ಈ ಸಿಟಿ ಆಫ್ ಪರ್ಲ್ಸ್ ಪಸ್ತಕದಲ್ಲಿ ಹೈದ್ರಾಬಾದಿನಲ್ಲಿರುವ ಅರಮನೆ, ಬಜಾರು, ಗುಡಿಗಳು ಇಲ್ಲಿಯ ಜನಜೀವನ ಹಬ್ಬ ಹರಿದಿನಗಳು ಮುತ್ತುಗಳ ವ್ಯಾಪಾರ ಬಿರಿಯಾನಿಯ ವಿಷಯ ತೆಳಂಗಾಣದ ಜನರು ಆಚರಿಸುವ ಶಕ್ತಿ ದೇವತೆಗಳ ಪÇಜೆ, ಜಾತ್ರೆ, ಇತ್ಯಾದಿ ವಿಷಯಗಳ ಬಗ್ಗೆ ತಿಳಿಸಲಾಗಿದೆ. ಹಾಗೆ ಹೈದ್ರಾಬಾದಿನ ಜನರ ಆಚಾರ, ವಿಚಾರ, ವ್ಯಾಪಾರ ವ್ಯವಹಾರ ಅವರ ಜೀವನ ಶೈಲಿ ಹಾಗೆ ಕುಲಿಕುತುಬ್ ಷಾ, ನಿಜಾಂ ಅರಸರ ಕಾಲದಿಂದ ಇಲ್ಲಿಯವರೆಗೆ ನಡೆಯುತ್ತಿರುವ ಮುತ್ತು ವಜ್ರಗಳ ವ್ಯಾಪಾರ, ಅರಸರು ಕಟ್ಟಿಸಿದ ಅರಮನೆ, ದೇವಾಲಯಗಳು ಅವರು ಮಾಡಿದ ದಾನ ಧರ್ಮಗಳ ಬಗ್ಗೆ ಹೇಳಲಾಗಿದೆ. ಈ ಸಿಟಿ ಆಫ್ ಪರ್ಲ್ಸ್ ಪಸ್ತಕದಲ್ಲಿ ಹೈದ್ರಾಬಾದಿನ ಕಿರುಪರಿಚಯವನ್ನು ತಿಳಿಸಲಾಗಿದೆ.