Hi Bangalore


Buy Now @ ₹ 15.00 Preview
ಹಾಯ್ ಬೆಂಗಳೂರ್! : ಸಂಪುಟ : ೧೯, ಸಂಚಿಕೆ : ೩೬, ಜೂನ್ ೫, ೨೦೧೪ ಬೆಲೆ : ೧೫ ರು ಮುಖಪುಟ ಲೇಖನ ಗಜಕೇಸರಿ ಜೊತೆ ಸುಮ್ಮನೆ ಬಂದೆಯಾ ಅಮ್ಮೂ ಯಶ್ ಸಿನೆಮಾ ಠುಸ್! ಯಶ್! ಈಗ ಕನ್ನಡ ಚಿತ್ರರಂಗದ ಬಹು ಬೇಡಿಕೆಯ ನಟ. ಮೈಸೂರಿನ ಈ ಹುಡುಗ ಗಾಂಧಿನಗರದಲ್ಲಿ ಬೆಳೆದದ್ದೇ ನಿಜಕ್ಕೂ ಒಂದು ಸವಾಲು. ದೊಡ್ಡ ದೊಡ್ಡ ಸ್ಟಾರ್‌ಗಳ ಸಿನೆಮಾಗಳೇ ಪ್ರೇಕ್ಷಕರಿಲ್ಲದೇ ಭಣಗುಡುತ್ತಿರುವಾಗ ಯಶ್‌ನ ಇತ್ತೀಚಿನ ಸಿನೆಮಾಗಳು ಸಾಲು-ಸಾಲಾಗಿ ಶತದಿನೋತ್ಸವಗಳನ್ನು ಆಚರಿಸುತ್ತಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆಯೇ ಸರಿ. ಕೋಲು ಮುಖ, ಅದ್ಭುತ ಡ್ಯಾನ್ಸಿಂಗ್, ಫೈಟಿಂಗ್‌ಗಳಿಂದಲೇ ಅಭಿಮಾನಿ ಬಳಗವನ್ನು ಸಂಪಾದಿಸಿದ ಯಶ್ ಈಗ ಜನಪ್ರಿಯ ಸ್ಟಾರ್‌ಗಳ ಪೈಕಿ ಒಬ್ಬ. ಕಳೆದೆರಡು ವರ್ಷಗಳಿಂದ ಸೋಲಿಲ್ಲದ ಸರದಾರ ಎಂಬ ಕೀರ್ತಿಗೆ ಭಾಜನನಾಗಿರುವ ಯಶ್‌ನ ಕಾಲ್‌ಶೀಟ್ ಅಷ್ಟು ಸುಲಭವಾಗಿ ದಕ್ಕುವುದಿಲ್ಲ. ಲೋಕೇಶ್ ಕೊಪ್ಪದ್ ಖಾಸ್‌ಬಾತ್ ನಡುರಾತ್ರಿ ಬಂದು ಕದ ತಟ್ಟಿದವರು ಹಗಲಲ್ಲಿ ಬೆನ್ನಿರಿದರು! ನೀವು ಉಪಕಾರ ಮಾಡಿ, ತಲ್ಲಣದಲ್ಲಿದ್ದವನಿಗೆ ಮೈದಡವಿ ಬೆನ್ತಟ್ಟಿ ಹೋಗಿ. ಆತ ಮೆಲ್ಲಗೆ ಬಂದು ಹಿಂದಿನಿಂದ ಒಂದು ಚೂರಿ ಹೆಟ್ಟಿ ಹೋಗುತ್ತಾನೆ! ಮನುಷ್ಯತ್ವದ ಮೇಲೆ ನಿಮಗೆ ಆಗ ಹೋಗುತ್ತದೆ ವಿಶ್ವಾಸ. ತುಂಬ ದಿನ ಅಲ್ಲದಿದ್ದರೂ atleast ಕೆಲವು ದಿನಗಳ ತನಕ ಯಾರಿಗೂ ಉಪಕಾರ ಮಾಡಲೇ ಬಾರದೆಂದು ನಿಮ್ಮ ಮನಸ್ಸು ನಿರ್ಧರಿಸುತ್ತದೆ. ಆದರೆ ಮಾರನೆ ದಿನವೇ ಯಾರೋ ಬಂದು ಕದ ತಟ್ಟುತ್ತಾರೆ, ನಿಮಗಿಂತ ನಿರ್ಭಾಗ್ಯರು. ನಿಮಗಿಂತ ತೊಂದರೆಯಲ್ಲಿರುವವರು ನಿಮಗಿಂತ ಅಸಹಾಯಕರು. ನೀವು ಬಾಗಿಲು ತೆರೆ ಯದೆ ಇರಲಾರಿರಿ. ಆರ್.ಬಿ ಹಲೋ ವ್ಯವಸ್ಥೆಯನ್ನು ಸರಿಪಡಿಸುವ ಅದೃಷ್ಟ ಬಿಜೆಪಿಗೇ ಸಿಕ್ಕಿದೆ! ದಿಲ್ಲಿ ಗದ್ದುಗೆಯ ಮೇಲೆ ವಿರಾಜಮಾನವಾದ ನರೇಂದ್ರ ಮೋದಿ ಸಚಿವ ಸಂಪುಟದಲ್ಲಿ ಕರ್ನಾಟಕದ ಮೂರು ಮಂದಿ ಸೇರ್ಪಡೆಯಾಗಿದ್ದಾರೆ. ಅನಂತ ಕುಮಾರ್, ಡಿ.ವಿ.ಸದಾನಂದಗೌಡ ಹಾಗೂ ಜಿ.ಎಂ.ಸಿದ್ದೇಶ್. ಈ ಪೈಕಿ ಅನಂತಕುಮಾರ್‌ಗೆ ಈಗಾ ಗಲೇ ಕೇಂದ್ರ ಮಂತ್ರಿಯಾದ ಅನುಭವವಿದೆ. ಬಿಜೆಪಿಯಂತಹ ರಾಷ್ಟ್ರೀಯ ಪಕ್ಷಕ್ಕೆ ಪ್ರಧಾನ ಕಾರ್ಯ ದರ್ಶಿಯಾಗಿ ಕೆಲಸ ಮಾಡಿದ ಶಕ್ತಿಯಿದೆ. ಅದೇ ರೀತಿ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರಿಗೂ ಆಡಳಿತದ ಅನುಭವವಿದೆ. ರವಿ ಬೆಳಗೆರೆ ಬಾಟಮ್ ಐಟಮ್ ಕಾಂಗ್ರೆಸ್ ಸರ್ಕಾರ ಮತ್ತು ನಮ್ಮ ಸಂಸಾರ ಎಲ್ಲಾ ಅಮ್ಮಂದಿರಂತೆ ಆಕೆಗೂ ತನ್ನ ಮಗನಂಥಾ ಮುಗ್ಧ ಮತ್ತು ಒಳ್ಳೆಯ ಹುಡುಗ ಜಗತ್ತಲ್ಲೆಲ್ಲೂ ಸಿಗಲಾರ ಎಂಬ ನಂಬಿಕೆ. ಯಾವುದೇ ದುಶ್ಚಟಗಳಿಲ್ಲ, ವಿಪ್ರೋ ದಂಥ ಒಳ್ಳೆಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಮದುವೆ ಪ್ರಸ್ತಾಪ ಮುಂದಿಟ್ಟ ಕೂಡಲೇ ಆತ ಏನು ಹೇಳಬಹುದು ಸದ್ಯಕ್ಕೆ ಒಂಟಿಯಾಗಿ ಬದುಕುವುದರಲ್ಲೇ ತಾನು ಸಂತೋಷವಾಗಿದ್ದೇನೆ ಮತ್ತು ಮದುವೆಗೆ ಮುಂಚೆ ಲೈಫಲ್ಲಿ ಸೆಟ್ಲ್ ಆಗಬೇಕು -ಈ ಮಾತು ಆತನ ಬಾಯಿಂದ ಬರುತ್ತದೆ ಅನ್ನುವುದೂ ಆಕೆಗೆ ಗೊತ್ತಿದೆ. ರವೀ ವರದಿ ಶಿವಮೊಗ್ಗ: ಸುಮ್ಮನೆ ಕೂರುವ ಕಿಮ್ಮನೆಗಿಂತ ಮಾಗಿದ ಕಾಗೋಡು ಬೆಸ್ಟು! ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಿಂದ ಕೈಬಿಡುವ ಸಚಿವರ ಪಟ್ಟಿಯಲ್ಲಿ ಪ್ರಾಥಮಿಕ ಹಾಗು ಪೌಢ ಶಿಕ್ಷಣ ಸಚಿವರಾದ ಕಿಮ್ಮನೆ ರತ್ನಾಕರ್ ಹೆಸರಿರುವುದು ಶಿವಮೊಗ್ಗ ಮತ್ತು ತೀರ್ಥಹಳ್ಳಿಯ ಜನರ ಪಾಲಿಗೆ ಶಾಕ್ ನೀಡುವ ಸಂಗತಿಯೇನೂ ಆಗಿಲ್ಲ! ಸಿದ್ದರಾಮಯ್ಯ ಸಂಪುಟದಲ್ಲಿರುವ ಯೋಗ್ಯ ಸಚಿವರುಗಳಲ್ಲಿ ಕಿಮ್ಮನೆ ಕೂಡ ಒಬ್ಬರು ಎಂಬುದಾಗಿ ಬೆಂಗಳೂರಿನ ಮಾಧ್ಯಮದ ಮಂದಿಯ ಒಂದು ವರ್ಗ ಬಿಂಬಿಸುತ್ತಲೇ ಬಂದಿದೆಯಾದರೂ ಜಿಲ್ಲಾ ಉಸ್ತುವಾರಿ ಸಚಿವರಾಗಿ ಶಿವಮೊಗ್ಗ ಜಿಲ್ಲೆಗೆ, ಶಾಸಕರಾಗಿ ತೀರ್ಥಹಳ್ಳಿ ಕ್ಷೇತ್ರಕ್ಕೆ ಕಾಂಗ್ರೆಸ್ ಸರ್ಕಾರದ ಈ ಒಂದು ವರ್ಷದಲ್ಲಿ ಅವರ ಕೊಡುಗೆ ಶೂನ್ಯ ಎಂಬುದು ಈ ಭಾಗದ ಜನರ ಅಭಿಪ್ರಾಯ. ವರದಿಗಾರ ವರದಿ ಬೆಂಗಳೂರಿನ ರಿಯಲ್ ಎಸ್ಟೇಟ್ ಮಾಫಿಯಾ! ಯಲಹಂಕದ ನರಸೇಗೌಡನ ಕೊಲೆಗೆ ಸಹೋದರನೇ ಸುಪಾರಿ ನೀಡಿದ! ಬೆಂಗಳೂರಿನ ರಿಯಲ್ ಎಸ್ಟೇಟ್ ಮಾಫಿಯಾಕ್ಕೆ ಮತ್ತೊಂದು ಹೆಣ ಬಿದ್ದಿದೆ. ನಾಗರ ಬಾವಿಯ ರಿಯಲ್ ಎಸ್ಟೇಟ್ ಕುಳ ಕೃಷ್ಣಪ್ಪನ ಕಿಡ್ನಾಪ್ ಅಂಡ್ ಮರ್ಡರ್ ಸೇರಿದಂತೆ ಇತ್ತೀಚೆಗೆ ರಿಯಲ್ ಎಸ್ಟೇಟ್ ಮಾಫಿಯಾ ಅನೇಕರ ಆಹುತಿ ತೆಗೆದುಕೊಳ್ಳುತ್ತಿರುವುದು ದುರಂತದ ಸಂಗತಿಯೇ ಸರಿ. ಅದರ ಮುಂದುವರೆದ ಭಾಗವೇ ನಾಗೇನಹಳ್ಳಿಯ ನರಸೇಗೌಡ ಎಂಬ ರಿಯಲ್ ಎಸ್ಟೇಟ್ ಏಜೆಂಟನ ಕೊಲೆ. ಲೋಕೇಶ್ ಕೊಪ್ಪದ್ ವರದಿ ಸಭ್ಯ ಅಧಿಕಾರಿ ರವೀಂದ್ರನಾಥ್ ಫೊಟೋ ಕ್ಲಿಕ್ಕಿಸಿದ್ದು ನಿಜವೇ ರಾಜ್ಯ ಪೊಲೀಸು ಇಲಾಖೆಯ ಮಾನ ಬೀದಿಗೆ ಬಿದ್ದು ಹರಾಜಾಗಿ ಹೋಗಿದೆ. ಈಗ್ಗೆ ಕೆಲ ತಿಂಗಳ ಹಿಂದಿನ ಮಾತು. ಮೈಸೂರಿನ ಪೊಲೀಸರು ಅಕ್ರಮವಾಗಿ ಸಾಗಾಟವಾಗುತ್ತಿದ್ದ ಹವಾಲಾ ಹಣ ಕದ್ದು ಸಿಗೇಬಿದ್ದು ಜೈಲು ಸೇರಿದ್ದರು. ಅವತ್ತು ಮೈಸೂರಿನ ಪೊಲೀಸರ ಕುರಿತು ಖುದ್ದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಆಕ್ರೋಶಗೊಂಡಿದ್ದರು. ಈ ಘಟನೆಯಿನ್ನೂ ಜನರ ನೆನಪಿನಿಂದ ದೂರಾಗಿಲ್ಲ. ಇದರ ಬೆನ್ನಿಗೆ ಈಗ ರಾಜ್ಯ ಸಶಸ್ತ್ರ ಮೀಸಲು ಪೊಲೀಸು ಪಡೆಯ ಎಡಿಜಿಪಿ ಡಾ ಪಿ.ರವೀಂದ್ರನಾಥ್ ಮತ್ತೊಂದು ಯಡವಟ್ಟು ಮಾಡಿಕೊಂಡಿದ್ದಾರೆ. ಲಕ್ಷ್ಮೀಸಾಗರ ಸ್ವಾಮಿಗೌಡ ವರದಿ ಚಿತ್ರದುರ್ಗ: ಅಡ್ಡಕಸುಬಿ ಜಡೇಬೋರನ ಬುಡಕ್ಕೆ ಬಿಸಿನೀರು! ಚಿತ್ರದುರ್ಗದ ಕುಖ್ಯಾತ ಕ್ಯಾಪಿಟೇಶನ್ ಕುಳ ಡಿ.ಬೋರಪ್ಪನ ಮೈಮೇಲೆ ಕೇಸು ಬಿದ್ದಿದೆ. ಜಿಲ್ಲೆಯ ಬಿಳಿಚೋಡು ಠಾಣೆಯ ಪೊಲೀಸರು ಬೋರಪ್ಪ ಅಲಿ ಯಾಸ್ ಜಡೇ ಬೋರಪ್ಪನ ವಿರುದ್ಧ ದಂಪತಿಗಳನ್ನು ಆತ್ಮಹತ್ಯೆಗೆ ಪ್ರಚೋದಿಸಿದ ಆರೋಪ ಹೊರಿಸಿ ಎಫ್.ಐ.ಆರ್. ಹರಿದಿದ್ದಾರೆ. ಬೋರಪ್ಪನ ಜೊತೆಗೆ ಆತನ ಪತ್ನಿ ಯಶೋಧಮ್ಮ ಹಾಗೂ ಶರಣಪ್ಪ ಎಂಬುವವರ ವಿರುದ್ಧ ಕೇಸು ದಾಖಲಾಗಿದೆ. ಇದರ ಬೆನ್ನಿಗೆ ದಾವಣಗೆರೆಯಲ್ಲಿರುವ ಹಿರಿಯ ಪೊಲೀಸ್ ಅಕಾರಿಯೊಬ್ಬರು ಜಗಳೂರು ಪೊಲೀಸರ ಬಳಿ ವಂಚಕ ಬೋರಪ್ಪನ ಪರವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ವರದಿ ಖಡಕ್ಕು ಎಸ್ಪಿ ಅಮಿತ್‌ಸಿಂಗ್ ಮತ್ತೆ ಲಾಠಿ ಬೀಸಿದರು ನೋಡಿ! ಗುಲ್ಬರ್ಗಾದ ಎಸ್ಪಿ ಅಮಿತ್‌ಸಿಂಗ್ ಕಡೆಗೂ ತಮ್ಮ ಸೊಂಟದ ಬೆಲ್ಟು ಟೈಟು ಮಾಡಿಕೊಂಡಿದ್ದಾರೆ. ಈ ಹಿಂದೆ ವಜೀರ್ ಅಹ್ಮದ್ ಗುಲ್ಬರ್ಗಾ ರೇಂಜಿನ ಐಜಿಯಾಗಿದ್ದಾಗ ಎಸ್ಪಿ ಸಾಹೇಬರು ತಮ್ಮ ಪೊಲೀಸಿಂಗ್ ಅನ್ನು ಮರೆತುಬಿಟ್ಟಿದ್ದರು. ಅವರ ಪರಮ ಜಾತಿವಾದಿತನಕ್ಕೆ ಹೆದರಿ ಅಲ್ಲಿನ ಹಲಾಲು ದಂಧೆಕೋರರ ವಿರುದ್ಧ ಮುರಕೊಂಡು ಬಿದ್ದಿರಲಿಲ್ಲ. ರವಿ ಕುಲಕರ್ಣಿ ವರದಿ ಅಬ್ಬರಿಸಿದರ ಅನಂತಿಗೆ ಮೋದಿ ಕತ್ತರಿ: ರಾಜ್ಯ ಬಿಜೆಪಿಯಲ್ಲಿ ಆರಂಭವಾಗುತ್ತಾ ಗ್ಯಾಂಗ್ ವಾರ್ ಅಡ್ವಾಣಿ ಬಳಿ ಮೋದಿ ಪರವಾಗಿ ಮಾತನಾಡಿದ ಅನಂತಕುಮಾರ್ ಸಹಜವಾಗಿಯೇ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಒಳ್ಳೆಯ ಖಾತೆ ಪಡೆಯುತ್ತಾರೆ ಎಂಬ ನಿರೀಕ್ಷೆ ಇತ್ತು. ಸಾಲದ್ದಕ್ಕೆ ಐದು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಗರಿಮೆಯೂ ಇತ್ತು. ಈ ಎಲ್ಲಕ್ಕಿಂತ ಮುಖ್ಯವಾಗಿ ಅಡ್ವಾಣಿ ಜತೆ ಹೊಂದಾಣಿಕೆ ಮಾಡಿಕೊಳ್ಳಲು ಕಾರಣರಾಗಿದ್ದಕ್ಕೆ ಒಳ್ಳೆಯ ಗಿಫ್ಟು ಅನಂತಕುಮಾರ್‌ಗೆ ಸಿಗಬಹುದು ಎಂಬ ನಿರೀಕ್ಷೆ ಇತ್ತು. ರಾಜ್ಯದ ಬಿಜೆಪಿ ನಾಯಕರೂ ದಿಲ್ಲಿಗೆ ಹೋಗಿ ಬಂದ ಮೇಲೆ, ಅನಂತಕುಮಾರ್ ಹಾಗೂ ಸದಾನಂದಗೌಡ ಮಂತ್ರಿ ಆಗೋದು ಗ್ಯಾರಂಟಿ. ಆರ್.ಟಿ.ವಿಠ್ಠಲಮೂರ್ತಿ ವರದಿ ಎಡಬಿಡಂಗಿ ಯತ್ನಾಳ್ ಕಡೆಗೂ ಜೈಲು ಸೇರಿದ! ಈಗ್ಗೆ ಕೆಲ ದಿನಗಳ ಹಿಂದೆ ಜೆಡಿಎಸ್ ತೊರೆದು ಬಿಜೆಪಿಗೆ ವಾಪಸಾದ ಬಸನಗೌಡ ಪಾಟೀಲ್ ಯತ್ನಾಳ್ ವಿಜಾಪುರದ ದರ್ಬಾರ್ ಗ್ರೌಂಡ್‌ನಲ್ಲಿ ಭರ್ಜರಿ ಸಮಾವೇಶ ಮಾಡಿದ್ದರು. ಅವತ್ತು ವೇದಿಕೆಯ ಮೇಲೆ ಮೈಕಿಡಿದು ನಿಂತ ಅವರ ಅತ್ಯುಗ್ರ ಮುಸ್ಲಿಮ್ ವಿರೋಧಿ ಭಾಷಣ ಬಲು ಜೋರಿತ್ತು. ಅಂದು ಇವರ ಭಾಷಣ ಕೇಳಿದ ವಿಜಾಪುರದ ಜನ ಯತ್ನಾಳರ ಮನಸ್ಸಿನಲ್ಲಿನ್ನೂ ಊರಿಗೆ ಬೆಂಕಿ ಹಾಕುವ ಬುದ್ಧಿ ಉಳಿದಿದೆಯೆಂದೇ ಮಾತನಾಡಿದ್ದರು. ರವಿ ಕುಲಕರ್ಣಿ ವರದಿ ವಿಜಾಪುರ ಹಡಬೆದಂಧೆಕೋರರಿಗೆ ಹಗ್ಗ ಹಾಕದಿದ್ದರೆ ಬಗ್ಗುತ್ತಾರಾ ಎಸ್ಪಿ ಸಾಹೇಬರೇ ವಿಜಾಪುರದಲ್ಲಿ ಮತ್ತೆ ಹಲಾಲುದಂಧೆಗಳು ತಲೆ ಎತ್ತಿ ನಿಂತವಾ ಈ ಹಿಂದೆ ದಕ್ಷ ಎಸ್ಪಿ ಡಾ ಡಿ.ಸಿ.ರಾಜಪ್ಪರ ಕಾಲದಲ್ಲಿ ಊರು ಬಿಟ್ಟಿದ್ದ ದಂಧೆಕೋರರು ಮತ್ತೆ ವಾಪಸು ಬಂದು ತಮ್ಮ ಕಸುಬು ಆರಂಭಿಸಿಬಿಟ್ಟಿದ್ದಾರಾ ಇಂತಹದೊಂದು ಅನುಮಾನ ಈಗ ಜಿಲ್ಲೆಯ ಮಾನವಂತ ಜನರ ಮನಸ್ಸಿನಲ್ಲಿ ಮೂಡಿ ಬಿಟ್ಟಿದೆ. ಅಸಲಿಗೆ, ಈಗ್ಗೆ ಮೂರು ತಿಂಗಳ ಹಿಂದೆ ಜಿಲ್ಲೆಯಿಂದ ಎದ್ದು ಹೋದ ಎಸ್ಪಿ ಅಜಯ್ ಹಿಲೋರಿಯವರ ಜಾಗೆಗೆ ಬಂದ ರಾಮ್ ನಿವಾಸ್ ಸೇಪಟ್‌ರದು ಅದೊಂದು ರೀತಿ ಪುಣ್ಯಕೋಟಿಯಂತಹ ಮನಸ್ಸು. ರವಿ ಕುಲಕರ್ಣಿ ವರದಿ ಹಡಾಲೆದ್ದು ಹೋಗಿದ್ದ ಕಿಮ್ಸ್: ಸದ್ದಿಲ್ಲದೆ ಸರ್ಜರಿ ಮಾಡಿದ ಕಾಮತ್ ಮೇಡಂ ಎದ್ದು ಹೊರಟರು! ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಇತಿಹಾಸವೇ ಅಂತಹುದು. ಹದಗೆಟ್ಟು ಹೈದ್ರಾಬಾದ್ ಆದ ಆಸ್ಪತ್ರೆಯ ಅವ್ಯವಸ್ಥೆಯನ್ನು ಸರಿಪಡಿಸಲು ಸಾಧ್ಯವೇ ಇಲ್ಲವೇನೋ ಎನ್ನುವಂತಹ ಸ್ಥಿತಿ ಅಲ್ಲಿತ್ತು. ಈ ಹಿಂದಿದ್ದ ಕಿಮ್ಸ್‌ನ ನಿರ್ದೇಶಕರು ಅಷ್ಟೇ. ಅಭಿವೃದ್ಧಿಯ ನೆಪದಲ್ಲಿ ಆಸ್ಪತ್ರೆಯಲ್ಲಿ ಉಂಡೆದ್ದು ಹೋದರೆ ಹೊರತು ಕಿಮ್ಸ್ ಅಂಗಳವನ್ನು ಸ್ವಚ್ಛಗೊಳಿಸುವ ಕೆಲಸಕ್ಕೆ ಕೈ ಹಾಕಲೇ ಇಲ್ಲ. ಆದರೆ, ಅದ್ಯಾವತ್ತು ಈ ಕಾಲೇಜು ಮತ್ತು ಆಸ್ಪತ್ರೆಯ ಅಂಗಳಕ್ಕೆ ನಿರ್ದೇಶಕರಾಗಿ ಬೆಂಗಳೂರಿನ ಡಾ ವಸಂತಾ ಕಾಮತ್ ಎಂಬ ಗಟ್ಟಿಗಿತ್ತಿ ಹೆಣ್ಣು ಮಗಳು ಬಂದಳೋ ಅಂದಿನಿಂದಲೇ ಕಿಮ್ಸ್‌ನ ಅಂಗಳದಲ್ಲಿ ಒಂದು ಶಿಸ್ತು ಕಂಡು ಬಂದಿದ್ದು ದಿಟ. ರವಿ ಕುಲಕರ್ಣಿ ವರದಿ ಸರ್ಕಾರಿ ವೈದ್ಯರ ಸ್ವಯಂ ನಿವೃತ್ತಿ ಹಿಂದಿನ ಅಸಲಿ ಕಥೆ ಗೊತ್ತಾ ಚಿತ್ರದುರ್ಗದ ಸರ್ಕಾರಿ ಆಸ್ಪತ್ರೆಗಿದು ಕಷ್ಟದ ಕಾಲ. ಇಲ್ಲಿನ ಜಿಲ್ಲಾಸ್ಪತ್ರೆಯ ವೈದ್ಯರು ಅದೇಕೋ ಇದ್ದಕ್ಕಿದ್ದಂತೆ ಸರ್ಕಾರದ ಮುಂದೆ ವಿ.ಆರ್.ಎಸ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಹಾಗೊಂದು ವೇಳೆ ಸರ್ಕಾರ ಇವರ ಮನವಿಗೆ ನಖ್ಖೋ ಅಂದರೆ ನಿಂತನಿಲುವಿನಲ್ಲೇ ಕೈ ಯಲ್ಲಿರುವ ನೌಕರಿಗೆ ರಾಜೀನಾಮೆ ಒಗಾಯಿಸಿ ಆಸ್ಪತ್ರೆ ಯಿಂದ ಎದ್ದು ಹೊರಹೋಗುತ್ತಿದ್ದಾರೆ. ಹೀಗೆ ಸಾಲು- ಸಾಲಾಗಿ ಆಸ್ಪತ್ರೆಯ ವೈದ್ಯರು ವಿ.ಆರ್.ಎಸ್. ಪಡೆಯುತ್ತಿರುವುದರಿಂದ ಜಿಲ್ಲೆಯ ಬಡರೋಗಿಗಳು ಉತ್ತಮ ಚಿಕಿತ್ಸೆಯಿಲ್ಲದೇ ಪರದಾಡುವಂತಾಗಿ ರುವುದು ದಿಟ. ಕಾಂತರಾಜ್ ಅರಸ್ ನೇವಿ ಕಾಲಂ ಕಳೆದು ಹೋದ ಹಸುವಿಗೂ , ಕಾಣೆಯಾದ ಕುಲಶೇಖರನಿಗೂ ಅದೆಂಥ ಕೊಂಡಿ ಆ ಊರಿನ ದೌಲತ್ತುಗಳಿಗೆ ಗಡಿಯಾಗಿಯೋ, ಕಾಡಿನಿಂದ ಹರಿದು ಬರುವ ಅಪಾಯಗಳಿಗೆ ತಡೆಯಾಗಿಯೋ ಇರುವುದು ಆ ಊರಿನ ಬೆಟ್ಟ. ಅದನ್ನು ತಾಕತ್ತು ಬೆಟ್ಟ ಅಂತ ತುಂಬ ಹಿಂದಿನಿಂದಲೂ ಕರೆದೇ ರೂಢಿ. ನಿಮ್ಮ ತೊಡೆ ಮತ್ತು ಮೀನಖಂಡದ ಶಕ್ತಿ ಎಷ್ಟು ಅಗಾಧವಾಗಿದೆ ಅನ್ನುವುದನ್ನು ಪರೀಕ್ಷಿಸಲು ಸೂಕ್ತವಾದ ಬೆಟ್ಟವದು. ಒಂದೊಮ್ಮೆ ನೀವು ಅದನ್ನು ಸಂಪೂರ್ಣ ಏರಿದಿರಿ ಅಂತಾದರೆ ಖಂಡಿತ ನಿಮ್ಮ ತಾಕತ್ತು ಹೆಚ್ಚು ಅಂತ ನಿರ್ಧರಿಸುವ ಬೆಟ್ಟವೆಂದೇ ಅದಕ್ಕೆ ಇದ್ದ ಪ್ರತೀತಿ. ನೇವಿ