Buy Now @ ₹ 15.00
Preview
ಸೃಷ್ಟಿ 1040 : ಸಂಪುಟ 20, ಸಂಚಿಕೆ 52, ಸೆಪ್ಟಂಬರ್ 24, 2015
ಖಾಸ್‌ಬಾತ್
ಮನಸನ್ನು ತುಂಬ ಹಿಡಿತದಲ್ಲಿಟ್ಟುಕೊಂಡ ಗಟ್ಟಿಗ ಅವನು: ನನ್ನ ಪ್ರಾಣ ಮಿತ್ರ ಉದಯ
ಅವನು ಛಟ್ಟನೆ ಎದ್ದು ನಿಂತ. ಗೆಳೆಯರು ಅವನನ್ನೇ ಆಶ್ಚರ್ಯದಿಂದ ನೋಡಿದರು. ಟೇಬಲ್‌ನ ಮೇಲೆ ಅವನು ಅರ್ಧದಷ್ಟೇ ಕುಡಿದಿದ್ದ ವಿಸ್ಕಿ ಗ್ಲಾಸ್ ಇತ್ತು. This is the last drink. Take a bet! ಅಂದುಬಿಟ್ಟ. ಅದೇ ಕೊನೆ. ಸರಿ ಸುಮಾರು ನಲವತ್ತು-ಐವತ್ತು ವರ್ಷಗಳ ಹಿಂದಿನ ಮಾತು. ಆತ ಮತ್ತೆ ಕುಡಿದಿಲ್ಲ. ಆತನ ಹೆಸರು ಅಮಿತಾಬ್ ಬಚ್ಚನ್. ಅಷ್ಟೇಕೆ ನಾನು-ನನ್ನ ಕೆಲವು ಮಿತ್ರರು ವರ್ಷಗಟ್ಟಲೆ ಧಾರಾಕಾರ ಕುಡಿದಿದ್ದೇವೆ. ಹೀಗೇ ಹಟಕ್ಕೆ ಬಿದ್ದು ಒಂದು ಕ್ಷಣದಲ್ಲಿ ನಿರ್ಧಾರ ಮಾಡಿ ಆ ಅಭ್ಯಾಸವನ್ನು ಅಸಹ್ಯವೆಂಬಂತೆ ಕೊಡವಿಯೂ ಬಿಟ್ಟಿದ್ದೇವೆ. ಅಮಿತಾಬ್ ಗೆಳೆಯರೊಂದಿಗೆ ಕುಡಿಯುತ್ತಿದ್ದ. ಅವರಲ್ಲಿ ಯಾರೋ ಕೆಣಕಿದರು. “ನಿನ್ನ ಕೈಲೆಲ್ಲಾಗುತ್ತೆ ಕುಡಿತ ಬಿಡೋದು ಅಂದಿದ್ದಿರಬೇಕು. ಅಷ್ಟು ಸಾಕಲ್ಲವೇ Hurt ಆಗಲಿಕ್ಕೆ, ಛಲಕ್ಕೆ, ಹ್ಯಾಂವಕ್ಕೆ ಇನ್ನೇನು ಬೇಕು ಅಮಿತ್ ಛಲಕ್ಕೆ ಬಿದ್ದ. ಇವತ್ತಿನ ಈ ಘಳಿಗೆಯ ತನಕ ಆತ ವಿಸ್ಕಿ ಮುಟ್ಟಿಲ್ಲ. That is the end. ಅವತ್ತು ಅವನಿಗೆ ನನ್ನ ಕುರಿತು ಒಂದು ಕುತೂಹಲವಿತ್ತು. “ರವೀ, ನಿಜವಾಗ್ಲೂ ಕುಡಿಯೋದು ಬಿಟ್ಟುಬಿಟ್ಟಿದ್ದೀಯಾ ಅಂತ ಕೇಳಿದ್ದ.
ರವಿ ಬೆಳಗೆರೆ
ಸಾಫ್ಟ್‌ಕಾರ್ನರ್
ಅವರಿಬ್ಬರೂ ಡಿವೋರ್ಸ್ ಪಡೆದರೇನಂತೆ
ಈ ಹುಡುಗ ಸುದೀಪ್. ಆತನ ಬಗ್ಗೆ ನನಗೊಂದು ಪ್ರೀತಿಯಿದೆ. ಸೌಜನ್ಯವಂತ ಮನುಷ್ಯ. ಆತನ ಸಾರ್ವಜನಿಕ ನಡಾವಳಿಯಲ್ಲಿ ದೋಷಗಳಿಲ್ಲ. ಎಂಥ ಪ್ರೊಡ್ಯೂಸರ್ ಆದರೂ, ಯಾವುದೇ ಭಾಷೆಯವರಾದರೂ ಕಣ್ಣು ಮುಚ್ಚಿಕೊಂಡು ಕೋಟ್ಯಂತರ ರುಪಾಯಿ ಹೂಡಬಹುದು. ಈ ದರ್ಶನ್, ದುನಿಯಾ ವಿಜಿ ಇತ್ಯಾದಿ ತರಲೆಗಳಿವೆಯಲ್ಲ ನೀವು ಸುದೀಪ್‌ನನ್ನು ಇವರಿಗೆ ಹೋಲಿಸಲೇ ಬೇಡಿ. He is totally a different metal. “ಬಿಟ್ಟೇ ಬಿಡಿ. ಸುದೀಪ್ ಬಗ್ಗೆ ಬರೆದು ಏನಾಗಬೇಕಿದೆ ಅಂದೆ. ಅಂದ ಮಾತ್ರಕ್ಕೆ, ಇದು ಪೂರ್ತಿಯಾಗಿ ಬಿಟ್ಟೇ ಬಿಡುವಂಥ ಸಂಗತಿಯೂ ಅಲ್ಲ. ಒಬ್ಬ ಪ್ರಖ್ಯಾತ, ಯಶಸ್ವೀ ನಟನ ನಿಜ ಬದುಕಿನ ಬಗ್ಗೆ ತಿಳಿದುಕೊಳ್ಳುವ ಇಚ್ಛೆ ಓದುಗರಿಗಿರುತ್ತದೆ. ಅದು ಅವರ ಹಕ್ಕೂ ಹೌದು.
ರವಿ ಬೆಳಗೆರೆ
ಬಾಟಮ್ ಐಟಮ್
ಬದುಕು ಚಿಕ್ಕ ಚಿಕ್ಕ ಅಚ್ಚರಿಗಳ ಸಂತೆ ಕಣೋ!
“ಅಮ್ಮಾ ಕ್ಯಾಮೆಲ್ಲೂ! ಅಂತ ಒಂಟೆಯೊಂದನ್ನು ದೂರದಿಂದ ನೋಡಿ ಕಿರುಚಿ ಕೈತಟ್ಟುವ ಮಗುವನ್ನು ನೋಡಿದ್ದೀರಲ್ಲ ಅಂಥದೊಂದು excitement ನೀಡುವಂಥ ಅನುಭವ ನಿಮಗೆ ಆಗಿ ಎಷ್ಟು ದಿನಗಳಾದವು ನೆನಪು ಮಾಡಿಕೊಳ್ಳಿ ಮೊನ್ನೆ ಹುಣ್ಣಿಮೆಯ ಹಿಂದಿನ ದಿನ ಆಕಾಶದಲ್ಲಿ ಸಂಜೆ ಹೊತ್ತಿಗಾಗಲೇ ಕಾಣಿಸಿಕೊಂಡ ಈ...ಷ್ಟಗಲ ಕಿತ್ತಳೆ ಬಣ್ಣದ ಚಂದಿರನನ್ನು ನೋಡಿದಾಗ ನೀವು ಎಕ್ಸೈಟ್ ಆಗಿದ್ದೀರಾ ಜೋಗದ ಒಂದು ತುಂತುರು ಅಲೆ ಬಂದು ನಿಮ್ಮನ್ನು ತಾಕಿ ಮುಂದಕ್ಕೆ ಹೋದಾಗ ‘ಹ್...’ ಅಂತ ನಿಮಗೇ ಗೊತ್ತಿಲ್ಲದೆ ಉದ್ಗರಿಸಿದ್ದೀರಾ ಪುಟ್ಟ ಮಗಳು ಇದ್ದಕ್ಕಿದ್ದಂತೆ ಸೀರೆ ಉಟ್ಟುಕೊಂಡು ತೊಡರುಗಾಲಿಡುತ್ತ ಬಂದು ‘ಅಪಾ...’ ಅಂದಾಗ ತಕ್ಷಣ ನಿಮಗೇನನ್ನಿಸಿತು ಒಂದು ಅದ್ಭುತವಾದ ಭಾಷಣ ಕೇಳಿದಾಗ, ಕವಿತೆ ಓದಿದಾಗ ನೀವು ರೋಮಾಂಚಿತರಾದಿರೋ ಇಲ್ಲವೋ
ರವಿ ಬೆಳಗೆರೆ
ಹಲೋ
ಒಕ್ಕೂಟ ವ್ಯವಸ್ಥೆಯ ವಿರುದ್ಧ ನಡೆದು ಬಚಾವಾಗಲು ಸಾಧ್ಯವಿಲ್ಲ ಮೋದೀಜಿ
ಈ ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ನಂಬಿಕೆ ಇದೆಯೋ, ಇಲ್ಲವೋ ಅನ್ನುವುದೇ ಅರ್ಥವಾಗುತ್ತಿಲ್ಲ. ಲೋಕಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಬಗ್ಗೆ ಟೀಕಿಸುವಾಗ ತಮ್ಮನ್ನು ತಾವು ಒಕ್ಕೂಟ ವ್ಯವಸ್ಥೆಯ ಆರಾಧಕ ಎಂಬಂತೆ ಬಣ್ಣಿಸಿಕೊಂಡ ಮೋದಿ ಇದೀಗ ಅದಕ್ಕೆ ವ್ಯತಿರಿಕ್ತವಾಗಿ ವರ್ತಿಸುತ್ತಿದ್ದಾರೆ. ಉದಾಹರಣೆಗೆ ಕರ್ನಾಟಕದ ವಿಷಯದಲ್ಲಿ ಅವರು ನಡೆದುಕೊಳ್ಳುತ್ತಿರುವುದನ್ನೇ ಗಮನಿಸಿ. ರಾಜಸ್ತಾನದ ನಂತರ ಅತ್ಯಂತ ಹೆಚ್ಚಿನ ಒಣಭೂಮಿಯನ್ನು ಹೊಂದಿರುವ ರಾಜ್ಯವೆಂದರೆ ಕರ್ನಾಟಕ. ಇಂತಹ ಕರ್ನಾಟಕದಲ್ಲಿ ಈ ಬಾರಿ ಬರ ಬಿದ್ದಿದೆ. ಅದು ಹತ್ತೋ, ಇಪ್ಪತ್ತೋ ತಾಲೂಕುಗಳಲ್ಲಿ ಅಲ್ಲ. ನೂರಾ ಮೂವತ್ತೈದು ತಾಲೂಕುಗಳಲ್ಲಿ. ಒಂದು ಅಂದಾಜಿನ ಪ್ರಕಾರ, ಅದಾಗಲೇ ಆಗಿರುವ ನಷ್ಟದ ಪ್ರಮಾಣ ಹದಿನೈದು ಸಾವಿರ ಕೋಟಿ ರುಪಾಯಿ. ಹೀಗಾಗಿ ರಾಜ್ಯ ಸಂಕಷ್ಟದಲ್ಲಿದೆ. ಆದ್ದರಿಂದ ಬರ ಪರಿಹಾರ ಕಾಮಗಾರಿಗಾಗಿ ಮೂರು ಸಾವಿರ ಕೋಟಿ ರುಪಾಯಿ ಕೊಡಿ ಅಂತ ಸರ್ವಪಕ್ಷಗಳ ನಿಯೋಗದಲ್ಲಿ ಹೋಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಳಿದರೆ, ನೀವು ನಡೀರಿ. ನಾವು ಬರ ಅಧ್ಯಯನ ತಂಡವನ್ನು ಕಳಿಸುತ್ತೇವೆ ಎಂದರು ಮೋದಿ.
ರವಿ ಬೆಳಗೆರೆ
ಮುಖಪುಟ ವರದಿ
ಇದು ಸಭ್ಯ ಸುದೀಪ್ ಮನೆಯ ಹಳೆಯ ವ್ಯಾಜ್ಯ!
ಕನ್ನಡ ಚಿತ್ರರಂಗದ ಇವತ್ತಿನ ತಲೆಮಾರಿನ ನಾಯಕ ನಟರಿಗೆ ಹೋಲಿಸಿದರೆ ನಿಜಕ್ಕೂ ಸುದೀಪ್ ಮೆಚ್ಚುಗೆಯ ನಟ. ಆತನ ಮಾತೇ ‘ಖಡಕ್’ ಆಗಿರುವುದರಿಂದ ಉಳಿದವರಿಗೆ ಅದು ‘ಅಹಂ’ ಅನ್ನಿಸಿರಲಿಕ್ಕೂ ಸಾಧ್ಯ. ಇಂತಹ ಸುದೀಪ್‌ನ ಬಾಳಲ್ಲಿ ಈಗ ಬಿರುಕು ಬಂದಿದೆ. ಪತಿ-ಪತ್ನಿ ಪರಸ್ಪರ ಸಮ್ಮತಿ ಮೇರೆಗೆ ವಿಚ್ಛೇದನ ಕೋರಿ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಒಂದು ಮೂಲದ ಪ್ರಕಾರ ಕಳೆದ ಕೆಲ ವರ್ಷಗಳಿಂದ ಸುದೀಪ್ ಹಾಗೂ ಪತ್ನಿ ಪ್ರಿಯಾ ಬೇರೆ-ಬೇರೆಯಾಗಿ ವಾಸಿಸುತ್ತಿರುವ ಕುರಿತು ಮಾತು ಕೇಳಿ ಬರುತ್ತಿವೆ. ಪತ್ನಿ ಪ್ರಿಯಾಳ ಜೊತೆ ಮಗಳು ವಾಸಿಸುತ್ತಿದ್ದು, ಸುದೀಪ್ ಮಾತ್ರ ತನ್ನ ತಂದೆ-ತಾಯಿಯ ಜೊತೆ ಜೆ.ಪಿ.ನಗರದ 15ನೇ ಕ್ರಾಸಿನಲ್ಲಿರುವ ಮನೆಯಲ್ಲಿ ವಾಸಿಸುತ್ತಿದ್ದಾರೆ. ಇಂಜಿನೀರಿಂಗ್ ಓದು ಮುಗಿದ ನಂತರ ಇಂಡಿಯನ್ ಏರ್‌ಲೈನ್‌ನಲ್ಲಿ ಕೆಲಸಕ್ಕಿದ್ದ ಪ್ರಿಯಾ, ತದನಂತರ ಖಾಸಗಿ ಬ್ಯಾಂಕೊಂದರಲ್ಲಿ ಕೆಲಸಕ್ಕೆ ಸೇರಿದ್ದರು.
ಲೋಕೇಶ್ ಕೊಪ್ಪದ್
ರಾಜಕೀಯ
ಅತಿರಥರ ಸಮಾಗಮ! ದೇವು-ಯಡ್ಡಿ-ಸಿದ್ದು-ಇಬ್ರಾಹಿಂ ಮಹಾಮೈತ್ರಿಕೂಟ
ಯಾರೇನೇ ಹೇಳಿದರೂ ಬೆಂಗಳೂರು ಮತ್ತು ಸುತ್ತಲ ಕೆಲವು ಪಾಕೇಟುಗಳ ಮಟ್ಟಿಗೆ ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ನಿರ್ವಿವಾದವಾಗಿ ವಕ್ಕಲಿಗ ನಾಯಕರಾಗಿ ಹೊರಹೊಮ್ಮಿದ್ದಾರೆ. ಗೋವಿಂದರಾಜನಗರ, ವಿಜಯನಗರದಲ್ಲಿ ಕಾಂಗ್ರೆಸ್ ಪಕ್ಷದ್ದೇ ವಕ್ಕಲಿಗ ಶಾಸಕರಿದ್ದರೂ ಅಲ್ಲಿನ ವಕ್ಕಲಿಗರು ಬಿಜೆಪಿಗೆ ಮತ ಹಾಕಿದ್ದು ಇದಕ್ಕೆ ಸಾಕ್ಷಿ. ಇದರ ಪರಿಣಾಮವಾಗಿ ಭವಿಷ್ಯದಲ್ಲಿ ಅಶೋಕ್‌ಗೆ ಪಟ್ಟ ಕಟ್ಟುವ ಲೆಕ್ಕಾಚಾರ ಶುರುವಾಗಿದೆ. ಅಷ್ಟರೊಳಗಾಗಿ ನಾವು ಒಳಗಿಂದೊಳಗೇ ಕೆಲಸ ಮಾಡಬೇಕು ಎಂದು ವಿವರಿಸಿದವರು ಇಬ್ರಾಹಿಂ. ನಾವು, ದೇವೆಗೌಡರು ಪರಸ್ಪರ ಕೈ ಜೋಡಿಸಬೇಕು. ಪಕ್ಷೇತರರನ್ನು ಒಗ್ಗೂಡಿಸಿಕೊಂಡು ರಾಜ್ಯಸಭೆ, ವಿಧಾನಸಭೆ, ವಿಧಾನಪರಿಷತ್ತಿನ ನಮ್ಮೆಲ್ಲ ಶಾಸಕರ ಮತಗಳನ್ನು ಪಡೆದು ಬಿಬಿಎಂಪಿಯಲ್ಲಿ ಮೈತ್ರಿ ಮಾಡಿಕೊಳ್ಳಬೇಕು ಎಂದರು ಇಬ್ರಾಹಿಂ.
ಆರ್.ಟಿ.ವಿಠ್ಠಲಮೂರ್ತಿ
ವರದಿ
ಜಮಖಂಡಿ ಶಾಸಕ ನ್ಯಾಮಗೌಡ ಊಟಕ್ಕೆ ಕುಂತವ್ನೆ!
ಬಾಗಲಕೋಟೆ ಜಿಲ್ಲೆಯ ಜಮಖಂಡಿ ವಿಧಾನಸಭಾ ಕ್ಷೇತ್ರದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಶಾಸಕ ಸಿದ್ದು ನ್ಯಾಮಗೌಡರ ದರ್ಪ, ಅಧಿಕಾರಿಗಳ ಅಂಧಾ ದರ್ಬಾರ್, ದೌಲತ್ತುಗಳನ್ನ ಕೇಳುವವರಿಲ್ಲ ಎಂಬಂತಾಗಿದೆ. ಹಿಂದಿನ ಶಾಸಕ ಶ್ರೀಕಾಂತ್ ಕುಲಕರ್ಣಿ ಕ್ಷೇತ್ರಕ್ಕೆ ನೂರಾರು ಕೋಟಿ ಅನುದಾನ ಕೊಡಿಸಿದ್ದರು. ಆದರೆ ಹಾಲಿ ಶಾಸಕ ಸಿದ್ದು ನ್ಯಾಮಗೌಡ ಅವುಗಳಿಗೆ ಎಳ್ಳು-ನೀರು ಬಿಟ್ಟು ಕ್ಷೇತ್ರವನ್ನ ಸಂಪೂರ್ಣ ಕಡೆಗಣಿಸಿದ್ದಾರೆ. ಅಲ್ಲೋ ಇಲ್ಲೋ ಒಂದಷ್ಟು ಕಾಮಗಾರಿಗಳು ಆಗಿದ್ದರೂ ಅವು ಕಳಪೆಯಾಗಿವೆ. ನಡೆಯುತ್ತಿರುವ ಕಾಮಗಾರಿಗಳಿಗೂ ಶಾಸಕ ಸಿದ್ದು ನ್ಯಾಮಗೌಡ ಅಡ್ಡಗಾಲು ಹಾಕುತ್ತಿದ್ದಾರೆ.
ವರದಿಗಾರ
ವರದಿ
ಶಿವಣ್ಣನ ಮುಂದೆಯೂ ಮಧು ಬಂಗಾರಿಯ ಪಾಲಿಟಿಕ್ಸ್
ಚುನಾವಣೆ ಮುಗಿದ ನಂತರ ಗೀತಾ ಶಿವರಾಜ್ ಕುಮಾರ್ ಸೊರಬಕ್ಕೆ ಬಂದು ಹೋಗುತ್ತಿದ್ದರಾದರೂ ಶಿವಮೊಗ್ಗದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿಲ್ಲ. ಗೆದ್ದರೂ, ಸೋತರೂ ಗೀತಕ್ಕ ಶಿವಮೊಗ್ಗದ ಜನರ ಕೈಗೆ ಸಿಗಲಾರರು ಎಂಬುದಾಗಿ ಚುನಾವಣೆ ಸಂದರ್ಭದಲ್ಲಿ ಕೇಳಿ ಬಂದ ಟೀಕೆಗಳನ್ನು ನಿಜ ಮಾಡಿದರಾದರೂ ಸೊರಬಕ್ಕೆ ಬಂದ ಸಂದರ್ಭದಲ್ಲಿ ಆಗಾಗ ತಾವು ಸಕ್ರಿಯ ರಾಜಕೀಯಕ್ಕೆ ಬರುವ ಮಾತನಾಡುತ್ತಲೇ ಬಂದಿದ್ದಾರೆ. ಲೋಕಸಭಾ ಚುನಾವಣೆ ಸಂದರ್ಭದಲ್ಲೂ ಶಾಸಕ ಮಧು ಬಂಗಾರಪ್ಪ ತನ್ನ ಸೋದರ ಸೊಸೆಯ ಮದುವೆ ವಿಚಾರವನ್ನು ಸೂಕ್ಷ್ಮವಾಗಿ ಪ್ರಸ್ತಾಪಿಸುತ್ತಿದ್ದರು. ಗೀತಕ್ಕನ ಮಗಳು ವಕ್ಕಲಿಗರ ಹುಡುಗನನ್ನು ಮದುವೆಯಾಗಲಿದ್ದಾಳೆ, ಎಂಗೇಜ್‌ಮೆಂಟ್ ತಯಾರಿಗಳು ನಡೆಯುತ್ತಿವೆ ಎಂಬುದಾಗಿ ಸುದ್ದಿಗೋಷ್ಠಿಯೊಂದರಲ್ಲಿ ಮಧು ಬಂಗಾರಪ್ಪರೇ ಹೇಳಿದ್ದರು.
ವರದಿಗಾರ
ವರದಿ
ಯಾರ ಕೈಗೆ ಸಿಗಲಿದೆ ಹುಬ್ಬಳ್ಳಿಯ ಅಂಜುಮನ್
ಸವಣೂರನಿಗೆ ಹೆಂಗಾದರೂ ಸರಿ ಕಾಂಗ್ರೆಸ್‌ನಿಂದ ಶಾಸಕನಾಗುವ ಹುಚ್ಚು ತಗುಲಿ ಸುಮಾರು ಐದು ವರ್ಷಗಳೇ ಕಳೆದಿವೆ. ಹಂಗಾಗಿ ಕೂಡಲೇ ಅಂಜುಮನ್ ಅಧ್ಯಕ್ಷನಾಗಿ ಬಿಟ್ಟರೆ ಮುಂದೆ ಶಾಸಕನಾಗುವ ಕೆಲಸ ಸುಸೂತ್ರ ಎಂಬಂತಿದೆ ಈತನ ಆಸೆ. ಕಳೆದ ಚುನಾವಣೇಲಿ ಜಗದೀಶ ಶೆಟ್ಟರ್‌ರ ವಿರುದ್ಧ ಕಾಂಗ್ರೆಸ್ ಟಿಕೇಟು ಕೇಳಿದರೆ, ಪಾರ್ಟಿಯವರು ಇವನತ್ತ ಹೊರಳಿಯೂ ನೋಡಲಿಲ್ಲ. ಮೊನ್ನೆ ಸಿದ್ದು ಸರಕಾರ ರಚನೆ ಆದ ನಂತರ ನಿಗಮ ಮಂಡಳಿಗೆ ಟ್ರೈ ಮಾಡಿದ್ದ. ಆದರೆ ಕೆಲಸವಾಗಲಿಲ್ಲ. ತೀರಾ ಆರು ತಿಂಗಳುಗಳ ಹಿಂದೆ ಹುಬ್ಬಳ್ಳಿಯ ಎನ್‌ಡಬ್ಲುಆರ್‌ಟಿಸಿಯಲ್ಲಿ ಸ್ಕ್ರಾಪ್ ಕಳ್ಳತನದ ತನಿಖೆಯ ವಿಚಾರಣೆ ನಡೆಯುತ್ತಿತ್ತಲ್ಲ ಅದರಲ್ಲಿ ಅಧಿಕಾರಿಗಳಿಗೆ ಕೋಟಿಗಟ್ಟಲೇ ಹಣ ತಿನ್ನಿಸಿದ ಆರೋಪ ಇರುವುದು ಇದೇ ಸವಣೂರಿನ ಮೇಲೆ.
ವರದಿಗಾರ
ವರದಿ
ಚಿತ್ರದುರ್ಗ: ಮಾನಗೇಡಿ ಪ್ರಿನ್ಸಿಪಾಲ್ ರೆಡ್ಡಿ ಒದೆ ತಿಂದು ಜೈಲಿಗೆ ಹೋದ ಕಥೆ!
ಇಂತಹ ಹಲಾಲಟೋಪಿ ಮನುಷ್ಯನಿಗೆ ಮೊನ್ನೆ ಸೆಪ್ಟಂಬರ್ ಹತ್ತನೇ ತಾರೀಖಿನಂದು ಗ್ರಹಚಾರ ‘ಗೇರ್’ ಬದಲಿಸಿತ್ತು. ದಾವಣಗೆರೆ ಪೂರ್ವ ವಲಯದ ಐಜಿ ನಂಜುಂಡಸ್ವಾಮಿಯವರು ಬಡ್ತಿ ಕೊಡುವ ಸಲುವಾಗಿ ತಮ್ಮ ಕಚೇರಿಗೆ ಹಲವು ಎಎಸ್‌ಐಗಳನ್ನ ಕರೆಸಿಕೊಂಡಿದ್ದರು. ಅವರ ಪೈಕಿ ಶಿವಮೊಗ್ಗ ತುಂಗಾನಗರ ಠಾಣೆಯ ಎಎಸ್‌ಐ ಶ್ರೀನಿವಾಸ್ ಕೂಡ ಇದ್ದರು. At a same time ಸೆಪ್ಟಂಬರ್ 15ನೇ ತಾರೀಖಿನ ತನ್ನ ಮಾನವ ಹಕ್ಕುಗಳ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಐಜಿ ನಂಜುಂಡಸ್ವಾಮಿಗೆ ಆಹ್ವಾನ ನೀಡಲು ಇವನೂ ಬಂದಿದ್ದ. ‘ಬಂದ್ಯಾ ಪುಟ್ಟ ಹೋದ್ಯಾ ಪುಟ್ಟ’ ಅಂತ ಇರುವುದು ಬಿಟ್ಟು ಅಲ್ಲಿದ್ದ ಎಎಸ್‌ಐ ಶ್ರೀನಿವಾಸ್‌ನ ಮಾತಿಗೆ ಎಳೆದಿದ್ದಾನೆ.
ವರದಿಗಾರ
ನೇವಿ ಕಾಲಂ
ಎಡ, ಬಲ, ಬಲ ಎಡ, ಎಡಬಲ, ಬಲಎಡ...
ಶೇಷಪ್ಪ ತುಂಬ ದೂರದಿಂದ ಬರುತ್ತಿದ್ದ. ಅವನಿಗೆ ಹಸಿವಾಗಲೀ, ನೀರಡಿಕೆಯಾಗಲೀ ಆಗಲೇ ಇಲ್ಲವೇನೋ ಅನ್ನುವಂತೆ ಅದೆಲ್ಲಿಂದಲೋ ದಾಪುಗಾಲು ಹಾಕಿಕೊಳ್ಳುತ್ತಾ ಬರುತ್ತಿದ್ದ. ಆ ಸುತ್ತಮುತ್ತಲ ಊರವರಿಗೆ ಅದು ಅಷ್ಟೇನೂ ಪರಿಚಿತ ಮುಖವಲ್ಲ, ಎಲ್ಲೋ ನೋಡಿರಬಹುದು, ಅಲ್ಲೆಲ್ಲಿಂದಲೋ ಬಂದಿರಬಹುದು ಅನ್ನುವ ಲಕ್ಷಣಗಳೂ ಇಲ್ಲ. ಬಂದವನು ನಿಂತುಕೊಂಡ. ಒಂದು ಸೇತುವೆ. ಕೈಕಂಬ ಇತ್ತು. ಅದಕ್ಕೆ ಜೋಡಿಸಿಟ್ಟ ದಿಕ್ಕು ಸೂಚಕ ಬೋರ್ಡು ಎಡಭಾಗಕ್ಕೊಂದು, ಬಲಭಾಗಕ್ಕೊಂದು ಬಾಗಿಕೊಂಡಿತ್ತು. ಆ ಬೋರ್ಡು ಎಡಕ್ಕೆ ತೋರಿಸಿದ್ದು, ಬಲಕ್ಕೆ ತಿರುಗಿಕೊಂಡಿದ್ದರೆ, ಬಲಕ್ಕೆ ಹಾಕಿದ್ದು ಎಡಕ್ಕೆ ತಿರುಗಿಕೊಂಡಿದ್ದರೆ ಅಂತ ಅವನಿಗೆ ತುಂಬ ಗೊಂದಲ ಕಾಡಿತು. ಅದರ ಹಿಂದೆ ಒಂದು ಜುಳುಜುಳು ತೊರೆ ಹರಿಯುತ್ತಿತ್ತು. ಯಾವ ಬರಗಾಲವೂ ಬತ್ತಿಸಲಾಗದ, ಎಂಥ ಮಳೆಗಾಲವೂ ಉಕ್ಕಿಸಲಾಗದ ಶಾಂತ ಹರಿವಿನಂತೆ ಆ ಹೊಳೆ ಎಲ್ಲಿಂದಲೋ ಬಂದು ಇನ್ನೆಲ್ಲಿಗೋ ಹೋಗುತ್ತಿತ್ತು.
ನೇವಿ
ಜಾನಕಿ ಕಾಲಂ
ಆಸ್ಕ್ ಮಿಸ್ಟರ್ ವೈಯನ್ಕೆ - ಭಾಗ -೨
ಒಂದು ಹಳೆಯ ಬಾರು. ಗಿರಾಕಿಗಳೇ ಇಲ್ಲ. ಕೇವಲ ಒಂದು ಟೇಬಲ್ಲು ಮತ್ತು ಕುರ್ಚಿ. ಟೇಬಲ್ಲಿನ ಮೇಲೆ ಗ್ಲಾಸಿದೆ. ಗ್ಲಾಸಿನಲ್ಲಿ ವಿಸ್ಕಿ ಅರ್ಧ ತುಂಬಿದೆ. ಅದನ್ನು ನೋಡುತ್ತಾ ಕೂತಿರುವ ಘಾ. ಘಾ ಕನ್‌ಫ್ಯೂಶನ್ನು ಆಗಿ ಆಗಿ ನಾನೇ ಕನ್‌ಫ್ಯೂಷಿಯನ್ನು. ಈ ಗ್ಲಾಸು ಅರ್ಧ ತುಂಬಿದ್ಯಾ, ಅರ್ಧ ಖಾಲಿ ಆಗಿದ್ಯಾ. ಸಮಾಜವಾದಿಗಳನ್ನ ಕೇಳಿದ್ರೆ ಅರ್ಧ ಖಾಲಿ ಆಗಿದೆ ಅಂತಾರೆ. ಕವಿಗಳನ್ನ ಕೇಳಿದ್ರೆ ಅರ್ಧ ತುಂಬಿದೆ ಅಂತಾರೆ. ಮನಸ್ಸನ್ನ ಕೇಳಿದ್ರೆ ಅರ್ಧ ಹೊರಗಿದೆ, ಅರ್ಧ ಒಳಗಿದೆ ಅನ್ನತ್ತೆ. ಅದ್ಯಾವಾಗ್ಲೂ ಹಂಗೇ ಕಣ್ರೀ, ಅರ್ಧ ಹೊರಗಿರತ್ತೆ, ಅರ್ಧ ಒಳಗಿರತ್ತೆ. ಎದ್ದು ನಿಂತು ಒಂದು ಸಿಪ್ ಕುಡಿಯುತ್ತಾನೆ ಕೂತ್ಕೋಬಾರದು.. ನಿಂತ್ಕಂಡೇ ಕುಡೀಬೇಕು.. ಅಟ್ ಲೀಸ್ಟ್ ನಂಗಾದರೂ ಗೊತ್ತಾಗಬೇಕು, How much gundu I canwithstand ಅಂತ.
ಜಾನಕಿ
ವರದಿ
ಹುಷಾರ್! ನಕಲಿ ಸಿಬಿಐ ಆಫೀಸರ್ ನವೀನ್ ಬರುತ್ತಿದ್ದಾನೆ
ಒಂದು ದಿನ ರಕ್ಷಿತಾಗೆ ಮನೆಯಲ್ಲಿ ಇದ್ದಕ್ಕಿದ್ದಂತೆ ಒಂದು ಐಡೆಂಟಿಟಿ ಕಾರ್ಡ್ ಸಿಕ್ಕಿತು. ಅದನ್ನ ನೋಡಿ ಆಕೆಗೆ ನಿಜಕ್ಕೂ ಶಾಕ್. ಯಾಕೆಂದರೆ ಅದು ಅಂತಿಂಥ ಐಡೆಂಟಿಟಿ ಕಾರ್ಡ್ ಅಲ್ಲ. ದೇಶದ ಅತ್ಯುನ್ನತ ತನಿಖಾ ಸಂಸ್ಥೆ ಸಿಬಿಐನ ಐಡೆಂಟಿಟಿ ಕಾರ್ಡ್ ಆಗಿತ್ತು. ಅದರಲ್ಲಿದ್ದ ಫೊಟೋ ಸ್ವತಃ ತನ್ನ ಭಾವಿ ಪತಿ ನವೀನ್‌ನದ್ದು. ಅದರ ಮೇಲೆ ಸಿಬಿಐ, ಅಪರಾಧ ನಿಗ್ರಹ ದಳ, ಬೆಂಗಳೂರು ಅಂತ ಬರೆದಿತ್ತು. ಒಂದು ಕ್ಷಣ ಅವಳಿಗೆ ನಂಬಲು ಸಾಧ್ಯವಾಗಲಿಲ್ಲ. ಕೂಡಲೇ ಫೋನ್ ಮಾಡಿ ಏನಿದು ಅಂತ ಕೇಳಿದಳು. ಆಗ ಎದ್ನೋ ಬಿದ್ನೋ ಅಂತ ಓಡೋಡಿ ಬಂದ ನಯವಂಚಕ ನವೀನ್,-ಅಬ್ಬಾ ಇದು ಸಿಕ್ಕಿತಲ್ಲ, ಎಲ್ಲಿ ಕಳೆದುಹೋಯಿತೋ ಅಂತ ಹೆದರಿಕೊಂಡಿದ್ದೇ-ಅಂತ ಡ್ರಾಮಾ ಆಡಲು ಶುರು ಮಾಡಿದ.
ಅಶ್ವಿನ್ ಕುಮಾರ್
ಅಂಕಣ : ಆಕಾಶಬುಟ್ಟಿ
ಸರಿಗಮಾಮ-ವಾಸ್ಕೋಡಿಗಾಮ
ನವೀನ್ ನನ್ನ ಓರಗೆಯ ಹುಡುಗ. ಫುಲ್ ಎನರ್ಜಿ, ಫುಲ್ ಜೋಶ್ ಇರುವ ಮೊದಲ ಇಪ್ಪತ್ತು ಇಪ್ಪತ್ತೈದು ವರ್ಷಗಳು ಅವನು ಓದುವುದರಲ್ಲಿ ಕಳೆದ. ಮುಂದಿನ ನಾಲ್ಕೈದು ವರ್ಷಗಳು ತನಗೆ ಸೂಟ್ ಆಗುವ ನೌಕರಿ ಹುಡುಕುತ್ತಾ ಕಡೆಗೆ ಒಳ್ಳೆ ಕಂಪನಿಯ ಮಾರ್ಕೆಟಿಂಗ್ ಟೀಮ್ ಹೆಡ್ ಆದ. ಅವನ ಲೈಫು ಸೆಟಲ್ ಆಯಿತು ಅಂತ ಅವನ ಹೆತ್ತವರು ಭಾವಿಸಿ ನವೀನನಿಗೆ ಇಪ್ಪತ್ತೆಂಟನೇ ವಯಸ್ಸಿಗೆ ಮದುವೆ ಮಾಡಿದರು. ಹೆತ್ತವರಿಗೆ ಯಾಕೆ ಕಷ್ಟ ಅಂತ ನವೀನನೇ ಲೋನು ತೆಗೆದು ಮದುವೆಯಾದ. ಮೈಯಲ್ಲಿ ಕಸುವು, ರಿಸ್ಕು ತೆಗೆದುಕೊಳ್ಳುವ ವಯಸ್ಸಿದ್ದುದರಿಂದ ಇನ್ಸ್ಟಾಲ್‌ಮೆಂಟಿನಲ್ಲಿ ಟೀವಿ, ಕಾರು, ಅಪಾರ್ಟ್‌ಮೆಂಟು ಕೊಂಡುಕೊಂಡ. ಕಣ್ಣ ಮುಂದೆಯೇ ಬೆಳೆದು ಬಿಟ್ಟ ಅಂತ ಜೊತೆಯವರು ಖುಷಿ ಪಟ್ಟರು. ಕೆಲವರು ಅಸೂಯೆ ಪಟ್ಟರು. ಕುತ್ತಿಗೆಗೆ ಟೈ ಕಟ್ಟಿಕೊಂಡು ಆಫೀಸಿಗೆ ಹೋಗಿ ಹೋಗಿ ಕಂತುಗಳನ್ನು ತೀರಿಸುತ್ತಾ, ನೋಡನೋಡುತ್ತಾ ನವೀನನಿಗೆ ನಲವತ್ತೈದಾಗೇ ಹೋಯಿತು.
ಎಚ್.ಡಿ. ಸುನೀತಾ
ಅಂಕಣ : ನೂರು ಮುಖ ಸಾವಿರ ದನಿ
ಬಹುಮುಖ ಪ್ರತಿಭೆಯ ಬ್ರೂಸ್ ಲೀ ವಿಶ್ವಮಾನವ
1964ರಲ್ಲಿ ಬ್ರೂಸ್ ಲೀ ಓಕ್‌ಲೆಂಡ್ ಮತ್ತಿತರ ಕಡೆಗಳಲ್ಲಿ ಜುನ್ ಫಾನ್ ಗುಂಗ್ ಫು ತರಬೇತಿ ಶಾಲೆಗಳನ್ನು ನಡೆಸುತ್ತಿರುತ್ತಾನೆ. ಅವನ ಶಾಲೆಗಳಲ್ಲಿ ತರಬೇತಿಗಾಗಿ ಕೇವಲ ಚೀನಿಯರಷ್ಟೇ ಅಲ್ಲ ಯಾರು ಬೇಕಾದರೂ ಸೇರಬಹುದಿತ್ತು. ಇದು ಸಂಪ್ರದಾಯವಾದೀ ಚೀನಿ ತರಬೇತಿ ಶಾಲೆಗಳಿಗೆ ಹಾಗೂ ಹಿರಿಯರಿಗೆ ಸರಿಬರಲಿಲ್ಲ. ಚೀನಿಯರಲ್ಲದವರಿಗೆ ಅದನ್ನು ಕಲಿಸಬಾರದೆನ್ನುವುದು ಅವರ ಕಡ್ಡಾಯ ನಿಯಮ. ಆದರೆ ಲೀ ಅದಕ್ಕೆ ಕ್ಯಾರೇ ಅನ್ನಲಿಲ್ಲ. ಆಗ ಆತನಿಗೊಂದು ಚಾಲೆಂಜ್ ಬಂದಿತು. ಅದೇನೆಂದರೆ, ಉತ್ತರ ಶಾವೋಲಿನ್ ಮತ್ತು ತಾಯ್ ಚಿ ಚೂ ಆನ್ ಮೂಲದ ಕ್ಸಿಂಗ್ ಯಿ ಕ್ವಾನ್‌ನಲ್ಲಿ ಪರಿಣತಿ ಪಡೆದಿದ್ದ ಮಾ ಕಿನ್ ಫುಂಗ್‌ನ ಶಿಷ್ಯ “ವಾಂಗ್ ಜಾಕ್‌ಮನ್ ಎಂಬ ಪಟುವಿನೊಂದಿಗೆ ಬ್ರೂಸ್ ಲೀ ಸೆಣಸಬೇಕು. ಅದರಲ್ಲಿ ಗೆದ್ದರೆ ಬ್ರೂಸ್ ಲೀ ಚೀನಿಯರಲ್ಲದವರಿಗೂ ತರಬೇತಿ ಮುಂದುವರೆಸಬಹುದು. ಸೋತರೆ ‘ಇಲ್ಲ’ ಎಂಬ ಷರತ್ತಿನ ಸವಾಲು ಅದು. ಬ್ರೂಸ್ ಲೀ ತಕ್ಷಣ ಆ ಸವಾಲು ಒಪ್ಪಿಕೊಂಡ. ಇವರ ದ್ವಂದ್ವ ಸೆಣಸಾಟದಲ್ಲಿ ಬ್ರೂಸ್ ಲೀ ಎದುರಾಳಿ ವಾಂಗ್ ಜಾಕ್‌ಮನ್ ಅನ್ನು ಮೂರೇ ನಿಮಿಷದಲ್ಲಿ ಹೊಡೆದುರುಳಿಸಿ ಸೋಲೊಪ್ಪಿಕೊಳ್ಳುತ್ತೀಯೋ, ಇಲ್ಲವೋ ಅಂತ ಘರ್ಜಿಸಿದ. ವಾಂಗ್ ಒಪ್ಪಿಕೊಂಡ. ಬ್ರೂಸ್ ಲೀ ತನ್ನ ತರಬೇತಿಯನ್ನು ಎಲ್ಲರಿಗೂ ಮುಂದುವರಿಸಿದ.
ಎಂ.ವಿ. ರೇವಣಸಿದ್ದಯ್ಯ