logo

Get Latest Updates

Stay updated with our instant notification.

logo
logo
account_circle Login
O Manase
O Manase

O Manase

By: Bhavana Prakashana
20.00

Single Issue

20.00

Single Issue

About this issue

ಹಸಿರಾಗಿರುವುದೆಲ್ಲಾ ಗ್ರೀನ್ ಟೀ ಅಲ್ಲ ಸದ್ಯಕ್ಕೆ ಎಬೋಲಾ ಮತ್ತು ಮೋದಿ ಹೊರತಾಗಿ ಇಂಡಿಯಾದಲ್ಲಿ ಅತ್ಯಂತ ಜನಪ್ರಿಯವಾಗಿರುವ ಪದವೆಂದರೆ ಗ್ರೀನ್ ಟೀ. ಈ ಹಸಿರು ಪೇಯವನ್ನು ಕುಡಿದರೆ ನಿಮ್ಮ ಸೊಂಟ ಐಶ್ವರ್ಯ ರೈ ಸೊಂಟದೊಂದಿಗೆ ಪೈಪೋಟಿ ನಡೆಸುತ್ತದೆ, ಕ್ಯಾನ್ಸರ್ ನಿಮ್ಮ ಹತ್ತಿರವೂ ಸುಳಿಯುವುದಿಲ್ಲ, ಹೃದಯಾಘಾತ ಆಗುವ ಚಾನ್ಸೇ ಇಲ್ಲ, ಬೀಪಿ ಶುಗರ್ ಪಲಾಯನ ಮಾಡುತ್ತವೆ, ಒಟ್ಟಲ್ಲಿ ನಿಮ್ಮನ್ನು ಶತಾಯುಷಿಗಳನ್ನಾಗಿಸುವ ಸಂಜೀವಿನಿಗೆ ಇನ್ನೊಂದು ಹೆಸರೇ ಗ್ರೀನ್ ಟೀ. ಇಂಥಾ ಭಯಂಕರ ಪ್ರಚಾರದೊಂದಿಗೆ ನಮ್ಮ ಹೊಟ್ಟೆಯನ್ನು ಸೇರುತ್ತಿರುವ ಗ್ರೀನ್ ಟೀಯಲ್ಲಿ ಅಸಲಿಗೆ ಇವೆಲ್ಲಾ ಸದ್ಗುಣಗಳು ಇವೆಯಾ? ಈ ಪ್ರಚಾರದ ಹಿಂದೆ ಯಾವ ಕಾಣದ ಕೈಗಳ ಕೈವಾಡ ಇದೆ? ಬನ್ನಿ ಒಂದು ಕಪ್ ಗ್ರೀನ್ ಟೀ ಕುಡಿಯುತ್ತಾ ಈ ಬಗ್ಗೆ ಚರ್ಚೆ ಮಾಡೋಣ. • ಚಾಯ್ ಪೇ ಚರ್ಚಾ ಕೆಲವರ ಬದುಕು ಸರಳರೇಖೆಯಂತೆ. ತಾವು ಬಯಸಿದ ಉದ್ಯೋಗವನ್ನೇ ಮಾಡುತ್ತಾರೆ, ಜೀವನಪರ್ಯಂತ ಅದೊಂದನ್ನೇ ಮಾಡಿ ಇಹಲೋಕ ತ್ಯಜಿಸುತ್ತಾರೆ,. ಇನ್ನು ಕೆಲವರ ಬದುಕು ಅಡ್ಡಾದಿಡ್ಡಿ. ಕಲಿತಿದ್ದೊಂದು, ಮಾಡೋದು ಇನ್ನೊಂದು. ಅಮೆರಿಕಾದ ಮೆಲ್ ಫಿಷರ್ ಎಂಬಾತ ಇಂಜಿನಿಯರಿಂಗ್ ಓದಿ ಕೋಳಿ ಫಾರ್ಮ್ ತೆರೆದ. ಆಮೇಲೆ ಡೈವಿಂಗ್ ಸ್ಕೂಲ್ ಶುರು ಮಾಡಿದ. ಕೊನೆಗೆ ಸಮುದ್ರದಾಳಕ್ಕೆ ಜಿಗಿದು ಚಿನ್ನ ಹುಡುಕುತ್ತಾ ತನ್ನ ಇಡೀ ಜೀವನವನ್ನು ಕಳೆದ. ಹೋಗಲಿ, ಅವನಿಗೆ ಚಿನ್ನ ಸಿಗ್ತಾ? ಈ ರೋಮಾಂಚಕಾರಿ ಸತ್ಯಕತೆ ಓದಿ. ಇದು ಕಡಲ ಒಡಲಿಗೆ ಕನ್ನ ಹಾಕಿದವನ ಕತೆ. • ಚಿನ್ನದ ಮೀನು ಕುಡಿತವೆಂಬುದು ಪತ್ರಕರ್ತರ ಪಾಲಿಗೆ ಜನ್ಮಕ್ಕಂಟಿದ ಶಾಪ. ಅಂಥಾ ಇಬ್ಬರು ಪತ್ರಕರ್ತರ ಬದುಕಿನ ಕೆಲವು ದಾರುಣ ಪುಟಗಳನ್ನು ರವಿ ಬೆಳಗೆರೆ ತೆರೆದಿಟ್ಟಿದ್ದಾರೆ ‘ಮನಸಿನ್ಯಾಗಿನ ಮಾತ’ಲ್ಲಿ. ಅವರಿಬ್ಬರೂ ಈಗಿಲ್ಲ, ಅವರು ಸಾಯುವ ಹೊತ್ತಿಗೆ ಅವರ ಜೊತೆಗೆ ಯಾರೂ ಇರಲಿಲ್ಲ. ಒಬ್ಬನಿಗೆ ಎರಡು ಕಾಲಾದರೂ ಇದ್ದವು, ಇನ್ನೊಬ್ಬನಿಗೆ ಅದೂ ಇರಲಿಲ್ಲ. • ಗೆಳೆಯರಿದ್ದಾರೆ ನೂರು, ಸಾವಿರ. ಆದರೆ ಇವರಿಬ್ಬರು ಮಾತ್ರ..... ನಮ್ಮ ಬದುಕು ನಮ್ಮೊಬ್ಬರನ್ನೇ ಅವಲಂಬಿಸಿಲ್ಲ. ಅದು ಅನೇಕರ ಸ್ನೇಹ-ಪ್ರೀತಿಗಳನ್ನೊಳಗೊಂಡ ಚೈತ್ರದ ಚಿಗುರಿನಂತೆ. ಅವುಗಳನ್ನು ನಿಭಾಯಿಸುವ ಋಣಭಾರ, ಅವಲಂಬನೆಗಳಂಥ ಮಾತನ್ನು ಯೋಚಿಸಲು ಹೊರಟರೆ ಬದುಕುವುದೇ ಕಷ್ಟವಾಗುತ್ತದೆ. ಸಂಬಂಧಗಳೇ ಹೀಗೆ ಪತಝಡ್ ಥರ. ಎಲ್ಲ ಕಳಚಿಕೊಂಡೆವು ಅನ್ನುವಷ್ಟರಲ್ಲಿ ಮತ್ತೆ ವ್ಯಾಮೋಹ ಬೆಳೆದಿರುತ್ತದೆ. ದೆಹಲಿಯ ಋತುಮಾನಗಳನ್ನು ನೆನೆಯುತ್ತಾ ರೇಣುಕಾ ನಿಡಗುಂದಿ ಬರೆಯುತ್ತಾರೆ. • ಎಲ್ಲ ಕಳಚಿಕೊಳ್ಳುತ್ತಲೇ ಮತ್ತೆ ಹೊಸದನ್ನು ಒಳಗೊಳ್ಳುತ್ತಾ ಸಾಗುವ ಬದುಕಿನ ವಿಸ್ಮಯ ಋತುಮತಿಯಾಗುವುದು ಅಂದರೆ ಹೆಣ್ಣಿನ ದೇಹದಲ್ಲಷ್ಟೇ ಆಗುವ ಬದಲಾವಣೆಯಲ್ಲ, ಅದು ಮನಸ್ಸಿಗೂ ಸಂಬಂಧಿಸಿದ್ದು. ಒಂದೆಡೆ ಸಂಭ್ರಮ, ಇನ್ನೊಂದೆಡೆ ಮುಜುಗರ, ಆತಂಕ. ತಂಪಿನ ನೆರಳಿನಲ್ಲಿ ಅರಿಶಿಣದ ಕಂಪಲ್ಲಿ ಕಟ್ಟಿಕೊಂಡ ಇಂಪಿನ ಕನಸುಗಳನ್ನು ನೆನಪಿಸಿಕೊಂಡಾಕೆಯ ಭಾವಲಹರಿ ಇಲ್ಲಿದೆ. • ನಾನು ದೊಡ್ಡೋಳಾದೆ! ಇನ್ನೇನು ಡಿಸೆಂಬರ್ ಮುಗೀತಾ ಬಂತು. ಅಂದಹಾಗೆ ಹೊಸವರ್ಷಕ್ಕೆ ನಿಮ್ಮ ರೆಸಲ್ಯೂಷನ್ ಗಳೇನು? ಕುಡಿಯೋಲ್ಲ, ಸಿಗರೇಟು ಸೇದೋಲ್ಲ, ಸಿಟ್ಟು ಮಾಡ್ಕೊಳ್ಳೋಲ್ಲ ಇವೆಲ್ಲವೂ ಇದ್ದಿದ್ದೇ. ಕಾನೂನಿನ ಬದ್ಥತೆ ಮತ್ತು ದೇವರ ಭಯ ಇಲ್ಲದೇ ಇರುವ ಯಾವ ನಿರ್ಧಾರಗಳೂ ಕಾರ್ಯರೂಪಕ್ಕೆ ಬರೋಲ್ಲ. ಅದಕ್ಕೇ ಈ ಬಾರಿ ನಾವೇ ನಿಮಗೆ ಟಾಪ್ ಟೆನ್ ಐಡಿಯಾ ಕೊಡುತ್ತಿದ್ದೇವೆ. ಆಲಿಸಿ...ಪಾಲಿಸಿ... • ಟಾಪ್ ಟೆನ್ ಐಡಿಯಾಸ್ ಚಕೋರ ಎಂಬ ಪಕ್ಷಿ ಚಂದ್ರಮನ ಬೆಳದಿಂಗಳನ್ನು ಮಾತ್ರ ಕುಡಿಯುತ್ತದಂತೆ. ಪುರಾವೆ ಎಲ್ಲಿದೆ ಎಂದು ಕೇಳಬೇಡಿ. ಇದು ಕವಿಸಮಯ. ಹಂಸಕ್ಷೀರ ನ್ಯಾಯದಲ್ಲಿ ಹಂಸಪಕ್ಷಿ ಹಾಲು ಮತ್ತು ನೀರನ್ನು ಪ್ರತ್ಯೇಕ ಮಾಡುವುದು, ಹಾವು ಹನ್ನೆರಡು ವರ್ಷದ ನಂತರವೂ ದ್ವೇಷ ಸಾಧಿಸುವುದು ಇವೆಲ್ಲವೂ ಕವಿಸಮಯವೇ. ಆದರೆ ಕೆಲವೊಮ್ಮೆ ಕವಿಸಮಯದಲ್ಲಿ ಹಾಜರಾಗುವ ಜೀವಿಗಳು ವಾಸ್ತವದಲ್ಲೂ ಕಾಣಿಸುತ್ತವೆ. ಉದಾಹರಣೆಗೆ ಚಕ್ರವಾಕ, ಚಾತಕ ಮತ್ತು ಚಕೋರ. ಈ ಪಕ್ಷಿಗಳ ಕತೆ ಕೇಳುವಂತವರಾಗಿ. • ಚಕೋರಂಗೆ ಚಂದ್ರಮನ ಚಿಂತೆ ಅವನು ಗಂಡಸಲ್ಲ ಅಂತ ಗೊತ್ತಿದ್ದೂ ಇವನು ಅವನ ಸಂಗ ಮಾಡಿದ, ಆ ತಪ್ಪಿಗೆ ದಂಡವನ್ನೂ ಕಟ್ಟಿದ್ದಾಯಿತು. ಬದುಕು ಚಿತ್ರಾನ್ನವಾಗಿ ಹೋಯಿತು. ಇದು ಸಲಿಂಗಕಾಮಿಯೊಬ್ಬನ ಸಮಸ್ಯೆ. ‘ಸಮಾಧಾನ’ದಲ್ಲಿ ಅವನಿಗೊಂದು ಪರಿಹಾರ ನೀಡಲಾಗಿದೆ. ಓದಿ ನೋಡಿ. • ಷಂಡನಿಗೆ ಗಂಡನಾಗಿ ಬದುಕು ದಂಡವಾಗಿ ಹೋಯಿತು ಇವೆಲ್ಲ ಲೇಖನಗಳ ಜೊತೆ ನಿಮ್ಮ ಮೆಚ್ಚಿನ ಕಾಲಂಗಳು ಎಂದಿನಂತೆ ರಾರಾಜಿಸುತ್ತಿವೆ. ವಿಭೂತಿ ಪುರುಷರನ್ನೇಕೆ ಆರಾಧಿಸಬೇಕು (ಆಚಾರವಿಚಾರ), ಪ್ರಕೃತಿಯೊಂದಿಗೆ ಒಂದಾಗುವುದಕ್ಕಿಂತ ದಿವ್ಯ ಔಷಧಿ ಯಾವುದಿದೆ (ಹಸನ್ಮುಖಿ), ನ್ಯಾಯ ಎಲ್ಲಿದೆ (ಅಚಾರ ವಿಚಾರ), ನಿರಾಸೆಯನ್ನು ಮೀರುವುದು ಹೇಗೆ (ಚೈತನ್ಯದ ಚಿಲುಮೆ), ಕಡಿಮೆ ಬೆಲೆಗೆ ಒಳ್ಳೇ ಕೆಮರಾ (ವಾಟ್ಸ್ ಅಪ್), ಆ ರಾಕ್ಷಸನನ್ನು ಜನರು ಪೂಜಿಸುತ್ತಾರೆ (ಪುರಾಣಪ್ರಪಂಚ)...... ಮನೋಲ್ಲಾಸಕ್ಕೆ ಇರುವುದೊಂದೇ ದಾರಿ, ‘ಓ ಮನಸೇ’ ಓದಿರಿ. ಇದು ಮಾಹಿತಿಗಳ ಕಣಜವಲ್ಲ, ಭಾವನೆಗಳ ಖಜಾನೆ. 104ನೇ ಸಂಚಿಕೆ ಮಾರುಕಟ್ಟೆಯಲ್ಲಿದೆ.

About O Manase

O manase