Hi Bangalore


Buy Now @ ₹ 15.00 Preview
ಹಾಯ್ ಬೆಂಗಳೂರ್! : ಸಂಪುಟ : ೧೯, ಸಂಚಿಕೆ : ೧೪, ಜನವರಿ ೨, ೨೦೧೪ ಬೆಲೆ : ೧೫ ರು ಮುಖಪುಟ ಲೇಖನ ಬನ್ನಂಜೆ ವಿಶೇಷ ಸಂದರ್ಶನ: ನನ್ನ ಬಂದೂಕು ನೆತ್ತರು ಕಕ್ಕುತ್ತದೆ! ಐ ಯಾಮ್ ಕಿಂಗ್ ನಾಯಕ ಮರ್ಡರ್! “ಫೋನು ರಿಂಗುಡುತ್ತಿತ್ತು! ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಬಿಜೆಪಿ ಮುಖಂಡ ಮತ್ತು ಉದ್ಯಮಿಯಾಗಿದ್ದ ಆರ್.ಎನ್ ನಾಯಕ ಅವರ ಹತ್ಯೆಯಾದ ಕೆಲವೇ ಗಂಟೆಗಳಲ್ಲಿ ಈ ದೂರವಾಣಿ ಕರೆ ಬಂದಿತ್ತು. ಡಿಸ್‌ಪ್ಲೇ ಆಗುತ್ತಿದ್ದ ನಂಬರ್ ಅದೊಂದು ವಿದೇಶಿ ಕರೆ ಎಂಬುದನ್ನು ಸೂಚಿಸುತ್ತಿತ್ತು. ಅತ್ತಲಿಂದ ಮಾತನಾಡುತ್ತಿದ್ದವನು ತನ್ನನ್ನು ತಾನು ಬನ್ನಂಜೆ ರಾಜ ಎಂದು ಪರಿಚಯಿಸಿಕೊಂಡಿದ್ದ. ಸುನೀಲ್ ಹೆಗ್ಗರವಳ್ಳಿ ಖಾಸ್‌ಬಾತ್ ಜ್ಯೋತಿಷ್ಯವಲ್ಲದ ಜ್ಯೋತಿಷ್ಯ ಎಂಬ ಹೊಸ ಮ್ಯಾಜಿಕ್ ರವಿ ಬೆಳಗೆರೆ ಭವಿಷ್ಯ ಹೇಳುತ್ತಾರಾ ಅದು ಬಿಡಿ : ಭವಿಷ್ಯ ನಂಬುತ್ತಾರಾ ಇದು ಪ್ರಶ್ನೆ. ಅಸಲು ಪತ್ರಿಕೆಗಳಲ್ಲಿ ಪ್ರಕಟವಾಗುವ ದಿನ ಭವಿಷ್ಯ, ವಾರ ಭವಿಷ್ಯ ಮತ್ತು ಮಾಸ ಭವಿಷ್ಯಗಳನ್ನು ಕಣ್ತಪ್ಪಿನಿಂದಲೂ ಓದದ ನಾನು ಅದೆಲ್ಲವನ್ನೂ ಶುದ್ಧ ಅಪದ್ಧ ಎಂದೇ ಭಾವಿಸುತ್ತೇನೆ. ಆ ಪರಿ, ಎಲ್ಲ ರಾಶಿ-ನಕ್ಷತ್ರ ಗಳವರ ಭವಿಷ್ಯ ಬರೆಯುವ, ಟೀವಿಗಳಲ್ಲಿ ಶುದ್ಧ ಹಣೆಬರಹ ಬರೆಯುವ ಬ್ರಹ್ಮನಂತೆ ಕುಳಿತು ಭವಿಷ್ಯ ಬೊಗಳುವ ಪಂಡಿತರಿಗೆ, ಅಸಲು ತಮ್ಮ ಭವಿಷ್ಯ ಗೊತ್ತೇನೋ ಕೇಳ್ರೀ ಆರ್.ಬಿ ಸಾಫ್ಟ್ ಕಾರ್ನರ್ ಅವೆರಡು ಮಾತಿಗಿಂತ ಮತ್ತೆ ಮಾತು ಬೇಕೆ ನೋಡಿ, ಹೇಗೆ ಹೊರಟೇ ಹೋದರು ಜಿ.ಎಸ್.ಎಸ್. ‘ಹಣತೆಯಾರಿದ ಮೇಲೆ ಕತ್ತಲಲ್ಲಿ ನೀನು ಯಾರೋ ಮತ್ತು ನಾನು ಯಾರೋ...’ ಎಂಬರ್ಥದ ಸಾಲುಗಳನ್ನು ಅವರೇ ಬರೆದಿದ್ದರು. ಈಗ ಹಣತೆಯಾರಿದೆ. ಬೆಳಗೆರೆ ಹಲೋ ಹೊಸ ವರ್ಷಕ್ಕೆ ಚಿಯರ್ಸ್ ಹೇಳುವ ಮುನ್ನ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರ ನಿಧನದ ವಿಷಾದದೊಂದಿಗೆ ಈ ವರ್ಷಕ್ಕೆ ಗುಡ್‌ಬೈ ಹೇಳುತ್ತಾ ಹೊಸ ವರ್ಷಕ್ಕೆ ಅಡಿ ಇಡುವ ಅನಿವಾರ್ಯತೆ ಎದುರಾಗಿದೆ. ತಮ್ಮ ಬದುಕು, ಕೆಲಸಗಳ ಮೂಲಕ ನಾಡನ್ನು ಶ್ರೀಮಂತಗೊಳಿಸಿದ ಜೀವಗಳು ಇನ್ನಿಲ್ಲ ಎಂದಾಗ ಮನವೆಂಬ ಆಕಾಶದ ತುಂಬ ವಿಷಾದದ ಕಾರ್ಮೋಡ ಕವಿಯುತ್ತದೆ. ರವಿ ಬೆಳಗೆರೆ ಬಾಟಮ್ ಐಟಮ್ ಗೆಲುವೆಂಬ ಅಂತ್ಯವಿಲ್ಲದ ಪಯಣಕ್ಕೆ ಏನೇನು ಬೇಕು ಗೆಲುವು” ಎಂಬ ಮೂರಕ್ಷರದ ಸಂಗತಿಗೆ ಸಂಬಂಧಿಸಿದಂತೆ ಅನೇಕ ದಶಕಗಳಿಂದ ರಿಸರ್ಚು ನಡೆಯುತ್ತಲೇ ಇದೆ. ಗೆಲುವೆಂಬುದು ಆಕಸ್ಮಿಕವಾ ಖಂಡಿತ ಅಲ್ಲ. ಅವಿವೇಕಿಗಳು ಮಾತ್ರ ಬದುಕಿನಲ್ಲಿ ಆಕಸ್ಮಿಕದಂತಹುದೇನಾದರೂ ಘಟಿಸಲಿ ಎಂದು ಕಾಯುತ್ತ ಕೂಡುತ್ತಾರೆ. ರವೀ ವರದಿ ಲೂಟಿ ಮಾಡಿ ಕೋಟಿ ಕೋಟಿ ದುಡಿದದ್ದೇ ಹತ್ಯೆಗೆ ಕಾರಣವಾ ಉತ್ತರ ಕನ್ನಡ ಜಿಲ್ಲೆಯ ಅಂಕೋಲದಲ್ಲಿ ಉದ್ಯಮಿಯೊಬ್ಬರ ಎದೆಗೆ ಭೂಗತ ಪಾತಕಿ ಬನ್ನಂಜೆ ರಾಜನ ಹುಡುಗರು ಗುಂಡಿಕ್ಕಿದ್ದಾರೆ. ಸಿಬಿಐ ಹಿಟ್ ಲಿಸ್ಟಿನಲ್ಲಿದ್ದ ಬೇಲೆಕೇರಿ ಅದಿರು ಕಳ್ಳ ಸಾಗಾಣೆ ವ್ಯವಹಾರದ ಕಿಂಗ್ ಪಿನ್ ಆರ್.ಎನ್.ನಾಯಕ್ ಕತೆ ಮುಗಿದು ಹೋಗಿದೆ. ದಾನಶೂರ ಕರ್ಣ, ಸಹಕಾರಿ ಧುರೀಣ, ಸರಳ ಸಜ್ಜನ ಇತ್ಯಾದಿ ಬಿರುದಾಂಕಿತರಾಗಿದ್ದ ಆರ್.ಎನ್.ನಾಯಕ್ ಹತ್ಯೆ ಉತ್ತರ ಕನ್ನಡದ ಖತರ್‌ನಾಕ್ ಉದ್ಯಮಿಗಳಿಗಿರುವ ಜೀವ ಬೆದರಿಕೆಯನ್ನು ಮತ್ತೆ ಸಾಬೀತುಪಡಿಸಿದೆ. ಶೃಂಗೇಶ್ ವರದಿ ಹಂತಕ ಮೋಹನನ ಕೊರಳಿಗೆ ಉರುಳು! “ಇದೊಂದು ಅಪರೂಪದಲ್ಲಿ ಅಪರೂಪದ ಪ್ರಕರಣ. ಆರೋಪಿ ಮೋಹನ ಮಾಡಿರುವುದು ಘೋರ ಕೃತ್ಯ. ಸಮಾಜಕಂಟಕನೀತ, ಈತ ಕ್ಷಮೆಗೆ ಅರ್ಹನಲ್ಲ, ಜೊತೆಗೆ ಬದುಕುವ ಅರ್ಹತೆಯೂ ಈತನಿಗಿಲ್ಲ. ಹಾಗಾಗಿ ಆರೋಪಿ ಮೋಹನನಿಗೆ ಮೂರು ಹತ್ಯೆ ಪ್ರಕರಣಗಳಲ್ಲೂ ಪ್ರತ್ಯೇಕವಾಗಿ ಗಲ್ಲು ಶಿಕ್ಷೆಯ ಜೊತೆಗೆ ಐಪಿಸಿಯ ವಿವಿಧ ಕಲಂನಡಿ ಸೆರೆ ವಾಸ ಮತ್ತು ದಂಡವನ್ನು ವಿಧಿಸಲಾಗಿದೆ ಎಂದು ಮಂಗಳೂರಿನ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾ ಧೀಶರಾದ ಬಿ.ಕೆ.ನಾಯ್ಕ ಅವರು ತೀರ್ಪು ಪ್ರಕಟಿಸಿ ಕುರ್ಚಿ ಬಿಟ್ಟು ಎದ್ದು ಹೊರಡುತ್ತಿದ್ದಂತೆ, ಅಶ್ವಿತ್ ಮಾವಿನಗುಣಿ ವರದಿ ವಕ್ಕಲಿಗರ ಸಂಘಕ್ಕೆ ಯಾರಾಗುತ್ತಾರೆ ದಂಡನಾಯಕ ರಾಜ್ಯ ವಕ್ಕಲಿಗರ ಸಂಘದ ಆಡಳಿತ ಮಂಡಳಿಯ ಚುನಾವಣಾ ಅಖಾಡ ರಂಗು ಪಡೆದುಕೊಂಡಿದೆ. ಸಂಘದ ಹಾಲಿ ಅಧ್ಯಕ್ಷ ಕೆಂಚಪ್ಪಗೌಡ ನೆಂಬ ನುಂಗಣ್ಣನ ತಂಡದ ಅಂಡಿಗೆ ಬಿಸಿನೀರು ಬಿಡಲು ಡಾ.ಅಪ್ಪಾಜಿಗೌಡ ಮತ್ತು ಪ್ರೊಫೆಸರ್ ಎಂ.ನಾಗರಾಜ್ ಎಂಬಿಬ್ಬರು ಸಜ್ಜನರ ತಂಡ ಸೆಡ್ಡು ಹೊಡೆದು ನಿಂತಿದೆ. ಅಸಲಿಗೆ ಅಪ್ಪಾಜಿ ಗೌಡ ಮತ್ತು ಪ್ರೊಫೆಸರ್ ಎಂ.ನಾಗ ರಾಜ್ ಪ್ರತ್ಯೇಕ ತಂಡ ಮಾಡಿಕೊಂಡು ಚುನಾವಣಾ ಅಖಾಡಕ್ಕಿಳಿಯದೇ ಒಟ್ಟಿಗೆ ನಿಂತು ತೊಡೆ ತಟ್ಟಿದ್ದರೆ ಚುನಾವಣೆಯ ಮುನ್ನವೇ ಕೆಂಚಪ್ಪಗೌಡನ ತಂಡ ಚಿತ್ ಆಗಿ ಮನೆ ಸೇರಿಬಿಡುತ್ತಿತ್ತು. ವರದಿಗಾರ ವರದಿ ಸಂಸದ ಫಕೀರಪ್ಪನ ಮಗ ಮುತ್ತುನ ಗತ್ತು ಗೈರತ್ತು ಇದು ಬೇಕಿರಲಿಲ್ಲ! ರಾಯಚೂರು ಸಂಸದ ಸಣ್ಣ ಫಕೀರಪ್ಪನ ಮಗ ಬಳ್ಳಾರಿಯಲ್ಲಿ ರಗಳೆ ಮಾಡಿಕೊಂಡಿದ್ದಾನೆ. ಕಾಲೇಜು ವಿದ್ಯಾರ್ಥಿನಿಯೋರ್ವಳ ಮನೆಗೆ ನುಗ್ಗಿ ಆಕೆಯನ್ನು ಅಮಾನವೀಯವಾಗಿ ಥಳಿಸಿ ಪ್ರಮಾದವೆಸಗಿದ್ದಾನೆ. ಮಗ ಮಾಡಿದ ಪುಂಡಾಟಿಕೆಗೆ ಸಂಸದ ಫಕೀರಪ್ಪ ತಲೆ ತಗ್ಗಿಸುವಂತಾಗಿದೆ. ಸತೀಶ್ ಬಿಲ್ಲಾಡಿ ವರದಿ ಹಿರೇಕೆರೂರ ಕುಟುಂಬದ ದುರುಳರ ವಿರುದ್ಧ ಬಿತ್ತು ಗೂಂಡಾ ಕಾಯ್ದೆ! ಹುಬ್ಬಳ್ಳಿಯಿಂದ ಎದ್ದು ಹೋಗುವ ಮುನ್ನ ಕಮೀಷನರ್ ಪದ್ಮನಯನ ಸಾಹೇಬರು ಸಖತ್ತಾಗಿಯೇ ಲಾಠಿ ಬೀಸಿದ್ದಾರೆ. ಅವಳಿ ನಗರದ ಕುಖ್ಯಾತ ಗೂಂಡಾ ಮನೆತನವಾದ ಹೊಸೂರಿನ ಹಿರೇಕೆರೂರ ಮನೆತನದ ಕುಡಿ ಚೇತನ ಸಹದೇವ ಹಿರೇಕೆರೂರನ ಮೇಲೆ ಗೂಂಡಾ ಕಾಯ್ದೆಯಡಿ ಕೇಸು ಹೆಟ್ಟಿ ಜೈಲಿಗೆ ದಬ್ಬಿದ್ದಾರೆ. ಜೊತೆಗೆ ಪಾಲಿಕೆ ಸದಸ್ಯ ಸಂತೋಷ ಹಿರೇಕೆರೂರನ ಮೈಮೇಲೂ ಕೇಸು ಬಿದ್ದು ಆತ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದು ಜೈಲಿಗೆ ಹೋಗುವುದನ್ನು ವರದಿಗಾರ ನೇವಿ:ಕಾಲಂ ಬೆಳಗು ಬಾ ಹಣತೆಯನು ನನ್ನೆದೆಯ ಗುಡಿಯಲ್ಲಿ... ಕವಿ ನಿಜಕ್ಕೂ ಇವತ್ತು ಜನಸಾಮಾನ್ಯನ ಜೊತೆಗಿದ್ದಾನಾ ಅವನು ಬರೆಯುತ್ತಿರುವ ಕವಿತೆ ನಿಜಕ್ಕೂ ಅದು ತನ್ನದೂ ಅಂತ ಅನ್ನಿಸುತ್ತಿದೆಯಾ ಯಾರೋ ಬರೆದು ವಾರಕ್ಕೆ ನಾಲ್ಕೈದರಂತೆ ಪುರವಣಿಗಳಲ್ಲಿ ಪ್ರಕಟ ಮಾಡುವ ಕವಿತೆಗಳನ್ನು ಸಾಮಾನ್ಯ ಓದುಗ ತನ್ನ ಕವಿತೆಯಂತೆ ಅದನ್ನು ಹಚ್ಚಿಕೊಳ್ಳಬಲ್ಲನಾ ನೇವಿ ಜಾನಕಿ ಕಾಲಂ ಬರೆಯುವುದು ಅನಿವಾರ್ಯ ಕರ್ಮ ಎಂದ ದೀಪಧಾರಿಗೆ ಜಿಎಸ್ಸೆಸ್! ಆ ಮೂರು ಅಕ್ಷರಗಳಲ್ಲಿ ಅದೆಂಥ ಶಕ್ತಿಯಿತ್ತು. ಅಸಂಖ್ಯಾತ ಶಿಷ್ಯರ ಪಾಲಿಗೆ ಅವರು ಪರಮಗುರು. ಹೊಸ ಕವಿಗಳು ಬರೆದ ಕವನಗಳಿಗೆ ಅವರು ಮಾರ್ಗದರ್ಶಿ. ಅವರ ಕಾವ್ಯಾರ್ಥ ಚಿಂತನ ಕವಿತೆಗಳನ್ನು ಅರ್ಥ ಮಾಡಿಕೊಳ್ಳುವವರಿಗೆ ಗೈಡ್. ವಿಮರ್ಶೆಯ ಪೂರ್ವ ಪಶ್ಚಿಮ ಕೃತಿ, ವಿಮರ್ಶೆಯ ಮಾರ್ಗದಲ್ಲಿ ಹೊರಟ ಮಂದಿಗೆ ದಾರಿದೀಪ. ಜಾನಕಿ ಮರೆತ ಭಾರತ ದುಬ್ಬುಲ್ ನಾರಾಯಣ ಶೆಟ್ಟಿಯ ರೇಷ್ಮೇ ಪುಟ್ಗೋಸಿ ಅದಿರಲಿ, ಇಂಥ ಪುಟಗೋಸಿಧಾರಿಗಳನ್ನು ಕಂಡರೆ ಬ್ಯಾಲ್ಯದ ಜವಳಿಯಂಗಡಿಯ ಆದಿ ನಾರಾಯಣ ಶೆಟ್ಟಿಗೆ ಬಿಲ್‌ಕುಲ್ ಆಗುತ್ತಿರಲ್ಲಿ. ಪುಟಗೋಸಿ ಹಾಕಿದವರೆಲ್ಲ ಪಟಾಪಟಿ ನಿಕ್ಕರ್ರನ್ನೋ, ಖಾಕಿ ನಿಕ್ಕರ್ರನ್ನೋ ಹೊಲಿಸಿಕೊಂಡರೆ ತನಗೆ ವಿಪರೀತ ವ್ಯಾಪಾರವಾಗಬಹುದೆಂಬ ಲೆಕ್ಕಾಚಾರ ಆದಿನಾರಾಯಣ ಶೆಟ್ಟಿಗೆ. ನಮ್ಮ ಸುತ್ತೆಂಟು ಹಳ್ಳಿಗಳಿಗೆ ಬ್ಯಾಲ್ಯದ ಆದಿ ನಾರಾಯಣ ಶೆಟ್ಟಿಯದೇ ದೊಡ್ಡ ಜವಳಿ ಅಂಗಡಿ. ಮನೆಗೆ ಅಂಟಿಕೊಂಡಂತೆ ಇದ್ದ ಅಂಗಡಿಯಲ್ಲಿ ತಾನು ತಾನುಗಟ್ಟಲೆ ಜವಳಿಯೊಂದಿಗೆ ಶೆಟ್ಟಿ ಸದಾ ಬಟ್ಟೆ ಅಳೆಯುವ ಗಜದ ಕಡ್ಡಿ ಮತ್ತು ದೊಡ್ಡದಾದ ಲೆಕ್ಕದ ಲೆಡ್ಜರ್‌ನೊಂದಿಗೆ ಬಿಜಿಯಾಗಿರುತ್ತಿದ್ದ. ಕೇಶವರೆಡ್ಡಿ ಹಂದ್ರಾಳ ಕೋಟೆ ಕಾಯ್ದ ತಾಯಂದಿರು-ಅಂಕಣ ಒಗಟಾಗಿ ಕಾಣುತ್ತಿದ್ದರು ಯಗಟಿಯ ದತ್ತ ಮನೆಗೆ ಹೆಣ್ಣು ನೋಡಲು ಬಂದ ಮದುಮಗ ಮನೆ ಪಾಠದ ಮೇಷ್ಟ್ರು ಎಂದು ಗೊತ್ತಾಗುತ್ತಿದ್ದಂತೆ ಅಪ್ಪನ ಮನಸಿನಲ್ಲಿ ಏನೋ ಆತಂಕ. ಕೈಯಲ್ಲಿ ಸರ್ಕಾರಿ ನೌಕರಿ ಇಲ್ಲ. ಹುಡುಗನಿಗೆ ವಿಪರೀತವೆನಿ ಸುವಷ್ಟು ರಾಜಕೀಯದ ಹುಚ್ಚಿದೆ. ಇಂತಹವನಿಗೆ ಇರುವ ಒಬ್ಬಳೇ ಮಗಳನ್ನು ಕೊಟ್ಟರೆ ಆತ ಮುಂದೆ ಆಕೆಯನ್ನು ನೆಮ್ಮದಿಯಿಂದ ಬಾಳಿಸುತ್ತಾನಾ ಎಂಬ ಅನುಮಾನ. ಆದರೆ ಮನೆಗೆ ಬಂದಿರುವ ವರ ಅದಾಗಲೇ ಮದುಮಗಳಾಗಿ ಮನೆಯೊಳಗಿದ್ದ ಇವರಿಗೆ ಪರಿಚಯವಿದ್ದ. ಲಕ್ಷ್ಮೀಸಾಗರ ಸ್ವಾಮಿಗೌಡ ನೂರು ಮುಖ ಸಾವಿರ ದನಿ- ಅಂಕಣ ಅಪಾತ್ರಳಿಗೆ ಕಾನೂನು ನೆರವು ‘ಸಾರ್, ಸಾರ್ ಸಿಟ್ಟಾಗ್‌ಬ್ಯಾಡ್ರಿ ಸಾರ್. ಏನೋ ಬಡವಿ ಬದಿಕ್ಕಂಡೆ. ನೀವ್ ಕೊಡ್ಸಿದ್ ಹಣಾನಾ ಬ್ಯಾಂಕಿಗೆ ಹಾಕಿದ್ದೀನಿ ಸಂಬಳದ ಜೊತೆಗೆ ಬಡ್ಡಿ ಸೇರ‍್ಸಿ ನಿಂ ಹೆಸ್ರು ಹೇಳಿ ಹೆಂಗೋ ಜೀವನ ಮಾಡ್ತೀನಿ’ ಅಂದಳು. ‘ಆಯ್ತು ನಡೀರಿ’ ಅಂದೆ. ಹೊರಟು ಹೋದರು. ಹೃದಯ ನುಚ್ಚುನೂರಾಗಿತ್ತು. ಮನಸ್ಸು ವ್ಯಗ್ರವಾಗಿತ್ತು. ಕಷ್ಟ ಅಂತ ಬಂದವರಿಗೆ ಕನಿಕರಿಸಿ ಮರುಗಿ ಸಹಾಯ ಮಾಡೋದೆ ತಪ್ಪೇ ಎಂ.ವಿ. ರೇವಣ್ಣಸಿದ್ಧಯ್ಯ