Hi Bangalore


Buy Now @ ₹ 15.00 Preview
ಸೃಷ್ಟಿ 1033 : ಸಂಪುಟ 20, ಸಂಚಿಕೆ 45, ಆಗಸ್ಟ್ 6, 2015 ಖಾಸ್‌ಬಾತ್ ನೀವು ಬಂದು ನೋಡಿ ಸಾರ್ ಅಂದರಾಕೆ: ಹೋಗಿ ನೋಡಿದರೆ ಏನಿದೆ “ಕುಛ್ ತೋ ಲೋಗ್ ಕಹೇಂಗೆ... ಲೋಗೊಂಕ ಕಾಮ್ ಹೈ ಕೆಹನಾ! ಅವತ್ತು ಕಿಶೋರ್ ಹಾಡುತ್ತಿದ್ದ. “ಇಲ್ಲ, ಇನ್ನು ಕಿಶೋರ್ ಕುಮಾರ್‌ನಂತಹ ಇನ್ನೊಬ್ಬ ಸಂಗೀತಕಾರ ಹುಟ್ಟುವುದಿಲ್ಲ ಅಂದಿದ್ದೆ. ನಿನ್ನೆ ಪಾಕಿಸ್ತಾನದ ಕೋಕ್ ಸ್ಟುಡಿಯೋ ದಲ್ಲಿ ಅಬಿದಾ ಪರ್‌ವೀನ್ ಹಾಡುತ್ತಿದ್ದಳು. ಜೊತೆಯಲ್ಲಿ ನುಸ್ರತ್ ಫತೇಹ್ ಅಲಿ ಖಾನ್‌ನ ಮಗ ರಾಹತ್ ಫತೇಹ್ ಅಲಿ ಖಾನ್. ನಾಲಗೆ ಕತ್ತರಿಸಿ ತಟ್ಟೆಯಲ್ಲಿಟ್ಟು ಕೊಟ್ಟು ಬಿಡುತ್ತೇನೆ ಈ ಅದ್ವಿತೀಯ ಗಾಯಕರಿಗಾಗಿ. I love them. ಅದ್ಯಾವ ತನ್ಮಯತೆ ಅವರದು. ರವಿ ಬೆಳಗೆರೆ ಸಾಫ್ಟ್‌ಕಾರ್ನರ್ ಘೋಸ್ಟ್ ರೈಟರ್‍ಸ್ ಎಂಬ ಭೂತ ಲೇಖಕರೇಕೆ ಕೆಲಸದ ಒತ್ತಡ ತುಂಬ ಜಾಸ್ತಿಯಾದಾಗ ನಾನು ಸಂಗೀತ ಕೇಳುತ್ತೇನೆ. ಮೊನ್ನೆ ಮನೆಗೆ ಹೋದಾಗ ಲಲಿತೆಯ ಮೊಬೈಲ್ ಎತ್ತಿಕೊಂಡು ನೋಡಿದೆ. ಅದರ ತುಂಬ ಇದ್ದದ್ದು games. “ಏನೇ ಇದೂ ಅಂದೆ. “ನಿಂಗೆ ಗೊತ್ತಿಲ್ಲ, ಟೆನ್ಷನ್ ಆದಾಗ, ಬೇಸರ ವಾದಾಗ ಇವುಗಳ ಪೈಕಿ ಒಂದನ್ನು ಆಡ್ತಾ ಕೂತರೆ ಕೊಂಚ ರಿಲ್ಯಾಕ್ಸ್ ಆದ ಹಾಗನ್ನಿಸುತ್ತೆ ಅಂದಳು ಲಲಿತೆ. ಅದು ನನ್ನ ಅನುಭವಕ್ಕೆ ಹಿಂದೊಮ್ಮೆ ಬಂದಿತ್ತು. ನನ್ನ ವರದಿಗಾರನೊಬ್ಬ ತನ್ನ ಪತ್ನಿ ತೀರಿ ಕೊಂಡ ಮಾರನೆಯ ದಿನವೇ Facebookನಲ್ಲಿ ಕಾಣಿಸಿಕೊಂಡಿದ್ದ. ರವಿ ಬೆಳಗೆರೆ ಬಾಟಮ್ ಐಟಮ್ ಬಾರಲ್ಲಿ ಕುಳಿತವನಿಗೆ ಶತಾಯುಷಿಯಾಗುವ ಕನಸು ಬಿತ್ತಂತೆ... ಅಂದ ಹಾಗೆ ನೀವೀಗ ಹೇಗಿದ್ದೀರಾ ಬೀಪಿ ನಿಯಂತ್ರಣದಲ್ಲಿದೆಯಾ ಶುಗರ್ ಕಡಿಮೆಯಾಗಿದೆಯಾ ದಿನಾ ಬೆಳಿಗ್ಗೆ ವಾಕ್ ಮಾಡ್ತಿದೀರಾ ತಾನೆ ಎರಡು ತಿಂಗಳಿಗೊಮ್ಮೆ ಮೆಡಿಕಲ್ ಚೆಕಪ್ ಮಾಡಿಸಿ ಕೊಳ್ಳುತ್ತಿದ್ದೀರಿ ಅಲ್ವಾ ಚಿಕ್ಕಪುಟ್ಟ ವಿಷಯಗಳಿಗೆಲ್ಲಾ ಟೆನ್ಶನ್ ಮಾಡಿಕೊಳ್ಳುವುದನ್ನು ಕಡಿಮೆ ಮಾಡಿ, ರಾತ್ರಿ ಬೇಗನೇ ಮಲಗಿ ಬೆಳಿಗ್ಗೆ ಬೇಗ ಏಳುವ ಅಭ್ಯಾಸ ಮಾಡಿಕೊಳ್ಳಿ. ದುಡ್ಡು ಬರುತ್ತೆ ಹೋಗುತ್ತೆ, ಹೆಲ್ತ್ ಮುಖ್ಯ ಕಣ್ರೀ.... ರವಿ ಬೆಳಗೆರೆ ಹಲೋ ಒಳ್ಳೆಯದನ್ನು ರಕ್ಷಿಸಬೇಕು; ಕೆಟ್ಟದ್ದನ್ನು ಶಿಕ್ಷಿಸಬೇಕು ಎಂಬ ರಾಜನೀತಿ ಇರಬೇಕು ದೇಶದ ಹಲವು ರಾಜ್ಯಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರ ವಿಷಯದಲ್ಲಿ ಒಂದು ಕ್ಷಣವೂ ಚಿಂತಿಸದ ಈ ದೇಶದ ಮಹಾನ್ ಮಹಾನ್ ನಾಯಕರು, ಯಾಕೂಬ್ ಮೆಮೊನ್‌ಗೆ ಗಲ್ಲು ಶಿಕ್ಷೆ ಬೇಡ ಎಂದು ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ್ದಾರೆ. ಚಿತ್ರ ನಟ ಸಲ್ಮಾನ್ ಖಾನ್ ಇದೇ ರೀತಿ ಮಾತನಾಡುವುದು ನನಗೆ ವಿಶೇಷವಾಗಿ ಕಾಣಲಿಲ್ಲ. ಯಾಕೆಂದರೆ ಆತ ಫಿಲ್ಮಿನಲ್ಲಿ ಯಾರೋ ಡೈಲಾಗ್ ರೈಟರ್ ಬರೆದು ಕೊಟ್ಟಿದ್ದನ್ನು ಒಪ್ಪಿಸುತ್ತಾನೆ. ಅದು ಅವನ ಮಾತಲ್ಲ. ಹೀಗಾಗಿ ಆತನ ಮಾತನ್ನು ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯವಿಲ್ಲ. ಯಾರು ಸ್ವಂತ ವಿವೇಚನೆಯಿಂದ ಮಾತನಾಡಬಲ್ಲರೋ, ಬರೆಯಬಲ್ಲರೋ ಅವರ ಮಾತಿಗೆ ಒಂದು ತೂಕವಿರುತ್ತದೆ. ಮೊನ್ನೆ ನಮ್ಮ ಮಾಜಿ ಕೇಂದ್ರ ಸಚಿವ ಶಶಿ ತರೂರ್ ಹೇಳಿದರು. ಭಾರತವನ್ನು ಇನ್ನೂರು ವರ್ಷಗಳ ಕಾಲ ಇಂಗ್ಲಂಡ್ ಕೊಳ್ಳೆ ಹೊಡೆಯಿತು. ಇದರಿಂದಾಗಿ ಅತ್ಯಂತ ಮೇಲ್ಮಟ್ಟದಲ್ಲಿದ್ದ ನಮ್ಮ ಜಿಡಿಪಿ ಒಟ್ಟು ಆಂತರಿಕ ಉತ್ಪನ್ನ ತಳ ಕಚ್ಚಿತು. ಹೀಗೆ ಕೊಳ್ಳೆ ಹೊಡೆದ ಇಂಗ್ಲಂಡ್ ಇದಕ್ಕೆ ತಕ್ಕ ಪರಿಹಾರ ಕೊಡಲೇಬೇಕು ಎಂದರು. ರವಿ ಬೆಳಗೆರೆ ಮುಖಪುಟ ವರದಿ ಏನ ಬೇಕು ರಮ್ಯಕ್ಕಾ ಎಲ್ಲಿದ್ದೆ ಇಲ್ಲೀ ತಂಕಾ ಜಂಭದ ಹುಡುಗಿ ರಮ್ಯಾ ಕಾಣಿಸಿಕೊಂಡಿದ್ದಾಳೆ; ಬರೋಬ್ಬರಿ ಒಂದು ಚಿಲ್ಲರೇ ವರ್ಷಗಳ ನಂತರ. ಚಿತ್ರನಟಿ ಕಂ ಮಾಜಿ ಸಂಸದೆ ರಮ್ಯಾ ದಿಢೀರ್ ನಾಪತ್ತೆ ಯಾಗಿದ್ದಳು. ಯಾರೆಂದರೆ ಯಾರ ಸಂಪರ್ಕಕ್ಕೂ ಆಕೆ ಸಿಕ್ಕಿರಲಿಲ್ಲ. ಆವಾಗಾವಾಗ ‘ಟ್ಟೀಟ್’ ಮಾಡುತ್ತಿದ್ದವಳು ಅದನ್ನೂ ಕೂಡ ನಿಲ್ಲಿಸಿದ್ದಳು. ನಾನು ಮಂಡ್ಯದ ಮಗಳು, ಇಲ್ಲೇ ಮನೆ ಮಾಡ್ಕಂಡಿರ್‍ತೀನಿ ಅಂತಾ ಬಾಡಿಗೆ ಮನೆ ಮಾಡಿದ್ದವಳು ಅದನ್ನೂ ಖಾಲಿ ಮಾಡಿಕೊಂಡು ಹೊರಬಿದ್ದವಳು ಮಂಡ್ಯ ಇರಲಿ, ರಾಜ್ಯದಿಂದಲೇ ನಾಪತ್ತೆಯಾಗಿದ್ದಳು. ಹಾಗಾದರೆ ರಮ್ಯಾ ಕಳೆದ ಒಂದು ಚಿಲ್ಲರೇ ವರ್ಷಗಳಿಂದ ಎಲ್ಲಿದ್ದಳು ಯಾರ ಸಂಪರ್ಕಕ್ಕೂ ಆಕೆ ಯಾಕೆ ಸಿಕ್ಕಿರಲಿಲ್ಲ ಸಿನೆಮಾ ಹಾಗೂ ರಾಜಕೀಯದಿಂದ ದೂರವಾಗುವ ಯತ್ನ ಮಾಡಿದ್ದಳಾ ಇಷ್ಟಕ್ಕೂ ಹೀಗ್ಯಾಕೆ ದಿಢೀರ್ ಅಂತಾ ಪ್ರತ್ಯಕ್ಷವಾದಳು ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಹುಡುಕುವ ಪ್ರಯತ್ನವೇ ಈ ವರದಿ. ಲೋಕೇಶ್ ಕೊಪ್ಪದ್ ರಾಜಕೀಯ ಮೋದಿ ಲೂಜು ಮಾಡುತ್ತಿದ್ದಾರೆ ಬೋಲ್ಟ್ ಅನಂತ್ ರೆಕ್ಕೆ ಪುಕ್ಕ ಕಟ್ ಅಂದಹಾಗೆ ಅನಂತಕುಮಾರ್ ವಿರುದ್ಧ ಮೋದಿಗೆ ಈ ಮಟ್ಟದಲ್ಲಿ ದ್ವೇಷ ಪ್ರಜ್ವಲಿಸಲು ಮತ್ತೊಂದು ಕಾರಣವೂ ಇದೆ. ಅದೆಂದರೆ, ಲೋಕಸಭಾ ಚುನಾವಣೆಗೂ ಮುನ್ನ ನರೇಂದ್ರ ಮೋದಿ ಅವರನ್ನು ಪ್ರಧಾನಿ ಕ್ಯಾಂಡಿಡೇಟು ಅಂತ ಘೋಷಿಸಲಾಯಿತಲ್ಲ ಆ ಸಂದರ್ಭದಲ್ಲಿ ಅನಂತಕುಮಾರ್ ಮೇಲಿಂದ ಮೇಲೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ರಾಜ್‌ನಾಥ್‌ಸಿಂಗ್ ಅವರನ್ನು ಎತ್ತಿಕಟ್ಟುತ್ತಾ, ಸಾರ್, ಹೇಗಾದರೂ ಮಾಡಿ ಸಮ್ಮಿಶ್ರ ಸರ್ಕಾರವೇ ರೂಪುಗೊಳ್ಳುವಂತೆ ಮಾಡಬೇಕು ಸಾರ್. ಸಹಜವಾಗಿ ಆಗ ಮೋದಿ ಪ್ರಧಾನಿಯಾಗುವುದನ್ನು ಮಿತ್ರ ಪಕ್ಷಗಳು ಒಪ್ಪುವುದಿಲ್ಲ ಎಂದು ಅವರ ತಲೆಗೆ ಆಲೀವ್ ಆಯಿಲ್ ತಿಕ್ಕಿದ್ದರು. ಆದರೆ ಮೋದಿ ಮಾತ್ರ ಸಂಸತ್ ಚುನಾವಣೆಯಲ್ಲಿ ಇನ್ನೂರಾ ಎಪ್ಪತ್ತೆರಡು ಪ್ಲಸ್ ಸೀಟುಗಳನ್ನು ಗೆಲ್ಲುವುದೇ ನಮ್ಮ ಗುರಿ ಎಂದು ಹೇಳಿಕೊಂಡು ದೇಶ ತಿರುಗುತ್ತಿದ್ದರೆ, ಅನಂತಕುಮಾರ್ ಹಾಗೂ ಅವರ ಮಾತನ್ನು ಸೀರಿಯಸ್ಸಾಗಿ ತೆಗೆದುಕೊಂಡ ರಾಜ್‌ನಾಥ್‌ಸಿಂಗ್ ಇನ್ನೂರು ಪ್ಲಸ್ ಅಂತ ಹೊರಟಿದ್ದರು. ಆರ್.ಟಿ.ವಿಠ್ಠಲಮೂರ್ತಿ ವರದಿ ಗೋಲ್ಡ್ ಕೃಷ್ಣ ಎಂಬ ಸಲಿಂಗಿಯನ್ನು ಅವರೇ ಕರೆಸಿ ಕೊಂದರು! ಗೋಲ್ಡ್ ಕೃಷ್ಣ! ಕೊರಳಲ್ಲಿ ನಾಯಿಗೆ ಹಾಕುವ ಚೈನಿನಂಥ ಸರಗಳು, ಕೈತುಂಬ ಕಡಗಗಳು, ಬೆರಳ ತುಂಬೆಲ್ಲಾ ರಿಂಗೋ ರಿಂಗು, ಮುಂಗೈನಲ್ಲಿ ಬ್ರೇಸ್‌ಲೆಟ್‌ಗಳು ಹೀಗೆ ಬರೋಬ್ಬರಿ ಎರಡು ಕೆಜಿಯಷ್ಟು ತೂಗುವ ಒಡವೆಗಳನ್ನ ಪೋಣಿಸಿಕೊಂಡು ತಿರುಗುತ್ತಿದ್ದ ಕೃಷ್ಣ. ಆದರೆ ಮೈತುಂಬ ಮಣಗಟ್ಟಲೆ ಬಂಗಾರ ಏರಿಕೊಂಡಿದ್ದರೂ ಮನುಷ್ಯತ್ವದ ಯಾವ ಗುಣಗಳೂ ಈತನಲ್ಲಿ ಇರಲಿಲ್ಲ. ಇಂದಲ್ಲ ನಾಳೆ ಅವನ ವಸ್ತ್ರಾಭರಣಗಳೇ ಅವನ ಜೀವಕ್ಕೆ ಕಂಠಕಪ್ರಾಯವಾಗಿ ಬಂದೆರಗಿ ಹತನಾಗಬೇಕಾದವನು ಕೊಂಚ ಬೇಗನೆ ಅವನ ಆಭರಣಗಳ ದಿಸೆಯಿಂದಲೇ ಆಹುತಿಯಾದ ಗೋಲ್ಡ್ ಕೃಷ್ಣ ಯಾನೆ ಡಗಾರ್ ಕೃಷ್ಣ. ವಿನಯ್ ವರದಿ ಎಮ್ಮೆಲ್ಸಿ ಆಗುವ ಮುನ್ನವೇ ಮಂತ್ರಿಗಿರಿಗಾಗಿ ಕೊಂಡಯ್ಯನ ಲಾಗ ಪಿ.ಟಿ.ಪರಮೇಶ್ವರ ನಾಯ್ಕ ಸಚಿವರಾದಾಗಿನಿಂದ ಬಳ್ಳಾರಿಯ ಕೊಂಡಯ್ಯನ ಕಚೇರಿ ಎಂಬುದು ಟ್ರಾನ್ಸ್‌ಫರ್ರು, ಟ್ರಾನ್ಸ್‌ಪೋರ್ಟ್, ಕಾಂಟ್ರಾಕ್ಟುಗಳ ಫೈಲುಗಳಿಂದಲೇ ತುಂಬಿ ಹೋಗಿದೆ. ಹೆಸರು ಪಿ.ಟಿ.ಯದ್ದೇ ಆದರೂ ದರ್ಬಾರು, ಕಾಂಚಾಣ ಎಲ್ಲಾ ಕೊಂಡಯ್ಯನ ಹುಂಡಿಗೆ ಬಂದು ಸೇರುತ್ತದೆ. ನೀವು ನಂಬಲಿಕ್ಕಿಲ್ಲ. ರೆಡ್ಡಿಗಳು ೨೦೦೪ರಲ್ಲಿ ಮೊದಲ ಬಾರಿಗೆ ಬಿಜೆಪಿ ಬಾವುಟ ಹಾರಿಸುವ ತನಕ ಬಳ್ಳಾರಿ ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. ಅದಕ್ಕೆ ಕೊಂಡಯ್ಯನಂಥ ಸೂಟ್‌ಕೇಸ್ ಗಿರಾಕಿಗಳು ಕಾರಣರಲ್ಲ. ರೆಡ್ಡಿಗಳು ಕಮಲದ ಬಾವುಟ ಹಿಡಿಯುವವರೆಗೂ ಬಳ್ಳಾರಿಯ ಮುಗ್ಧ ಜನತೆ ಇಂದಿರಾಗಾಂಧಿ ಇನ್ನೂ ಬದುಕಿದ್ದಾಳೆ ಅಂತಲೇ ಓಟು ಒತ್ತಿದ್ದಾರೆ. ಅವರ ಫೊಟೋ ತೋರಿಸಿಯೇ ಜನರನ್ನು ಯಾಮಾರಿಸಿ ಗೆದ್ದವರ ಪೈಕಿ ಕೊಂಡಯ್ಯನೂ ಒಬ್ಬ. ಸತೀಶ್ ಬಿಲ್ಲಾಡಿ ವರದಿ ಬಳ್ಳಾರಿ ವಿಮ್ಸ್ ಆಸ್ಪತ್ರೆಯ ಕವಿತಾ ಕೊಂಚ ಡಯೆಟ್ ಮಾಡಮ್ಮಾ... ಈಕೆ ವಿಮ್ಸ್ ಕವಿತಾ! ಬಳ್ಳಾರಿಯ ಸುತ್ತಮುತ್ತ ಈಗ ಈಕೆಯದ್ದೇ ಮಾತು. ಕೆಲವು ಪ್ರತಿಷ್ಠಿತರ ಮೊಬೈಲ್‌ಗಳಲ್ಲಿ ಈಕೆಯದ್ದೇ ಚಿತ್ರ. ಬಳ್ಳಾರಿಯ ಅನಂತಪುರ ರಸ್ತೆಯಲ್ಲಿರುವ ವಿಮ್ಸ್‌ನ ಅಂಗಸಂಸ್ಥೆಯಾದ ಮೌಂಟ್ ಲೇಡಿ ಘೋಷ್ ಆಸ್ಪತ್ರೆಯ ಅಂಗಳದಲ್ಲಿ ನಿಂತು ಈಕೆಯ ಹೆಸರು ಹೇಳಿದರೆ ಸಾಕು, ಅಲ್ಲಿನ ಸಿಬ್ಬಂದಿ ವರ್ಗದವರಿಂದ ಥರಾವರಿ ಕಥೆಗಳು ರಸವತ್ತಾಗಿ ಬಿಚ್ಚಿಕೊಳ್ಳುತ್ತವೆ. ಈಕೆಯದ್ದು ಹೈ ಪ್ರೊಫೈಲ್ ದಂಧೆ ಅಂತ ಮೆಲ್ಲಗೆ ತೆಲುಗಿನಲ್ಲಿ ಪಲುಕುತ್ತಾರೆ. ಬಳ್ಳಾರಿಯ ವಿಜಯನಗರ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ವಿಮ್ಸ್ಕಾಲೇಜಿನಿಂದ ಲೇಡಿ ಮೌಂಟ್ ಘೋಷ್ ಆಸ್ಪತ್ರೆಗೆ ರೋಗಿಗಳ ತಪಾಸಣೆಗೆ ಅಂತ ರೌಂಡ್ಸ್ ಬರುತ್ತಿದ್ದ ಕೆಲವು ಹೆಸರಾಂತ ವೈದ್ಯರು ಗಳಲ್ಲದೇ, ಸ್ತ್ರೀಲೋಲ ರಾಜಕೀಯ ಮುಖಂಡರು, ಸ್ವತಃ ಆಸ್ಪತ್ರೆಯ ವಿವಿಧ ಸಿಬ್ಬಂದಿ ವರ್ಗದವರಲ್ಲೇ ಆಕೆಗಾಗಿ ಜೊಲ್ಲು ಸುರಿಸಿದವರಿದ್ದಾರೆ. ಒಂದೆಡೆಯಿಂದ ಲಿಸ್ಟ್ ಅಂತ ಮಾಡಿದರೆ ಅಲ್ಲಿನ ಮಂಡಾಳು ಭಟ್ಟಿಯ ಓನರ್‌ಗಳಿಂದ ಹಿಡಿದು ಬೆಂಗಳೂರಿನ ಆರೋಗ್ಯ ಇಲಾಖೆಯ ಎಂ.ಡಿ.ಗಳವರೆಗೂ ಈ ವಿಮ್ಸ್ ಕವಿತಾಳ ನಂಟಿದೆ. ಅಷ್ಟಕ್ಕೂ ಈಕೆಯೇನೂ ತ್ರಿಪುರ ಸುಂದರಿಯೇನೂ ಅಲ್ಲ, ಆ ಘೋಷ್ ಆಸ್ಪತ್ರೇಲಿ ಆಕೆಗೊಂದು ಖಾಯಂ ಆದ ನೌಕರಿಯೂ ಇರಲಿಲ್ಲ. ಆದರೂ ಬಳ್ಳಾರಿಯಲ್ಲಿ ಆಕೆ ವಿಮ್ಸ್ ಮೇಡಂ ಅಂತಲೇ ಫೇಮಸ್ಸು. ಮಲ್ಲಪ್ಪ ಬಣಕಾರ ವರದಿ ಲಕ್ಷ್ಮೀ ಹೆಬ್ಬಾಳ್ಕರ್ ಮುಂದೆ ಡೀಕೇಶಿ ಹಾಯ್ದರೆ ಛಳಕ್! ಲಕ್ಷ್ಮೀ ಹೆಬ್ಬಾಳ್ಕರ್! ರಾಜ್ಯ ಮಹಿಳಾ ಕಾಂಗೈ ಅಧ್ಯಕ್ಷೆಯಾಗಿರುವ ಈಯಮ್ಮ ಈಗ ವಿವಾದದ ಸುಳಿಯಲ್ಲಿ ಸಿಲುಕಿದ್ದಾಳೆ. ಜಿ-ಕೆಟಗರಿ ಸೈಟು ಸೇರಿದಂತೆ ಅಕ್ರಮ ಸೋಲಾರ್ ಪ್ಲಾಂಟ್ ಹಂಚಿಕೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್‌ರವರ ಹೆಸರು ವಿಲ-ವಿಲ ಒದ್ದಾಡ ತೊಡಗಿದೆ. ಕೆಪಿಸಿಸಿ ಮಾಜಿ ಸದಸ್ಯ ಶಂಕರ ಮುನವಳ್ಳಿಯಂತೂ ಕೈ ತೊಳೆದು ಕೊಂಡೇ ‘ಲಕ್ಷ್ಮೀ’ಯನ್ನ ಬೆನ್ನತ್ತಿರುವುದರಿಂದ ‘ಪವರ್’ ಮಿನಿಸ್ಟರ್ ಡಿಕೇಶಿಗೂ ಇದು ನುಂಗಲಾರದ ತುತ್ತಾಗಿದೆ. ಮಂಜುನಾಥ ಶಿರಸಂಗಿ ನೇವಿ ಕಾಲಂ ಕದವನಿಕ್ಕಿದ ಇರುಳಲ್ಲಿ ಬಂದವನ ಗುರುತು ಹತ್ತೀತೇ ಎಲ್ಲವೂ ಸರಿಯಾಗಿತ್ತು; ಮೂವತ್ತೊಂಬತ್ತು ವರ್ಷಗಳವರೆಗೆ. ಬದುಕು ತುಂಬ ಸುಂದರವಾಗಿ ಕಾಣುತ್ತಿತ್ತು, ಬೆಳಿಗ್ಗೆ ಕಿಟಕಿಯಿಂದ ಬಗ್ಗಿ ಎಬ್ಬಿಸುತ್ತಿದ್ದ ಸೂರ್ಯನಿಗೊಂದು ನಮಸ್ಕಾರ ಮಾಡಿ, ಪೇಪರ್ ಓದಿ, ಮಕ್ಕಳನ್ನು ಸ್ಕೂಲಿಗೆ ರೆಡಿ ಮಾಡಿ, ಹೆಂಡತಿ ಜೊತೆ ನಾಲ್ಕು ಒಳ್ಳೆ ಮಾತಾಡಿ, ಇವತ್ತು ಸಂಜೆಯ ಕಾರ್ಯ ಕ್ರಮ ಏನೇನು ಅಂತ ವರದಿ ಒಪ್ಪಿಸಿ ಒಂಬತ್ತು ಐವತ್ತಕ್ಕೆ ಮನೆ ಬಿಟ್ಟರೆ ಹತ್ತೂವರೆಗೆಲ್ಲಾ ಆಫೀಸಿನಲ್ಲಿ ಪ್ರತಿ ಷ್ಠಾಪನೆ. ಕೆಲಸವೂ ಸರಿ ಹೋಗುತ್ತಿತ್ತು, ವಯಸ್ಸಿಗೆ ತಕ್ಕ ಭಡ್ತಿಯೂ ಸಿಗುತ್ತಿತ್ತಾದ್ದರಿಂದ ಅವರ ಬದುಕು ವ್ಯಾವಹಾರಿಕವಾಗಿಯೂ, ವೈಯಕ್ತಿಕವಾಗಿಯೂ, ಪ್ರಾಪಂಚಿಕವಾಗಿಯೂ ಚೆನ್ನಾಗಿಯೇ ನಡೆಯುತ್ತಿತ್ತು. ವಾರಕ್ಕೊಮ್ಮೆ ಸಿನೆಮಾ, ನಾಟಕ, ತಿಂಗಳಿಗೊಮ್ಮೆ ಸ್ನೇಹಿತರ ಜೊತೆ ಹೆಂಡತಿಗೆ ಗೊತ್ತಾಗದಂತೆ ಪಾರ್ಟಿ, ಆ ರಾತ್ರಿ ಹಾಲ್‌ನಲ್ಲಿ ಮಲಗಿಕೊಳ್ಳುವುದು ಮುಂತಾದುವೆಲ್ಲ ಸಾಂಗವಾಗಿ ನೆರವೇರುತ್ತಿತ್ತು. ನೇವಿ ಜಾನಕಿ ಕಾಲಂ ಎಂದೋ ಕೇಳಿದ ಒಂದು ಹಾಡಿನ ನೆನಪಲ್ಲಿ... ನಂಗೆ ಟಿ ಕೆ ರಾಮರಾವ್ ಇಷ್ಟ, ಎನ್ ಟಿ ರಾಮರಾವ್ ಸಿನೆಮಾ ಇಷ್ಟ, ಜೋಸೈಮನ್ ಇಷ್ಟ, ಜಿಂದೆ ನಂಜುಂಡಸ್ವಾಮಿ ಎಂದರೆ ಪ್ರಾಣ, ಮುಸ್ಸಂಜೆಯ ಕಥಾಪ್ರಸಂಗ ಮತ್ತೆ ಮತ್ತೆ ಓದಬೇಕೆನ್ನಿಸುತ್ತೆ, ಪರಸಂಗದ ಗೆಂಡೆತಿಮ್ಮನ ಬೀದಿ ಕಣ್ಮುಂದೆ ಸುಳಿದರೆ ಸಂತೋಷವಾಗುತ್ತದೆ. ಭುಜಂಗಯ್ಯನ ದಶಾವತಾರಗಳು ಎಂಬ ಟೈಟಲ್ಲೂ ಮೆಚ್ಚುಗೆ. ನಮ್ಮೂರಿನಲ್ಲಿದ್ದ ಪುಟ್ಟ ಹೊಟೆಲಿನಲ್ಲಿ ಸಿಗುತ್ತಿದ್ದ ಕೇಟಿ ಮತ್ತು ಮೊಸರವಲಕ್ಕಿ ಇಷ್ಟ. ಜಾನಕಿ ಗೌರವ ನಮನ ಗತಿಸಿದ ಹಿರಿಯ ಕಲಾಮ್‌ರನ್ನು ನೆನೆದು... ಒಂಥರಾ ಪಿಚ್ಚೆನ್ನಿಸಿತು ಸುದ್ದಿ ಕೇಳಿ. ಅಬ್ದುಲ್ ಕಲಾಂ ನಡೆದು ಹೋಗಿದ್ದಾರೆ: ಶಾಶ್ವತವಾಗಿ. ನಿರೀಕ್ಷೆಯೇ ಇರಲಿಲ್ಲ. ಅದಕ್ಕೆ ಕಾರಣವಿದೆ. ಮೊದಲಿನ ಆ ‘ಕಲಾಮ್ ಮೇನಿಯಾ’ ಈಗ ಉಳಿದಿಲ್ಲ. ಪಾಪ, ಹೈಸ್ಕೂಲಿನವರು ಕರೆದರೂ ಅಜ್ಜ ಹೋಗಿ, ಮಕ್ಕಳಿಗೆ ಪಾಠ ಮಾಡಿ ಬರುತ್ತಿತ್ತು. ಅವರದು ಇತ್ತೀಚಿನ ವರ್ಷಗಳಲ್ಲಿ ಒಂದು ತೆರನಾದ silent existence. ಹೆಚ್ಚು ಸುದ್ದಿಯಾಗುತ್ತಿರಲಿಲ್ಲ. ಅವರನ್ನು ಕ್ಷಿಪಣಿ ಮಾನವ ಅಲಿಯಾಸ್ ಮಿಸೈಲ್ ಮ್ಯಾನ್ ಅಂತೆಲ್ಲ ಕರೆಯುವುದು ಮರೆತೇ ಹೋಗಿತ್ತು. ನನಗೆ ಮೂರು ಸಂಗತಿಗಳು ಸ್ಪಷ್ಟವಾಗಿ ನೆನಪಿವೆ. ದಿಲ್ಲಿಯಿಂದ ನಾನು ವಾಪಸು ಬರುತ್ತಿದ್ದೆ. ಎಷ್ಟು ಹೊತ್ತಾದರೂ ವಿಮಾನ ಕದಲಲಿಲ್ಲ. ನೋಡಿದರೆ, ಕೊಂಚ ಹೊತ್ತಿನ ನಂತರ ಕಲಾಮ್ ಅವಸರಿಸುತ್ತಾ ಬಂದು ಮೆಟ್ಟಿಲೇರುತ್ತಿದ್ದರು. ಬೆಂಗಳೂರಿಗೆ ಅವರೂ ಬಂದರು. ಬೆಳಗೆರೆ ಅಂಕಣ : ಆಕಾಶಬುಟ್ಟಿ ಅಮ್ಮ-ಮಗಳ ಪೋಲಿ ಸಂಭಾಷಣೆ ಟುವ್ವಿ: ಅಮ್ಮಾ, ನೀನು ಎಷ್ಟು ಜನರನ್ನು ಚೇಂಜ್ ಮಾಡಿದ್ದೀಯ ಅಮ್ಮ: ಸುಮಾರು ಜನ ಆಗ್ಹೋಯ್ತು ಟುವ್ವಿ. ಟುವ್ವಿ: ಯಾರಾದರೂ ಒಬ್ಬರನ್ನು ಸರಿಯಾಗಿ ಇಟ್ಕೊಬೇಕಲ್ವ ಅಮ್ಮ: ಅಡ್ಜಸ್ಟ್ ಆಗಲ್ಲ ಅಂದ್ರೆ ಅಂತಹವರನ್ನು ನಾನು ಬಿಟ್ಹಾಕಿಬಿಡ್ತೀನಿ. ಟುವ್ವಿ: ಬಿಟ್ಟುಹೋದವರ ಹೆಸರು ಹೇಳು ಅಮ್ಮ: ಹೋದವರ ಹೆಸರು ಯಾರು ನೆನ ಪಿಟ್ಕೋತಾರೆ ಟುವ್ವಿ. ಈಗ ಇರುವವರ ಹೆಸರು ಬೇಕಾದ್ರೆ ಹೇಳ್ತೀನಿ. ಎಚ್.ಡಿ. ಸುನೀತಾ ಅಂಕಣ : ನೂರು ಮುಖ ಸಾವಿರ ದನಿ ಹಾಸ್ಯ ಚಕ್ರವರ್ತಿ ನರಸಿಂಹರಾಜು ಎಂಬ ಅದ್ವಿತೀಯ ನಟನ ನೆನೆಯುತ್ತಾ... ತಮಿಳು ಚಿತ್ರರಂಗದಲ್ಲಿ ಏಕಮೇವ ಹಾಸ್ಯನಟನಾಗಿ ಮೆರೆದ ತಾಯ್‌ ನಾಗೇಶ್ ಕರ್ನಾಟಕದ ಕಡೂರು ಮೂಲದ ಮಾಧ್ವ ಬ್ರಾಹ್ಮಣ ಕುಟುಂಬದ ಕನ್ನಡಿಗ. ಅದೇ ರೀತಿ ಕನ್ನಡ ಚಿತ್ರರಂಗದಲ್ಲಿ ಅದ್ವಿತೀಯ ಹಾಸ್ಯ ನಟನಾಗಿ ಮೆರೆದದ್ದು ಅದ್ಭುತ ನಟ ಟಿ.ಆರ್. ನರಸಿಂಹರಾಜು. ಮೂಲ ಸ್ಥಳ ತಿಪಟೂರು. ಬಾಲಕೃಷ್ಣ-ನರಸಿಂಹ ರಾಜು ಜೋಡಿ ಅತ್ಯಂತ ಜನಪ್ರಿಯ. ಇಬ್ಬರೂ ಸೇರಿದರೆ ಹಾಸ್ಯದ ಹೊನಲು ಗ್ಯಾರಂಟಿ. ಅತ್ಯಂತ ಬಡತನದ ಸಾಧಾರಣ ಕುಟುಂಬದಲ್ಲಿ ಜನಿಸಿದ ನರಸಿಂಹರಾಜು ಅವರದು ಅಸಾಧಾರಣ ಪ್ರತಿಭೆ. ಇವರದು ಎಂಥ ದೈತ್ಯ ಪ್ರತಿಭೆ ಅಂದರೆ ನರಸಿಂಹರಾಜು ಇರುವ ದೃಶ್ಯಗಳಲ್ಲಿ ಸಹ ನಟ, ನಟಿಯರು ಯಾರೇ ಇರಲಿ ಅವರು ಅತ್ಯುತ್ತಮ ನಟರೇ ಆಗಿದ್ದರೂ ಸಹ ಅವರೆಲ್ಲರನ್ನೂ ಮೀರಿ ಇಡೀ ದೃಶ್ಯದಲ್ಲಿ ತನ್ನ ಛಾಪು ಮೂಡಿಸಿ, ತಾನು, ತನ್ನ ಪಾತ್ರವೇ ಮೇಲೆದ್ದು ಖಾಯಂ ನೆನಪು ಉಳಿಯುವಂತೆ ಮಾಡುವ ಧೀಮಂತ ಪ್ರತಿಭೆ ಅವರದು. ಎಂ.ವಿ. ರೇವಣಸಿದ್ದಯ್ಯ