ಕಣ್ಣಾಮುಚ್ಚೇ..ಕಾಡೇ..ಕೂಡೇ.. ಮಂಚದ ಮೇಲೆ ಮುದಿರಾತ್ರಿ ಮಲಗೈತೆ! ಇವತ್ತು ವಿಚ್ಚೇದನಕ್ಕೆ ಬಹುಮುಖ್ಯ ಕಾರಣ ಕಾಮರಾಹಿತ್ಯ ಅನ್ನುತ್ತದೆ ಸಮೀಕ್ಷೆ. ಅದು ಪ್ರೇಮರಾಹಿತ್ಯ ಅಲ್ಲ ಅನ್ನುವುದನ್ನು ಗಮನಿಸಿ. ತನ್ನನ್ನು ಕಾಮದಲ್ಲಿ ಮಣಿಸಲಾರ ಎಂದು ಆಕೆಗೆ ಮನದಟ್ಟಾಗುತ್ತಿದ್ದಂತೆ ಒಂದೋ ನಿವೃತ್ತಿ ಇಲ್ಲವೇ ಪರದೇಸಿ ಪ್ರವೃತ್ತಿ. ಆಕೆ ಎಗ್ಗಿಲ್ಲದೇ ತನ್ನ ಸಾಂಗತ್ಯಕ್ಕಾಗಿ ಹಂಬಲಿಸುತ್ತಾಳೆ. ಆತನನ್ನು ಹುಡುಕಿಕೊಂಡು ಹೋಗುತ್ತಾಳೆ. ಆತ ಅದೆಲ್ಲೋ ಆಕೆಗೆ ಸಿಗುತ್ತಾನೆ. ಅದೊಂದು ಅಕ್ರಮ ಸಂಬಂಧ ಅನ್ನುವ ಕೀಳರಿಮೆಯಿಲ್ಲದೇ, ತಾನು ಮಾಡಬಾರದ್ದನ್ನು ಮಾಡುತ್ತಿದ್ದೇನೆ ಅನ್ನುವ ಪಾಪಪ್ರeಯೂ ಇಲ್ಲದೇ, ಆಕೆ ಹಕ್ಕುದಾರಳಂತೆಯೇ ಆತನ ಜೊತೆ ಓಡಾಡುತ್ತಾಳೆ. ಅದು ಗುಪ್ತವಾಗಿ ನಡೆಯುತ್ತದೆ ಅನ್ನುವುದನ್ನು ಬಿಟ್ಟರೆ ಮಿಕ್ಕಂತೆ ಎಲ್ಲವೂ ರೂಬುರೂಬು! ಇಂಥದ್ದೊಂದು ಸ್ಥಿತಿ ಯಾಕೆ ಬಂತು? ಯಾವ ಹಂತದಲ್ಲಿ ಸಮಸ್ಯೆ ಎದುರಾಯಿತು? ಗಂಡು ತನ್ನ ವಾಂಛೆಯನ್ನು ಹೆಚ್ಚಿಸಿಕೊಂಡು ಕ್ರಿಯೆಯನ್ನು ಕುಗ್ಗಿಸಿಕೊಂಡು ವಿಷಾದಜನಕ ವಿಸ್ಮೃತಿಯಲ್ಲಿ ಅಸಹಾಯಕನಾಗಿ ನಿಂತಿದ್ದಾದರೂ ಯಾಕೆ? ಏನಿದು ಬೃಹನ್ನಳೆ ಸಿಂಡ್ರೋಮ್! ಇವೆಲ್ಲ ಪ್ರಶ್ನೆಗಳಿಗೆ ಜಾನಕಿ ಉತ್ತರಿಸುತ್ತಾರೆ ಓದಿ.
O manase