Hi Bangalore


Buy Now @ ₹ 15.00 Preview
ಹಾಯ್ ಬೆಂಗಳೂರ್! : ಸಂಪುಟ : ೧೯, ಸಂಚಿಕೆ : ೨೭, ಏಪ್ರಿಲ್ ೩, ೨೦೧೪ ಬೆಲೆ : ೧೫ ರು ಮುಖಪುಟ ಲೇಖನ ಎದ್ದು ನಿಲ್ಲು ಮಗನೇ ಅಂದಿದ್ದು ವೃದ್ಧ ಮಾಂತ್ರಿಕ ಸುಳ್ಳ ಮೊಯ್ಲಿ ಎದಿರು ಅಳುಮುಂಜಿ ಕುಮ್ಮಿ! ಕೇಂದ್ರದಲ್ಲಿ ಎರಡನೇ ಬಾರಿಗೆ ಯು.ಪಿ.ಎ. ಮೈತ್ರಿಕೂಟ ಅಧಿಕಾರಕ್ಕೆ ಬಂದಿತ್ತು. ಎಲ್ಲವೂ ಗೌಡರು ಅಂದುಕೊಂಡಂತೆ ನಡೆದಿದ್ದರೆ, ಬೆಂಗಳೂರು ಗ್ರಾಮಾಂತರದಿಂದ ಗೆದ್ದಿದ್ದ ಕುಮಾರಸ್ವಾಮಿ ಯುಪಿಎ ಮೈತ್ರಿಕೂಟ ಸರ್ಕಾರದಲ್ಲಿ ಮಂತ್ರಿಯೂ ಆಗಿರುತ್ತಿದ್ದರು. ಇನ್ನೇನು ಕುಮಾರಣ್ಣ ಮಂತ್ರಿಯಾಗಲು ಕಾಂಗ್ರೆಸ್ ಹೈಕಮಾಂಡ್ ಒಪ್ಪಿಗೆ ಕೊಡುವ ಹೊತ್ತಿನಲ್ಲೇ ಎಂಟ್ರಿ ಕೊಟ್ಟ ವೀರಪ್ಪಮೊಯ್ಲಿ, ಕುಮಾರಸ್ವಾಮಿ ಕೇಂದ್ರದಲ್ಲಿ ಮಂತ್ರಿಯಾದರೆ, ರಾಜ್ಯದಲ್ಲಿ ಅವರ ಪಕ್ಷವನ್ನು ಬಲಪಡಿಸಿಕೊಂಡು ಮುಂದಿನ ವಿಧಾನಸಭಾ ಚುನಾವಣೆಯ ಹೊತ್ತಿಗೆ ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರ ಹಿಡಿಯಲು ರೆಡಿಯಾಗಿಬಿಡುತ್ತಾರೆ. ಅವರು ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯಾದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿನ್ನು ಕನಸಿನ ಮಾತು ಎಂದು ಕಾಂಗ್ರೆಸ್ ಹೈಕಮಾಂಡ್‌ನ ಕಿವಿ ಕಚ್ಚಿದವರೇ ಕುಮಾರಸ್ವಾಮಿ ಕೇಂದ್ರಮಂತ್ರಿಯಾಗುವುದನ್ನು ತಪ್ಪಿಸಿಬಿಟ್ಟಿದ್ದರು. ಲಕ್ಷ್ಮೀಸಾಗರ ಸ್ವಾಮಿಗೌಡ ಖಾಸ್ ಬಾತ್ ಒಬ್ಬಅಜ್ಜ, ಒಬ್ಬ ಸೋದರಮಾವನನ್ನು ಕಳೆದುಕೊಂಡ ವಿಷಘಳಿಗೆಯಲ್ಲಿ “ತಾತಾ, ಸ್ವಲ್ಪ ಹೊತ್ತು ಚಕ್ಕಡಿಯಿಂದ ಇಳಿದು ವಿಶ್ರಾಂತಿ ತೆಗೆದುಕೊಂಡು, ಚೂರು ಹಾಲು ಕುಡಿದು ಹೋಗೀರಂತೆ ಅಂದರು ಮೇಷ್ಟ್ರ ಪತ್ನಿ. “ಇಲ್ಲಮ್ಮೋ, ಇದು ನಿಲ್ಲೋ ಯಾತ್ರೆಯಲ್ಲ! ಅಂದುಬಿಟ್ಟ ತಾತ. ಆತನಿಗೆ ಸಾವು ಬರುತ್ತಿದೆಯೆಂಬ ಸೂಚನೆ ಇತ್ತಾ premonition ಗೊತ್ತಿಲ್ಲ. ಬೆಳಗೆರೆ ತಲುಪಿದ ತಕ್ಷಣ ಆತನನ್ನು ಎತ್ತಿಕೊಂಡು ಬಂದು ಪಡ ಸಾಲೆಯಲ್ಲಿ ಮಲಗಿಸಿದರು. ಆರ್.ಬಿ ಹಲೋ ಅಡ್ವಾಣಿ ಸೋಲಿಸಲು ಮೋದಿಗೆ ಸುಪಾರಿ ಕೊಟ್ಟಿತಾ ಆರೆಸ್ಸೆಸ್ ಬಿಜೆಪಿಯ ಭೀಷ್ಮ ಅನ್ನಿಸಿಕೊಂಡ ಲಾಲ್‌ಕೃಷ್ಣ ಅಡ್ವಾಣಿಯನ್ನು ಸೋಲಿಸಲು ಖುದ್ದು ನರೇಂದ್ರಮೋದಿ ಬಯಸಿದ್ದಾರಾ ಹಾಗೆಂಬ ಅನುಮಾನ ಬಿಜೆಪಿ ಪಾಳಯದಿಂದಲೇ ಕೇಳತೊಡಗಿದೆ ಮತ್ತು ಇಂತಹ ಸಂಚಿನಲ್ಲಿ ಆರೆಸೆಸ್ಸ್ ಭಾಗಿಯಾಗಿದೆ ಎಂಬ ಮಾತು ತೇಲಿಕೊಂಡು ಬರುತ್ತಿದೆ. ಹಾಗೆ ನೋಡಿದರೆ ಅಡ್ವಾಣಿ ಈಗ ಹಳೇ ಅಡ್ವಾಣಿಯಲ್ಲ. ಅವರೀಗ ಮೃದು ಹಿಂದೂವಾದಿ. ವಾಜಪೇಯಿ ಪ್ರಧಾನಿಯಾಗಿದ್ದ ಕಾಲದಲ್ಲಿ ಬಿಜೆಪಿಯ ಹಾರ್ಡ್‌ಕೋರ್ ಹಿಂದೂವಾದಿ ಎಂಬ ಹಣೆ ಪಟ್ಟಿ ಯಾರಿಗಾದರೂ ದಕ್ಕಲೇಬೇಕಿತ್ತು. ರವಿ ಬೆಳಗೆರೆ ಬಾಟಮ್ ಐಟಮ್ ಅಂಥ ನಂಬಿಕೆಗಳಿಗೆ ಸಂಬಂಧದ ಆರೋಪ ಹೊರಿಸುವುದೇಕೆ ಇನ್ನೇನು ಕೆಲವೇ ದಿನ; ನನ್ನ ಪುಟ್ಟ ಗೆಳತಿಯೊಬ್ಬಳ ಮದುವೆ ಇದೆ. ನಾನು ಸಾಮಾನ್ಯವಾಗಿ ಮದುವೆ-ಮುಂಜಿ ಮುಂತಾದ ಕಾರ್ಯಕ್ರಮ ಗಳಿಗೆ ಹೋಗುವುದಿಲ್ಲವೆಂಬುದು ನಿಮಗೇ ಗೊತ್ತು. ಅಲ್ಲಿ ಸಂಭ್ರಮವಿ ರುತ್ತದೆ. crowd ಇರುತ್ತದೆ. ನಾನೊಬ್ಬ ಹೋಗದೆ ಇದ್ದರೆ ಅಂಥ ಕೊರತೆಯೇನೂ ಆಗುವುದಿಲ್ಲ. ಆದರೆ ದುಃಖಿತರ ಮನೆಗೆ, ಅವರು ಕರೆಯದಿದ್ದರೂ ಹೋಗುತ್ತೇನೆ. ಹೆಚ್ಚು ಮಾತನಾಡದಿರಬಹುದು. ನೋವಿನಲ್ಲಿರುವ ಜೀವಿಯ ಪಕ್ಕದಲ್ಲಿ ಸುಮ್ಮನೆ ಒಂದಷ್ಟು ಹೊತ್ತು ಕುಳಿತಿದ್ದು ಎದ್ದು ಬರುತ್ತೇನೆ. ಸಾಕು. ರವೀ ವರದಿ ಮದುವೆ ಬ್ರೋಕರ್ ಜ್ಯೋತಿ ಇಟ್ಟಳು ಅತ್ತೆಗೆ ಮುಹೂರ್ತ ಅಪಾರ್ಟ್‌ಮೆಂಟ್‌ವಾಸಿಗಳೇ ಎಚ್ಚರ! ನಿಮಗೆ ವಯಸ್ಸಾಗಿದೆಯೇ ಒಂಟಿಯಾಗಿ ವಾಸಿಸುತ್ತಿದ್ದೀರಾ ಸುರಕ್ಷತೆ ದೃಷ್ಟಿಯಿಂದ ಅಪಾರ್ಟ್ ಮೆಂಟ್‌ನ ಪ್ಲ್ಯಾಟುಗಳಲ್ಲಿ ವಾಸಿಸುತ್ತಿದ್ದೀರಾ ನೀವು ಶ್ರೀಮಂತರಾ ಸಂಬಂಕರಿದ್ದಾರಾ ಹಾಗಾದರೆ ಈ ವರದಿಯನ್ನೊಮ್ಮೆ ಓದಿ ಬಿಡಿ. ಅದು ಬೆಂಗಳೂರಿನ ರಾಜರಾಜೇಶ್ವರಿನಗರ. ಅಲ್ಲಿನ ಐಡಿಯಲ್ ಹೋಂ ಟೌನ್‌ಶಿಪ್‌ನಲ್ಲಿರುವ ಶುಭೋದಯ ಎನ್‌ಕ್ಲೇವ್ ಅಪಾರ್ಟ್‌ಮೆಂಟಿನಲ್ಲಿ ಒಂಟಿಯಾಗಿ ವಾಸವಿದ್ದವರು ಅಜಮಾಸು ಎಪ್ಪತ್ತು ವರ್ಷ ವಯಸ್ಸಿನ ಶ್ರೀಮಂತ ಗೃಹಿಣಿ ರಮಾದೊರೈಮಣಿ. ಲೋಕೇಶ್ ಕೊಪ್ಪದ್ ವರದಿ ಜೈಲಿಗೆ ಹೋಗ್ತಾರಾ ಮೈಸೂರಿನ ಐಜಿ ರಾಮಚಂದ್ರರಾವ್ ದೂರದ ದುಬೈನಿಂದ ಹವಾಲಾ ಮೂಲಕ ಬೆಂಗಳೂರಿಗೆ ಬರುವ ಕೇರಳಿಗರ ಕೋಟಿಗಟ್ಟಲೆ ಹಣ ಬಸ್ಸು, ಕಾರುಗಳ ಮೂಲಕ ಬೆಂಗಳೂರಿನಿಂದ ಮೈಸೂರು ಮಾರ್ಗವಾಗಿ ಕೇರಳ ತಲುಪುವುದು ಕಳೆದ ಕೆಲವು ದಶಕದಿಂದ ನಿರಂತರವಾಗಿ ನಡೆಯುತ್ತಲೇ ಇದೆ. ಅಕ್ರಮವಾಗಿ ಸಾಗಾಟವಾಗುವ ಇಂತಹ ಹಣದ ಮಾಹಿತಿ ಹೆಕ್ಕಿ ಮೈಸೂರಿನ ಪೊಲೀಸರಿಗೆ ಮಾಹಿತಿ ನೀಡಿ ಕಮೀಶನ್ ಪಡೆಯುವ ಏಜೆಂಟರು ಬೆಂಗಳೂರಿನ ಕಲಾಸಿಪಾಳ್ಯ ಮತ್ತು ಮೆಜೆಸ್ಟಿಕ್‌ನಲ್ಲಿದ್ದಾರೆ. ವರದಿ ಜೈಲು ಸೇರಿದ ಪಾದ್ರಿಗಳಿಬ್ಬರೂ ನಿಜಕ್ಕೂ ನಿರಪರಾಧಿಗಳಾ ಬೆಂಗಳೂರು ನಗರ ಪೊಲೀಸ್ ಕಮೀಶನರ್ ರಾಘವೇಂದ್ರ ಔರಾದ್‌ಕರ್ ನಿಟ್ಟುಸಿರುಬಿಟ್ಟಿದ್ದಾರೆ. ಈಗ್ಗೆ ಒಂದು ವರ್ಷದ ಹಿಂದೆ ಕೊಲೆಯಾಗಿದ್ದ ಯಶವಂತ ಪುರದ ಸೇಂಟ್ ಪೀಟರ್ಸ್ ಸೆಮಿನರಿಯ ರೆಕ್ಟರ್ ಫಾದರ್ ಕೆ.ಜೆ.ಥಾಮಸ್ ಹತ್ಯೆಯ ಆರೋಪಿಗಳಾದ ಫಾದರ್ ಇಲಿಯಾಸ್, ಫಾದರ್ ವಿಲಿಯಂ ಪ್ಯಾಟ್ರಿಕ್ ಮತ್ತು ಪೀಟರ್ ಎಂಬುವವರನ್ನು ಹೆಡೆಮುರಿಗೆ ಕಟ್ಟಿ ಪರಪ್ಪನ ಅಗ್ರಹಾರದ ಜೈಲಿಗೆ ಬಿಟ್ಟು ಬಂದಿದ್ದಾರೆ. ಹಾಗಾಗಿ ಅವರಿಗೆ ಕಳೆದೊಂದು ವರ್ಷದಿಂದ ಪತ್ತೆ ಹಚ್ಚಲಾಗದೇ, ಇನ್ನೇನು ಮುಚ್ಚೇ ಹೋಯಿತೆಂದು ಯೇಸು ಭಕ್ತರು ತಿಳಿದುಕೊಂಡಿದ್ದ ಕೊಲೆ ಕೇಸನ್ನು ಪತ್ತೆ ಹಚ್ಚಿದ ಸಮಾಧಾನವಿದೆ. ಲಕ್ಷ್ಮೀಸಾಗರ ಸ್ವಾಮಿಗೌಡ ವರದಿ ಎಸ್ಸೈ ಶ್ರೀನಿವಾಸನಿಗೆ ಮಿಸ್ಸಾಯಿತು ಅಟ್ರಾಸಿಟಿ ಕೇಸು! ಹೊಸಕೋಟೆಯಲ್ಲಿ ಮಾಜಿ ಮಂತ್ರಿ ಬಚ್ಚೇಗೌಡರ ಪಾಳಯ ಪಟ್ಟು ಕುಸಿದು ಬಿದ್ದಿದೆಯಾ ಅಲ್ಲೀಗ ಹಾಲಿ ಶಾಸಕ ಎಂ.ಟಿ.ಬಿ. ನಾಗರಾಜು ಮತ್ತು ಕೆ.ಆರ್. ಪುರಂನ ಶಾಸಕ ಭೈರತಿ ಬಸವರಾಜುವಿನ ದೌಲತ್ತು ಶುರುವಾಗಿದೆಯಾ ಎಂಬ ಅನುಮಾನ ಹೊಸಪೇಟೆ ಸುತ್ತಲಿನ ಹಳ್ಳಿಗಳ ಜನರನ್ನು ಕಾಡುತ್ತಿರುವ ಹೊತ್ತಿನಲ್ಲೇ ಈ ಇಬ್ಬರು ಶಾಸಕರು ಹೊಸಕೋಟೆ, ಕೆ.ಆರ್. ಪುರಂ ಮತ್ತು ಮಹದೇವಪುರ ವಿಧಾನಸಭಾ ಕ್ಷೇತ್ರ ಗಳಲ್ಲಿನ ಹಳ್ಳಿಗಳಲ್ಲಿರುವ ತಮ್ಮ ವಿರೋಧಿಗಳನ್ನು ಹಣಿಯುವ ಯಜ್ಞಕ್ಕೆ ಕೈ ಹಾಕಿ ಬಿಟ್ಟಿದ್ದಾರೆ. ಅದಕ್ಕೆ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಪೊಲೀಸು ಅಧಿಕಾರಿಗಳನ್ನು ಬಳಸಿಕೊಳ್ಳುತ್ತಿದ್ದಾರೆ. ವರದಿಗಾರ ವರದಿ ಹಚಾ ಅಂದಿದ್ದ ಪಮ್ಮಿಯನ್ನು ಅಪ್ಪಿ ಮುದ್ದಾಡುತ್ತಿದ್ದಾರೆ ಸಿದ್ದು! ಲೋಕಸಭಾ ಚುನಾವಣೆಯಲ್ಲಿ ಹತ್ತಕ್ಕೂ ಕಡಿಮೆ ಸ್ಥಾನಗಳನ್ನು ಗೆಲ್ಲುವ ಭೀತಿಯಲ್ಲಿದ್ದ ಕಾಂಗ್ರೆಸ್ ಪಕ್ಷಕ್ಕೆ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಪರಮೇಶ್ವರ್ ಮತ್ತು ಕಾಂಗ್ರೆಸ್ ಹೈಕಮಾಂಡ್ ಸೇರಿ ಒಂದು ಮಟ್ಟದ ಟಾನಿಕ್ ನೀಡಿರುವುದು ಕುತೂಹಲಕಾರಿಯಾಗಿದೆ. ಹಾಗೆ ನೋಡಿದರೆ ಸರ್ಕಾರ ನಡೆಸುವ ವಿಷಯದಲ್ಲಿ, ಟಿಕೆಟ್ ಹಂಚಿಕೆ ವಿಷಯದಲ್ಲಿ ತಮ್ಮದೇ ಧೋರಣೆ ಹೊಂದಿದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಕಾಂಗ್ರೆಸ್ ಪಕ್ಷವನ್ನು ಹಡಾಲೆದ್ದು ಹೋಗುವಂತೆ ಮಾಡಿರುವುದು ನಿಜ. ಆರ್.ಟಿ.ವಿಠ್ಠಲಮೂರ್ತಿ ವರದಿ ತುಮಕೂರು ಅಖಾಡಾದಲ್ಲಿ ತ್ರಿಕೋನ ಸ್ಪರ್ಧೆ ತುಮಕೂರು ಲೋಕಸಭಾ ಚುನಾವಣಾ ಅಖಾಡಾ ಪ್ರತಿಷ್ಠಿತರ ಸ್ಪರ್ಧೆಯಿಂದ ರಾಜ್ಯದ ಗಮನ ಸೆಳೆದಿದೆ. ಕೆಪಿಸಿಸಿ ಹಾಲಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎ.ಕೃಷ್ಣಪ್ಪ ನವರಿಗೆ ಸವಾಲಿನ ಕ್ಷೇತ್ರವಾಗಿದ್ದರೆ, ಬಿಜೆಪಿಯ ನಾಯಕರು ಮಾತ್ರ ಮೋದಿಯ ಅಲೆಯಲ್ಲಿ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಹವಣಿಸುತ್ತಿದ್ದಾರೆ. ಹೀಗಾಗಿ ತುಮಕೂರು ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿರುವುದು ಸತ್ಯ. ಲೋಕೇಶ್ ಕೊಪ್ಪದ್ ವರದಿ ಅಂಥಾ ಬಂಗಾರಪ್ಪನವರಿಗೆ ಇವನೆಂಥಾ ಕುಮಾರ! ಸ್ವಯಂ ಕೃತಾಪರಾಧದಿಂದ ಕಾಂಗ್ರೆಸ್ ಟಿಕೆಟ್ ವಂಚಿತರಾದ ಶಿವಮೊಗ್ಗದ ಕಾಂಗ್ರೆಸ್ ಮುಖಂಡ ಕುಮಾರ್ ಬಂಗಾರಪ್ಪರ ರೋಷಾಗ್ನಿ ದಿಢೀರನೆ ತಣ್ಣಗಾಗಿದೆ. ಅರಿಭಯಂಕರ ಭಾಷಣ ಬಿಗಿದು, ರೋಷಾವೇಶದ ಹೇಳಿಕೆ ನೀಡಿ ಶಿವಮೊಗ್ಗದ ರಾಜಕಾರಣವನ್ನೇ ಅಲ್ಲೋಲ ಕಲ್ಲೋಲ ಮಾಡುವುದಾಗಿ ಹೇಳಿದ ಕುಮಾರ್ ಬಂಗಾರಪ್ಪ ಬಂಡಾಯ ಕೈಬಿಟ್ಟು ಭಂಡಾರಿಗೆ ಜೈ ಎಂದಿದ್ದಾರೆ. ಬಂಗಾರಪ್ಪರ ಪುತ್ರರಾಗಿ ಇದು ಸಲ್ಲದ ನಡವಳಿಕೆ ಎಂಬುದಾಗಿ ಅವರ ಬೆಂಬಲಿಗರೇ ಕಿಚಾಯಿಸುವಂತಾಗಿದೆ. ಶೃಂಗೇಶ್ ವರದಿ ಗೆಲ್ಲಲು ಜೆಡಿಎಸ್ ಮರ್ಜಿಗೆ ಬಿದ್ದರು ಜಿಗಜಿಣಗಿ ಐನ ಬ್ಯಾಸಗಿ ಟೈಮಲ್ಲೇ ರಣಬಿಸಿಲ ಪರಿತಾಪದ ವಿಜಾಪುರ ಜಿಲ್ಲೆಯಲ್ಲಿ ಲೋಕಸಭೆ ಕಾವು ಏರುತ್ತಿದ್ದು, ಕ್ಷೇತ್ರದ ಯಾವೊಂದು ಊರ ಕಡೆಗೂ ಮಾರಿ ಮಾಡಿ ಮಲಗದ ರಮೇಶ ಜಿಗಜಿಣಗಿ ಎನ್ನುವ ಹಾಲಿ ಸಂಸದ, ಸಂಭಾವಿತ ರಾಜಕಾರಣಿಗೆ ಈಗ ಅದೇ ಮುಳುವಾದ ಕುದಿ. ಆದರೇನು, ಒಂದಿ ಲ್ಲೊಂದು ಕಾರಣಕ್ಕೆ ಇಷ್ಟು ದಿನ ಮೆತ್ತಗಿನ ರಾಜಕಾರಣ ಮಾಡಿ ಅಧಿಕಾರ ಪಡೆದ ಇವರೀಗ ಮೋದಿಯ ಮ್ಯಾಜಿಕ್ ನೆಚ್ಚಿಕೊಳ್ಳುವ ಹರಕತ್ತೊಂದೇ ಸಾಲದು ಅನ್ನಿಸಿ, ಜೆಡಿಎಸ್ ಜತೆ ಒಳ ಒಪ್ಪಂದಕ್ಕಿಳಿಯುವ ಆಟದಲ್ಲಿ ತೊಡಗಿದ್ದಾರೆ. ಗೆಲುವಿಗಾಗಿ ಮೋದಿಯ ಮುಖವಾಡ ತೊಟ್ಟಿರುವ ಇವರ ತಲಿ ಮ್ಯಾಲೀಗ ಟೊಪ್ಪಿಗೆಯೊಂದೇ ಕಾಣುತ್ತಿದೆ! ಶಿವಕುಮಾರ ಉಪ್ಪಿನ ವರದಿ ಹೆಬ್ಬಾಳ್‌ಕರ್ ಲಕ್ಷ್ಮಿಗೆ ಡಬ್ಬುಲು ಕೊಟ್ಟೋನು ಡೀಕೇಶಿ ಬೆಳಗಾವಿ ಲೋಕಸಭಾ ಚುನಾವಣೆಯ ಅಖಾಡಾದಲ್ಲೀಗ ಜಾತಿ ಸಮೀಕರಣದ ಅಬ್ಬರ ಹಿಂದೆಂದಿಗಿಂತಲೂ ಜೋರಾಗಿದೆ. ಅಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳ್‌ಕರ್‌ರ ಗೆಲುವು ಜಿಲ್ಲೆಯಲ್ಲೀಗ ರಾಜ ಕೀಯವಾಗಿ ಬಲಿಷ್ಠವಾಗಿರುವ ಜಾರಕಿಹೊಳಿ ಬ್ರದರ್ಸ್ ಮತ್ತವರ ಹಿಂದಿರುವ ಅಹಿಂದ ಮತಗಳ ಮೇಲೆಯೇ ಅವಲಂಬಿತವಾಗಿದೆ. ಜೊತೆಗೆ ಎದುರಾಳಿ ಬಿಜೆಪಿ ಅಭ್ಯರ್ಥಿ ಸುರೇಶ ಅಂಗಡಿಯದು ಲಕ್ಷ್ಮೀ ಹೆಬ್ಬಾಳ್‌ಕರ್ ಳಿಗಿರುವಂಥದ್ದೇ ಸ್ಥಿತಿ. ರವಿ ಕುಲಕರ್ಣಿ ನೇವಿ ಕಾಲಂ ಕುಲಶೇಖರನ ಕಾಣೆಗೊಂದು ಹೊಸ ತಿರುವಾದಳು ಸುಮಂಗಲಾ ಅವಳು ಬಸ್ಸಿಳಿದು ಮನೆ ಕೇಳಿಕೊಂಡು ಅಲ್ಲಿಗೆ ಬಂದಾಗ ಬಾಗಿಲು ತೆರೆದೇ ಇತ್ತು, ವೆಂಕಟರಮಣ ಜಗುಲಿಯಲ್ಲಿ ಮಲಗಿಕೊಂಡು ನಿದ್ದೆ ಹೋಗಿದ್ದ. ಒಳಗೆ ಪದ್ಮಾಂಬಿಕೆ ಸ್ನಾನಕ್ಕೆ ಹೋಗಿದ್ದ ಳಂತ ಕಾಣುತ್ತದೆ. ಈ ಕಡೆ ವೆಂಕಟರಮಣನನ್ನು ಎಚ್ಚರಿಸದೇ, ಆ ಕಡೆ ಒಳಗೆ ಇರುವ ವ್ಯಕ್ತಿಯನ್ನು ಮಾತಾಡಿಸದೇ ಕೊಂಚ ವಿಶ್ರಮಿಸಿಕೊಳ್ಳಲು ಸುಮಂಗಲಾ ಅಂಗಳದ ತಂಪಾದ ಕಟ್ಟೆಯ ಮೇಲೆ ಕುಳಿತುಕೊಂಡಳು. ಒಳಗಿನಿಂದ ದೇವರ ನಾಮವನ್ನು ಯಾರೋ ಗುನುಗುತ್ತಿರುವ ಸದ್ದು ಕಿವಿಗೆ ಬಿತ್ತು. ಏನು ಹೇಳಬೇಕೀಗ ಅನ್ನುವ ಗೊಂದಲದಲ್ಲಿ ಸುಮಂಗಲಾ ಹೊರಗೇ ಕುಳಿತಿದ್ದಳು. ನೇವಿ ಜಾನಕಿ: ಕಾಲಂ ಕವನವೆ ಬಾಳಿನ ಬೆಳಕು, ಕವನ ಸಂಕಲನ ಹುಡುಕು “ಹಸುರ ಕಡಿದಿದ್ದೇವೆ ಬಸಿರ ಬಗೆದಿದ್ದೇವೆ ನೀರನ್ನೂ ಹೀರಿ ಮುಗಿಸಿದ್ದೇವೆ ಕಟ್ಟಿಸಿದ್ದೇವೆ ಕಾಂಕ್ರೀಟು ಕಾಡು. ಇದನ್ನು ಬರೆದದ್ದು ಯುವ ಕವಿಯಲ್ಲ. ಸಾಕಷ್ಟು ಹೆಸರು ಮಾಡಿರುವ, ಕವಿಯೆಂದು ಕರೆಸಿಕೊಂಡಿರುವ ಪ್ರಸಿದ್ಧರ ಸಾಲಿದು. ಆದರೆ ಇಂಥ ಎಷ್ಟೋ ಕವಿತೆಗಳನ್ನು ಆಗಲೇ ಓದಿದ್ದೇನಲ್ಲ ಅನ್ನಿಸತೊಡಗಿತು. ಜೊತೆಗೇ ಇವನ್ನೆಲ್ಲ ಯಾಕೆ ಓದಬೇಕು ಅನ್ನುವ ಪ್ರಶ್ನೆಯೂ ಕಾಡತೊಡಗಿತು. ಜಾನಕಿ