‘ನಿಸರ್ಗದ ಒಡಲು ತಾಯಿಯ ಮಡಿಲು’ ಎಂಬ ಸಾಲು ಹೆತ್ತ ತಾಯಿಯನ್ನು ಸುತ್ತಲ ನಿಸರ್ಗದೊಡನೆ ಸಮಿಕರಿಸುತ್ತದೆ. ಮನುಷ್ಯನ ಸಾರ್ಥಕತೆ ನಾಡಿಗಾಗಿ ದುಡಿಯುವುದರಲ್ಲಿದೆ ಎಂಬ ಉದಾತ್ತ ವಿಚಾರಗಳು ‘ವಿಕಲಚೇತನರು’ ‘ಮಿಡಿಯುತ್ತಿರಲಿ ನಮ್ಮ ಮನಸ್ಸು’ ‘ನಮ್ಮ ಸೈನಿಕರು’ ಕವನಗಳಲ್ಲಿ ರೂಪಿತವಾಗಿದೆ. ತಂದೆ ತಾಯಿ ಬಂದುಗಳಿಂದ ತಮ್ಮ ವ್ಯಕ್ತಿತ್ವ ರೂಪಗೊಂಡ ಬಗೆಯನ್ನು ಈ ತರುಣ ಕವಿ ತಮ್ಮ ಕವಿತೆಗಳಲ್ಲಿ ಬಿಂಬಿಸಿದ್ದಾರೆ. ತಮ್ಮ ಬದುಕಿನ ಸಾರ್ಥಕ ಕ್ಷಣಗಳನ್ನು ಕವಿತೆಗಳಲ್ಲಿ ಮೂಡಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದಾರೆ. ಡಾ.ಸಿದ್ದಲಿಂಗಯ್ಯ (ಮುನ್ನುಡಿಯಿಂದ) ಕಲ್ಪನೆ ಎಂಬುದು ಜ್ಞಾನಕ್ಕಿಂತ ಮಿಗಿಲಾದುದು, ಅಂತಹ ಶಕ್ತಿ ಪಡೆದಿರುವ ಕವಿಯ ಕಾವ್ಯನದಿಯನ್ನು ತಿಳಿಯಲು, ಓದಲು, ಹಾಡಲು, ಕೇಳಿ ಆನಂದಿಸಲು ಬಲು ಇಂಪು. ಅವರ ಜ್ಞಾನಕ್ಕೆ ಕೌಶಲ್ಯಕ್ಕೆ ಅಪರಿಮಿತ ಬೆಲೆ. ಅವರ ಮನಸ್ಸು ಸ್ವಚ್ಛಂದವಾಗಿ ಹಾರಾಡುವ ಹಕ್ಕಿಯಂತೆ, ನಿರ್ಮಲವಾಗಿ ಸುಗಂಧ ಸೂಸುವ ಮಲ್ಲಿಗೆಯಂತೆ, ಅವರ ಬರಹಗಳು ಸ್ವರ್ಣಕ್ಷರಗಳಂತೆ, ಅಂತಹ ಸ್ಥಾನ ಮಾನ ಪಡೆಯಬೇಕಾದರೆ ಶ್ರದ್ಧೆ, ಶ್ರಮ, ಸತತ ಅಧ್ಯಾಯನ, ಪ್ರೀತಿ, ಅನುಭವಗಳು ಬೇಕು. ಇವೆಲ್ಲವು ಇವರಿಗೆ ಸಿಗಲೇಂದು ಹಾರೈಸುತ್ತೆನೆ. ಶಂಕರ ದೇವನೂರ (ಹಿನ್ನುಡಿಯಿಂದ) ತಮ್ಮ ಜೀವನದಲ್ಲಿ ಏನೇ ಕಷ್ಟ ಟಿಕೆಗಳು ಬಂದರು ಅವೆಲ್ಲವನ್ನು ಬದಿಗೊತ್ತಿ ಕನ್ನಡ ಸಿರಿ ಸಂಪತ್ತನ್ನು ದ್ವೀಗುಣ ಗೊಳಿಸಿ ಕನ್ನಡದ ಬೆಳದಿಂಗಳನ್ನು ಪಳಗಿಸಲು ಕನ್ನಡ ಕೃಷಿ ಕ್ಷೆತ್ರಕ್ಕೆ ಯುವ ಮನಸ್ಸಿನ ಆಗಮನದ ಒಂದು ಸಾಂಕೇತಿಕ ರೂಪದ ಕಾವ್ಯನಾಮವೇ ಯುವಚಂದ್ರ. ರವಿಭಜಂತ್ರಿ (ಕವಿ ಪರಿವಯದಿಂದ)