logo

Get Latest Updates

Stay updated with our instant notification.

logo
logo
account_circle Login
O Manase
O Manase

O Manase

By: Bhavana Prakashana
20.00

Single Issue

20.00

Single Issue

About this issue

ಈಗಷ್ಟೇ ನಿದ್ದೆಯಿಂದ ಎದ್ದ ಮಗು ನಕ್ಕ ಹಾಗೆ ‘ಓ ಮನಸೇ..’ ಯ 98ನೇ ಸಂಚಿಕೆ ಕೊಂಚ ತಡವಾಗಿ ಮಾರುಕಟ್ಟೆಗೆ ಬರುತ್ತಿದೆ. ಮತ್ತದೇ ಹಳೇ ಕಾರಣಗಳನ್ನು ಹೇಳುವುದಕ್ಕೆ ಮನಸ್ಸಾಗುತ್ತಿಲ್ಲ. ಇನ್ನು ಮುಂದೆ ಹೀಗಾಗುವುದಿಲ್ಲ ಎಂದು ಪ್ರಾಮಿಸ್ ಮಾಡಿದರೂ ನಿಮ್ಮ ಮುನಿಸು ಕಡಿಮೆಯಾಗಲಾರದು ಅನ್ನುವುದು ಗೊತ್ತಿದೆ. ಆದರೂ ಓದುಗ ದೊರೆಯ ಮುಂದೆ ಇದೊಂದು ಸಾರಿ ಕ್ಷಮಿಸಯ್ಯಾ ಗುರುವೇ ಎಂದು ಕೇಳುವುದಕ್ಕೆ ನಮಗೇನೂ ಸಂಕೋಚ ಇಲ್ಲ. ನಿದಿರೆಗೆ ರಜ, ಬದುಕಿಗೆ ಸಜ ಆಹಾರ, ನಿದ್ರೆ, ಭಯ, ಮೈಥುನ – ಈ ನಾಲ್ಕು ಗುಣಗಳೇ ಮನುಷ್ಯನ ಮೂಲಭೂತ ಪ್ರವೃತ್ತಿಗಳು ಅನ್ನುವ ಕಾಲ ಹೊರಟುಹೋಯಿತು. ಈಗ ಜನರು ಆಧುನಿಕ ಬದುಕಿನ ಸವಲತ್ತಿಗಾಗಿ ಈ ನಾಲ್ಕನ್ನೂ ತೊರೆಯುವುದಕ್ಕೆ ಸಿದ್ಧರಾಗಿದ್ದಾರೆ. ನಿದ್ರೆಗಾಗಿ ಹಂಬಲಿಸುವುವವರು ಮತ್ತು ನಿದ್ದೆಯನ್ನು ಒದ್ದು ಓಡಾಡುವವರು ಇವೆರಡೇ ಕೆಟಗರಿಯ ಜನರು ತುಂಬಿರುವ ಈ ಕಾಲದಲ್ಲಿ ನಿಮಗೆಷ್ಟು ನಿದ್ದೆ ಬೇಕು ಎಂದು ಕೇಳುವುದು ತಮಾಷೆ ಅನಿಸಬಹುದು. ಆದರೆ ನಿದ್ರೆ ಗಾಯಬ್ ಆದರೆ ಎಂಥಾ ಆನಾಹುತಗಳಾಗುತ್ತವೆ ಅನ್ನುವುದನ್ನು ನೇವಿ ಪತ್ತೆ ಮಾಡಿದ್ದಾರೆ. ಇದನ್ನು ಓದುತ್ತಾ ನಿಮಗೆ ನಿದ್ದೆ ಬಂದರೆ ನಮ್ಮ ಶ್ರಮ ಸಾರ್ಥಕ! ಸ್ಮೈಲ್ ಪ್ಲೀಸ್ ಅವಳ ಪ್ರೀತಿ ಸಂಪಾದಿಸುವುದು ಹೇಗೆ? ಯಾವ ಅಪ್ಲಿಕೇಷನ್ನೂ ಹಾಕಬೇಕಾಗಿಲ್ಲ, ಯಾವ ಕೋರ್ಸೂ ಮಾಡಬೇಕಾಗಿಲ್ಲ. ಸುಮ್ನೇ ನಗಬೇಕು ಅಷ್ಟೆ. ನಗ್ತಾ ಇರಿ, ನಗಿಸ್ತಾ ಇರಿ ಅನ್ನುವುದು ಒನ್ ಪಾಯಿಂಟ್ ಅಜೆಂಡಾ. ನಕ್ಕವರ ಬದುಕು ಹಸನಾಗಿರುವ ಬಗ್ಗೆ ಕತೆ ಹೇಳುತ್ತಾರೆ ಜೋಶೀಲಾ. ಸದಾ ನಗುತ್ತಾ ಇರುವವರು ಹುಡುಗೀರಿಗೆ ಯಾಕೆ ಇಷ್ಟ ಆಗುತ್ತಾರೆ ಅನ್ನುವ ಬಗ್ಗೆಯೂ ಇಲ್ಲೊಂದು ಒಳನೋಟವಿದೆ. ನಗುನಗುತ್ತಾ ಓದಿ. ಸಕಲರ ಪ್ರೀತಿಪಾತ್ರರಾಗಿ. ಆಹಾ ಎಂಥ ಮಧುರ ಯಾತನೆ... ಸೋಮವಾರ ಸಂತೆ, ಶನಿವಾರ ಸಂತೆ ಇದ್ದಹಾಗೆ ಈಗ ಹಾಡುಗಳ ಸಂತೆ ವಾರಪೂರ್ತಿ ಭರ್ಜರಿಯಾಗಿ ನಡೆಯುತ್ತಿದೆ. ಕಿವಿಯೊಳಗೆ ವೈರು ತೂರಿಸಿಕೊಂಡು ಕನಸಲ್ಲಿ ನಡೆಯುವಂತೆ ಓಡಾಡುವ ಹುಡುಗ-ಹುಡುಗಿಯರು ರಸ್ತೆಯುದ್ದಕ್ಕೂ ಕಾಣಿಸುತ್ತಾರೆ. ಅಂಥಾದ್ದೇನಿದೆ ಈ ಸಂಗೀತದಲ್ಲಿ? ಹಾಡುಗಳ ಜಗತ್ತಿನಲ್ಲಿ ಅಲೆದಾಡುತ್ತಿರುವ ಮುಸಾಫಿರ್ ಬರೆದ ಲೇಖನವೊಂದು ಭಾವಲಹರಿಯಾಗಿ ಹರಿದಾಡುತ್ತಿದೆ ಇಲ್ಲಿ. ಸ್ವಲ್ಪ ಸೌಂಡ್ ಜಾಸ್ತಿ ಮಾಡಿ ಕೇಳಬಹುದಾದ ಹಾಡುಗಳ ಪಟ್ಟಿಯೂ ಇದರೊಳಗೆ ಅಡಕವಾಗಿದೆ. ಹಬ್ಬ ಮಾಡೋಣ ಬನ್ನಿ ಹಬ್ಬಗಳ ಸೀಸನ್ ಮುಗಿದುಹೋಗಿದೆ. ಗಣೇಶ ಕೆರೆಯಂಗಳದಲ್ಲಿ ಅನಾಥವಾಗಿ ಮಲಗಿದ್ದಾನೆ. ಗೌರಿ ತವರಿನಿಂದ ವಾಪಸ್ ಬಂದಿದ್ದಾಳೆ. ವರಮಹಾಲಕ್ಷ್ಮಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾಳೆ. ಯುಗಾದಿ, ದೀಪಾವಳಿಗೆ ರೆಡಿಯಾಗಬೇಕು. ಹಬ್ಬಗಳು ಅಂದರೆ ನಮ್ಮ ಪಾಲಿಗೆ ಭಾವವೋ, ಭಕುತಿಯೋ, ನೆನಪಿನಂಗಳದಿಂದ ಎದ್ದುಬಂದ ಗರಿಕೆಹುಲ್ಲಿನಂಥ ಅನುಭೂತಿಯೋ ಗೊತ್ತಿಲ್ಲ. ನಿಮಗ್ಯಾವ ಹಬ್ಬ ಇಷ್ಟ ಎಂದು ನಾವು ಕೇಳಿದ ಪ್ರಶ್ನೆಗೆ ಓದುಗರು ನೀಡಿದ ಉತ್ತರಗಳನ್ನು ಓದಿದರೆ ಸ್ವಲ್ಪ ಸುಳಿವು ಸಿಗಬಹುದು. ಅತಿಹೆಚ್ಚು ಓದುಗರು ಮೆಚ್ಚಿದ ಹಬ್ಬ ಯಾವುದು? ನಾವು ಹೇಳೋಲ್ಲ, ಓದಿ ತಿಳಿಯಿರಿ. ಪರಿಸ್ಥಿತಿ ಕೊಟ್ಟ FOURCE, ದೇವರು ಕೊಟ್ಟ source ಅವರು ಪ್ರೇಮಕವಿ, ಮನಸ್ಸಿನ ಬಗ್ಗೆ ಭಯಂಕರ ಸಂಶೋಧನೆ ಮಾಡಿ ಒಂದು ಹಾಡಲ್ಲಿ ನೂರಾ ಹದಿನಾಲ್ಕು ಸಾರಿ ಮನಸ್ಸನ್ನು ಜಪಿಸಿದವರು. ‘ಚಂದ್ರಮುಖಿ ಪ್ರಾಣಸಖಿ’ ಚಿತ್ರವನ್ನು ಸಂಗೀತದಲ್ಲೇ ಅದ್ದಿ ತೆಗೆದವರು. ರತ್ನಕೋಶದಲ್ಲೂ ಸಿಗದೇ ಇರುವ ಕನ್ನಡ ಪದಗಳನ್ನು ಹಾಡಲ್ಲಿ ಪ್ರಯೋಗಿಸಿದವರು. ಶುಭ್ರ ಮನಸ್ಸು, ಶುದ್ಧ ಸಾಹಿತ್ಯ, ಸದ್ದಿರದ ಸಂಗೀತ. ‘ನಾನು ನನ್ನಿಷ್ಟ’ ಕಾಲಂನಲ್ಲಿ ಕಲ್ಯಾಣ ರಾಗ ಕೇಳಿ. ‘ಓ ಮನಸೇ’ ಯ ಮೆನು ಇಲ್ಲಿಗೇ ಮುಗಿಯುವುದಿಲ್ಲ. ನಿಮ್ಮ ಮನವ ಸಂತೈಸುವುದಕ್ಕೆ ‘ಸಮಾಧಾನ’ ಇದೆ, ‘ವಾಟ್ಸ್ ಅಪ್’ ಕಾಲಂನಲ್ಲಿ ನಿಮ್ಮ ಅಪ್ಪಣೆಯನ್ನು ಪಾಲಿಸುವ ಗಡಿಯಾರದ ವಿವರಗಳಿವೆ, ದೇವಲೋಕದ ಅಪ್ಸರೆ ಊರ್ವಶಿಯ ಪ್ರೇಮಹಗರಣದ ಬಗ್ಗೆ ‘ಆಚಾರ ವಿಚಾರ’ದಲ್ಲಿ ವಿಚಾರಣೆಯಿದೆ, ಲೈಫನ್ನೇ ಓಎಲ್ ಎಕ್ಸ್ ನಲ್ಲಿ ಮಾರಾಟಕ್ಕಿಟ್ಟಿರುವ ಜನರ ಬಗ್ಗೆ ‘ಇದ್ದದ್ದು ಇದ್ಹಾಂಗೆ’ಯಲ್ಲಿ ಮಹಾಶ್ವೇತಾ ಕುಟುಕು ಕಾರ್ಯಾಚರಣೆ ನಡೆಸಿದ್ದಾರೆ, ಮೈಂಡ್ ಟ್ರೀ ಸಂಸ್ಥೆಯ ಸಂಸ್ಥಾಪಕರ ಜೀವನಚರಿತ್ರೆ ‘ಜಗವ ಚುಂಬಿಸು’ ಬಗ್ಗೆ ಪುಟ್ಟ ವಿಮರ್ಶೆಯಿದೆ, ಬಡ್ಡಿ ಮಕ್ಕಳನ್ನು ಕಟಕಟೆಗೆ ತರುವ ವಿಧಾನಗಳ ಬಗ್ಗೆ ‘ಲಾ ಪಾಯಿಂಟ’ಲ್ಲಿ ಸಲಹೆಗಳಿವೆ, ಚಿಟ್ಟೆಯ ಹೋರಾಟದ ಬದುಕಲ್ಲಿ ‘ಚೈತನ್ಯದ ಚಿಲುಮೆ’ಯನ್ನು ಗುರುತಿಸಿದ್ದಾರೆ ಗುಣಮುಖ.... ಮಳೆ-ಬಿಸಿಲು ಕಣ್ಣಾಮುಚ್ಚಾಲೆ ಆಟವಾಡುತ್ತಿವೆ. ಗ್ಯಾಪಲ್ಲಿ ಕಾಮನಬಿಲ್ಲಿನಂತೆ ಬಂದಿದೆ ‘ಓ ಮನಸೇ..’. ಡೋಂಟ್ ಮಿಸ್ ಅನ್ನೋದು ಬಾಟಮ್ ಲೈನು. ಓ ಮನಸೇ ಹೈಲೇಟ್ಸ್ ಇನ್ ವೀಡಿಯೋ... https://www.youtube.com/watch?v=Ch1vdkqxgQQ

About O Manase

O manase