Hi Bangalore


Buy Now @ ₹ 15.00 Preview
ಸೃಷ್ಟಿ 1042 : ಸಂಪುಟ 21, ಸಂಚಿಕೆ 2, ಅಕ್ಟೋಬರ್ 8, 2015 ಖಾಸ್‌ಬಾತ್ ಅವನ ಪ್ರೇಯಸಿ ಮಾಡಿಸಿದ ಕೊಲೆಯ ಬಗ್ಗೆ ಪತ್ರವಾ ಬದುಕು ಅಂದ್ರೆ ಏನ್ಸಾರ್ ಬದುಕು ಅಂದ್ರೆ ಐದು ಲೀಟರ್ ಬಾಲ್ಯ, ಇಪ್ಪತ್ತೈದು ಲೀಟರ್ ಯೌವನ, ಐವತ್ತು ಲೀಟರ್ ಆಕಾಂಕ್ಷೆ, ಎರಡು ಲೀಟರ್ ಕಣ್ಣೀರು, ಮತ್ತೆರಡು ಲೀಟರ್ ಹಾಸ್ಯ, ಹತ್ತು ಲೀಟರ್ ಸ್ನೇಹ, ಒಂದು ಲೀಟರ್ ಆತ್ಮವಿಮರ್ಶೆ, ಅರ್ಧ ಲೀಟರ್ ದೈವಭಕ್ತಿ, ಅರ್ಧ ಲೀಟರ್ ದೇಶಭಕ್ತಿ, ಎರಡು ಲೀಟರ್ ಪ್ರಾಮಾಣಿಕತೆ ಮತ್ತು ಇನ್ನೆರಡು ಲೀಟರಿನಷ್ಟು unexplained ಆಗುಹೋಗುಗಳು! ಸರಿಯಾಗಿ ಅಳತೆ ಹಾಕಿದರೆ ಬದುಕೆಂಬ ಬ್ಯಾರಲ್ಲು ಈ ನೂರು ಲೀಟರುಗಳ ಸಾಮಗ್ರಿಯೊಂದಿಗೆ ತುಂಬಿ ಹೋಗಬೇಕು. ತುಂಬಿಹೋದರೆ ಸಾಕಾ ಸಾರ್ ಬದುಕು ಅನ್ನೋದು ತುಂಬಿ ತುಳುಕಬೇಕಲ್ವೆ ಎಂಬುದು ನಿಮ್ಮ ಪ್ರಶ್ನೆಯಾದರೆ ಆ ನೂರು ಲೀಟರುಗಳ ಬ್ಯಾರಲ್‌ನೊಳಕ್ಕೆ ಅರಪಾವಿನಷ್ಟು ಅವಿವೇಕ, ಚಟಾಕಿನಷ್ಟು ವ್ಯಾಮೋಹ, ಎರಡು ಬೊಗಸೆಯಷ್ಟು ದುರಾಸೆ, ಒಂದು ತಂಬಿಗೆ ಸುಳ್ಳು, ಅರ್ಧ ಕೊಡದಷ್ಟು ಅಸೂಯೆ, ಮೂರು ಮಗ್ ಸ್ವಾರ್ಥ, ಒಂದು ಲೋಟ ವಂಚನೆ, ಎರಡು ಟೀ ಸ್ಪೂನ್ ಮಿತ್ರದ್ರೋಹ. ಇವಿಷ್ಟನ್ನು ಬೆರೆಸಿ ನೋಡಿ. ಅಲ್ಲಿಗೂ ಬದುಕೆಂಬುದು ತುಂಬಿ ತುಳುಕಾಡದಿದ್ದಲ್ಲಿ, ಅದರೊಳಕ್ಕೆ ಒಂದೇ ಒಂದು ಚಿಟಿಕೆಯಷ್ಟು ಆತ್ಮದ್ರೋಹವನ್ನು ಸುರಿದು ನೋಡಿ; ನೂರು ಲೀಟರುಗಳ ಆ ಸಮೃದ್ಧ ಬದುಕು ಇದ್ದಕ್ಕಿದ್ದಂತೆ ಬುರಬುರನೆ ಉಬ್ಬಿ, ಉಕ್ಕಿ, ಹೊರಕ್ಕೆ ಬಿದ್ದು, ಜುಳ್ಳನೆ ಸದ್ದು ಮಾಡುತ್ತ, ರಸ್ತೆಗೆ ಬಿದ್ದು, ಉದ್ದೋ ಉದ್ದಕ್ಕೆ ರಾತ್ರಿಯಿಡೀ ಹರಿದು ಬೆಳಗಾಗುವುದರೊಳಗಾಗಿ ಗಟಾರ ಸೇರದೆ ಇದ್ದರೆ ಕೇಳಿ! ರವಿ ಬೆಳಗೆರೆ ಸಾಫ್ಟ್‌ಕಾರ್ನರ್ ಗೆಲುವಿನ ತುದಿ ಮುಟ್ಟಿದ ಗೆಳೆಯನ ಕುರಿತು ಅದೆಲ್ಲದರ ನಡುವೆಯೂ ಮನಸ್ಸು ನಿರುಮ್ಮಳವಾಗಿದೆ. ಗೆಳೆಯನಾದ ಉದಯ ಮಾತನಾಡುವ ಯತ್ನ ಮಾಡುತ್ತಿದ್ದಾನೆ. ಆಯುರ್ವೇದ ಕೆಲಸ ಮಾಡುತ್ತಿರುವಂತಿದೆ. ತುಂಬ ಹಿಂದೆ ಪರಿಚಯದ ಹುಡುಗಿಯೊಬ್ಬಾಕೆ ನನಗೊಂದು ಮಾತು ಹೇಳಿದ್ದಳು. ಇಲ್ಲಿಂದ ಕಾರವಾರಕ್ಕೆ ಹೋದರೆ, ಕಾರವಾರಕ್ಕಿಂತ ಕೊಂಚ ಮುಂಚೇನೇ ‘ಅಳಗಾ’ ಎಂಬ ಊರು ಸಿಗುತ್ತದಂತೆ. ಅದು ಹಳ್ಳಿ. ಅಲ್ಲಿರೋದು ಅಲೋಪಥಿ ಆಸ್ಪತ್ರೆಯಲ್ಲ. ಅಲ್ಲಿರುವವರು ನಾಟಿ ವೈದ್ಯರೂ ಅಲ್ಲ. Not ಆಯುರ್ವೇದ. ಒಂದಿಬ್ಬರು ಮೂರು ಜನ ಜರ್ಮನ್ ಮಹಿಳೆಯರಿದ್ದಾರಂತೆ. Stroke ಆದ ಮೇಲೆ ಆದಷ್ಟೂ ಬೇಗನೆ ಅಲ್ಲಿಗೆ ಕೊಂಡೊಯ್ದರೆ ಅವರು ಖಾಯಿಲೆಯ ತೀವ್ರತೆ ನೋಡಿ, ಒಂದು ಇಂಜೆಕ್ಷನ್ ಕೊಡುತ್ತಾರಂತೆ. ಅಷ್ಟೇ ಚಿಕಿತ್ಸೆ: ಅಡ್ಮಿಷನ್ನು, ಮಸಾಜು ಇತ್ಯಾದಿಗಳಿಲ್ಲ. ಪಥ್ಯ ಇದೆಯಾ ನನಗೆ ಗೊತ್ತಿಲ್ಲ. ರವಿ ಬೆಳಗೆರೆ ಬಾಟಮ್ ಐಟಮ್ ಏನೇ ಹೇಳಿ, ಇದ್ರೆ ಅಂಥ ಹೊಟ್ಟೆಕಿಚ್ಚಿರಬೇಕು! ನಿಜ ಹೇಳಿ. ನಿಮ್ಮಲ್ಲೊಂದು ಚಿಕ್ಕ ಜಲಸಿ ಉಂಟುಮಾಡುವವರು ಯಾರು ನೋಡಿದ ತಕ್ಷಣ ಛಳಕ್ಕಂತ ಹೊಟ್ಟೆಯಲ್ಲೊಂದು ಸಂಕಟಾಗ್ನಿ ಹುಟ್ಟಿಸುವವರು ಅರೆರೇ, ನನಗಿಲ್ಲವಲ್ಲಾ... ಅಂತ ಕರುಬುವಂತೆ ಮಾಡುವವರು ನಾನು ಅವರಾಗಿದ್ದಿದ್ದರೆ...ಅಂತ ಅನ್ನಿಸೋ ಹಾಗೆ ಮಾಡುವವರು ಅಂಥವರ‍್ಯಾರಾದರೂ ಇದ್ದಾರಾ “ಇಲ್ಲಪ್ಪ, ನನಗೆ ಯಾರನ್ನ ನೋಡಿದರೂ ಹೊಟ್ಟೆಸಂಕಟ ಆಗಲ್ಲ. ಎಲ್ರೂ ಚೆನ್ನಾ...ಗಿರ‍್ಲಿ ಅಂತ ಬಯಸ್ತೀನಿ ಎಂಬುದು ನಿಮ್ಮ ಉತ್ತರವಾದರೆ God bless you. ಈ ಲೇಖನವನ್ನು ಮುಂದಕ್ಕೆ ಓದಬೇಡಿ. ಈ ಪತ್ರಿಕೆ ವೇದಾಂತಿಗಳಿಗೆ ನಿಷಿದ್ಧ. “ನಂಗೆ ಅವನ ಬಣ್ಣ, ಅವನ ರೂಪು, ಅವನ ಆಳ್ತನ ನೋಡಿದರೆ ಜಲಸಿ ಆಗುತ್ತೆ. ಅಥವಾ ಅವಳ ರೂಪು, ಅವಳ ಶ್ರೀಮಂತಿಕೆ, ಅವಳು ಉಡೋ ಉಡುಪು ನೋಡಿದರೆ ಹೊಟ್ಟೆಕಿಚ್ಚಾಗುತ್ತೆ ಅನ್ನೋದು ನಿಮ್ಮ ಉತ್ತರವಾದರೆ you are stupid! ನಿಮಗೆ ಸರಿಯಾಗಿ ಹೊಟ್ಟೆಕಿಚ್ಚು ಪಡೋಕೂ ಬರಲ್ಲ ಅಂತ ಆಯ್ತು. ರವಿ ಬೆಳಗೆರೆ ಹಲೋ ಮೀಸಲಾತಿಯನ್ನು ಕಿತ್ತು ಹಾಕುವುದಲ್ಲ, ಅದರ ವ್ಯಾಪ್ತಿಯನ್ನು ಹಿಗ್ಗಿಸಬೇಕು ಮೊನ್ನೆ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಆಡಿದ ಮಾತು ಕೇಳಿ ಭಾರತದಲ್ಲೂ ಡಾರ್ವಿನ್ ವಾದದ ತಳಿಯನ್ನು ಬೆಳೆಸುವ ಯತ್ನ ನಡೆಯುತ್ತಿದೆಯೇನೋ ಅನ್ನಿಸತೊಡಗಿದೆ. ಈಗಿರುವ ಮೀಸಲಾತಿ ವ್ಯವಸ್ಥೆಯನ್ನು ಕಿತ್ತು ಹಾಕುವ ಸಲುವಾಗಿ ಪರಿಶೀಲನೆ ನಡೆಸುವಂತೆ ಮೋಹನ್ ಭಾಗವತ್ ಕೇಂದ್ರ ಸರ್ಕಾರಕ್ಕೆ ಕಿವಿ ಮಾತು ಹೇಳಿದ್ದಾರೆ. ಆದರೆ ಈ ಮಾತು ಆಡುವ ಮುನ್ನ ಭಾಗವತ್ ಕೂಡ ಇಡೀ ದೇಶದ ಮೂಲೆ ಮೂಲೆಯನ್ನು ಸುತ್ತಬೇಕಿತ್ತು. ಏನನ್ನೇ ಆಗಲಿ, ಆಡುವುದು ಸುಲಭ. ಆದರೆ ಆ ಮಾತಿಗೆ ಶಕ್ತಿ ಸಿಗುವುದು ಸುಲಭವಲ್ಲ. ಸಾವಿರಾರು ವರ್ಷಗಳ ಕಾಲ ಕನಿಷ್ಟ ಪಕ್ಷ ಓದಲೂ ಅವಕಾಶ ಪಡೆಯದ ಶೋಷಿತರಿಗೆ ರಾಜಕೀಯ ಮತ್ತು ಔದ್ಯೋಗಿಕ ಮೀಸಲಾತಿ ನೀಡಿದ್ದು ಸರಿ. ಸಿಂಪಲ್ಲಾಗಿ ಒಂದು ಮಾತು ಹೇಳುತ್ತೇನೆ ಕೇಳಿ. ಇವತ್ತು ಒಂದು ಸಮುದಾಯವನ್ನು ಜಾತಿ, ಮತ, ಪಂಥಗಳ ಹಂಗೇ ಇಲ್ಲದೆ ಒಂದಿಪ್ಪತ್ತು ವರ್ಷಗಳ ಕಾಲ ದೂರವಿಡಿ. ಅಂದರೆ ಜ್ಞಾನದಿಂದ ದೂರವಿಡಿ. ರವಿ ಬೆಳಗೆರೆ ಮುಖಪುಟ ವರದಿ ನಾನು ಹೊರಟೆ ಅಂದಳು ರಾಧಿಕಾ ಪೀಡೆ ಹೋಯ್ತು ಅಂದ ಕುಮಾರ! ಗೃಹಿಣಿ ರಾಧಿಕಾ ಮತ್ತೆ ಬಣ್ಣ ಹಚ್ಚಿದಳು. ಯಶ್- ರಮ್ಯಾಳನ್ನು ಹಾಕಿಕೊಂಡು ‘ಲಕ್ಕಿ’ ಸಿನೆಮಾ ನಿರ್ಮಿಸಿದಳು. ಸಮಾಧಾನವಾಗಲಿಲ್ಲವೇನೋ ತಾನೇ ನಿರ್ಮಿಸಿ, ನಟಿಸಿ ‘ಸ್ವೀಟಿ’ ಎಂಬ ಚಿತ್ರವನ್ನು ತೆರೆಗೆ ತಂದಳು. ಸಿನೆಮಾ ಮಕಾಡೆ ಮಲಗಿತು. ಆದರೆ ನಿರ್ದೇಶಕಿ ವಿಜಯಲಕ್ಷ್ಮಿಸಿಂಗ್ ಹಾಗೂ ಪತಿರಾಯ ಜೈಜಗದೀಶ್ ಚೆನ್ನಾಗಿ ಕಾಸು ಮತ್ತೊಂದನ್ನು ಮಾಡಿಕೊಂಡರು. ಈಗ ‘ನಮಗಾಗಿ’ ಎನ್ನುವ ಚಿತ್ರಕ್ಕೆ ಕೈ ಹಾಕಿದ್ದಳು. ಆ ಚಿತ್ರಕ್ಕೆ ಮಹಾನ್ ತಗಡು ಗಿರಾಕಿ ಡಿ.ಪಿ.ರಘರಾಂ ಎಂಬುವವನು ಡೈರೆಕ್ಟರ್. ‘ನಿನಗಾಗಿ’ ಖ್ಯಾತಿಯ ಅದೇ ವಿಜಯ್ ರಾಘವೇಂದ್ರ ನಾಯಕ. ಸಿನೆಮಾದ ಶೇಕಡಾ ಐವತ್ತರಷ್ಟು ಭಾಗದ ಶೂಟಿಂಗ್ ಮುಗಿದಿತ್ತು. ಆದರೆ ನಿರ್ಮಾಪಕನಾದವನು ತನ್ನ ಕೈಲಾಗಲ್ಲ ಅಂತ ಎದ್ದೋದ. ಆ ಜಾಗಕ್ಕೆ ರಾಧಿಕಾ ಬಂದಿದ್ದಳು. ಅಷ್ಟರಲ್ಲಿ ಆಕೇನೇ ಬೆಂಗಳೂರು ಬಿಟ್ಟಿದ್ದಾಳೆ. ಲೋಕೇಶ್ ಕೊಪ್ಪದ್ ರಾಜಕೀಯ ಸಿಎಂ ಸಿದ್ದು ಈಗ ಪವರ್‌ಫುಲ್ ಸೆಡ್ಡು ಹೊಡೆಯುವವರು ಫುಲ್ ನಿಲ್! ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಕೂಡ ಇಲಾಖೆಯಲ್ಲಿ ಗಮನಾರ್ಹವಾಗಿಯೇ ಕೆಲಸ ಮಾಡುತ್ತಿದ್ದಾರೆ. ಅವರು ಮಹದೇವಪ್ಪ ಅವರಷ್ಟು ರೂಟ್ ಬೇಸ್ ರಾಜಕಾರಣಿಯಾಗಿ ಕಾಣಿಸದಿದ್ದರೂ, ತಮ್ಮ ಕಾರ್ಯವೈಖರಿಯ ಮೂಲಕ ಎಲ್ಲರ ಗಮನ ಸೆಳೆದಿರುವುದು ನಿಜ. ಇನ್ನು ದಲಿತ ನಾಯಕರ ಪೈಕಿ ಕಂದಾಯ ಸಚಿವ ವಿ. ಶ್ರೀನಿವಾಸ ಪ್ರಸಾದ್ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದಾರೆ. ಸಣ್ಣ ನೀರಾವರಿ ಸಚಿವ ಶಿವರಾಜ್ ತಂಗಡಗಿ ಮೇಲೆ ಆರಂಭದಲ್ಲಿ ಕೆಲ ದೂರುಗಳು ಕೇಳಿ ಬಂದರೂ ಇವತ್ತು ಅವರು ತಮ್ಮ ಇಲಾಖೆಯ ಮೇಲಿಟ್ಟಿರುವ ಕಾನ್‌ಸನ್‌ಟ್ರೇಟ್ ವಿಷಯದಲ್ಲಿ ಅಧಿಕಾರಿಗಳೂ ಮೆಚ್ಚತೊಡಗಿದ್ದಾರೆ. ಹೀಗಾಗಿ ಟೋಟಲಿ ಎಲ್ಲ ಅಂಶಗಳೂ ಸೇರಿ ಸಿದ್ದರಾಮಯ್ಯನವರಿಗೆ ದಲಿತ ಸಮುದಾಯದಿಂದ ತೊಂದರೆ ಆಗಬಹುದು ಎಂಬ ಲೆಕ್ಕಾಚಾರ ಉಲ್ಟಾ ಆಗಿದೆ. ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಕೂಡ ಹೈಕಮಾಂಡ್ ಆಣತಿಯಂತೆ ಸಚಿವ ಸಂಪುಟವನ್ನು ಸೇರಿಕೊಂಡರೆ ಸಿದ್ದು ಸರ್ಕಾರವನ್ನು ದಲಿತ ವಿರೋಧಿ ಸರ್ಕಾರ ಎನ್ನಲು ಸಾಧ್ಯವೇ ಇಲ್ಲ. ಆರ್.ಟಿ.ವಿಠ್ಠಲಮೂರ್ತಿ ವರದಿ ಗೋಸ್ವಾಮಿಯ ಮೈಯೆಲ್ಲ ನೆಕ್ಕಿದ ದೇಶಪಾಂಡೆ ರಾಮಚಂದ್ರಾಪುರ ಮಠದ ಪರಂಪರೆಗೆ ಗುನ್ನ ಹಾಕಿದ ಗೋಸ್ವಾಮಿ ಈಗಲೂ ಪೀಠ ಬಿಟ್ಟಿಳಿಯುವ ಪ್ರಯತ್ನದಲ್ಲಿಲ್ಲ. ಕೊನೆಕ್ಷಣದವರೆಗೂ ಬಡಿದಾಡುವ ಪ್ರಯತ್ನದಲ್ಲಿ ಸ್ವಾಮಿಯಿದ್ದಾನೆ. ಚಾರ್ಜ್‌ಶೀಟ್ ಅನ್ನೇ ನ್ಯಾಯಾಲಯದಲ್ಲಿ ಪ್ರಶ್ನಿಸಿ ನ್ಯಾಯಾಲಯದ ವಿಚಾರಣೆಯಿಂದ ತಪ್ಪಿಸಿಕೊಳ್ಳಲು ವೇದಿಕೆ ಸಿದ್ಧವಾಗುತ್ತಿದೆ. ಮತ್ತೊಂದೆಡೆ ಅನಿವಾರ್ಯವಾಗಿ ಜಾಮೀನು ರದ್ದಾಗಿ ಜೈಲು ಸೇರಬೇಕಾಗಿ ಬಂದರೆ ಮಠವನ್ನು ತನ್ನ ನಿಯಂತ್ರಣದಲ್ಲೇ ಇಟ್ಟುಕೊಳ್ಳಲು ತಾನು ಹೇಳಿದಂತೆ ಕೇಳುವ ಕುಟುಂಬವೊಂದರ ಹುಡುಗನನ್ನು ಶಿಷ್ಯನಾಗಿ ಸ್ವೀಕರಿಸಿ ಪಟ್ಟ ಕಟ್ಟುವುದು ಸ್ವಾಮಿಯ ಮುಂದಿರುವ ಆದ್ಯತೆಯಾಗಿದೆ. ಕಾಸರಗೋಡಿನ ಬಡಕ್ಕಿಲದ ಹವ್ಯಕ ಮಾಣಿಯೊಂದನ್ನು ಇದಕ್ಕಾಗಿ ತಯಾರು ಮಾಡುತ್ತಿದ್ದು ಯಾವ ಕ್ಷಣದಲ್ಲಾದರೂ ರಾತ್ರೋರಾತ್ರಿ ಮರಿ ಸ್ವಾಮಿಯ ಪೀಠಾರೋಹಣ ನಡೆಯುವ ಸಾಧ್ಯತೆ ದಟ್ಟವಾಗಿದೆ. ವರದಿಗಾರ ವರದಿ ಹುಬ್ಬಳ್ಳಿ: ಪೊಲೀಸ್ ಬಳಗ ತೌಡು ತಿಂತಿದೆ ಅದೆಲ್ಲಿಂದಲೋ ಉದ್ಭವ ಆದಂತೆ ಬಂದಿರುವ ಅಪರಾಧ ವಿಭಾಗದ ಡಿಸಿಪಿ ಸವಿತಾ ಮೇಡಮ್ಮು ಅವಳಿ ನಗರದ ಪಾಲಿಗೆ ಮೊದಲ ಮಹಿಳಾ ಅಧಿಕಾರಿ ಎಂಬಂತೆ ವರ್ತಿಸುತ್ತಾರೆ. ಅಪರಾಧ ಹಾಗೂ ಟ್ರಾಫಿಕ್ ವಿಭಾಗದ ಡಿಸಿಪಿ ಆಗಿದ್ದ ಸವಿತಾ ಮೇಡಮ್ಮು ಕೋಲಾರ ಮೂಲದವರು. 1999ರಲ್ಲಿ ಇಲಾಖೆಗೆ ಸೇರಿಕೊಂಡು, ಗುಲ್ಬರ್ಗದಲ್ಲಿ ಡಿವೈಎಸ್ಪಿ ಆಗಿ ಅಷ್ಟಕ್ಕಷ್ಟೇ ಎಂಬಂತೆ ನೌಕರಿ ಮಾಡಿದ ಈಯಮ್ಮ ಬೆಂಗಳೂರಲ್ಲಿ ನಾನ್ ಎಕ್ಸಿಕ್ಯುಟಿವ್‌ನಲ್ಲಿ ಸಾಕಷ್ಟು ಅವಧಿ ಇದ್ದರು. ಹೀಗಾಗಿ ಇವರಿಂದಲೂ ಅವಳಿ ನಗರದ ಅಪರಾಧ ನಿಯಂತ್ರಣ ಹಾಗೂ ಟ್ರಾಫಿಕ್ ಕಿರಿಕಿರಿ ತಗ್ಗಿಸುವುದನ್ನು ನಿರೀಕ್ಷಿಸಲು ಸಾಧ್ಯವಿಲ್ಲ; ನಿರೀಕ್ಷಿಸುವುದೇ ತಪ್ಪು. ವರದಿಗಾರ ವರದಿ ದಾವಣಗೆರೆಯ ಗನ್ ಮಣಿಕಂಠ ಮಕಾಡೆ ಬಿದ್ದ! ದಾವಣಗೆರೆ ಮಂದಿ ನಿಟ್ಟುಸಿರುಬಿಟ್ಟಿದ್ದಾರೆ. ಕೈಯಲ್ಲಿ ಪಿಸ್ತೂಲ್ ಹಿಡಿದುಕೊಂಡು ಗುಂಡರ ಗೂಳಿಯಂತೆ ಕಂಡ ಕಂಡವರ ಮೇಲೆ ನುಗ್ಗಿ ವಸೂಲಿ ಮಾಡುತ್ತಿದ್ದ ಪುಂಡ ಮಣಿಕಂಠ ಅಲಿಯಾಸ್ ಮಣಿ ಸರ್ಕಾರ್ ಎಂಬಾತ ಕೇಬಲ್ ದಂಧೆಗೆ ಕೈ ಹಾಕಲು ಹೋಗಿ ಕೇಸ್ ಹೆಡ್ಡಿಸಿಕೊಂಡಿದ್ದಾನೆ. ಇಲ್ಲಿ ಬೆಂಗಳೂರಿನಲ್ಲಿ ಅಡಗಿಕುಳಿತಿದ್ದ ಆತನನ್ನು ದಾವಣಗೆರೆ ದಕ್ಷ ಪೊಲೀಸ್ ಅಧಿಕಾರಿಗಳು ಹೆಡೆಮುರಿ ಕಟ್ಟಿ ನಡೀಲೇ ಮಗನೇ... ಅಂತ ಎತ್ತಾಕಿಕೊಂಡು ಬಂದು ಜೈಲಿಗೆ ಗದುಮಿದ್ದಾರೆ. ಶ್ರೀರಾಮಸೇನೆ ಲೇಬಲ್ ಅಂಟಿಸಿಕೊಂಡು ದಾದಾಗಿರಿ ಮಾಡುತ್ತಾ ಅಮಾಯಕರನ್ನು ಸುಲಿಯುತ್ತಿದ್ದ ಮಣಿಕಂಠನನ್ನು ಜೈಲಿಗೆ ಕಳಿಸಿರಲಿಲ್ಲ ಅಂದಿದ್ದರೆ ಅದೆಷ್ಟು ಮಂದಿ ಈತನಿಂದ ದೌರ್ಜನ್ಯಕ್ಕೀಡಾಗುತ್ತಿದ್ದಾರೋ ಏನೋ ಇತ್ತೀಚೆಗಷ್ಟೇ ‘ಹಾಯ್ ಬೆಂಗಳೂರ್’ ಈತನ ಅಷ್ಟೂ ರಂಕಲುಗಳನ್ನು ಬಯಲಿಗೆಳೆದು ವಿಸ್ತೃತ ವರದಿ ಪ್ರಕಟಿಸಿತ್ತು. ಅಶ್ವಿನ್ ಕುಮಾರ್ ವರದಿ ಗತಿಸಿ ಕಾಲು ಶತಮಾನವಾದರೂ ನಮ್ಮ ಮನದಿಂದ ಕದಲಿಲ್ಲ ಶಂಕರ್‌ನಾಗ್! ಕನ್ನಡ ಚಿತ್ರರಂಗದ ಮಿಂಚಿನ ನಟನೆಂದೇ ಖ್ಯಾತಿಯಾಗಿದ್ದ ಈ ಶಂಕರ್ ಅಕಾಲಿಕ ಮರಣಕ್ಕೀಡಾಗಿ ಇಂದಿಗೆ ಸೆಪ್ಟಂಬರ್ 30 ಬರೋಬ್ಬರಿ ಇಪ್ಪತ್ತೈದು ವರ್ಷಗಳೇ ಸಂದವು. ಆದರೂ ಕೂಡ ಇವತ್ತಿಗೂ ಶಂಕರ್‌ನಾಗ್ ಎಂದರೆ ಕಣ್ಮುಂದೆ ಬರುವುದು ಆತನ ಧೈತ್ಯ ಪ್ರತಿಭೆ, ಅಗಾಧ ಕೆಲಸಗಳು, ಮುಂದಾಲೋಚನೆ ಹಾಗೂ ಆಟೋ ಡ್ರೈವರ್‌ಗಳು. ಇಂತಹ ಶಂಕರ್‌ನಾಗ್ ಬದುಕಿದ್ದು ಕೇವಲ ಮೂವತ್ತಾರು ವರ್ಷಗಳಾದರೂ ಏನೆಲ್ಲಾ ಸಾಧನೆ ಮಾಡಿ ಹೋದ ಅಪ್ರತಿಮ ಕನ್ನಡಿಗ. ಆಟೋ ಡ್ರೈವರ್‌ಗಳ ಪಾಲಿಗೆ ಆತ ಇವತ್ತಿಗೂ ಶಂಕ್ರಣ್ಣನೇ. ಅಶ್ವಿನ್‌ಕುಮಾರ್ ನೇವಿ ಕಾಲಂ ದೀಪೋತ್ಸವ ಸಂಚಿಕೆಗೊಂದು ಮುಂಗಡ ಕತೆ ಇರುವ ನಾಲ್ಕು ವರ್ಷದ ಅವಧಿಯಲ್ಲಿ ಎದುರಾದ ಲಕ್ಷದೀಪೋತ್ಸವಗಳು ನಾಲ್ಕು. ಒಂದೊಂದು ಹಣತೆಗೊಂದೊಂದು ನೆನಪು. ಒಂದೊಂದಕ್ಕೂ ಒಂದೊಂದು ಬಣ್ಣ, ಕಣ್ಣು. ಲಕ್ಷ ಲಕ್ಷ ದೀಪಗಳು ಉತ್ಸವ ಹೊರಟಾಗ ಬೀದಿಯಲ್ಲಿ ಯಾರೂ ಹಾದಿ ತಪ್ಪುವುದಿಲ್ಲ. ಕೃಷ್ಣನೂರಲ್ಲಿ ಹಾದಿಹೋಕರು ಹಾದಿ ತಪ್ಪದಂತೆ ಹಣತೆಗಳು ಹೀಗೆ ಉರಿಯುತ್ತಲೇ ಇರುವಾಗ ಅವರ ಹಾದಿ ತಪ್ಪಿ ಹೋಗಿದ್ದಾದರೂ ಹೇಗೆ ಎಣ್ಣೆಯಲ್ಲದ್ದಿದ ಬತ್ತಿಯಂತೆ ಆ ವರ್ಷ ದೀಪೋತ್ಸವದ ಒಂದು ರಾತ್ರಿ ಉರಿಯುತ್ತಿತ್ತು. ಮಕ್ಕಳನ್ನೆಲ್ಲಾ ಯಥಾಪ್ರಕಾರ ಮಠದಿಂದ ಹೊರಕಳಿಸಲಾಗಿತ್ತು. ಊಟ ಮುಗಿಸಿ, ಕೈಕಾಲುಗಳಿಗೆ ಕೀಲಿಕೊಟ್ಟಂತೆ ಓಟ, ನುಗ್ಗಾಟ, ನೂಕಾಟಗಳ ಮೂಲಕ ಹುಡುಗರೆಲ್ಲಾ ರಥಬೀದಿಯ ಒಂದೊಂದು ದಿಕ್ಕನ್ನು ಆಕ್ರಮಿಸಿಕೊಂಡು ತಿರುಗಹತ್ತಿದರು. ಅವರವರೊಳಗೇ ಒಂದು ಆಟ, ಈ ಕಡೆಯಿಂದ ಜನರ ಮಧ್ಯೆ ಹೊರಟು ಆ ಬದಿಯಿಂದ ಬಂದು, ಒಂದು ಸ್ಥಳದಲ್ಲಿ ಎಲ್ಲರೂ ಸೇರಿಕೊಳ್ಳುವುದು. ಸೇರಿಕೊಳ್ಳುವಾಗ ಯಾರು ಮಿಸ್ ಆಗುತ್ತಾರೋ, ಅವರು ಔಟ್. ಒಂದು ಸಲ ಚಂದ್ರಶೇಖರ ಔಟ್, ಮತ್ತೊಂದು ಸಲ ಪ್ರವೀಣ್ ಔಟ್. ಒಂದೊಂದು ಸುತ್ತು ಹೀಗೇ ಆಗುವಾಗಲೂ ಒಬ್ಬೊಬ್ಬರು ಔಟ್. ನೇವಿ ಜಾನಕಿ ಕಾಲಂ ತಣ್ಣಗೆ ಉರಿದವಳು ಭಾಗ-೨ ರತ್ನಗಂಧಿ ಹೂವುಗಳೆಂದರೆ ನನಗೆ ಇಷ್ಟ. ಅವುಗಳಿಗೆ ಪ್ರಖರ ಬಣ್ಣ. ಬೆಳಗಿನ ಸೂರ್ಯನ ಬೆಳಕಿಗೆ ಅವು ಮಿನುಗುತ್ತಾ ಬಳಿಗೆ ಕರೆಯುತ್ತವೆ. ಆ ಹೂಗಳಿಗೆ ಪರಿಮಳ ಇಲ್ಲ. ಪರಿಮಳ ಇಲ್ಲದ ಹೂವುಗಳು ಜೇನುನೊಣವನ್ನು ಆಕರ್ಷಿಸುವುದಿಲ್ಲ ಎಂದೇ ನಾನು ಭಾವಿಸಿದ್ದೆ. ಬಿಜಿಎಲ್ ಸ್ವಾಮಿ ಬರೆದ ಹಸುರು ಹೊನ್ನು ಓದುವುದಕ್ಕೆ ಮೊದಲಿನ ಅಭಿಪ್ರಾಯ ಅದಾಗಿತ್ತು. -೫- ಆವತ್ತು ರಾತ್ರಿ ನಾನು ಆಲ್ಬರ್ಟ್ ಕಮೂ ಬರೆದ ಕಾದಂಬರಿ ಓದುತ್ತಿದ್ದೆ. ಅಲ್ಲೊಬ್ಬ ನಿರೂಪಕ ನಿರ್ಜನವಾಗಿ ಸೇತುವೆ ದಾಟುವುದಕ್ಕೆ ಸದಾ ಹಿಂಜರಿಯುತ್ತಿರುತ್ತಾನೆ. ಅದಕ್ಕೊಂದು ಕತೆ. ಒಮ್ಮೆ ಆತ ಉದ್ದನೆಯ ಒಂದು ಸೇತುವೆ ದಾಟಬೇಕಾಗಿ ಬರುತ್ತದೆ. ರಾತ್ರಿಯಲ್ಲಿ ಸೇತುವೆಯ ಮೇಲೆ ನಡೆಯುತ್ತಾ ಕೊಂಚ ಕೊಂಚ ಮುಂದೆ ಹೋಗುತ್ತಿದ್ದಂತೆ, ಒಬ್ಬಳು ಹೆಂಗಸು ಸೇತುವೆಯ ಬದಿಯಲ್ಲಿ ನದಿಯತ್ತ ಮುಖಮಾಡಿ ನಿಂತುಕೊಂಡದ್ದು ಕಾಣಿಸುತ್ತದೆ. ಅವಳನ್ನು ನೋಡಿ ಭಯವಾಗಿ ನಿರೂಪಕ ಬೇಗ ಬೇಗ ಆಕೆಯನ್ನು ದಾಟಿಕೊಂಡು ಹೋಗುತ್ತಾನೆ. ಆಕೆ ನದಿಗೆ ಹಾರಿ ಸಾಯುವುದಕ್ಕೆಂದು ಅಲ್ಲಿ ನಿಂತಿರಬಹುದಾ ಅವಳಿಗೆ ಸಾಂತ್ವನ ಹೇಳಿದರೆ ಆಕೆ ತನ್ನ ನಿರ್ಧಾರ ಬದಲಾಯಿಸಬಹುದಾ ಆಕೆ ಸುಂದರಿಯಾಗಿರಬಹುದಾ ಒಮ್ಮೆ ತಿರುಗಿ ನೋಡಬಹುದಾ ಎಂದೆಲ್ಲ ಯೋಚಿಸುತ್ತಾ ಆತ ಸೇತುವೆಯ ಅಂಚಿಗೆ ಬರುವ ಹೊತ್ತಿಗೆ ಯಾರೋ ನೀರಿಗೆ ಬಿದ್ದ ಸದ್ದಾಗುತ್ತದೆ. ಜಾನಕಿ ವರದಿ ರತ್ನಗಂಧಿ ಹೂವುಗಳೆಂದರೆ ನನಗೆ ಇಷ್ಟ. ಅವುಗಳಿಗೆ ಪ್ರಖರ ಬಣ್ಣ. ಬೆಳಗಿನ ಸೂರ್ಯನ ಬೆಳಕಿಗೆ ಅವು ಮಿನುಗುತ್ತಾ ಬಳಿಗೆ ಕರೆಯುತ್ತವೆ. ಆ ಹೂಗಳಿಗೆ ಪರಿಮಳ ಇಲ್ಲ. ಪರಿಮಳ ಇಲ್ಲದ ಹೂವುಗಳು ಜೇನುನೊಣವನ್ನು ಆಕರ್ಷಿಸುವುದಿಲ್ಲ ಎಂದೇ ನಾನು ಭಾವಿಸಿದ್ದೆ. ಬಿಜಿಎಲ್ ಸ್ವಾಮಿ ಬರೆದ ಹಸುರು ಹೊನ್ನು ಓದುವುದಕ್ಕೆ ಮೊದಲಿನ ಅಭಿಪ್ರಾಯ ಅದಾಗಿತ್ತು. -೫- ಆವತ್ತು ರಾತ್ರಿ ನಾನು ಆಲ್ಬರ್ಟ್ ಕಮೂ ಬರೆದ ಕಾದಂಬರಿ ಓದುತ್ತಿದ್ದೆ. ಅಲ್ಲೊಬ್ಬ ನಿರೂಪಕ ನಿರ್ಜನವಾಗಿ ಸೇತುವೆ ದಾಟುವುದಕ್ಕೆ ಸದಾ ಹಿಂಜರಿಯುತ್ತಿರುತ್ತಾನೆ. ಅದಕ್ಕೊಂದು ಕತೆ. ಒಮ್ಮೆ ಆತ ಉದ್ದನೆಯ ಒಂದು ಸೇತುವೆ ದಾಟಬೇಕಾಗಿ ಬರುತ್ತದೆ. ರಾತ್ರಿಯಲ್ಲಿ ಸೇತುವೆಯ ಮೇಲೆ ನಡೆಯುತ್ತಾ ಕೊಂಚ ಕೊಂಚ ಮುಂದೆ ಹೋಗುತ್ತಿದ್ದಂತೆ, ಒಬ್ಬಳು ಹೆಂಗಸು ಸೇತುವೆಯ ಬದಿಯಲ್ಲಿ ನದಿಯತ್ತ ಮುಖಮಾಡಿ ನಿಂತುಕೊಂಡದ್ದು ಕಾಣಿಸುತ್ತದೆ. ಅವಳನ್ನು ನೋಡಿ ಭಯವಾಗಿ ನಿರೂಪಕ ಬೇಗ ಬೇಗ ಆಕೆಯನ್ನು ದಾಟಿಕೊಂಡು ಹೋಗುತ್ತಾನೆ. ಆಕೆ ನದಿಗೆ ಹಾರಿ ಸಾಯುವುದಕ್ಕೆಂದು ಅಲ್ಲಿ ನಿಂತಿರಬಹುದಾ ಅವಳಿಗೆ ಸಾಂತ್ವನ ಹೇಳಿದರೆ ಆಕೆ ತನ್ನ ನಿರ್ಧಾರ ಬದಲಾಯಿಸಬಹುದಾ ಆಕೆ ಸುಂದರಿಯಾಗಿರಬಹುದಾ ಒಮ್ಮೆ ತಿರುಗಿ ನೋಡಬಹುದಾ ಎಂದೆಲ್ಲ ಯೋಚಿಸುತ್ತಾ ಆತ ಸೇತುವೆಯ ಅಂಚಿಗೆ ಬರುವ ಹೊತ್ತಿಗೆ ಯಾರೋ ನೀರಿಗೆ ಬಿದ್ದ ಸದ್ದಾಗುತ್ತದೆ. ಇದು ಇಡೀ ದಕ್ಷಿಣ ಕನ್ನಡ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ ಘಟನೆ. ತ್ರಿವಳಿ ಕೊಲೆ ಎಂಬ ಹೆಡ್ಡಿಂಗು ಹೊತ್ತು ಬಂದ ಈ ವರದಿಯನ್ನು ಓದಿ ಜನತೆ ಭಯಭೀತರಾಗಿದ್ದಾರೆ. ತನ್ನ ಹೆಂಡತಿ ಮಕ್ಕಳನ್ನು ತನ್ನ ಕೈಯಾರ ಕೊಚ್ಚಿ ಕೊಚ್ಚಿ ಕೊಂದು ತಾನೂ ಸಾವಿನ ಹೊಸ್ತಿಲು ದಾಟಿ ಸಾಗಿ ಹೋದ ಪದ್ಮನಾಭ ನಾಯಕ್ ಎಂಬ ಹುಂಬನೊಬ್ಬನ ವರದಿ ಇದು. ಅಸಲಿಗೆ ಈ ಕೊಲೆ ನಡೆದದ್ದಾದರೂ ಯಾಕೆ ಈ ಪ್ರಶ್ನೆಯೊಂದನ್ನು ಹುಡುಕಿಕೊಂಡು ಹೊರಟರೆ ಹಲವಾರು ಅನುಮಾನಗಳು ಕಾಡುತ್ತವೆ. ಅದರಲ್ಲಿ ಮುಖ್ಯವಾದದ್ದು ಅನೈತಿಕ ಸಂಬಂಧ. ಮಂಗಳೂರು ಗ್ರಾಮಾಂತರ ವ್ಯಾಪ್ತಿಗೆ ಬರುವ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನೂಜಿ ಗ್ರಾಮದ ನಿವಾಸಿ ಪದ್ಮನಾಭ, ರಾಜಕಾರಣದಲ್ಲಿ ಸಕ್ರಿಯನಾಗಿದ್ದಾತ. ನಿರಂತರವಾಗಿ ಎರಡು ಅವಧಿಗೆ ಗ್ರಾಮ ಪಂಚಾಯ್ತಿಗೆ ಬಿಜೆಪಿ ಅಭ್ಯರ್ಥಿಯಾಗಿ ಚುನಾಯಿತನಾದವ. ವರದಿ ಅಂಕಣ : ಆಕಾಶಬುಟ್ಟಿ ನಿಮ್ಮ ಮಕ್ಕಳಿಗೆ ಫ್ರೆಂಡ್ಸ್ ಇದ್ದಾರಾ ವಿಪ್ಪಿ, ಟುವ್ವಿಗೆ ಶನಿವಾರ ಭಾನುವಾರ ಬಂತೆಂದರೆ ನನ್ನ ಟೆನ್ಷನ್ನು ಶುರುವಾಗುತ್ತದೆ. ಕಾರಣ ಇಡೀ ಒಂದೂವರೆ ದಿನ ಮಕ್ಕಳನ್ನು ಹೇಗೆ ಎಂಗೇಜ್ ಮಾಡುವುದು ಎನ್ನುವುದೇ ದೊಡ್ಡ ಸಮಸ್ಯೆ. ಸರಿ, ಬಿಟ್ಟರೆ ಇಡೀ ದಿನ ಟೀವಿ ನೋಡುತ್ತಾರೆ. ಇವರಿಗೆ ಫ್ರೆಂಡ್ಸ್‌ನ್ನಾದರೂ ಹುಡುಕಿಕೊಂಡು ಬರೋಣ ಅಂತ ಹೋದೆ. ಇಡೀ ರೋಡಿನಲ್ಲಿ ಇದುವರೆಗೂ ಹಾಯ್ ಬಾಯ್ ಪರಿಚಯವಿದ್ದ ಪ್ರತಿಯೊಬ್ಬರ ಮನೆಗೂ ಹೋಗಿ ಸಾವಿರದ ಮನೆಯಿಂದ ಸಾಸಿವೆ ಕೇಳಿದಂತೆ ನಿಮ್ಮ ಮನೇಲ್ಲಿ ಮಗು ಇದ್ಯಾ. ಇದ್ದರೆ ಕಳಿಸಿ. ನಮ್ಮನೇಲಿ ಆಡಿಕೊಳ್ಳಲಿ ಅಂತ ಕೇಳಿದೆ. ಹೀಗೆ ನಾನು ವಿಸಿಟ್ ಹಾಕಿದ ಹನ್ನೊಂದು ಮನೆಗಳ ಪೈಕಿ ಏಳು ಮನೆಗಳಲ್ಲಿ ಮಕ್ಕಳು ಊದಿನಕಡ್ಡಿ ಹಿಡಿದು ಐ ಮೀನ್ ರಿಮೋಟ್ ಹಿಡಿದು ಟೀವಿ ನೋಡುತ್ತಾ ಕೂತಿದ್ದರು. ಬರಲು ರೆಡಿಯಿರಲಿಲ್ಲ. ಸದ್ಯ! ನನ್ನ ಮಕ್ಕಳಷ್ಟೇ ಅಲ್ಲವಲ್ಲ ಟೀವಿ ನೋಡಿ ಹಾಳಾಗ್ತಾ ಇರೋದು ಅನ್ನುವ ಕಳ್ಳ ನೆಮ್ಮದಿ. ಒಂಥರಾ ಮೂರ್ಖ ಸಮಾಧಾನ. ಉಳಿದ ನಾಲ್ಕು ಮಕ್ಕಳಲ್ಲಿ ಇಬ್ಬರಿಗೆ ಕೆಮ್ಮು ನೆಗಡಿ, ಹುಷಾರಿಲ್ಲ ಕಳಿಸಲ್ಲ ಅಂದ್ರು. ಎಚ್.ಡಿ. ಸುನೀತಾ ಅಂಕಣ : ನೂರು ಮುಖ ಸಾವಿರ ದನಿ ಜೇಮ್ಸ್ ಬಾಂಡ್ ಚಿತ್ರಗಳ ಹೈಲೈಟ್ ಮತ್ತು ನೂತನ ಬಾಂಡ್ ಚಿತ್ರ ‘ಅಕ್ಟೋಪಸಿ’ 1983. ಈ ಚಿತ್ರ ಕೂಡ ಜಾನ್ ಗ್ಲೆನ್ ನಿರ್ದೇಶನ ಮತ್ತು ರೋಜರ್ ಮೂರ್ ಬಾಂಡ್ ಪಾತ್ರ ಒಳಗೊಂಡಿದೆ. ಭಾರತದಲ್ಲಿ ಬಹುಭಾಗ ಚಿತ್ರೀಕರಣ ನಡೆದಿದೆ. ಟೆನಿಸ್ ತಾರೆ ವಿಜಯ್ ಅಮೃತ್‌ರಾಜ್ ಹಾಗೂ ಹಿಂದಿ ಚಿತ್ರನಟ ಕಬೀರ್ ಬೇಡಿ ಸಹ ತಾರಾಗಣದಲ್ಲಿದ್ದಾರೆ. ‘ನೆವರ್ ಸೇ ನೆವರ್ ಎಗೇನ್’ 1983. ಈ ಚಿತ್ರದಲ್ಲಿ ಶಾನ್ ಕಾನರಿ ಮತ್ತೆ ಜೇಮ್ಸ್ ಬಾಂಡ್. ನಿರ್ದೇಶನ ಇರ್ವಿನ್, ಕೆರ್‌ಶನರ್ ಕಿಮ್ ಬಾಸಿಂಜರ್, ಕ್ಲಾಸ್ ಮಾರಿಯಾ ಬಾಂಡಾರ್, ಮಾಕ್ಸ್‌ವಾನ್ ಸಿಡೋ ತಾರಾಗಣ. ಎಲ್ಲಾ ಸರಿ, ಆದರೆ ಇದು ಇಯಾನ್ ಸಂಸ್ಥೆಯ ಅಧಿಕೃತ ನಿರ್ಮಾಣವಲ್ಲ. ‘ಎ ವ್ಯೂ ಟು ಎ ಕಿಲ್’ 1985. ಈ ಚಿತ್ರದಲ್ಲಿ ರೋಜರ್ ಮೂರ್ ಬಾಂಡ್, ಜಾನ್‌ಗ್ಲೆನ್ ನಿರ್ದೇಶನ, ಆನ್ಯಾ ರಾಬರ್ಟ್, ಕ್ರಿಸ್ಟೋಫರ್ ವಾಕೆನ್, ಗ್ರೇಸ್ ಜೋನ್ ತಾರಾಗಣ. ‘ದಿ ಲಿವಿಂಗ್ ಡೇ ಲೈಟ್ಸ್’ 1987. ಈ ಚಿತ್ರದಲ್ಲಿ ಬಾಂಡ್ ಸರಣಿಯಲ್ಲಿ ಹೊಸ ಬಾಂಡ್ ತಿಮೋತಿ ಡಾಲ್ಟನ್ ಜೇಮ್ಸ್ ಬಾಂಡ್ ಪಾತ್ರದಲ್ಲಿ. ಮರಿಯಂ ಅಬೋ, ಜೆರೋ ಎನ್ ಕ್ರಬ್, ಜೋ ಡಾನ್ ಬೇಕರ್ ತಾರಾಗಣದಲ್ಲಿ ಮೂರನೇ ವಿಶ್ವಯುದ್ಧ ತಪ್ಪಿಸಲು ಬಾಂಡ್ ಏಳು ಖಂಡಗಳನ್ನು ಸುತ್ತಬೇಕಾಗುತ್ತದೆ. ಎಂ.ವಿ. ರೇವಣಸಿದ್ದಯ್ಯ