ಸಂಸಾರವೆಂಬ ಮ್ಯಾಪಲ್ಲಿ ವಯಸ್ಸಿನ ಗ್ಯಾಪು ನನಗೂ ನಿನಗೂ ಅಂತರ ಎಲ್ಲಿದೆ? ಗಂಡನಿಗೆ ಹೆಚ್ಚು ವಯಸ್ಸಾದಂತೆ ಕಾಣುತ್ತದೆ ಅಥವಾ ಹೆಂಡತಿಯೇ ಅವನಿಗಿಂತ ತುಂಬ ದೊಡ್ಡವಳಂತೆ ಕಾಣುತ್ತಾಳೆ. ಇದು ನಮಗೆ ನಿಮಗೆ ಹೊರಗೆ ರಸ್ತೆಯಲ್ಲಿ ಕಾಣುವ ಕೆಲವು ದಂಪತಿಗಳ ಕತೆ. ಅದನ್ನು ವಯಸ್ಸಿನ ಅಂತರ ಎಂದು ಕರೆಯಲಾಗುತ್ತದೆ. ಕೆಲವರ ವಿಚಾರದಲ್ಲಿ ಇದು ಉಲ್ಟಾ ಕೂಡ ಆಗಬಹುದು, ಅವಳಿಗೆ ಜಾಸ್ತಿ ವಯಸ್ಸಾಗಿರಬಹುದು, ಅವನಿಗೆ ಕಡಿಮೆ ವಯಸ್ಸಾಗಿರಬಹುದು. ವಿಷಯ ಇಷ್ಟೇ, ಗಂಡ ಹೆಂಡಿರ ಮಧ್ಯೆ ವಯಸ್ಸಿನ ಅಂತರ ಎಷ್ಟಿರಬೇಕು, ಎಷ್ಟಿರಬಾರದು, ಜಾಸ್ತಿ ಅಂತರ ಇದ್ದರೆ ಏನಾಗುತ್ತದೆ, ಯಾರು ಈ ಅಂತರ ಕಾಯ್ದುಕೊಂಡೂ ಸಂಸಾರದಲ್ಲಿ ಚೆನ್ನಾಗಿದ್ದಾರೆ ಅನ್ನೋದು ಸದಾ ದೊಡ್ಡ ಚರ್ಚೆಯಲ್ಲಿರುವ ವಿಷಯ. ಕಡೆಗೂ ಅವರಿಬ್ಬರ ನಡುವಿನ ಅಗಾಧ ಅಂತರದಲ್ಲಿ ಗೆಲ್ಲುವುದು ಪ್ರೀತಿ ಮಾತ್ರ, ಸೋಲುವುದು ಹೊಂದಾಣಿಕೆ ಮಾತ್ರ. ಇದನ್ನು ಅಸಹಜವೆನ್ನಬೇಡಿ, ಅಪರಾಧದಂತೆ ನೋಡಬೇಡಿ, ಆಗ ಈ ಸಂಬಂಧವೂ ಉಳಿದ ಸಂಬಂಧದಂತೇ ಸಹಜವಾಗುತ್ತದೆ. ಯಾಕೆಂದರೆ ಕಡೆಗೂ ಇಂಥ ಸಂಬಂಧ ಪರಸ್ಪರ ಹುಡುಗ-ಹುಡುಗಿಗೆ ಸಂತೋಷ, ತೃಪ್ತಿ, ಸುರಕ್ಷತೆಯ ಭಾವ ಕೊಡಬೇಕಷ್ಟೇ. ಇದನ್ನು ಅರ್ಥ ಮಾಡಿಕೊಂಡು ಈ ವಿಚಾರದ ಕುರಿತಾದ ಹಲವು ಸಂಗತಿಗಳನ್ನು ಓದುತ್ತಾ ಹೋಗಿ.
O manase