್ಣಂದಿರಿಗೋ ಮುದ್ದಿನ ತಂಗಿ ನಾಡು ಮೆಚ್ಚುವ ಗಾಯಕಿಯಾಗಬೇಕೆಂಬ ಹಂಬಲ. ಅದೊಂದೇ ಕಾರಣಕ್ಕೆ ಅವರು ಆಗಷ್ಟೇ ಹೈಸ್ಕೂಲ್ ಮುಗಿಸಿದ್ದ ತಂಗಿಯನ್ನು ಆರ್ಕೆಸ್ಟ್ರಾ ತಂಡವೊಂದರಲ್ಲಿ ಹಾಡಲು ಹಚ್ಚಿದ್ದರು. ಲಕ್ಷ್ಮೀಸಾಗರ ಸ್ವಾಮಿಗೌಡ

About Hi Bangalore

Hai Bangalore is a mass circulation weekly Kannada language tabloid published in Bangalore.Its editor is journalist Ravi Belagere.