Hi Bangalore


Buy Now @ ₹ 15.00 Preview
ಹಾಯ್ ಬೆಂಗಳೂರ್! : ಸಂಪುಟ : ೧೯, ಸಂಚಿಕೆ : ೩೮, ಜೂನ್ ೧೯, ೨೦೧೪ ಬೆಲೆ : ೧೫ ರು ಮುಖಪುಟ ಲೇಖನ ಹಂತಕೀ ನಿನ್ನ ಸುಖಕ್ಕೆ ಹೆಂಗಸರೇ ಬೇಕಾ ಅಜ್ಜಿಯನ್ನೇ ಬಲಿ ತೆಗೆದುಕೊಂಡಳು! ಮೈಸೂರಿನ ರಾಮರತ್ನಂ ಈಗ್ಗೆ ಕೆಲದಿನಗಳ ಹಿಂದೆ ಬೆಂಗಳೂರಿನಲ್ಲಿರುವ ಮಗಳು ಲಕ್ಷ್ಮಿದೇವಿಯ ಮನೆಗೆ ಬಂದಿದ್ದರು. ಅಸಲಿಗೆ ಲಕ್ಷ್ಮಿದೇವಿ ಮತ್ತವರ ಪತಿ ಅವೆನ್ಯೂರಸ್ತೆಯ ಖಾಸಗಿ ಆಭರಣ ಅಂಗಡಿಯಲ್ಲಿ ಕೆಲಸಕ್ಕಿದ್ದಾರೆ. ಅವರ ದಾಂಪತ್ಯಕ್ಕೆ ವರ್ಷಾ ಮತ್ತು ಹರ್ಷಿತಾ ಎಂಬ ಇಬ್ಬರು ಹೆಣ್ಣುಮಕ್ಕಳು. ಮೊದಲ ಮಗಳು ವರ್ಷಾ ಅಲ್ಲೇ ಚಾಮರಾಜಪೇಟೆಯ ಖಾಸಗಿ ಕಾಲೇಜೊಂದರಲ್ಲಿ ಅಂತಿಮ ವರ್ಷದ ಬಿಸಿಎಂ ಕಲಿಯುತ್ತಿದ್ದಾಳೆ. ಆದರೆ ಈ ಹುಡುಗಿ ಹರ್ಷಿತಾ ಎಸೆಸೆಲ್ಸಿ ಡ್ರಾಪ್ ಔಟು. ಆದರೆ ವಯಸ್ಸಿಗೆ ಮೀರಿದ ಮೋಜು-ಮಸ್ತಿಯ ಚಟ ಈಕೆಗಿದೆ. ಜೊತೆಗೆ ಸ್ನೇಹಿತೆಯರೊಂದಿಗೆ ಹೊತ್ತಲ್ಲದ ಹೊತ್ತಿನಲ್ಲಿ ಪಾರ್ಟಿ ಮಾಡುವ ತೆವಲೂ ಇದೆ. ಅದಕ್ಕಾಗಿ ಈಕೆ ಚಿಕ್ಕವಯಸ್ಸಿಗೇ ಖಾಸಗಿ ಕಂಪನಿಗಳಲ್ಲಿ ಕೆಲಸಕ್ಕೆ ಸೇರಿದ್ದಳು. ಲಕ್ಷೀಸಾಗರ ಸ್ವಾಮಿಗೌಡ ಖಾಸ್‌ಬಾತ್ ದಾಂಪತ್ಯವನ್ನು ಉಳಿಸುವುದು ಸಹನೆ ಮತ್ತು ಪ್ರೀತಿ ಮಾತ್ರ! ಇವತ್ತು ನಮ್ಮ ಮದುವೆಯ ಚಪ್ಪರಕ್ಕೆ ಮೂವತ್ತೈದು ವರ್ಷ. ಅದೇನೂ ದೊಡ್ಡ ಹೆಗ್ಗಳಿಕೆಯಲ್ಲ. ಮದುವೆಯ ಐವತ್ತನೆಯ ಆನಿವರ್ಸರಿ ಮಾಡಿಕೊಂಡವರು ಒಟ್ಟಿಗೇ ಅರವತ್ತು ವರ್ಷ ಬದುಕಿ ಅರ್ಧ ಗಂಟೆಯ ಹಿಂಚುಮುಂಚಿನಲ್ಲಿ ತೀರಿಕೊಂಡವರು, ದಾಂಪತ್ಯ ಅಂದರೆ ಹೀಗಿರಬೇಕು ನೋಡು ಅಂತ ಎಲ್ಲರಿಂದಲೂ ಅನ್ನಿಸಿಕೊಂಡವರು ಲಕ್ಷಾಂತರ ಜನರಿದ್ದಾರೆ. ಅವರೆಲ್ಲರನ್ನೂ ಮಾತನಾಡಿಸಿ ಕೇಳಿ ನೋಡಿ ಆರ್.ಬಿ ಹಲೋ ನರಹರ ಅಂದ ಸಿದ್ದುಗೆ ಹರೋಹರ ಅನ್ನಿಸದೆ ಬಿಡುತ್ತಾರಾ ಮೋದಿ ದಿಲ್ಲಿ ಗದ್ದುಗೆಯ ಮೇಲೆ ಕುಳಿತ ಪ್ರಧಾನಿ ನರೇಂದ್ರ ಮೋದಿ ಹಾಗೂ ಕರ್ನಾಟಕದ ಸಿಎಂ ಸಿದ್ದರಾಮಯ್ಯ ಮುಂದಿನ ದಿನಗಳಲ್ಲಿ ಪರಸ್ಪರ ಕಚ್ಚಾಡುವ ಲಕ್ಷಣಗಳು ಈಗಾಗಲೇ ಸ್ಪಷ್ಟವಾಗತೊಡಗಿವೆ. ಕಾವೇರಿ ನಿರ್ವಹಣಾ ಮಂಡಳಿ ವಿಚಾರದಲ್ಲಿ ಮೋದಿ ಅವರು ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ವನ್ನು ಆಟ ಆಡಿಸುವುದು ನಿಜ. ಈ ಸಮಸ್ಯೆಗೆ ಕರ್ನಾಟಕದ ಪರವಾಗಿ ಅವರು ನಿಂತುಬಿಡುತ್ತಾರೆ ಎಂದು ಭಾವಿಸುವುದು ಕಷ್ಟ. ರವಿ ಬೆಳಗೆರೆ ಬಾಟಮ್ ಐಟಮ್ ನಂಬಿಕೆ ಮತ್ತು ಆಚರಣೆಗಳ ನಡುವಿನ ಗೆರೆ.. ಮಾತು ಮಿತಿ ಮೀರಬಾರದು, ಬರವಣಿಗೆ ಹದ ಮೀರಬಾರದು. ಹಾಗಾಗದೇ ಹೋದಾಗ ಸಾರ್ವಜನಿಕ ವೇದಿಕೆಯಲ್ಲೇ ‘ಮೂತ್ರ ವಿಸರ್ಜನೆ’ಯಾಗುತ್ತದೆ, ಅದು ಪತ್ರಿಕೆಯ ಮುಖಪುಟದಲ್ಲೇ ಸೋರಿ ಹೋಗುತ್ತದೆ. ಸಜ್ಜನರು ಮೂಗು ಮುಚ್ಚಿಕೊಳ್ಳುತ್ತಾರೆ. ಮಿಕ್ಕವರು ಅದನ್ನೇ ಜರಡಿ ಹಿಡಿದು ಆಸ್ವಾದಿಸುತ್ತಾರೆ. ಮೋರಿ ನೀರು ಬೀದಿಗೆ ಬರುತ್ತದೆ, ಮನಸ್ಸುಗಳು ಮಲಿನವಾಗುತ್ತವೆ. ಕೆಲವರಿಗೆ ಐಡೆಂಟಿಟಿ ಕ್ರೈಸಿಸ್, ಇನ್ನು ಕೆಲವರ ಐಡೆಂಟಿಟಿಯೇ ಅವರಿಗೆ ಕ್ರೈಸಿಸ್ ತಂದೊಡ್ಡುತ್ತದೆ. ಮೊದಲನೆಯ ವರ್ಗಕ್ಕೆ ಸೇರಿದವರಿಗೆ ವೇದಿಕೆ ಒದಗಿಸುವುದಕ್ಕೆ ಫೇಸ್‌ಬುಕ್ಕಿನಂಥಾ ಸಾಮಾಜಿಕ ತಾಣಗಳಿವೆ, ಎರಡನೆಯ ವರ್ಗದವರಿಗೆ ಪತ್ರಿಕೆಗಳಿವೆ, ಚಾನೆಲ್ಲುಗಳಿವೆ. ರವೀ