Hi Bangalore


Buy Now @ ₹ 15.00 Preview
ಹಾಯ್ ಬೆಂಗಳೂರ್! : ಸಂಪುಟ : ೨೦, ಸಂಚಿಕೆ : ೭, ನವೆಂಬರ್ ೧೩, ೨೦೧೪ ಬೆಲೆ : ೧೫ ರು ಮುಖಪುಟ ಲೇಖನ ನಂದಿತಾ ರೇಪ್ ಅಂಡ್ ಮರ್ಡರ್ ಅಲ್ಲವೇ ಅಲ್ಲ ಕಿಮ್ಮನೆ ಎದುರಿಗೆ ಬಿಜೆಪಿ ಬಯಲಾಟ ನಂದಿತಾಳ ಕುಟುಂಬದ ಮೇಲೆ ಯಾವ ಆರೋಪವೂ ಇಲ್ಲ. ಕಿಮ್ಮನೆಯವರಾಗಲೀ, ಅವರಿಂದ ನಿಯೋಜಿಸಲ್ಪಟ್ಟವರಾಗಲೀ, ಪೊಲೀಸರಾಗಲೀ, ಚಡ್ಡಿಯವರು ಅಮರಿಕೊಳ್ಳುವ ಮೊದಲೇ ಕೃಷ್ಣ ಕುಟುಂಬಕ್ಕೆ ಸ್ಪಂದಿಸಿದ್ದರೆ ಅವರು ಈಗಿನ ಸ್ಥಿತಿಗೆ ಬರುತ್ತಿರಲಿಲ್ಲ. ಒಂದು ಸುಳ್ಳು ಹೇಳಿದರೆ, ಮತ್ತೊಂದು ಸುಳ್ಳು ಹೇಳುತ್ತಾ ಹೋಗಬೇಕಾಗುತ್ತದೆ. ಸಂತೋಷ ಇತ್ಯಾದಿ ಅಡ್ನಾಡಿ ಗಿರಾಕಿಗಳಿಂದ ಕೃಷ್ಣ ಈಗ ಬಿಜೆಪಿ ಕೈಗೊಂಬೆಯಾಗಿದ್ದಾರೆ. ಅವರು ಹೇಳಿದಂತೆ ಕೇಳುವ ಸ್ಥಿತಿ ತಲುಪಿದ್ದಾರೆ. ಸಿಬಿಐ ತನಿಖೆಯಾಗಬೇಕು ಅಂತ ಬಡಬಡಿಸುತ್ತಿರುವ ಕೃಷ್ಣರಿಗೆ ಸರಿಯಾದ ತನಿಖೆ ನಡೆದರೆ ಪೊಲೀಸರ ಹಾದಿ ತಪ್ಪಿಸಲೆತ್ನಿಸಿದ ತಾವೇ ಆರೋಪಿಯಾಗಬೇಕಾಗುತ್ತದೆಂಬುದೂ ತಿಳಿದಿಲ್ಲ. ಬಾಲಕಿಗೆ ಚಿಕಿತ್ಸೆ ಕೊಡಿಸುವಲ್ಲಿ, ದೂರು ದಾಖಲಿಸುವಲ್ಲಿ ವಿಳಂಬ ಧೋರಣೆ ತಾಳಿದ ಕೃಷ್ಣ ಅದಕ್ಕೆ ಉತ್ತರಿಸಲಾರರು. ವೈದ್ಯರ ಬಳಿಯಾಗಲೀ, ಪೊಲೀಸರ ಬಳಿಯಾಗಲೀ ಮೊದಲು ಅತ್ಯಾಚಾರ, ಕೊಲೆ ಇತ್ಯಾದಿ ಕತೆ ಹೇಳದವರು ನಂತರ ಹಾಗೆ ಹೇಳಲು ಕಾರಣವೇನು ಎಂಬುದರತ್ತಲೂ ತನಿಖೆ ನಡೆಸುವುದಾಗಿಯೂ ಪೂರ್ವ ವಲಯದ ಐಜಿಪಿ ಡಾ.ಪರಶಿವಮೂರ್ತಿಯವರೇ ಹೇಳಿದ್ದಾರೆ. ಶೃಂಗೇಶ್ ಖಾಸ್‌ಬಾತ್ ವಿಜಯನಗರ ಸಾಮ್ರಾಜ್ಯದ ಕೋಟೆ ಕೊತ್ತಲಿನಲ್ಲಿ ಇದ್ದವನು ಅದೆಂಥ ಚಕ್ರತೀರ್ಥಕ್ಕೆ ಬಿದ್ದುಬಿಟ್ಟೆ! ಹೊಸದೇನಲ್ಲ ಈ ‘ಪ್ರಾಣಾಯಾಮ’. ಹಿಂದೆ ಕರ್ನಾಟಕ ಯೂನಿವರ್ಸಿಟಿಯಲ್ಲಿ ಎಂ.ಎ., ಇತಿಹಾಸ ಮತ್ತು ಪ್ರಾಚ್ಯ ಶಾಸ್ತ್ರ ವಿಭಾಗದಲ್ಲಿ ನಾನು ಡಿಗ್ರಿ ತೆಗೆದು ಕೊಂಡಿದ್ದೆ. ಆಗ ಕೈಯಲ್ಲಿ ನೌಕರಿ ಇಲ್ಲ. ಮದುವೆಗೆ ಅಂತ cash ರೂಪದಲ್ಲಿ gift ಬಂದಿದ್ದವಲ್ಲ; ಅವುಗಳನ್ನೆಲ್ಲ ಒಂದು boxನಿಂದ ಹಾಸಿಗೆಯ ಮೇಲೆ ಸುರು ವಿಕೊಂಡು ಐದೈದು- ಹತ್ತತ್ತು ರುಪಾಯಿಗಳ ಮುದುರು ನೋಟುಗಳನ್ನು ಎಣಿಸಿ, ಮೊತ್ತ ಲೆಕ್ಕ ಹಾಕಿದರೆ ಮೂರು ನೂರು ರುಪಾಯಿ ಜಮೆಯಾಗಿತ್ತು. ಅವತ್ತಿಗೆ ಅದು big money. ಲಲಿತ ‘ಇಷ್ಟೊಂದು ಬಂದಿದೆಯಲ್ರೀ!’ ಎಂದು ಕಣ್ಣರಳಿಸಿದವಳು ಇವತ್ತಿಗೂ ಸರಿಯಾಗಿ ಕಣ್ಣು ಮುಚ್ಚಿಲ್ಲ. ಆಗ ನನಗಿದ್ದುದು ಎರಡೇ ಬಹುದೊಡ್ಡ ಬಯಕೆ. ಆರ್.ಬಿ ಹಲೋ ಸಜ್ಜನ ವಾಜಪೇಯಿಗೂ ಮೋಡಿಗಾರ ಮೋದಿಗೂ ಇರುವ ಸಾಮ್ಯತೆ ಗೊತ್ತಾ ಇತ್ತೀಚೆಗೆ ದೆಹಲಿಯಲ್ಲಿ ನಡೆದ ಒಂದು ಘಟನೆ. ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಪಕ್ಷದ ಹಿರಿಯ ನಾಯಕರೊಬ್ಬರನ್ನು ಭೇಟಿ ಮಾಡಲು ಹೋದರು. ಅವರನ್ನು ಭೇಟಿ ಮಾಡಿ ಗೌರವಿಸಿ ಬರುವುದು ನರೇಂದ್ರ ಮೋದಿ ಉದ್ದೇಶ. ಹಾಗಂತಲೇ ಉಭಯ ಕುಶಲೋಪರಿ ನಡೆಸಿದ ನಂತರ ನರೇಂದ್ರ ಮೋದಿ ಅವರನ್ನು ನಮಸ್ಕರಿಸಲು ಮುಂದಾದರು. ಎಷ್ಟೇ ಆದರೂ ಹಿರಿಯ ನಾಯಕ. ಅಂತಹವರಿಗೆ ನಮಸ್ಕರಿಸ ದಿದ್ದರೆ ಹೇಗೆ ಹಾಗಂತಲೇ ಮೋದಿ ನಮಸ್ಕರಿಸಲು ಮುಂದಾದರು. ಆದರೆ ಅದೇನು ಸಿಟ್ಟು ಬಂತೋ ಆ ನಾಯಕರು ರಪ್ಪಂತ ಪಕ್ಕಕ್ಕೆ ತಿರುಗಿಬಿಟ್ಟರು. ರವಿ ಬೆಳಗೆರೆ ಬಾಟಮ್ ಐಟಮ್ ಕಳೆದುಹೋದ ಕಾಲದತ್ತ ಮರಳುತ್ತೇನೆ ಅನ್ನುವ ಮರುಳು “ನನ್ನ ನಡವಳಿಕೆಯಲ್ಲಿ ವಿರೋಧಾಭಾಸವಿರುವುದನ್ನು ನಾನು ನಿರಾಕರಿಸುವುದಿಲ್ಲ. ನಿಜ ಹೇಳಬೇಕು ಅಂದರೆ ನಾನು ನಟನಾಗಬೇಕು ಅನ್ನುವುದರ ಹಿಂದಿದ್ದ ಪ್ರೇರೇಪಣೆ ನನ್ನೊಳಗಿನ ಕಲಾವಿದನನ್ನು ಹೊರಹಾಕುವುದಾಗಿರಲಿಲ್ಲ. ಜೀವನದಲ್ಲಿ ಏನಾ ದರೂ ಒಂದು ಅರ್ಥಪೂರ್ಣ ಕ್ರಿಯೆಯಲ್ಲಿ ತೊಡಗಿಸಿಕೊಳ್ಳಬೇಕು ಅನ್ನುವುದೂ ಆಗಿರಲಿಲ್ಲ, ಸಮಾಜಕ್ಕೆ ನನ್ನಿಂದ ಏನಾದರೂ ಕೊಡುಗೆ ನೀಡಬೇಕು ಅನ್ನುವುದೂ ಅಲ್ಲ. ಬದಲಾಗಿ ನನ್ನನ್ನು ಎಲ್ಲರೂ ಗಮನಿ ಸಬೇಕು, ದೊಡ್ಡ ಶ್ರೀಮಂತನಾಗಬೇಕು, ಎಲ್ಲರೂ ತಲೆ ಯೆತ್ತಿ ನನ್ನ ನೋಡಬೇಕು, ನನ್ನ ಬಗ್ಗೆ ಜನ ಮಾತಾಡ ಬೇಕು, ಮೆಚ್ಚಬೇಕು ಅನ್ನೋದಷ್ಟೇ ಆಗಿತ್ತು. ರವೀ ವರದಿ ವರಲಕ್ಷ್ಮಿ ರೇಪ್ ಕೇಸ್: ಬಾಗೇಪಲ್ಲಿ ಪುಂಡರಿಗೆ ಪೊಲೀಸರೇ ಬೀಗರು! ವರಲಕ್ಷ್ಮಿಯದು ಹತ್ಯೆಯೋ, ಆತ್ಮಹತ್ಯೆಯೋ ಎಂಬುದರ ಕುರಿತು ನಿರ್ಧಾರಕ್ಕೆ ಬರುವ ಮುನ್ನ ಪ್ರಕರಣದ ಆರೋಪಿಗಳ ಹಿನ್ನೆಲೆ ಕುರಿತು ಕಣ್ಣಾಡಿಸಿದರೆ ಹೊರಬೀಳುವ ಸಂಗತಿಗಳೇ ಆಶ್ಚರ್ಯವಾಗಿವೆ. ಇಡೀ ಪ್ರಕರಣದ ಪ್ರಮುಖ ಆರೋಪಿಗಳ ಪೈಕಿ ಒಬ್ಬನಾದ ಚಿನ್ನಪ್ಪಯ್ಯ ಹೇಳಿಕೇಳಿ ಬಡ್ಡಿ ವ್ಯವಹಾರಿ. ಈತ ಹಾಗೂ ಚನ್ನರಾಯಪ್ಪ ಎಂಬಾತನ ಮಗ ರಾಜ ಅಲಿಯಾಸ್ ಡಿಪೋರಾಜ ಸೇರಿ ಸ್ಥಳೀಯವಾಗಿ ನ್ಯಾಯಬೆಲೆ ಅಂಗಡಿ ನಡೆಸುತ್ತಾರಾದರೂ ನ್ಯಾಯಯುತವಾಗಿ ಯಾವತ್ತೂ ರೇಷನ್ ವಿತರಣೆ ಮಾಡಲಿಲ್ಲ. ಇವರ ಉಢಾಳತನದಿಂದಾಗಿ ರಾತ್ರಿ ವೇಳೆ ಹೆಣ್ಣುಮಕ್ಕಳು ಓಡಾಡುವುದೇ ಕಷ್ಟಕರವಾಗಿದೆ ಅಂದರೆ ಈ ಐನಾತಿಗಳ ಉಪಟಳ ಅದ್ಯಾವ ಮಟ್ಟದ್ದು ಅಂತಾ ನೀವೇ ಊಹಿಸಿ. ಲೋಕೇಶ್ ಕೊಪ್ಪದ್ ವರದಿ ಸಿದ್ದು ವಿರುದ್ಧ ಕೃಷ್ಣ! ಕುಮ್ಮಿ ಎಳೆತರಲು ನಡೆದಿದೆ ಭಾರೀ ಮಸಲತ್ತು! ಒಂದು ವೇಳೆ ಹೀಗೆ ಕುಮಾರಸ್ವಾಮಿ ಕೈ ಜೋಡಿಸಿದರೆ ಸಿದ್ದರಾಮಯ್ಯನವರನ್ನು ಕೆಳಗಿಳಿಸಲು ವಿಧ್ಯುಕ್ತ ಪ್ರಯತ್ನ ಆರಂಭಿಸಬಹುದು. ಯಾರೇನೇ ಹೇಳಿದರೂ ಇವತ್ತಿನ ಸ್ಥಿತಿಯಲ್ಲಿ ಹತ್ತಕ್ಕೂ ಹೆಚ್ಚು ಶಾಸಕರು ಸಿದ್ದರಾಮಯ್ಯನವರ ಜೊತೆ ಹೋಗುವುದು ಕಷ್ಟ. ಅಲ್ಲಿಗೆ ಸಿದ್ದರಾಮಯ್ಯ ವಿರುದ್ಧ ತೊಡೆ ತಟ್ಟಲು ವಿಧ್ಯುಕ್ತವಾಗಿ ಒಬ್ಬ ನಾಯಕ ಸಿಕ್ಕಂತಾಗುತ್ತದೆ ಎಂಬುದು ಕೃಷ್ಣ ಬಯಕೆ. ಏನೇ ಮಾಡಿದರೂ ಪರಮೇಶ್ವರ್ ಅವರು ಸಿದ್ದರಾಮಯ್ಯನವರಿಗೆ ಸೆಡ್ಡು ಹೊಡೆದು ನಿಲ್ಲುತ್ತಿಲ್ಲವಾದ್ದರಿಂದ ಕೃಷ್ಣ ಅವರಿಗೂ ಬೇರೆ ದಾರಿ ಕಾಣುತ್ತಿಲ್ಲ. ಆದ್ದರಿಂದ ಅವರು ಕುಮಾರಸ್ವಾಮಿಗೆ ಗಾಳ ಹಾಕಿದ್ದಾರೆ. ಈ ಗಾಳಕ್ಕೆ ಕುಮಾರಸ್ವಾಮಿ ಏನಾದರೂ ಸಿಗೆ ಬಿದ್ದರೆ ಭರ್ಜರಿ ಮೀನು ಸಿಕ್ಕಿಬಿದ್ದಂತೆ. ಅಷ್ಟೇ ಅಲ್ಲ, ಸಿದ್ದರಾಮಯ್ಯ ವಿರುದ್ಧ ಪ್ರಬಲ ನಾಯಕನೊಬ್ಬನನ್ನು ಎತ್ತಿ ಕಟ್ಟಲು ದಾರಿ ಓಪನ್ ಆದಂತೆಯೇ ಅರ್ಥ. ಆರ್.ಟಿ.ವಿಠ್ಠಲಮೂರ್ತಿ ವರದಿ ಬಳ್ಳಾರಿ: ಪ್ರೆಸಿಡೆಂಟ್ ಆಂಜನೇಯನ ಆಂಧ್ರಾ ಮೀಲ್ಸ್ ಬಳ್ಳಾರಿ ಜಿಲ್ಲಾ ಕಾಂಗೈನ ನಗರಘಟಕದ ಅಧ್ಯಕ್ಷ ಜೆ.ಎಸ್. ಆಂಜನೇಯಲು ಬಾಲ ಬಿಚ್ಚುತ್ತಿದ್ದಾನೆ; ತನ್ನ ಪುಂಡಾಟಿಕೆಗಳಿಂದಲೇ ಕುಖ್ಯಾತನಾಗಿದ್ದಾನೆ. ಬ್ಯಾಂಕಿಗೆ ವಂಚಿಸಿರುವುದರಿಂದ ಹಿಡಿದು ಊರಿನ ಹರಾಮಿ ದಂಧೆಗಳ ವಸೂಲಿ ತನಕ ಕುಲಗೆಟ್ಟು ಹೋಗಿದ್ದಾನೆ. ಸಾಲದ್ದಕ್ಕೆ ಅವನ ಕುಕೃತ್ಯಗಳಿಗೆ ಇಂಧನ ಸಚಿವ ಡಿ.ಕೆ.ಶಿವ ಕುಮಾರ್‌ರ ನಾಮಫಲಕ ಇಟ್ಟು ಹೋಗುತ್ತಿದ್ದಾನೆ. ಇದು ಬಳ್ಳಾರಿ ಕಾಂಗೈ ಮಟ್ಟಿಗೆ ಹಾಗೂ ಸಚಿವ ಡೀಕೇಶಿಯ ರಾಜಕೀಯ ಅಭ್ಯು ದಯದ ವಿಚಾರಕ್ಕೆ ಹಿತಕರ ಬೆಳವಣಿಗೆಯಲ್ಲ. ಸತೀಶ್ ಬಿಲ್ಲಾಡಿ ವರದಿ ಯಾದವ ಜನಾಂಗದ ಹುಟ್ಟು-ಮುಟ್ಟಿನ ಸಮಸ್ಯೆಗೆ ಉಮಾಶ್ರೀ ಮದ್ದು! ರಾಜ್ಯದಲ್ಲಿರುವ ಯಾದವ ಜನಾಂಗದ ಕೆಲವು ಆಚರಣೆಯ ಬಗ್ಗೆ ಈಗ ರಾಜ್ಯಾದ್ಯಂತ ಚರ್ಚೆಯಾಗು ತ್ತಿದೆ. ಮುಟ್ಟು ಮತ್ತು ಹುಟ್ಟಿನ ಸಂದರ್ಭದಲ್ಲಿ ಮಹಿಳೆಯರನ್ನು ಊರ ಹೊರಗೆ ಇಡುವ ಪದ್ಧತಿ ಯನ್ನು ತಡೆಗಟ್ಟುವ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಹಾಗೂ ಮಹಿಳಾ ಆಯೋ ಗದ ಅಧ್ಯಕ್ಷೆ ಮಂಜುಳಾ ಮಾನಸ ಸೇರಿದಂತೆ ಹಲ ವರು ಪ್ರಯತ್ನಿಸುತ್ತಿದ್ದಾರೆ. ಉಮಾಶ್ರೀ ಜನರ ಮನವೊಲಿಸುವ ರೀತಿಯಲ್ಲಿ ಮಾತನಾಡಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆ ಪದ್ಧತಿಯನ್ನು ತೊಡೆದು ಹಾಕಲು ಯತ್ನಿಸುತ್ತಿದ್ದರೆ, ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ಗಟ್ಟಿ ಧ್ವನಿಯಲ್ಲಿ ಮಾತ ನಾಡಿ ಯಾದವ ಜನಾಂಗದ ಮುಖಂಡರು ಮತ್ತು ಸಾರ್ವಜನಿಕರ ಮಧ್ಯದ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ಕಾಂತರಾಜ್ ಅರಸ್ ವರದಿ ಬ್ರಹ್ಮಕುಮಾರಿ ಮಂದೇಲಿ ಬಸವರಾಜನೇ ತೋಳ! ಹುಬ್ಬಳ್ಳಿ ಉಪವಲಯದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಅಂಗಳದಿಂದ ಹಗರಣಗಳು ಎದ್ದು ಬಂದಿವೆ. ಇಂತಹದೊಂದು ವಿವಾದ ಹುಟ್ಟಿಕೊಳ್ಳುತ್ತಿರುವುದು ಇದೇ ಮೊದಲು. ಅಲ್ಲಿಯ ಮುಖ್ಯಸ್ಥ ಬ್ರಹ್ಮಕುಮಾರ ಡಾ ಬಸವರಾಜ ರಾಜಋಷಿ ಮತ್ತು ಅವರ ಬಲಗೈ ಬಂಟರಾದ ನಿರ್ಮಲಾ, ಜಯಂತಿ ಅವರ ವಿರುದ್ಧ ಭ್ರಷ್ಟಾಚಾರ, ದಬ್ಬಾಳಿಕೆ, ದೌರ್ಜನ್ಯ, ಚಾರಿತ್ರ್ಯವಧೆ, ಮಾನಸಿಕ ಹಿಂಸೆ ಸೇರಿದಂತೆ ಹಲವು ಆರೋಪಗಳನ್ನು ಮಡಿವಾಳದ ಸಹೋದರಿಯರಾದ ಬ್ರಹ್ಮಕುಮಾರಿ ಮಹಾಲಕ್ಷ್ಮೀ ಮತ್ತು ಉಷಾಕಿರಣ ಮಾಡಿದ್ದಾರೆ. ರವಿ ಕುಲಕರ್ಣಿ ವರದಿ ತುಳು ಸಾಹಿತ್ಯ ಅಕಾಡೆಮೆಗೆ ಅದೆಲ್ಲಿಂದ ವಕ್ಕರಿಸಿದ ಚಂದ್ರಹಾಸ ಚಂದ್ರಹಾಸ ರೈ! ತುಳು ಸಾಹಿತ್ಯ ಅಕಾಡೆಮಿಗೆ ನೋಂದಾಣಾಕಾರಿ ರಿಜಿಸ್ಟ್ರಾರ್ಯಾಗಿ ಕಳೆದ ನಾಲ್ಕು ಚಿಲ್ಲರೇ ವರ್ಷ ಗಳಿಂದ ಅಮರಿಕೊಂಡಿರುವ ಕಡು ಭ್ರಷ್ಟ ಅಧಿಕಾರಿಯ ಹೀನ ವೃತ್ತಾಂತ ವಿದು. ಪುತ್ತೂರಿನ ಚಂದ್ರಹಾಸ ರೈ ಎಂಬ ಈ ಗಡವ ಅದ್ಯಾವ ಮಾಯೆಯಲ್ಲಿ ಮಂಗಳೂರಿನ ತುಳು ಸಾಹಿತ್ಯ ಅಕಾಡೆಮಿಗೆ ವಕ್ಕರಿಸಿದನೋ ಇಡೀ ಅಕಾಡೆಮಿಯೇ ಹಡಾಲೆದ್ದು ಕುಳಿತಿದೆ. ವರ್ಷವೊಂದಕ್ಕೆ ಐವತ್ತರಿಂದ ಅರವತ್ತು ಲಕ್ಷದ ತನಕ ಅನುದಾನ ಹರಿದು ಬರುತ್ತಿದ್ದರೂ ಅವಿವೇಕಿ ಚಂದ್ರಹಾಸನ ಕೈಗೇ ಸಿಕ್ಕು ಸರ್ಕಾರಿ ಹಣ ಸಮುದ್ರದ ಪಾಲಾಗುತ್ತಿದೆ. ಇಂತಹ ಐನಾತಿಯನ್ನು ತುಳು ಸಾಹಿತ್ಯ ಅಕಾಡೆಮಿಗೆ ಕೈ ಹಿಡಿದು ಕರೆತಂದ ಕೀರ್ತಿ ಮಾತ್ರ ಪಾಲ್ತಾಡಿ ರಾಮ ಕೃಷ್ಣಾ ಚಾರ್ ಎಂಬ ಹಿರಿಯ ಜೀವಕ್ಕೆ ಸಲ್ಲುತ್ತದೆ. ವಸಂತ್ ಗಿಳಿಯಾರ್ ನೇವಿ ಕಾಲಂ ಯಾರು ಬಂದರು ಕಳೆದಿರುಳು, ಗಾಳಿಯೇ ಹೇಳಿ ತೆರಳು ಕುಡುವಿ ಮತ್ತೆ ಕಳೆದ ರಾತ್ರಿಯ ಘಟನೆಗಳನ್ನೆಲ್ಲಾ ನೆನಪಿಗೆ ತಂದುಕೊಂಡಳು. ಯಾವುದೋ ಪ್ರಾಣಿಯೊಂದು ತನ್ನ ಮನೆಯತ್ತಲೇ ಬರುತ್ತಿದೆ ಅಂತ ಅನ್ನಿಸಿತು ಹೆಜ್ಜೆ ಸದ್ದಿಗೆ. ಕ್ರಮೇಣ ಅದು ಪ್ರಾಣಿಯದ್ದಲ್ಲ, ಮನುಷ್ಯರದ್ದೇ ಅಂತ ಅನ್ನಿಸಿತು ಕೂಡ. ಹಾಗಿದ್ದರೆ ಕಳ್ಳರಿರಬಹುದೇ, ಗಂಡ ಇಲ್ಲದ್ದನ್ನು ಗಮನಿಸಿ ಯಾರಾದರೂ ನನ್ನ ಕೆಡಿಸಲು ಇತ್ತ ಬಂದಿರಬಹುದೇ ಹಾಗಿದ್ದರೆ ಇವತ್ತು ಗಂಡನಿಲ್ಲದೇ ನಿರಾಯುಧಳಾಗಿ ನಾನು ಸಿಕ್ಕಿಬೀಳು ತ್ತೇನೆ, ಅಲ್ಲಿಗೆ ನನ್ನ ಜೀವನ ಇಲ್ಲಿಗೆ ಮುಗಿಯಿತು, ಅಷ್ಟಕ್ಕೂ ಒಂಚೂರೂ ಒಡವೆಯಾಗಲೀ, ಬೆಲೆಬಾಳುವ ವಸ್ತ್ರವಾಗಲೀ, ಹಣವಾಗಲೀ ಇಲ್ಲದ ಈ ಮನೆಗೆ ಯಾರು ತಾನೇ ಕಳ್ಳತನಕ್ಕೆ ನುಗ್ಗುತ್ತಾರೆ ಅಂತ ಒಂದು ಪ್ರಶ್ನೆ ಬಂದು ಹೋಯಿತಾದರೂ ಹೆಚ್ಚು ಯೋಚಿಸದೇ ಕೈಲಿ ಹಿಡಿದುಕೊಂಡಿದ್ದನ್ನು ಎತ್ತಿ ಹೊಡೆದೇ ಬಿಟ್ಟಳು. ನೇವಿ ಜಾನಕಿ ಕಾಲಂ ಡುಮ್ಮಣ್ಣಗಳ ಸನ್ನಿಯಲ್ಲಿ ಕಂಗಾಲಾಗಿ.. ನಾನು ಅಲ್ಲಿಗೆ ಹೋದಾಗ ಭಾನುವಾರ. ಭಾನುವಾರ ಆ ಚಿಕಿತ್ಸಾ ಕೇಂದ್ರಕ್ಕೆ ರಜೆಯೆಂದು ನನಗೆ ಗೊತ್ತಿರಲಿಲ್ಲ. ಬಸ್ಸಿಳಿಯುತ್ತಿದ್ದಂತೆಯೇ ನಾನು ನಂದೀಶ ಕೊಟ್ಟ ನಂಬರಿಗೆ ಫೋನ್ ಮಾಡಿದ್ದೆ. ನಾಲ್ಕೈದು ಸಲ ಫೋನ್ ಮಾಡಿ ನಂತರ, ಬಾಡಿದ ದನಿಯ ಒಬ್ಬ ವ್ಯಕ್ತಿ ಫೋನೆತ್ತಿಕೊಂಡು ಅತೀ ಕ್ಷೀಣವಾಗಿ ಹಲೋ ಎಂದಿತು. ನಾನು ನನ್ನ ಪೂರ್ವಾಪರ ಹೇಳಿ ಕೊಂಡೆ. ಡಾಕ್ಟರ್ ನಂದೀಶ್ ಕಡೆಯ ಗಿರಾಕಿ ನಾನು ಅಂತ ಗೊತ್ತಾದ ಮೇಲೂ ಆ ವ್ಯಕ್ತಿಯ ಫೋನ್ ಚರ್ಯೆಗಳೇನೂ ಬದಲಾಗಲಿಲ್ಲ. ಒಂದು ಆಟೋ ಹಿಡ್ಕಂಡು ಚಿಕಿತ್ಸಾ ಕೇಂದ್ರಕ್ಕೆ ಬನ್ನಿ ಇವರೇ... ಎಂದು ಅದೇ ಬಾಡಿದ ದನಿಯಲ್ಲಿ ಹೇಳಿತು. ಬಂದು ಯಾರನ್ನು ನೋಡಲಿ ಅಂತ ಹೇಳುವ ಮೊದಲೇ ಫೋನ್ ಸಂಪರ್ಕ ಕಡಿದುಹೋಗಿತ್ತು. ಜಾನಕಿ ಒಲಿದಂತೆ ಹಾಡುವೆ ಕಾಲಂ ನೆಹರೂ ಇಂದಿರಾ ಮೋದಿ ಎಂಬ ಚಕ್ರವರ್ತಿಗಳ ಪ್ರಜಾಪ್ರಭುತ್ವದಲ್ಲಿ ಅಂದು ಮಗಳೊಂದಿಗೆ ಹರಟಿದ ಮೇಲೆ ನನ್ನನ್ನ ತೀವ್ರವಾಗಿ ಕಾಡಿದ್ದು: ನಾವು ನಿಜಕ್ಕೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಪೇಕ್ಷಿಸುತ್ತೇವೆಯೆ ಅಥವಾ ಸಾಮ್ಯ ವಾದ! ಏಕಪ್ರಭುತ್ವವನ್ನು ಇಷ್ಟಪಡುತ್ತೇವೆಯೆ ಎಂಬ ಅಂಶ. ಕಳೆದ ಲೋಕಸಭಾ ಚುನಾವಣೆಯನ್ನೆ ತೆಗೆದುಕೊಳ್ಳಿ. ಬಹುಶಃ ಯಾರೂ ಬಿಜೆಪಿಗೆ ಮತ ನೀಡಿ ಎಂದು ಕೇಳಲಿಲ್ಲ. ಕಟ್ಟಾ ಭಾಜಪದವರು ಕೂಡಾ ಕೇಳಿದ್ದು ಮೋದಿಗಾಗಿ ಮತ ನೀಡಿ ಎಂದು. ಕೋಟ್ಯಂ ತರ ಯುವ ಜನರ ಕಣ್ಣಿಗೆ ಮೋದಿ ಬದಲಾವಣೆಯ ಹರಿಕಾರರಂತೆ ಕಂಡರು ಅಥವಾ ಹಾಗೆ ಬಿಂಬಿಸಲ್ಪಟ್ಟರು. ಚಂದ್ರಶೇಖರ ಆಲೂರು