Buy Now @ ₹ 15.00
Preview
ಹಾಯ್ ಬೆಂಗಳೂರ್! : ಸಂಪುಟ : ೧೯, ಸಂಚಿಕೆ : ೨೨, ಫೆಬ್ರವರಿ ೨೦, ೨೦೧೪ ಬೆಲೆ : ೧೫ ರು
ಮುಖಪುಟ ಲೇಖನ
ಮಲ್ಲ ಮಲ್ಲಿ ಕ್ರೇಜು ಮೋಜು! ಸುಂದರಿ ಪ್ರಿಯಾಂಕ ಜೊತೆ ಗೆಲ್ಲಲಿ ರವಿ
ಸ್ಯಾಂಡಲ್‌ವುಡ್ಡಿನಲ್ಲೀಗ ಸೂತಕದ ಕಳೆ. ಅದೇನೂ ವಿಚಿತ್ರವೋ ಗೊತ್ತಿಲ್ಲ. ಈ ಹಿಂದೆ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಚಿತ್ರಗಳ ಬಿಡುಗಡೆ ಎಂದರೆ ಗಾಂಧಿನಗರದಲ್ಲೊಂದು ಸಂಭ್ರಮವಿರುತ್ತಿತ್ತು.ಅವರ ಅಭಿಮಾನಿಗಳ ಹೃದಯದಲ್ಲಿ ತಮ್ಮ ನೆಚ್ಚಿನ ನಾಯಕನ ಚಿತ್ರದ ಕುರಿತು ತರಹೇವಾರಿ ಕನಸುಗಳಿರುತ್ತಿದ್ದವು. ರವಿಚಂದ್ರನ್ ಕೂಡ ಅಷ್ಟೇ. ಅಭಿಮಾನಿಗಳ ಕನಸನ್ನು ಎಂದೂ ಹುಸಿಗೊಳಿಸುತ್ತಿರಲಿಲ್ಲ. ಹಾಗಾಗಿ ಅವರು ಕನ್ನಡ ಚಿತ್ರರಂಗ ಕಂಡ ಅಪರೂಪದ ಕನಸುಗಾರನೆಂದು ಖ್ಯಾತಿಗೊಳಗಾಗಿದ್ದರು.