Hi Bangalore


Buy Now @ ₹ 15.00 Preview
ಹಾಯ್ ಬೆಂಗಳೂರ್! : ಸಂಪುಟ : ೧೯, ಸಂಚಿಕೆ : ೨೯, ಏಪ್ರಿಲ್ ೧೭, ೨೦೧೪ ಬೆಲೆ : ೧೫ ರು ಮುಖಪುಟ ಲೇಖನ : ಇವನು ಪಕ್ಕಾ ಅವಿವೇಕಿ! ಮೋದಿಯ ಸಿಂಗಲ್ ಮಗ! ಅವಳು ಶುದ್ಧ ಅಹಂಕಾರಿ ಸೋನಿಯಾಗೆ ಮುದ್ದಿನ ಸೊಸೆ! ಕ್ಯಾಟಗರಿ ಸೈಟಿನ ಬಕೀಟು ಪಿಟ್ಟುವಿನ ಈ ಹೊಸ ಅವತಾರಕ್ಕೆ ಹೇಗೆ ಪ್ರತಿಕ್ರಿಯಿಸಬೇಕು ಎಂಬುದೇ ಅನೇಕರಿಗೆ ಗೊತ್ತಾಗುತ್ತಿಲ್ಲ. “ಇವನು ಯಾರು ಅಂತ ಸರಿಯಾಗಿ ನನಗೇ ಗೊತ್ತಿಲ್ಲ; ಅಂಥದರಲ್ಲಿ ಇವನನ್ನು ಪಕ್ಷದ ಕಾರ್ಯಕರ್ತರಿಗೆ ನಾನು ಏನಂತ ಪರಿಚಯಿಸಲಿ ಎಂದು ಉದ್ಗರಿಸಿದವರು ಮಾಜಿ ಸಂಸದ ವಿಜಯ ಶಂಕರ್. ಅವರು ಮೊದಲಿ ನಿಂದಲೂ ಪಕ್ಕಾ ಸಂಘ ಪರಿವಾರಿ. ಆದರೆ ವಿನಾಕಾರಣ ಯಾರ ಮೇಲೂ ವಿಷ ಕಾರಿದವರಲ್ಲ. ವರದಿಗಾರ ಖಾಸ್‌ಬಾತ್ ಒಬ್ಬ ಬುದ್ಧಿವಂತ ಮತ್ತು ಚೆಂದನೆಯ ಹುಡುಗಿ ಜಾಯಲ್‌ಳ ಮದುವೆಗೆ ಸಾಕ್ಷಿಯಾಗಿ.. “ಇದೊಂದು ತೆರನಾದ ನಾರ್ಸಿ ಸಿಸಮ್ ಅಲ್ವೆ my office, my car, my dog, my bull, my shit! ಎಲ್ಲವೂ ಆತ್ಮರತಿಯ ಸ್ಟೇಟಸ್‌ಗಳೇ. ಅದು ಬಿಟ್ಟರೆ, ಅವನೇನು ಮಾಡುತ್ತಿದ್ದಾನೆ ಇವಳ ಗೆಳೆಯ ಯಾರು ಸಿಂಗಲ್ಲಾ ರಿಲೇಷನ್‌ಷಿಪ್‌ನಲ್ಲಿದ್ದಾಳಾ ಎಂಬಂತಹ ಕೆಲಸಕ್ಕೆ ಬಾರದ ಕುತೂಹಲ. ಇಷ್ಟರ ಹೊರತು ಮತ್ತೇನಿದೆ ರವಿ ಸರ್ ಎಂದು ಹುಡುಗಿಯೊಬ್ಬಳು ಮೆಸೇಜ್ ಕಳಿಸಿದ್ದಳು. ಆರ್.ಬಿ ಹಲೋ ವ್ಯಕ್ತಿಪೂಜೆ ನಡೆಯುವಲ್ಲಿ ಕೆಲವರಷ್ಟೇ ಬೆಳೆಯುತ್ತಾರೆ! ಮೊದಲೆಲ್ಲ ಆರ್ಥರ್ ಸ್ಯಾಂಟಿಯಾಗೋ ಹೇಳಿದ್ದನ್ನು ಕೇಳಿಕೊಂಡು ಕೆಲಸ ಮಾಡುತ್ತಿದ್ದವರು ಈಗ ದಿಕ್ಕು ತೋಚದೆ ಸುಮ್ಮನೆ ಇರುತ್ತಾರೆ. ತಮಗಿಷ್ಟ ಬಂದಿದ್ದನ್ನು ಮಾಡಲು ಹೋಗಿ ಹಾಳು ಮಾಡುತ್ತಾರೆ. ನೋಡ ನೋಡುತ್ತಿದ್ದಂತೆಯೇ ಆರ್ಥರ್ ಸ್ಯಾಂಟಿಯಾಗೋನ ಸಾಮ್ರಾಜ್ಯ ಕ್ರಮೇಣ ಕಳಚಿ ಬೀಳುತ್ತದೆ. ಕುಟುಂಬದವರು ಬೀದಿಗೆ ಬರುವ ಪರಿಸ್ಥಿತಿ ಸೃಷ್ಟಿಯಾಗುತ್ತದೆ. ರವಿ ಬೆಳಗೆರೆ ಬಾಟಮ್ ಐಟಮ್ ಮುಪ್ಪು ಬರಲಿ; ಆದರೆ ಅದಕ್ಕೆ ಸಿದ್ಧರಾಗಿದ್ದುಬಿಡೋಣ! ನೋಡಲಿಕ್ಕೆ ರಾಜಕುಮಾರ್ ತುಂಬ ಸುಂದರ. ಕಣ್ಣುಗಳಲ್ಲಿ ಎಂಥದೋ ಅಮಾಯಕತೆ. ಆಗಿನ್ನೂ ಅವರಿಗೆ ಮೊಳಕಾಲಿನ ಸಮಸ್ಯೆ ತೀವ್ರವಾಗಿರಲಿಲ್ಲ. ಹಾಲ್‌ಗೆ ಕಾಲಿಟ್ಟ ತಕ್ಷಣ ಕೈ ಮುಗಿದು ಎದ್ದು ನಿಂತು “ಬನ್ನಿ ಬನ್ನಿ... ಎಷ್ಟು ಚೆನ್ನಾಗಿ ಬರೀತೀರಾ ಅನ್ನುತ್ತಾ ಸ್ವಾಗತಿಸಿದರು. ಹಾಲ್‌ನಲ್ಲಿ ನಾವಿಬ್ಬರೇ ಇದ್ದೆವು. ಹೀಗೆಯೇ ಉಭಯ ಕುಶಲೋಪರಿ ಎಂಬಂತಹ ಮಾತು. “ನಿಮ್ಮನ್ನು ನೋಡಬೇಕಂತೆ ಅಂತ ಅವರ ಸಹಾಯಕನೊಬ್ಬ ಒಳಬಂದು ಹೇಳಿದ. ಅದಕ್ಕೆ ರಾಜ್ ತಕ್ಷಣ ಸ್ಪಂದಿಸಿದರು. ಒಳ ಬಂದವ ರಿಬ್ಬರೂ ಮಧ್ಯ ವಯಸ್ಸು ದಾಟಿದವರೇ. ರವೀ