Buy Now @ ₹ 15.00
Preview
ಹಾಯ್ ಬೆಂಗಳೂರ್! : ಸಂಪುಟ : ೧೯, ಸಂಚಿಕೆ : ೨೪ ಮಾರ್ಚ್ ೧೩, ೨೦೧೪ ಬೆಲೆ : ೧೫ ರು
ಮುಖಪುಟ ಲೇಖನ
ಮೇರೇ ರೋಮ ರೋಮ ಮೇ ರಾಮ ಔರ್ ಕಾಮ! ರೈತರಿಗೆ ಹಾಕಿದ್ದು ಪಂಗನಾಮ
ಮೈಸೂರಿನ ಮಾಜಿ ಮಂತ್ರಿ ಎಸ್.ಎ.ರಾಮದಾಸನಿಗೀಗ ಏಳರಾಟದ ಶನಿ. ಹಾಗಾಗಿ ಈಗ ಅವನ ನಸೀಬು ಖೊಟ್ಟಿಯಾಗಿ ಹೋಗಿದೆ. ಈಗ್ಗೆ ಕೆಲದಿನಗಳ ಹಿಂದೆ ಪ್ರೇಮಕುಮಾರಿಯೊಂದಿಗಿನ ಈತನ ಜಮ್ಮಾಚಕ್ಕದ ಕಥೆ ಹೊರಬಿದ್ದಾಗ ಮಾನವಂತ ಮೈಸೂರಿನ ಜನ ಹೌಹಾರಿದ್ದರು. ಈತನೇನಾ ಸಂಘ ಪರಿವಾರದ ವಿನಮ್ರ ಕರಸೇವಕ ಎಂದು ನಗೆಯಾಡಿದ್ದರು. ಅಸಲಿಗೆ ಅವತ್ತು ಮೈಸೂರಿನ ಜನರಿಗೆ ಈತ ರಾಮದಾಸ ಹನುಮಂತನಲ್ಲ, ಹೆಂಗಳೆಯರ ಸೆರಗಿನ ಚುಂಗು ಹಿಡಿದು ಅಂಡಲೆಯುವ ಕಾಮದಾಸನೆಂಬುದು ಗೊತ್ತಾಗಿ ಹೋಗಿತ್ತು.