Buy Now @ ₹ 15.00
Preview
ಕಲ್ಲಡ್ಕನ ಶಿಷ್ಯ ಕಟೀಲು; ಏನಯ್ಯಾ ನಿನ್ನ ಪಿಟೀಲು!
ನಳಿನ್‌ಕುಮಾರ್ ಎರಡ್ಮೂರು ವರ್ಷದಿಂದ ಯಾರ್‍ಯಾರಿಗೆ ಫೋನ್ ಮಾಡಿದ್ದಾರೆಂಬುದನ್ನು ತೆಗೆದಾಗ ಅಡ್ಯಾರಿನ ಯುವತಿಗೆ ಮೂರು ಸಾವಿರದ ಆರು
ನೂರಾ ನಲವತ್ತೆರಡು ಬಾರಿ ಕರೆ ಮಾಡಿದ್ದರೆ, ಈ ವಿನಯ ಶೆಟ್ಟಿಗೆ ಸಾವಿರಕ್ಕೂ ಹೆಚ್ಚು ಬಾರಿ ಫೋನ್ ಕರೆ ಮಾಡಿದ್ದು ಬಯಲಾಗಿತ್ತು. ಅದರಲ್ಲೂ ರಾತ್ರಿಯಾದೊಡನೆ ಗಂಟೆಗಟ್ಟಲೆ ಈ ನಂಬರ್‌ಗಳ ಕರೆಯಲ್ಲಿ ಲೀನವಾಗುತ್ತಿದ್ದುದು ದಾಖಲೆಗಳಿಂದಲೇ ಬಯಲಾಗಿತ್ತು. ಅಡ್ಯಾರಿನ ಯುವತಿ ಜೊತೆಗಿನ ಫೋನ್ ಕರೆಗಳ ವಿವರ ಚುನಾವಣೆಗೆ ಮುನ್ನವೇ ಬಯಲಾಗಿತ್ತು. ಮುಖ್ಯವಾಗಿ ನಳಿನ್‌ಕುಮಾರ್‌ಗೆ ಬಿಜೆಪಿ ಟಿಕೆಟ್ ತಪ್ಪಿಸಲು ಮಂಗಳೂರಿನ ಬಿಜೆಪಿ ಗುಂಪೊಂದು ಭಯಂಕರ ಪ್ರಯತ್ನ ನಡೆಸಿದ್ದು ಅವರು ಈ ಸಿ.ಡಿ.ಯನ್ನು ಬಳಕೆ ಮಾಡಿಕೊಂಡಿದ್ದರು. ಆಗ ಸತೀಶ್ ಶೆಟ್ಟಿ ಹಾಗೂ ವಿನಯರ ಕತೆ ಹೊರಬರಲಿಲ್ಲ. ಕೇವಲ ಅಡ್ಯಾರಿನ ಯುವತಿಯ ಜೊತೆಗಿನ ಕತೆಯಷ್ಟೇ ಬಯಲಾಗಿತ್ತು. ಅಷ್ಟಾಗಿಯೂ ನಳಿನ್‌ಕುಮಾರ್ ಟಿಕೆಟ್ ಪಡೆದರು. ಇದೀಗ ಸೋಲಿನ ದವಡೆಯಲ್ಲಿದ್ದಾರಾದರೂ ಗೆದ್ದರೆ ಕೇಂದ್ರ ಸಚಿವರಾಗುವ ಸಾಧ್ಯತೆಯೂ ಇದೆ. ಹೀಗಿರುವಾಗಲೇ ಮುಂಬೈನಿಂದ ಮಂಗಳೂರಿಗೆ ಬಂದ ಸತೀಶ್ ಶೆಟ್ಟಿ ಬಂದರು ಠಾಣೆಯಲ್ಲಿ ಸಂಸದ ನಳಿನ್‌ಕುಮಾರ್ ಹಾಗೂ ವಿನಯಳ ಸೋದರ ರಂಜಿತ್ ವಿರುದ್ಧ ದೂರು ದಾಖಲಿಸಿದ್ದಾನೆ.