logo

Get Latest Updates

Stay updated with our instant notification.

logo
logo
account_circle Login
Hi Bangalore
Hi Bangalore

Hi Bangalore

By: Bhavana Prakashana
15.00

Single Issue

15.00

Single Issue

About this issue

ಸೃಷ್ಟಿ 1022 ; ಸಂಪುಟ 20 ; ಸಂಚಿಕೆ 34 ; ಮೇ 21, 2015 ಖಾಸ್‌ಬಾತ್ ನನ್ನ ಪತ್ರಿಕೆಯ ಅಫೀಸೆಂದರೆ ಅದು ಎಂಥವರನ್ನೂ ರೆಡಿ ಮಾಡಿ ಕಳಿಸುವ ಗ್ಯಾರೇಜಾ? “Raji, I will get you one C.B." ಅಂತ ಫೇಸ್‌ಬುಕ್‌ನಲ್ಲಿ ಬರೆದೆ. ನಿವೇದಿತಾಳ ನಾದಿನಿ ರಾಜಿಯ ಫೊಟೋಕ್ಕೆ ನಾನು ಹಾಕಿದ್ದ ಪ್ರತಿಕ್ರಿಯೆ ಅದು. ನಾವೆಲ್ಲರೂ ರಾಜಿಯನ್ನು ಒಂದು ಮಗು ಅಂತಲೇ treat ಮಾಡುತ್ತೇವೆ. ಅವಳಿಗೀಗ ಮೂವತ್ತೈದಿರಬೇಕು ವರ್ಷ. ತೀರ ಬುದ್ಧಿ ಬೆಳೆದವಳಲ್ಲ ಅಥವಾ ಮನೋವಿಕಲಳು ಅನ್ನಲಾಗುವುದಿಲ್ಲ. ಏಕೆಂದರೆ, ಕೆಲವೊಮ್ಮೆ ಇದ್ದಕ್ಕಿದ್ದಂತೆ ದೊಡ್ಡ ಹುಡುಗಿಯಂತಾಗಿ ಬಿಡುತ್ತಾಳೆ. “ತಿಳಿಯದೆ ಏನು, ಅವಳಿಗೆ ಎಲ್ಲ ತಿಳಿಯುತ್ತೆ" ಅನ್ನಿಸಬೇಕು: ಹಾಗೆ ವರ್ತಿಸತೊಡಗುತ್ತಾಳೆ. ರವಿ ಬೆಳಗೆರೆ ಸಾಫ್ಟ್‌ಕಾರ್ನರ್ ಅದರ ಪ್ರತಿ ಇಟ್ಟಿಗೆಯಲ್ಲೂ ಓದುಗೆ ದೊರೆಯ ಆಶೀಸ್ಸು ಒಂದು ಸಿಕ್ಸರ್ ಹೊಡೆದರೆ ಚಪ್ಪಾಳೆ ತಟ್ಟುತ್ತೇವೆ. ಎರಡನೇದಕ್ಕೂ ಚಪ್ಪಾಳೆ. ನೂರ ಹನ್ನೆರಡೂ ಸಲ ಸಿಕ್ಸರ್ರೇ ಹೊಡೀತಿದ್ರೆ? ಅದೀಗ ನನ್ನ ಸ್ಥಿತಿ. ನಿಮ್ಮ ಊಹೆ ಸರಿ. ಒಂದೇ ಒಂದು ಮಗು, ಸೋಷಿಯಲ್ ಸ್ಟಡೀಸ್‌ನಲ್ಲಿ ಇಪ್ಪತ್ತಾರು ಮಾರ್ಕ್ಸ್ ತೆಗೆದು ಫೇಲಾಗಿರೋದನ್ನ ಬಿಟ್ರೆ ನಮ್ಮದು ಇನ್ನೂ ಒಂದು ಸಿಕ್ಸರ್ರೇ: ಪ್ರಾರ್ಥನಾ ಸ್ಕೋರ್! ನಮ್ಮ ಶೀಲಕ್ಕ ಊರಲಿಲ್ಲ. ಫೋನ್ ಮಾಡಿ ಕಂಗ್ರಾಟ್ಸ್ ಹೇಳಿದರೆ stiff ಆದ ಉತ್ತರ ಬಂತು: I am not happy Ravi. ರವಿ ಬೆಳಗೆರೆ ಬಾಟಮ್ ಐಟಮ್ ಇದು ಹಾರಿಬಲ್ ಅಲ್ಲ, ನಮ್ಮ ಬದುಕು ಎದುರಿಸೋ ನ್ಯಾಚುರಲ್ ಸಂಗತಿ ಅಷ್ಟೆ! ಇವತ್ತೇನಪ್ಪಾ horrible development? ಒಂದು ಕಾಲದಲ್ಲಿ ಸಂಯುಕ್ತ ಕರ್ನಾಟಕ ಕಚೇರಿಯಲ್ಲಿ ಬಹಳ ಜನಪ್ರಿಯವಾಗಿದ್ದ ಪದ ಇದು. ನಿಮಗೆ ಆಶ್ಚರ್ಯವಾದೀತು, ಸಂ.ಕ. ಉದ್ಯೋಗಿಗಳು ಬೆಳಿಗ್ಗೆ ಕಚೇರಿಗೆ ಬಂದಾಕ್ಷಣ ಪರಸ್ಪರ ಎದುರಾದಾಗ ನಮಸ್ಕಾರ ಅಂತಿರಲಿಲ್ಲ, ಬದಲಾಗಿ ‘ಇವತ್ತೇನಪ್ಪಾ ಹಾರಿಬಲ್ ಡವಲಪ್‌ಮೆಂಟ್’ ಎಂದೇ ಮಾತು ಶುರು ಮಾಡುತ್ತಿದ್ದರು. ಅದಕ್ಕೆ ತಕ್ಕಂತೆ ಏನಾದರೂ ಒಂದು ಕೆಟ್ಟ ಸುದ್ದಿ ನಮಗೋಸ್ಕರ ಕಾಯುತ್ತಿರುತ್ತಿತ್ತು. ಸಂ.ಕ. ಸಂಪಾದಕ ಶಾಮರಾಯರು ಯಾರೋ ಒಬ್ಬ ಉಪಸಂಪಾದಕನನ್ನು ಸಸ್ಪೆಂಡ್ ಮಾಡಿರುತ್ತಿದ್ದರು, ಇನ್ಯಾರೋ ವರದಿಗಾರನನ್ನು ಬೀದರ್‌ಗೆ ವರ್ಗಾ ಮಾಡಿರುತ್ತಿದ್ದರು, ಇನ್ಯಾರದೋ ಬರವಿಗೆ ಒಂದು ಕೆಂಪು ಕವರ್ ಕಾಯುತ್ತಿತ್ತು. ಆ ಕವರಿನೊಳಗೆ ಬಿಳಿ ಹಾಳೆಯಲ್ಲಿ ಶಾಮರಾಯರ ಸಿಟ್ಟಿಗೆ ಗುರಿಯಾದ ಉದ್ಯೋಗಿಯನ್ನು ವಜಾಗೊಳಿಸಲಾದ ಒಂದು ವಾಕ್ಯದ ಸುವಾರ್ತೆಯಿರುತ್ತಿತ್ತು! ರವಿ ಬೆಳಗೆರೆ ಹಲೋ ಅಂತಃ ಸಾಕ್ಷಿಗಿಂತ ಸಾಕ್ಷಿ ಮುಖ್ಯವಾದರೆ ಏನೇನು ಅನಾಹುತಗಳಾಗುತ್ತವೆ ನೋಡಿ! ಮೊನ್ನೆ ನನ್ನ ಗೆಳೆಯನೊಬ್ಬ ಒಂದು ಇಂಟರೆಸ್ಟಿಂಗ್ ಕತೆ ಹೇಳಿದ. ಒಂದೂರಿನಲ್ಲಿ ಒಂದು ಕೊಲೆಯಾಯಿತು. ನಾಲ್ಕು ಜನ ಸೇರಿ ಒಬ್ಬ ವ್ಯಕ್ತಿಯನ್ನು ಲಾಂಗ್ ಬಳಸಿ ಕೊಂದರು. ಸರಿ, ಕೊಂದವರು ಓಡಿ ಹೋದರೂ ಊರ ಜನ ಬಿಡಲಿಲ್ಲ. ಒಬ್ಬರ ಹಿಂದೊಬ್ಬರಂತೆ ನಾಲ್ಕು ಮಂದಿಯನ್ನೂ ಹಿಡಿದುಕೊಂಡು ಬಂದರು. ಸರಿ, ಈ ನಾಲ್ಕೂ ಮಂದಿಯನ್ನು ಒಂದು ಕಡೆ ಬಂಧಿಸಿಟ್ಟು ಘಟನೆಯ ಸಾಕ್ಷಿಗಳನ್ನೆಲ್ಲ ಪಡೆದರು. ತನಿಖೆಯಲ್ಲಿ ಅವರು ಕೊಲೆ ಮಾಡಿರುವುದು ಸ್ಪಷ್ಟವೆಂದು ಗೊತ್ತಾಯಿತು. ಇದರ ಆಧಾರದ ಮೇಲೆ ಅವರ ವಿರುದ್ಧ ಶಿಕ್ಷೆ ಜಾರಿಯಾಗುವುದು ನಿಶ್ಚಿತವಾಯಿತು. ಕುತೂಹಲದ ಸಂಗತಿ ಎಂದರೆ ಆ ಊರಿನಲ್ಲಿ ಎರಡು ಹಂತದ ಪಂಚಾಯ್ತಿಗಳಿದ್ದವು. ಒಂದು ಕಿರಿಯ ಪಂಚಾಯ್ತಿ. ಮತ್ತೊಂದು ಹಿರಿಯ ಪಂಚಾಯ್ತಿ. ಒಂದು ವೇಳೆ ಕಿರಿಯ ಪಂಚಾಯ್ತಿಯ ತೀರ್ಪು ಹಿಡಿಸಲಿಲ್ಲ ಎಂದಾದರೆ, ಹಿರಿಯ ಪಂಚಾಯ್ತಿಗೆ ಹೋಗುವ ಅಧಿಕಾರ ಆರೋಪಿಗಳಿಗಿತ್ತು. ರವಿ ಬೆಳಗೆರೆ ಮುಖಪುಟ ವರದಿ ಡೆಡ್ಲಿ ಕಿಲ್ಲರ್ ಪಳನಿಯ ಖರಾಬ್ ಮಗ ಜಾರ್ಜ್! ಹೇಳಿ-ಕೇಳಿ ವಿವೇಕ್‌ನಗರ ಠಾಣೆ ಎಂಬುದು ಸಮಸ್ತ ಡೀಲಿಂಗ್‌ಗಳ ಮಹಾತಾಣ. ಅಲ್ಲಿನ ಬಹುತೇಕ ಸ್ಲಮ್ಮುಗಳಿಂದ ಎದ್ದು ಬಂದವರು ರೌಡಿಗಳಾಗಿ ಬೆಂಗಳೂರಿನ ದಶದಿಕ್ಕುಗಳಿಗೂ ಹರಿದು ಹಂಚಿ ಹೋಗಿದ್ದಾರೆ. ಆ ಪೈಕಿ ಪಳನಿ ಕೂಡ ಒಬ್ಬ. ಆದರೆ ವಿವೇಕ್‌ನಗರ ಠಾಣೆಗೆ ಬಂದು ಕುಳಿತುಕೊಳ್ಳುವ all most all ಪೊಲೀಸರು ಡೀಲ್ ಮಾಸ್ಟರ್‌ಗಳೇ. ಲೋಕೇಶ್ ಕೊಪ್ಪದ್ ರಾಜಕೀಯ ಜಗಮಗಿಸುತ್ತಿರುವ ಸಿದ್ದು ಯಡ್ಡಿ-ಕುಮ್ಮೀನ ಜೈಲಿಗೆ ಕಳಿಸ್ತಾರಾ? ಈ ಹಿಂದೆ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಹಾಗೂ ಶ್ರೀರಾಮುಲು ಅವರನ್ನು ಬಿಜೆಪಿಯಿಂದ ಹೊರಗೋಡಿಸಿದ್ದ ಸಿಬಿಐ, ಇದೀಗ ತನ್ನ ಮುಖ ಬದಲಿಸಿಕೊಂಡಿದೆ. ಮತ್ತು ರಾಜ್ಯ ಕಾಂಗ್ರೆಸ್‌ನ ಹಲವು ನಾಯಕರಿಗೆ ಅದೇ ಥರದ ಜಿಲೇಬಿ ನೀಡಲಿದೆ. ಇದೇ ಸಿದ್ದು ಅಂಡ್ ಗ್ಯಾಂಗಿನ ಆತಂಕ. ಹೀಗಾಗಿ ಅದು ಮುನ್ನೆಚ್ಚರಿಕೆ ಕ್ರಮವಾಗಿ ಯಡಿಯೂರಪ್ಪನವರನ್ನು, ವೈಯಕ್ತಿಕ ದ್ವೇಷಕ್ಕಾಗಿ ಕುಮಾರಸ್ವಾಮಿಯವರನ್ನು ಬಂಧಿಸಲು ಹೊರಟಿದೆ ಎಂಬುದು ಸದ್ಯದ ಆರೋಪ. ಹಾಗೇನಾದರೂ ಆದರೆ ಅನುಮಾನವೇ ಬೇಡ. ಎಂಬತ್ತರ ದಶಕದಲ್ಲಿ ಯಾವ ರೀತಿ ಗುಂಡೂರಾಯರು ಪ್ರಬಲ ವರ್ಗಗಳ ವಿರೋಧ ಎದುರಿಸುವ ಸ್ಥಿತಿ ಬಂತೋ? ಅದೇ ರೀತಿಯ ದಂಗೆಯನ್ನು ಎದುರಿಸುವ ಸ್ಥಿತಿಯನ್ನು ತಂದುಕೊಳ್ಳುತ್ತದೆ. ಪ್ರಕರಣಗಳ ಸ್ವರೂಪ ಬೇರೆ ಬೇರೆಯಾದರೂ ಆಳದಲ್ಲಿ ಅವತ್ತು ಯಾವ ಉದ್ದೇಶ ಕೆಲಸ ಮಾಡಿತೋ? ಅದೇ ಉದ್ದೇಶ ಈ ಬಾರಿಯೂ ಕೆಲಸ ಮಾಡುತ್ತದೆ. ಹೀಗಾಗಿ ಯಡ್ಡಿ, ಕುಮ್ಮಿ ವಿರುದ್ಧ ಲೋಕಾಯುಕ್ತ ಬೀರಿರುವ ಕೆಂಗಣ್ಣಿನ ಹಿಂದೆ ಸಿದ್ದು ಸರ್ಕಾರ ಕೈಯ್ಯಿಟ್ಟಿದೆ ಎಂಬಂತೆ ಭಾಸವಾಗುತ್ತಿದೆ. ಮುಂದೇನಾಗುತ್ತದೋ? ಕಾದು ನೋಡಬೇಕು. ಆರ್.ಟಿ.ವಿಠ್ಠಲಮೂರ್ತಿ ವರದಿ ಅಯ್ಯೋ ಪ್ರಮೋದ್ ಮಧ್ವರಾಜನ ಅಹಂಕಾರವೇ! ಪ್ರಮೋದ್ ಶಾಸಕರಾದ ಮೇಲೆ ಅವರ ಪಟಾಲಮ್ಮು ಎಗಾದಿಗ ಮುಕ್ಕಲು ಕುಳಿತುಕೊಂಡಿತು. ಅದಕ್ಕೆ ಸರಿಯಾಗಿ ಉಡುಪಿಯ ಬಿ.ಜೆ.ಪಿ. ನಾಯಕರುಗಳೊಳಗೇ ಬೀದಿ ರಂಪಾಟಗಳು ಎದ್ದು ಕಾಂಗ್ರೆಸ್ ನಲವತ್ತು ಚಿಲ್ಲರೆ ವರ್ಷದ ನಂತರ ಪುರಸಭೆಗೆ ಎಂಟ್ರಿಕೊಟ್ಟಿತ್ತು ನೋಡಿ? ಅಲ್ಲದು ಪೊಗದಸ್ತಾಗಿಯೇ ಉಣ್ಣಲು ಕುಳಿತು ಬಿಟ್ಟಿತು. ಅದಕ್ಕೆ ಪ್ರಮೋದರೇ ಕಾವಲುಗಾರರಾದರು. ತಾನು ಶಾಸಕನಾದ ಮೇಲೆ ಕಿರೀಟವನ್ನು ಕಣ್ಣಿಗೇ ಕಟ್ಟಿಕೊಂಡ ಮಧ್ವರಾಜ್‌ಗೆ ಅಹಂಕಾರದ ಕುರುಡು ಆವರಿಸಿತು. ಸೋ, ಅದರ ಎಫೆಕ್ಟು ಕಾಂಗ್ರೆಸ್ ಪಕ್ಷದ ಮೇಲಾಯಿತು. ಹಂಗಾಗಿಯೇ ಇಂದು ಉಡುಪಿ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಧಾನಕ್ಕೆ ‘ನಿಧನ’ ಹೊಂದುತ್ತಿರುವಂತಿದೆ. ಅದರ ಪರಿಣಾಮವೇ ಮೊನ್ನೆ ಮೊನ್ನೆ ಬ್ರಹ್ಮಾವರ ಬ್ಲಾಕ್ ಕಾಂಗ್ರೆಸಿನ ಅಧ್ಯಕ್ಷ ಬಿರ್ತಿ ರಾಜೇಶ್ ಶೆಟ್ಟಿ ರಾಜೀನಾಮೆ ಬರೆದು ಮಡಚಿ ಅದನ್ನು ಕಾಂಗ್ರೆಸ್ ಉಡುಪಿಯ ಅಧ್ಯಕ್ಷ ಗೋಪಾಲ ಪೂಜಾರಿಯ ಟೇಬಲ್ಲಿಗೆ ರವಾನಿಸಿದ್ದಾರೆ. ಅಲ್ಲಿಗೆ ಉಡುಪಿ ಕಾಂಗ್ರೆಸ್ಸಿನಲ್ಲಿ ಎಲ್ಲವೂ ಸರಿ ಇಲ್ಲ ಅಂತ ಪಕ್ಕಾ ನಿಕ್ಕಿ ಆಯಿತಲ್ಲಾ? ಹಿರಿಯ ನಾಯಕ ಜಯಪ್ರಕಾಶ್ ಹೆಗ್ಡೆಯನ್ನು ಹೆಂಗೆ ಬೇಕೋ ಹಂಗೆ ಮೂಲೆಗುಂಪು ಮಾಡಲು ಒಂದು ಸಿಂಡಿಕೇಟು ನಿರಂತರವಾಗಿ ಪ್ರಯತ್ನಿಸುತ್ತಿತ್ತು ನೋಡಿ? ಅದರ ಡ್ರೈವಿಂಗ್ ಸೀಟಿಗೆ ಬಂದು ಕುಂತದ್ದೇ ಈ ಪ್ರಮೋದ್. ವಸಂತ್ ಗಿಳಿಯಾರ್ ವರದಿ ನರಗುಂದದ ಸ್ವಾಮಿಗೆ ಪೆಕ ಪೆಕನೆ ಒದ್ದರು! ಗದಗ ಜಿಲ್ಲೆಯ ನರಗುಂದ ತಾಲೂಕಿನ ಅನೇಕ ಗ್ರಾಮಗಳು ಹಾಗೂ ಚಿಕ್ಕೋಪ್ಪ ಸೇರಿದಂತೆ ಮಠಕ್ಕೆ ಅನೇಕ ಭಕ್ತಾದಿಗಳು ಬರುತ್ತಿದ್ದರು. ತಮ್ಮ ಕಷ್ಟ ಕಾರ್ಪಣ್ಯಗಳನ್ನು ಹೇಳಿಕೊಂಡು ಬರುತ್ತಿದ್ದ ಭಕ್ತರಿಗೆ ಈತ ಮಂಕುಬೂದಿ ಎರಚುತ್ತಿದ್ದ. ಮಠಕ್ಕೆ ಬರುತ್ತಿದ್ದ ಮಹಿಳಾ ಭಕ್ತೆಯರೊಂದಿಗೆ ಚೆಲ್ಲಾಟವಾಡುತ್ತಿದ್ದ. Once again ಅವರಿಂದ ಹಣ, ಜತೆಗೆ ಬಂಗಾರವನ್ನೂ ವಸೂಲು ಮಾಡುತ್ತಿದ್ದ. ಈ ಕಾರಣಕ್ಕಾಗಿಯೋ ಏನೋ ಮಠಕ್ಕೆ ಬರುತ್ತಿದ್ದ ಭಕ್ತರ ಪೈಕಿ ಮಹಿಳೆಯರೇ ಹೆಚ್ಚು. ಈ ಲಫಂಗ ಅವರನ್ನೇ ಟಾರ್ಗೇಟ್ ಮಾಡಿ ಯಾಮಾರಿಸುತ್ತಿದ್ದ. ಭೂತ, ಪ್ರೇತ, ಬಿಡಿಸುವ ನೆಪದಲ್ಲಿ ಮಹಿಳೆಯರನ್ನು ವಶೀಕರಣ ಮಾಡಿಕೊಂಡು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ. ಈ ಕುರಿತು ಗ್ರಾಮಸ್ಥರಲ್ಲಿ ಅಪಸ್ವರ ಎದ್ದಾಗ ಅವರಲ್ಲೇ ಎರಡು ಗುಂಪುಗಳನ್ನಾಗಿ ಮಾಡಿ ಒಂದು ಗುಂಪು ತನ್ನ ಪರವಾಗಿ ವಕಾಲತ್ತು ವಹಿಸುವಂತೆ ನೋಡಿಕೊಳ್ಳುತ್ತಿದ್ದ. ವರದಿಗಾರ ವರದಿ ಸಂಡೂರಿನಲ್ಲೀಗ ಸುನಾಮಿ ಗ್ಯಾಂಗ್ ಹಾವಳಿ! ಸಂಡೂರು ಭಾಗದಲ್ಲಿ ಗಣಿಮಾಫಿಯಾ ಬಿರುಸಾಗಿದ್ದ ಕಾಲವದು. ಶಿವಮೂರ್ತನಾಯ್ಕ ಮತ್ತು ಆತನ ಕೇಡಿ ಸಹೋದರರು ಸುಶೀಲನಗರದ ಕೆಸೈಟ್ ಎಂಬ ಪ್ರದೇಶದಲ್ಲಿ ಅಕ್ರಮ ಡಿಗ್ಗಿಂಗ್ ನಡೆಸಿತ್ತು. ಈ ಬಗ್ಗೆ ಆಕ್ಷೇಪ ಮಾಡಿದವನೆಂದರೆ ಅದೇ ಸುಶೀಲನಗರದ ತೆಲುಗರ ಹುಡುಗ ವೆಂಕಟೇಶ. ಆತನ ಮೇಲೆ ಮುಗಿಬಿದ್ದ ಶಿವಮೂರ್ತನಾಯ್ಕನ ಗ್ಯಾಂಗ್ ಅವನನ್ನು ಮಾರಣಾಂತಿಕವಾಗಿ ಚಚ್ಚಿದರು. ಈ ಸಂಬಂಧ ವೆಂಕಟೇಶ್ ಸಂಡೂರು ಪೊಲೀಸ್ ಠಾಣೆಯಲ್ಲಿ ಕಂಪ್ಲೇಂಟ್ ಮಾಡಿದ್ದ. ಅದು ಆತನ ಎರಡನೆಯ ತಪ್ಪಾಗಿತ್ತು. ವೆಂಕಟೇಶ್ ಆಸ್ಪತ್ರೆಯಿಂದ ಚೇತರಿಸಿಕೊಂಡು ಸುಶೀಲನಗರಕ್ಕೆ ಬಂದ. ಆತ ಗ್ರಾಮಕ್ಕೆ ಬರುವ ಹೊತ್ತಿಗಾಗಲೇ ಸುನಾಮಿ ಗ್ಯಾಂಗ್ ಆತನನ್ನು ಬಲಿ ಪಡೆಯಲು ಸ್ಕೆಚ್ ರೂಪಿಸಿ ಕೊಂದು ಹಾಕಿದ್ದು ಅದೇ ಖತರ್‌ನಾಕ್ ಗ್ಯಾಂಗ್ ಎಂದು ಸುಶೀಲನಗರದ ಜನ ಮಾತಾಡಿಕೊಳ್ಳುತ್ತಿದೆ. ಈ ಮನೆಹಾಳರ ಕತೆ ಇಲ್ಲಿಗೆ ನಿಲ್ಲುವುದಿಲ್ಲ. ಕಳೆದ ಇಪ್ಪತ್ತು-ಮೂವತ್ತು ವರ್ಷಗಳಿಂದಲೂ ಅಪಾಯಕಾರಿ ಕೆಲಸಗಳಲ್ಲಿ ತೊಡಗಿಕೊಂಡಿರುವ ಈ ಸುನಾಮಿ ಗ್ಯಾಂಗ್‌ನ ಕೆಲ ಪ್ರಕರಣಗಳು ಮುಚ್ಚಿಹೋಗಿವೆ. ಮಲ್ಲಪ್ಪ ಬಣಕಾರ ವರದಿ ಕಾರವಾರ: ಅವರು ಎಮ್ಮೆಲ್ಲೆ ಸತೀಶ್ ಸೈಲ್ ಇದು ಅವರದೇ ಹೊಸಾ ಸ್ಟೈಲ್ ಸತೀಶ್ ಸೈಲ್ ಯಾವ ಹೋರಾಟದ ಹಿನ್ನೆಲೆಯಿಂದಲೂ ರಾಜಕಾರಣಕ್ಕೆ ಬಂದವನಲ್ಲ. ನಿರುದ್ಯೋಗಿಯಾಗಿದ್ದ ಸತೀಶ್ ಸೈಲ್‌ಗೆ ಗಣಿ ಲಿಂಕು ಸಿಕ್ಕಿ ಮೈತುಂಬಾ ಬಂಗಾರ ಹೇರಿಕೊಳ್ಳುವಂತಾದಾಗ ತಾನು ಏಕೆ ಶಾಸಕನಾಗಬಾರದು ಅಂತನ್ನಿಸಿ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದ್ದು ಹಳೆಯ ಸಂಗತಿ. ಅದರಲ್ಲೂ ಅಸ್ನೋಟಿಕರ್ ಕುಟುಂಬದ ದೌರ್ಜನ್ಯದಿಂದ ಕಾರವಾರದ ಜನ ಕಂಗೆಟ್ಟಿದ್ದಾಗ ಅತ್ತ ಬಿಜೆಪಿ-ಇತ್ತ ಕಾಂಗ್ರೆಸ್ ಜನರನ್ನು ನಿರಾಸೆಗೆ ದಬ್ಬಿದಾಗ ಅನಿವಾರ್ಯ ಆಯ್ಕೆಯಾಗಿ ಸತೀಶ್ ಸೈಲ್ ಗೆದ್ದು ಬಂದರು. ಗೆದ್ದ ಮೇಲಾದರೂ ಜನಸೇವೆ ಮಾಡುವ ಕೆಲಸಕ್ಕೆ ಕೈ ಹಾಕಿದ್ದರೆ ಒಳ್ಳೆಯ ರಾಜಕೀಯ ಭವಿಷ್ಯವಾದರೂ ಸಿಗುತ್ತಿತ್ತು. ಆದರೆ ಗಣಿ ವ್ಯವಹಾರದಲ್ಲಿ ಟೋಪಿ ಹಾಕುವುದನ್ನೇ ಕಸುಬಾಗಿಸಿಕೊಂಡಿರುವ ಸತೀಶ್ ಸೈಲ್ ರಾಜಕಾರಣದಲ್ಲೂ ಅದೇ ಕೆಲಸ ಮುಂದುವರಿಸಿರುವುದು ಕಾರವಾರದ ಜನರ ಪಾಲಿನ ದುರಂತವಾಗಿದೆ. ವರದಿಗಾರ ನೇವಿ ಕಾಲಂ ನಾಡು ತನ್ನ ನಾಯಕನನ್ನು ತಾನೇ ಆರಿಸಿಕೊಳ್ಳುತ್ತದೆ ರಾಮನಿಗೆ ನಿದ್ದೆ ಬರಲಿಲ್ಲ, ಪಕ್ಕದಲ್ಲಿ ಸೀತೆ ಮಾತ್ರ ನಾಲ್ಕು ದಿನದಿಂದೀಚೆ ಮೊದಲ ಬಾರಿ ಗಾಢ ನಿದ್ದೆಯಲ್ಲಿ ಮಲಗಿದ್ದಳು. ನಾಳೆ ಬೆಳಗಾದರೆ ಆಗಬೇಕಿದ್ದ ಶ್ರೀರಾಮ ಪಟ್ಟಾಭಿಷೇಕದ ದಿನ. ಆದರೆ ತಾಯೆ ಕೈಕೇಯಿ (ಚಿಕ್ಕಮ್ಮನನ್ನು ತಾನು ಕರೆಯುವುದು ಹಾಗೇ) ತನ್ನನ್ನು ಹದಿನಾಲ್ಕು ವರ್ಷ ವನವಾಸಕ್ಕೆ ಕಳಿಸಿ ಭರತನಿಗೆ ರಾಜ್ಯವನ್ನೊಪ್ಪಿಸಬೇಕೆಂಬ ಕರಾರು ಮಾಡಿಕೊಂಡಿದ್ದಾಳೆ, ತಂದೆ ದಶರಥನ ಹತ್ತಿರ. ರಾಮನಿಗೆ ರಾಜ್ಯದಾಸೆಯೇ? ಸೀತೆಗೆ ಪಟ್ಟದರಸಿಯ ಬಯಕೆಯೇ? ಖಂಡಿತ ಇಲ್ಲ, ತನ್ನ ಅಷ್ಟು ವರ್ಷಗಳ ಪರ್ಣಕುಟಿಯ ವಿದ್ಯಾಭ್ಯಾಸದಲ್ಲಿ ಋಷಿ ಮುನಿಗಳ ಮಾರ್ಗದರ್ಶನದಲ್ಲಿ ಕಲಿತದ್ದಿಷ್ಟೇ, ರಾಜ್ಯದ ಅಧಿಪತಿಯಾದವರು ಪ್ರಜೆಯಾಗಿರಬೇಕು, ಪ್ರಜೆಯಾಗುವುದೆಂದರೆ ಪಾದಸೇವಕನಾಗುವುದು. ಪ್ರಭು ಎಂದರೆ ಒಂದು ಗೊತ್ತು ಮಾಡಿದ ಐಶಾರಾಮಿ ಗದ್ದುಗೆಯಲ್ಲ, ಪ್ರಜೆಗಳ ಸರ್ವಸಂತೋಷಕ್ಕೆ ತನ್ನ ಇಪ್ಪತ್ನಾಲ್ಕು ತಾಸನ್ನೂ ಮುಡಿಪಾಗಿಡಬೇಕಾದ ಪಾಲನಾಕೈಂಕರ್ಯ. ಪ್ರಭುತ್ವವ ಝಳಪಿಸಬೇಕಾಗಿರುವುದು ರಾಜ್ಯಕ್ಕೊದಗುವ ಆಪತ್ತಿನ ವಿರುದ್ಧವೇ ಹೊರತೂ ಪ್ರಜೆಗಳ ಮೇಲೆ ಹಿಡಿತ ಸಾಧಿಸುವುದಕ್ಕಲ್ಲ. ನೇವಿ ಜಾನಕಿ ಕಾಲಂ ಬೇಸಗೆಯ ಏಕತಾನತೆ ಮುರಿದ ಎರಡು ಸಿನಿಮಾಗಳ ಕುರಿತು ಅವನನ್ನು ಅವಳು ಮುದ್ದಿಸುವುದನ್ನು ಕದ್ದು ನೋಡುತ್ತಾಳೆ ಪುಟ್ಟ ಹುಡುಗಿ. ಆ ಹುಡುಗಿಗೆ ತಾನೇನು ನೋಡಿದ್ದೇನೆ ಅನ್ನುವುದೂ ಗೊತ್ತಿಲ್ಲ. ಅವಳೆಲ್ಲಿ ಎಲ್ಲವನ್ನೂ ಹೇಳಿಬಿಡುತ್ತಾಳೋ ಎಂದು ಆತಂಕದಲ್ಲಿರುವಾಗಲೇ ಅವನ ಕೋಣೆಯಲ್ಲಿ ಅವಳ ಬಟ್ಟೆಗಳು ಆ ಹುಡುಗಿಯ ಅಮ್ಮನಿಗೆ ಸಿಕ್ಕಿ ಎಲ್ಲವೂ ಬಯಲಾಗುತ್ತದೆ. ಅದಕ್ಕೂ ಮುಂಚೆ ಅವರು ಇನ್ನಿಲ್ಲದಂತೆ ಪ್ರೀತಿಸುತ್ತಾರೆ. ಇನ್ನೇನು ಐದಾರು ತಿಂಗಳಿಗೆಲ್ಲ ಸತ್ತೇ ಹೋಗುತ್ತೇವೇನೋ ಎಂಬಂತೆ ಮುದ್ದಾಡುತ್ತಾರೆ. ವೈದ್ಯರು ಬದುಕಿನ ಗಡಿಯನ್ನು ನಿಗದಿ ಮಾಡಿದ ರೋಗಿಯಂತೆ ಅವರಿಬ್ಬರ ಪ್ರೇಮ ಎನ್ನುವುದು ಅವರಿಬ್ಬರಿಗೂ ಗೊತ್ತಿದೆ. ಜಾನಕಿ ಅಂಕಣ : ಒಲಿದಂತೆ ಹಾಡುವೆ ಅನ್ಯುತಾ ಎಂಬ ಮನೆಗೆಲಸದವಳು ಮೂರನೆಯ ವರ್ಷದ ವೈದ್ಯಕೀಯ ಪರೀಕ್ಷೆಗೆ ಅಣಿಯಾಗುತ್ತಿದ್ದ ಸ್ಟೆಪಾನ್ ಕ್ಲೊಕೊವ್ ತನ್ನ ರೂಮಿನಲ್ಲಿ ಗಟ್ಟಿಯಾಗಿ ಓದುತ್ತಾ ಶತಪಥ ತಿರುಗುತ್ತಿದ್ದ. ಲಿಸ್ಬನ್‌ನ ಅತ್ಯಂತ ಅಗ್ಗದ ಅಪಾರ್ಟ್‌ಮೆಂಟ್‌ಗಳಲ್ಲಿ ಒಂದಾಗಿದ್ದ ಅದು ಸಣ್ಣ ಗೂಡಿನಂತಿತ್ತು. ಓದುತ್ತಾ ಓದುತ್ತಾ ಅವನಿಗೆ ಅರಿವಿಲ್ಲದಂತೆಯೇ ಅವನ ಕಂಠ ತಾರಕಕ್ಕೆ ಹೋಗುತ್ತಿದ್ದರಿಂದ ಗಂಟಲು ಒಣಗಿ ಹಣೆಯಲ್ಲಿ ಬೆವರ ಸೆಲೆ ಒಡೆದಿತ್ತು. ಚಂದ್ರಶೇಖರ ಆಲೂರು ಅಂಕಣ : ಆಕಾಶಬುಟ್ಟಿ ನನ್ನ ಗುರಿ-ರಿಚ್ ಅಂಡ್ ಫೇಮಸ್ ಆಗುವುದು ಕೆಲವು ವರ್ಷಗಳ ಹಿಂದೆ ನಾನು ಜೈನ್ ಕಾಲೇಜಿನಲ್ಲಿ ಇಂಗ್ಲಿಷ್ ಲೆಕ್ಚರರ್ ಆಗಿ ಕೆಲಸ ಮಾಡುತ್ತಿದ್ದೆ. ಶಿವಾ ಶಿವಾ... ಪಾರ್ವತಿ ಪಾರ್ವತೀ... ಏನು ಹೇಳಲಿ ಆ ಕಾಲೇಜು ಹುಡುಗರ ಬಗ್ಗೆ. ಅಲ್ಲಿನ ಯೂಥು ಸ್ಯಾಂಡಲ್‌ವುಡ್‌ನ ಕೇರೇ ಮಾಡುತ್ತಿರಲಿಲ್ಲ. ಬಾಲಿವುಡ್ ಹೀರೋ ಹೀರೋಯಿನ್ನುಗಳೇ ರೋಲ್ ಮಾಡಲ್ಲುಗಳು. ಕಾಜಲ್ಲು, ಲಿಪ್ ಗ್ಲಾಸು, ಹೇರ್ ಸ್ಟ್ರೈಟ್ ಮಾಡಿಸಿಕೊಂಡು ಬೆಂಚುಗಳಲ್ಲಿ ಕೂತ ಹುಡುಗಿಯರನ್ನು ಕಣ್ಣುಮುಚ್ಚಿಕೊಂಡು ಸಿನೆಮಾಗಳಿಗೆ ಹೀರೋಯಿನ್ ಆಗಿ ಹಾಕಿಕೊಳ್ಳಬಹುದಿತ್ತು. ಎಚ್.ಡಿ. ಸುನೀತಾ ಅಂಕಣ : ನೂರು ಮುಖ ಸಾವಿರ ದನಿ ವಿಶ್ವ ಅಮ್ಮಂದಿರ ದಿನದಲ್ಲಿ ‘ವೃದ್ಧಾಶ್ರಮದ’ ಅಮ್ಮ! ಮಗು ಹೆಣ್ಣಿರಲಿ, ಗಂಡಿರಲಿ, ಎರಡೂ ಅಲ್ಲದಿರಲಿ ಅದರ ಬಾಯಿಂದ ಹೊರಡುವ ಮೊದಲ ತೊದಲ ನುಡಿ “ಅಮ್ಮಾ!" ನಂತರ ಬದುಕಿದ್ದಷ್ಟೂ ಕಾಲ ಏನೇ ನೋವು, ಪೆಟ್ಟು ಆದರೂ ತಕ್ಷಣ ಬಾಯಿಂದ ಬರುವ ಉದ್ಗಾರ “ಅಮ್ಮಾ!" ಮಗ ಎಂಥವನೇ ಆಗಲಿ ತಾಯ ಹೃದಯ ಹೇಗೆ ಮರುಗುತ್ತದೆ ಎಂಬುದಕ್ಕೆ ಒಂದು ಹೃದಯಸ್ಪರ್ಶಿ ಉದಾಹರಣೆ (ನಾನು ಕೇಳಿದ್ದು) ನೀಡುತ್ತೇನೆ. ತಾಯಿ, ಮಗ, ಮಗನ ಹೆಂಡತಿ ಮೂರೇ ಜನರ ಸಂಸಾರ. ಮದುವೆ ಆಗಿ ಆರು ತಿಂಗಳು ಕಳೆಯಿತು. ಹೇಗಾದರೂ ಮಾಡಿ ಅತ್ತೆಯನ್ನು ಮನೆಯಿಂದ ಹೊರ ಹಾಕಬೇಕೆಂದು ಸೊಸೆ ಸಂಚು ಮಾಡುತ್ತಾಳೆ. ಆದರೆ ತಾಯಿ ಮಗನ ಪ್ರಬಲ ಬಾಂಧವ್ಯದಲ್ಲಿ ಅದು ಸಾಧ್ಯವಾಗುವುದಿಲ್ಲ. ಕೊನೆಗೆ ಸೊಸೆ ಒಂದು ಅಮಾನವೀಯ ಸಂಚು ಮಾಡುತ್ತಾಳೆ. ತಲೆ ನೋವು, ಹೊಟ್ಟೆ ನೋವು ಅಂತ ಹಾಸಿಗೆ ಹಿಡಿದುಬಿಡುತ್ತಾಳೆ. ಯಾವ ಔಷಧೋಪಚಾರಕ್ಕೂ ಗುಣವಾಗಲಿಲ್ಲ ಅನ್ನುತ್ತಾಳೆ. ಎಂ.ವಿ. ರೇವಣಸಿದ್ದಯ್ಯ

About Hi Bangalore

Hai Bangalore is a mass circulation weekly Kannada language tabloid published in Bangalore.Its editor is journalist Ravi Belagere.