Buy Now @ ₹ 15.00
Preview
ಸೃಷ್ಟಿ 1032 : ಸಂಪುಟ 20, ಸಂಚಿಕೆ 44, ಜುಲೈ 30, 2015
ಖಾಸ್‌ಬಾತ್
ಅಲ್ಲಿದ್ದ ನಾನಾ ಸೀಮೆಗಳ ನಕ್ಸಲೀಯರ ನಡುವೆ ಇವನೊಬ್ಬನಿದ್ದ ಭಜನಮೂರ್ತಿ!
ನಾನು ಅಂಥ ಯಾವ ಯಡವಟ್ಟೂ ಮಾಡಿಕೊಳ್ಳುವುದಿಲ್ಲ. Normally not. ನಾಡಿನ ಮನೆಮನೆಯಲ್ಲೂ ಕನ್ನಡವೇ ಮೊಳಗಬೇಕು. ಅಲ್ಲಿಯತನಕ ನಾನು ಹಲ್ಲು ಉಜ್ಜುವುದಿಲ್ಲ. ಚೌರ ಮಾಡಿಸಿಕೊಳ್ಳುವುದಿಲ್ಲ. ಟಾಯ್ಲೆಟ್‌ನಲ್ಲಿ ನೀರು ಇಟ್ಟುಕೊಳ್ಳಲ್ಲ ಅಂತೆಲ್ಲ ಶಪಥ ಮಾಡುವುದಿಲ್ಲ. ಮೊದಲು ಚಳವಳಿ, ಸತ್ಯಾಗ್ರಹ ಮುಂತಾದವುಗಳೆಂದರೆ ಎಕ್ಸೈಟ್ ಆಗುತ್ತಿದ್ದೆ. ಸರಿ ಸುಮಾರು ಹತ್ತು ವರ್ಷ ಕೆಂಪು ಷರ್ಟು ಧರಿಸಿದವನು ನಾನು. ಪಕ್ಕಾ ಕಮ್ಯುನಿಸ್ಟ್! ಈ ರಸ್ತೆ ಮೇಲೆಲ್ಲ ಝಂಡಾ ಎತ್ತಿಕೊಂಡು. ಓಡಾಡುವ ಕಮ್ಯುನಿಸಂ ಅಲ್ಲ ನನ್ನದು. ನಾನು ನಕ್ಸಲೀಯರ ಬಂದೂಕು ಮೊರೆಯುತ್ತಿದ್ದ ಕಾಡಿನೊಳಕ್ಕೇ ನಡೆದು ಹೋದೆ. ನನಗೆ ಕೊಂಡಪಲ್ಲಿ ಸೀತಾರಾಮಯ್ಯನವರು, ಬಂಡಯ್ಯ ಮಾಸ್ಟರ್, ರವೂಫ್ ಸಾಕೇತ್, ವರವರ ರಾವು, ಶ್ರೀ ಶ್ರೀ-ಯಾರೂ ಅಪರಿಚಿತರಲ್ಲ. ತುಂಬ ಚಿಕ್ಕವನು ನಾನು, ಆಗಲೇ ಭೂಗತ ಕಾನ್ಫರೆನ್ಸ್‌ಗಳಿಗೆ ಅಟೆಂಡ್ ಆಗಿ ಬಂದಿದ್ದೆ. ಆಗ ನಕ್ಸಲೀಯ ಬಣಗಳವರು ಸೇರಿ R.O.C ಹೆಸರಿನಲ್ಲಿ ಒಂದು Joint Action ಥರದ್ದು ಮಾಡೋಣ ಅಂತ ಸಂಭ್ರಮದಿಂದ ಓಡಾಡುತ್ತಿದ್ದರು. ಆಗ ಆಂಧ್ರದ ಕದಿರಿ ಮೂಲದ ರವೂಫ್ ಅವರು ROCಗೆ ನೇತಾರರಾಗಿದ್ದರು. ಅದೊಂದು ಬೆಳಿಗ್ಗೆ ನಾನು ಹೆಗಲ ಚೀಲ ಹಾಕಿಕೊಂಡು ಬೆಂಗಳೂರಿಗೆ ಬಂದಿಳಿದಿದ್ದೆ. ನನಗೆ ಒಂದು ಮನೆಯ ಅಡ್ರೆಸ್ ಕೊಟ್ಟಿದ್ದರು.
ರವಿ ಬೆಳಗೆರೆ
ಸಾಫ್ಟ್‌ಕಾರ್ನರ್
ಭಟ್ಟರೋ ವಿಶ್ವೇಶ್ವರ ಭಟ್ಟರೋ ಎಂಬ ಡರ್ಟಿ ಮೆಲೊಡಿ!
No mischief. ನಾನು ಸೆಪ್ಟಂಬರ್ ಐದಕ್ಕೆ ಬನ್ನಿ: ಪುಸ್ತಕ ಬಿಡುಗಡೆಗೆ ಅಂತ ಕಳೆದ ವಾರ ಬರೆದಿದ್ದೆ. ಅದು ಕೊಂಚ ಬದಲಾಗಿದೆ. ನಿಮಗೆ ಗೊತ್ತಿರುವಂತೆ ‘ಹಾಯ್ ಬೆಂಗಳೂರ್!’ ಹುಟ್ಟಿದ್ದು ಸೆಪ್ಟಂಬರ್ 25ರಂದು. Normally, ಅವತ್ತು ಅದರ birthday function ಮಾಡೋದು ವಾಡಿಕೆ. ಕೆಲವು ಸಲ ನನ್ನದೇ ಕಾರಣಗಳಿಗಾಗಿ ಇತ್ತೀಚೆಗಿನ ವರ್ಷಗಳಲ್ಲಿ ಸಭೆ ಸಮಾರಂಭ ಮಾಡುತ್ತಿರಲಿಲ್ಲ. ಓದುಗರು ಇವತ್ತಿಗೂ ಬೇಸರಿಸಿಕೊಂಡು ಗದರುತ್ತಾರೆ. “ಇದೇನು, ನೀವು ಫಂಕ್ಷನ್ ಮಾಡೋದೇ ಇಲ್ವಾ ಅಂತ ಮೊನ್ನೆ ಮೊನ್ನೆ ಓದುಗರೊಬ್ಬರು ಕೇಳಿದರು. “ರವಿ ಬೆಳಗೆರೆಗೆ ಏನೋ ಆಗಿದೆ. ವಿಪರೀತ ಖಾಯಿಲೆ ಇರಬೇಕು. ಹಾಗಾಗಿ ಎಲ್ಲೂ ಕಾಣಿಸಿಕೊಳ್ಳುವುದಿಲ್ಲ! ಅಂತ ಮಾತಾಡಿದವರೂ ಇದ್ದಾರೆ.
ರವಿ ಬೆಳಗೆರೆ
ಬಾಟಮ್ ಐಟಮ್
ಒಂದಿಡೀ ದಿನ ನಿನ್ನ ಜೊತೆಗಿರಬೇಕು
ಏನು ಮಾಡಲಿ ಡಿಯರ್ ನನ್ನ ಮುಂಜಾವುಗಳು ಆರಂಭವಾಗುವುದೇ ನಿನ್ನ ನೆನಪಿನೊಂದಿಗೆ. ಆಮೇಲೆ ಇಡೀ ಹಗಲು ನಿನ್ನ ನೆನಪು-ನಿರೀಕ್ಷೆಗಳು ನನ್ನಲ್ಲಿ ಧಗಧಗನೆ ಉರಿಯುತ್ತಲೇ ಇರುತ್ತವೆ: ಬಿಸಿಲಿನಂತೆ. ಅಲೆದು ಸುಸ್ತಾದ ಸೂರ್ಯ ಆಕಾಶದಲ್ಲಿ ಅಂತರ್ಧಾನನಾಗಿ ಚೆಂದನೆಯದೊಂದು ಸಂಜೆಯನ್ನು ಚಿಮುಕಿಸುವ ಹೊತ್ತಿಗೆ ಅಲ್ಲಲ್ಲಿ ಒಂದೊಂದೇ ದೀಪಗಳು ಕಣ್ತೆರೆಯುತ್ತವೆ. ಆಗ ಬರುತ್ತೀ ನೀನು.
ರವಿ ಬೆಳಗೆರೆ
ಹಲೋ
ಉರಿಯುವ ಮನೆಯಲ್ಲಿ ಗಳ ಹಿರಿದರೆ ರೈತರ ಕಷ್ಟ ಕಡಿಮೆ ಆಗುತ್ತದೆಯೇ
ರಾಜ್ಯದ ವಿವಿಧ ಭಾಗಗಳಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ನಡೆಯುತ್ತಿವೆ. ಸಿಎಂ ಸಿದ್ದರಾಮಯ್ಯ ಸರ್ಕಾರದ ಮಂತ್ರಿಗಳ ಮಾತು ಬಿಡಿ. ಅವರೀಗ ಫುಲ್ಲು ಬ್ಯುಸಿ. ಪ್ರತಿಯೊಬ್ಬರೂ ಜನರ ಕೆಲಸ ಮಾಡಿ, ಮಾಡಿ ಸುಸ್ತಾಗಿದ್ದಾರೆ. ಹೋಗ್ಲೀ, ಮಂತ್ರಿಗಿರಿಗೆ ರಾಜೀನಾಮೆ ಕೊಟ್ಟು ತೊಲಗಿದರೆ ಪಾಪ, ಉತ್ಸಾಹ ಇರುವವರಾದರೂ ಕೆಲಸ ಮಾಡುತ್ತಾರೆ. ಆದರೆ ಯಾರಿಗೂ ಮಂತ್ರಿಗಿರಿಗೆ ರಾಜೀನಾಮೆ ಕೊಡುವ ಆಸಕ್ತಿ ಇಲ್ಲ. ಅವರಿಗೆ ಮಂತ್ರಿಗಿರಿಯ ಸವಲತ್ತು, ಮೆಹರ್‌ಬಾನಿ ಎಲ್ಲ ಬೇಕು. ಜನ ಮಾತ್ರ ಬೇಡ. ಈ ಮಧ್ಯೆ ದೇವೆಗೌಡ, ಎಸ್ಸೆಂ ಕೃಷ್ಣ ಸೇರಿದಂತೆ ಹಲವು ನಾಯಕರು ತೀರಿಕೊಂಡ ರೈತರ ಕುಟುಂಬಗಳಿಗೆ ಸಮಾಧಾನ ಹೇಳಲು ಹೋಗುತ್ತಿದ್ದಾರೆ. ಆದರೆ ನೆನಪಿಡಿ, ರೈತರ ಸಮಸ್ಯೆಯನ್ನು ಅಧಿಕಾರಕ್ಕೆ ಬಂದ ಯಾವೊಂದು ಸರ್ಕಾರಗಳೂ ಇದುವರೆಗೆ ಪರಿಹರಿಸಿಲ್ಲ.
ರವಿ ಬೆಳಗೆರೆ
ಮುಖಪುಟ ವರದಿ
ಲಾಡ್ ಬೆನ್ನ ಹಿಂದೆ ಯಾರ‍್ಯಾರು ಜೈಲು ಸೇರ‍್ತಾರೆ ಗೊತ್ತಾ
ಮೊನ್ನೆ ಜುಲೈ ಹದಿನೈದರ ಸಂಜೆಹೊತ್ತಿಗೆಲ್ಲಾ ಸಿಬಿಐ ಪೊಲೀಸರು ಅನಿಲ್‌ಲಾಡ್‌ನನ್ನು ಬಂಧಿಸಿದರಲ್ಲಅದಕ್ಕೆ ಸರಿಯಾಗಿ ಒಂದು ವಾರದ ಮುಂಚೆಯಷ್ಟೇ ವಿಧಾನಸೌಧದಲ್ಲಿ ಸ್ನೇಹಿತರ ಮುಂದೆ ‘ನೆಕ್ಟ್ಸ್ ಬಳ್ಳಾರಿ ಸಹವಾಸವೇ ಸಾಕು’ ಎಂದಿದ್ದಾನೆ. ಮಾತು ಮುಂದುವರೆಸಿದ ಅನಿಲ್ ‘ಹೇಗೂ ಆನಂದ್‌ಸಿಂಗ್‌ಗೆ ಶಿಕ್ಷೆ ಪ್ರಕಟವಾಗುತ್ತೆ. ಹೊಸಪೇಟೆಯಲ್ಲಿ ವಿರೋಧಿಗಳೇ ಇರೋದಿಲ್ಲ. ನಾನು ಅಲ್ಲಿಂದಲೇ ಕಂಟೆಸ್ಟ್ ಮಾಡ್ತೀನಿ’ ಅಂದಿದ್ದಾನೆ. ಆತ ಆಡಿದ ಮಾತಿನ್ನೂ ಹಸಿಯಾಗಿರುವಾಗಲೇ ಸಿಬಿಐನವರು ಬಂಧಿಸಿ ಕಂಬಿ ಎಣಿಸಲು ಹೇಳಿದ್ದಾರೆ. Actually ಈತನನ್ನು ಬಂಧಿಸಿದ ಪ್ರಕರಣ ಹೊಸದೇನಲ್ಲ; ಬೇಲೆಕೇರಿ ಅಕ್ರಮವದು. ರಾಜ್ಯದ ಅತ್ಯಂತ ದಕ್ಷ ಅರಣ್ಯಾಧಿಕಾರಿ ಡಾ.ಯು.ವಿ.ಸಿಂಗ್‌ರೇನಾದರು ‘ಬೇಲೆಕೇರಿ ರಹಸ್ಯ’ ಭೇದಿಸದೇ ಹೋಗಿದ್ದರೆ ಇವತ್ತು ಇವರಾರು ಜೈಲು ಸೇರುತ್ತಿರಲಿಲ್ಲ. ಯಾಕೆಂದರೆ ಇದಕ್ಕೂ ಮುನ್ನ ಕೋಟ್ಯಂತರ ಮೌಲ್ಯದ ಅಕ್ರಮ ಅದಿರು ವಿದೇಶ ಸೇರಿತ್ತಲ್ಲ ಯಾವೊಬ್ಬನೂ ಪ್ರಶ್ನಿಸಿರಲಿಲ್ಲ. ಕಾರವಾರ ಕಡಲಿನ ಸೆರಗಿನಲ್ಲೇ ಅವಿತುಕೊಂಡ ಪ್ರಮುಖ ವಾಣಿಜ್ಯ ಬಂದರು ಬೇಲೆಕೇರಿ.
ಸತೀಶ್ ಬಿಲ್ಲಾಡಿ
ರಾಜಕೀಯ
ಕಾಂಗೈನಲ್ಲಿ ಮತ್ತೆ ಶುರುವಾಗಲಿದೆಯಾ ಕೃಷ್ಣ ಪರ್ವ
ಅಂದ ಹಾಗೆ ಹೈಕಮಾಂಡ್ ಮನಸ್ಸಿನಲ್ಲಿ ತಮ್ಮನ್ನು ಸಿಎಂ ಹುದ್ದೆಯಿಂದ ಇಳಿಸುವ ಲೆಕ್ಕಾಚಾರ ಇದೆ ಎಂಬುದನ್ನು ಅರಿತಿರುವ ಸಿದ್ದರಾಮಯ್ಯ ಇದೀಗ ಪಕ್ಷದ ಎಪ್ಪತ್ತೈದು ಶಾಸಕರಿಗೆ ಮೊದಲ ಕಂತಿನಲ್ಲಿ ತಲಾ ಐವತ್ತು ಲಡ್ಡು ಕಳಿಸಿರುವುದಷ್ಟೇ ಅಲ್ಲ, ಉಂಡೆ ತಿಂದು ರೌಂಡಾಗುವುದರ ಜೊತೆ ಜೊತೆಗೇ ಅಗತ್ಯ ಬಿದ್ದರೆ ದಿಲ್ಲಿಯಲ್ಲೂ ಸೋನಿಯಾ ಗಾಂಧಿ ಹಾಗೂ ಇತರ ನಾಯಕರ ಮನೆಗಳಿಗೆ ರೌಂಡು ಹೊಡೆಯಲೂ ಸಿದ್ಧರಾಗಬೇಕು ಎಂಬ ಮೆಸೇಜು ತಲುಪಿಸಿದ್ದಾರೆ. ಸದ್ಯದ ಸ್ಥಿತಿಯಲ್ಲೇನೋ ಮೊದಲ ಕಂತಿನ ಲಡ್ಡು ತಿಂದು ಖುಷಿಯಾಗಿರುವ ಬಹುತೇಕ ಕಾಂಗ್ರೆಸ್ ಶಾಸಕರು, ಅರೇ, ನಿಮ್ಮನ್ನು ಕೆಳಗಿಳಿಸಲು ಹೊರಟರೆ ನಾವು ನೋಡಿಕೊಂಡು ಸುಮ್ಮನೆ ಕೂರಲು ಸಾಧ್ಯವೇ ಇಲ್ಲ ಎಂದು ವೀರಾವೇಶ ಪ್ರದರ್ಶಿಸಿದ್ದಾರೆ.
ಆರ್.ಟಿ.ವಿಠ್ಠಲಮೂರ್ತಿ
ವರದಿ
ಮಿನಿಸ್ಟರ್ ಖಾದರ್ ಶಿಷ್ಯ ಹನೀಫನಿಗೆ ಭರ್ತಿ ಒದೆ
ಹಿಂದೆ ವಿಟ್ಲದಲ್ಲಿ ಕೆ.ಎಂ.ಇಬ್ರಾಹಿಂ ಶಾಸಕರಾಗಿದ್ದಾಗ ಅವರ ಜೊತೆಗಿದ್ದ ಹನೀಫ್, ಕೋಮುಗಲಭೆಗಳಲ್ಲಿ ಗುರುತಿಸಿಕೊಂಡಿದ್ದ. ಆಗ ಕಲ್ಲಡ್ಕದಲ್ಲಿ ಪ್ರಭಾಕರ ಭಟ್ಟರ ಪಟಾಲಮ್ಮನ್ನು ಹೆಡೆಮುರಿ ಕಟ್ಟುವ ಪ್ಲಾನ್ ಮಾಡಿದ್ದ ಹನೀಫ್, ಬಹುದ್ದೂರ್ ಇಸ್ಮಾಯಿಲ್ ಕೊಲೆಯಾದಾಗ ಆ ಪ್ರಕರಣದಲ್ಲಿ ತನ್ನ ಆತ್ಮೀಯ ಅಂಡೇಲು ಮೋನುವಿನಿಂದ ನಾರಾಯಣ ಸೋಮಯಾಜಿ, ಪದ್ಮನಾಭ ಕೊಟ್ಟಾರಿ, ರುಕ್ಮಯ್ಯ ಪೂಜಾರಿ ಮೇಲೆ ದೂರು ಕೊಡಿಸಿದ್ದ. ಅದರ ನಂತರ ಮುಂದಿನ ಅವಧಿಯ ಚುನಾವಣೆಯಲ್ಲಿ ಕೆ.ಎಂ. ಇಬ್ರಾಹಿಂ ಮುಗ್ಗರಿಸಿ ಅಲ್ಲಿ ಪದ್ಮನಾಭ ಕೊಟ್ಟಾರಿ ಶಾಸಕನಾದ ನಂತರ ಈ ಕೊಲೆ ಕೇಸಿನಿಂದ ಕೊಟ್ಟಾರಿಗೂ ಬಚಾವ್ ಆಗುವ ದರ್ದು ಇದ್ದಿತ್ತು. ಆಗ ಎಂಟ್ರಿ ಕೊಟ್ಟವನೂ ಕೂಡ ಇದೇ ಹನೀಫ್!
ವಸಂತ್ ಗಿಳಿಯಾರ್
ವರದಿ
ಶಿವಮೊಗ್ಗದ ಬಡ್ಡಿ ಮಕ್ಕಳ ನಡ ಮುರಿದ ಎಸ್ಪಿ ರವಿ
ಶಿವಮೊಗ್ಗದಲ್ಲಿ ಬಡ್ಡಿಭೀಮ ಅಂತ ಒಬ್ಬ ಇದ್ದಾನೆ. ಹಿಂದೆ ‘ಹಾಯ್ ಬೆಂಗಳೂರ್’ ಈತನ ಕ್ರೌರ್ಯ ಮತ್ತು ಬಡ್ಡಿದಂಧೆಯನ್ನು ಬಯಲು ಮಾಡಿತ್ತು. ಕೊಲೆ ಪ್ರಕರಣವೊಂದರಲ್ಲಿ ಆರೋಪಿಯಾಗಿ ಒಂದಿಷ್ಟು ಕಾಲ ಜೈಲಿನಲ್ಲಿದ್ದು ಬಂದಿದ್ದ ಬಡ್ಡಿ ಭೀಮ, ತನ್ನ ಬಡ್ಡಿದಂಧೆಯ ಕರಾಳ ಕೃತ್ಯಗಳಿಂದ ಶಿವಮೊಗ್ಗದಲ್ಲಿ ದಂತಕತೆ ಸೃಷ್ಟಿಸಿದ್ದ. ಒಂದೆಡೆ ಯಜ್ಞ-ಯಾಗ ಮಾಡುತ್ತಾ ಮತ್ತೊಂದೆಡೆ ಆರ್ಥಿಕವಾಗಿ ಕಂಗಾಲಾದವರನ್ನು ಸುಲಿದು ತಿನ್ನುತ್ತಾ ಇದ್ದ ಈ ಬಡ್ಡಿಭೀಮನ ಹಾವಳಿ ‘ಹಾಯ್ ಬೆಂಗಳೂರ್’ ವರದಿ ನಂತರ ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ. ಆದರೆ ಬಡ್ಡಿಭೀಮನ ರೀತಿಯಲ್ಲೇ ಬಡ್ಡಿದಂಧೆ ನಡೆಸುವ ಡಜನ್ ಗಟ್ಟಲೆ ಖದೀಮರು ಶಿವಮೊಗ್ಗದಲ್ಲಿ ಇನ್ನೂ ಇದ್ದಾರೆ. ಹೊಡೆದಾಟ, ಹತ್ಯೆ, ಹತ್ಯೆಯತ್ನ ಇತ್ಯಾದಿ ಪ್ರಕರಣಗಳಲ್ಲಿ ಜೈಲು ಸೇರಿ ಬಂದು ಮೀಟರ್ ಬಡ್ಡಿದಂಧೆ ನಡೆಸುವ ಪಾತಕಿಗಳ ಸಂಖ್ಯೆಯೂ ಬಹಳಷ್ಟಿದೆ.
ವರದಿಗಾರ
ವರದಿ
ವಿಜಯನಗರದ ಕೋಳಿ ಮನೆ ಆಂಟಿ ಖಲ್ಲಾಸ್!
ಅನೈತಿಕ ಸಂಬಂಧವೆಂಬುದು ಮುಳ್ಳಿನ ಹಾಸಿಗೆಯೇ ವಿನಃ ಹೂವಿನ ಹೊದಿಕೆಯಲ್ಲ ಎಂಬ ನಗ್ನಸತ್ಯದ ಅರಿವು ವಸಂತಾಳಿಗಿದ್ದಿದ್ದರೆ ಇಂದು ಶಾಂತ ಸ್ವಭಾವದ ಗಂಡನ ಕ್ರೌರ್ಯಕ್ಕೆ ತಾಯಿ ಸಮೇತ ಬಲಿಯಾಗುತ್ತಿರಲಿಲ್ಲ. ಸಂಬಂಧ ಹಳಸಿದ ಮೇಲೆ ಇಬ್ಬರೂ ಸಮಾಲೋಚನೆ ನಡೆಸಿ ವಿಚ್ಛೇದನ ಪಡೆದುಕೊಂಡು ಪ್ರತ್ಯೇಕ ಜೀವನ ನಡೆಸಬಹುದಿತ್ತು. ಈ ಇಬ್ಬರೂ ಅವಿವೇಕಿಗಳು ಮಾಡಿಕೊಂಡ ಯಡವಟ್ಟು ಇಂದು ಇಡೀ ಸಂಸಾರವೇ ದಿವಾಳಿಯಾಗುವಂತಾಗಿದೆ. ಪಾಪ! ಆ ಮುದ್ದು ಮಕ್ಕಳಿಗೆ ಗತಿ ಯಾರು
ವಿನಯ್
ವರದಿ
ಧಾರವಾಡ: ನಿವೃತ್ತ ಐಜಿ ಕೊಕಟನೂರ್ ಸೊಸೆಯ ಆತ್ಮಹತ್ಯೆ ಸುತ್ತ!
ಧಾರವಾಡದ ನಿವೃತ್ತ ಐಜಿಪಿ ಬಿ.ಜಿ.ಕೊಕಟನೂರ್ ಮನೆಯಲ್ಲಿ ಭಾರಿ ದುರಂತವೊಂದು ನಡೆದು ಹೋಗಿದೆ. ಅವರ ಸೊಸೆ ಶಿಲ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅದಕ್ಕಿಂತ ಘೋರ ದುರಂತ ಅಂದರೆ ಆಕೆಯ ಆತ್ಮಹತ್ಯೆಗೆ ಇದೇ ಕೊಕಟನೂರ್‌ನ ರಾಕ್ಷಸ ಕುಟುಂಬವೇ ನೇರ ಕಾರಣ ಎಂಬುದು. ವಿಪರ್ಯಾಸ ಅಂದರೆ ಎಲ್ಲ ಗೊತ್ತಿದ್ದರೂ ಧಾರವಾಡದ ಪೊಲೀಸರು ಕೊಕಟನೂರ್‌ನ ಮೇಲೆ ಯಾವುದೇ ಕ್ರಮ ಕೈಗೊಳ್ಳದೆ ಇರುವುದು.
ಮಂಜುನಾಥ ಎಂ.ಶಿರಸಂಗಿ
ನೇವಿ ಕಾಲಂ
ಕಚ, ಶರ್ಮಿಷ್ಠೆ ಮತ್ತು ದೇವಯಾನಿಗೆ ಗೊತ್ತಿರದ ಅವರದೇ ಕತೆ!
ಎಲ್ಲಾ ಅಂದುಕೊಂಡಂತೇ ಆಯಿತು. ದೇವಯಾನಿ ಮತ್ತು ಶರ್ಮಿಷ್ಠೆ ಸ್ನಾನಕ್ಕೆಂದು ಹೋಗಿದ್ದವರು ಸ್ನಾನ ಮುಗಿಸಿ ಕೊಳದಿಂದ ಮೇಲೆದ್ದು ಬಂದಾಗ ಬಟ್ಟೆಗಳು ಅದಲು ಬದಲಾಗಿದ್ದವು. ಇದು ಇಂದ್ರನ ಕಿತಾಪತಿ ಅನ್ನುವುದು ಹುಲು ರಕ್ಕಸ ವಂಶಜರಾದ ಆ ತರುಣಿಯರಿಗಾದರೂ ಹೇಗೆ ಗೊತ್ತಾಗಬೇಕು ಶರ್ಮಿಷ್ಠೆ ಬೇಕೆಂದೇ ಜಗಳ ತೆಗೆದಳಾ ಅಥವಾ ಅವಳಲ್ಲಿರುವ ರಾಜಪುತ್ರಿಯೆಂಬ ಅಹಂಕಾರ ಅವಳನ್ನು ಹಾಗೆ ಮಾಡಿಸಿತಾ-ಏನೋ ಅಂತೂ ತನ್ನ ಅರಸುವಸ್ತ್ರವನ್ನು ತಮ್ಮ ರಾಕ್ಷಸ ವಂಶದ ಪುರೋಹಿತ ಶುಕ್ರಾಚಾರ್ಯರ ಪುತ್ರಿ ದೇವಯಾನಿ ತೊಟ್ಟಳೆನ್ನುವುದು ಶರ್ಮಿಷ್ಠೆ ಪಾಲಿಗೆ ಅತ್ಯಂತ ಸಿಟ್ಟಿನ ಕ್ಷಣವಾಗಿ ಮಾರ್ಪಟ್ಟಿತು.
ನೇವಿ
ಜಾನಕಿ ಕಾಲಂ
ಕಾವ್ಯ, ಆಧ್ಯಾತ್ಮ ಮತ್ತು ಒಂಚೂರು ಕಾಮ!
ದಿನನಿತ್ಯದ ಜಂಜಾಟಗಳಿಂದ ಪಾರಾಗುವುದಕ್ಕೆ ಇರುವ ಮಾರ್ಗಗಳು ಮೂರು; ಲೋಲುಪತೆ, ಕಾವ್ಯ, ಆಧ್ಯಾತ್ಮ. ಲೋಲುಪತೆಗೂ ಕಾವ್ಯಕ್ಕೂ ಹತ್ತಿರದ ಸಂಬಂಧವುಂಟು. ಹಾಗೆ ನೋಡಿದರೆ ಕಾವ್ಯವನ್ನು ಕಲೆಗೂ ವಿಸ್ತರಿಸಬಹುದು. ಆಧ್ಯಾತ್ಮಕ್ಕೂ ಕಲೆಗೂ ಹತ್ತಿರದ ಸಂಬಂಧವಿದೆ. ಲೋಲುಪತೆಯ ತುತ್ತ ತುದಿಯಲ್ಲೇ ಆಧ್ಯಾತ್ಮದ ಕಿರಣವೊಂದು ಕಂಡು ನಮ್ಮನ್ನು ಬೆಚ್ಚಿ ಬೀಳಿಸಬಹುದು. ಅಥವಾ ಈ ಮೂಳೆ ಮಾಂಸದ ದೇಹದ ನಶ್ವರತೆ ಅರಿತವನು, ಅದನ್ನು ಬೇಕಾಬಿಟ್ಟಿ ಬಳಸಿ ಎಸೆದು ಹೋಗಬಹುದು. ಈ ದೇಹ ಮುಖ್ಯವಲ್ಲ, ಆತ್ಮ ಮುಖ್ಯ ಎಂದು ವಾದಿಸುವವನಿಗೆ ದೇಹದ ಬಗ್ಗೆ ಗೌರವವಾಗಲೀ, ಪ್ರೀತಿಯಾಗಲಿ ಇರುವುದಕ್ಕೆ ಸಾಧ್ಯವಿಲ್ಲವಲ್ಲ. ಅದೊಂದು ಆಯುಧ ಮಾತ್ರ. ಅದನ್ನೂ ಹರಿತವಾಗಿ ಇಟ್ಟುಕೊಂಡರೆ ಸಾಕು.
ಜಾನಕಿ
ಅಂಕಣ : ಒಲಿದಂತೆ ಹಾಡುವೆ
ನೀವು ಇನ್ನೂ ಬರೀತಿದೀರಾ
“ನೀವು ಇನ್ನೂ ಬರೀತಿದೀರಾ -ನನ್ನನ್ನ ಭೆಟ್ಟಿ ಆದವರಲ್ಲಿ ಕೆಲವರು ಈ ಪ್ರಶ್ನೆ ಕೇಳುತ್ತಾರೆ. ಬಹುಶಃ ಇದು ಸಂಭಾಷಣೆ ಮುಂದುವರಿಸಲು ಅಥವಾ ಕೇವಲ ಕುಶಲೋಪರಿಯಂಥ ಪ್ರಶ್ನೆ ಇರಬಹುದು. ಆದರೆ ಇಂಥ ಪ್ರಶ್ನೆ ಕೇಳಿದಾಗ ನನಗೆ ಇರಿಸು ಮುರುಸಾಗುತ್ತದೆ. ಇದು ಒಂಥರಾ ವಿಚಿತ್ರ ಪ್ರಶ್ನೆ : ‘ಈಗ ನೀವು ನಿಮ್ಮ ಹೆಂಡತಿಗೆ ಹೊಡೆಯುವುದನ್ನ ಬಿಟ್ಟಿದ್ದೀರಾ’ ಎಂಬ ಮಾದರಿಯದ್ದು. ‘ಹೌದು’ ಅಥವಾ ‘ಇಲ್ಲ’ ಎಂದು ಒಂದು ಶಬ್ದದಲ್ಲಿ ಉತ್ತರಿಸಲು ಸಾಧ್ಯವಿಲ್ಲ. ಸಂದರ್ಶಕರು ಇಡೀ ಸಂಜೆ ನನ್ನೊಂದಿಗೆ ಹರಟಲು ಬಂದಿದ್ದಾರೆ. ಇದು ಕೇವಲ ಆರಂಭಿಕ ಪ್ರಶ್ನೆ ಇರಬಹುದು. ಹಾಗಿರಬಹುದು ಅಂದುಕೊಂಡು ನಾನು ವಿನಾಕಾರಣ ಕೆಮ್ಮಲು, ಗೂಗಿಡಲು ಆರಂಭಿಸುತ್ತೇನೆ. “ಇಂದು ಯಾಕೋ ತುಂಬಾ ಮೋಡ ಮುಚ್ಚಿಕೊಂಡಿದೆ, ಇವರೆಲ್ಲ ಎಷ್ಟು ಲಂಚ ಹೊಡೀತಾರೆ ನೋಡಿ, ಭ್ರಷ್ಟಾಚಾರ, ಸ್ವಜನ ಪಕ್ಷಪಾತ ನಮ್ಮ ದೇಶವನ್ನು ನಾಶ ಮಾಡಿಬಿಡುತ್ತದೆ... ಮುಂತಾಗಿ ಏನೇನೋ ಮಾತಾಡಿ ಆ ಪ್ರಶ್ನೆಗೆ ಉತ್ತರಿಸುವುದನ್ನ ತಪ್ಪಿಸಿಕೊಳ್ಳುತ್ತೇನೆ.
ಚಂದ್ರಶೇಖರ ಆಲೂರು
ಅಂಕಣ : ಆಕಾಶಬುಟ್ಟಿ
ಟೆರೇಸಿನ ಮೇಲೆ ಮಲಗಿದ ಒಂದು ರಾತ್ರಿ
ಆ ದಿನಗಳಲ್ಲಿ ಲೈಫಿನಲ್ಲಿ ಏನೂ ಘಟಿಸುತ್ತಿರಲಿಲ್ಲ. ನಂದೂ ಒಂದು ಲೈಫಾ... ಜಗತ್ತಿನ ಎಲ್ಲಾ ಸುಂದರ ಸ್ಥಳಗಳನ್ನು ಬಿಟ್ಟು ನಾನ್ಯಾಕೆ ಇಲ್ಲಿ ವಾಸಿಸುತ್ತಿದ್ದೇನೆ... what am I doing with my life... ಅಂತ ಜೋರಾಗಿ ಕಿರುಚೋಣವೆನ್ನಿಸಿವಷ್ಟು ಬೋರು... ಸಿನೆಮಾ, ಟೀವಿ, ಎಫ್ ಎಮ್, ಹಾಡು, ಫೇಸ್‌ಬುಕ್, ಚಾಟು, ಮಕ್ಕಳು... ಎಲ್ಲಾ ಬೋರು.. ಬೋರು... ಬೋರು... ಬೋರು. ಈ ಏಕತಾನತೆ ಮುರೀಬೇಕಲ್ಲ ಅಂತ ಅನ್ನಿಸಿದಾಗ ಸಡನ್ನಾಗಿ ಹೊಳೆದದ್ದು: ಒಂದು ರಾತ್ರಿ ಟೆರೇಸಿನ ಮೇಲೆ ಮಲಗಿದರೆ ಹೇಗೆ ಒಬ್ಬಳೇ
ಎಚ್.ಡಿ. ಸುನೀತಾ
ಅಂಕಣ : ನೂರು ಮುಖ ಸಾವಿರ ದನಿ
ಅಂತಿಂಥ ಗಾಯಕ ನೀನಲ್ಲಾ-ನಿನ್ನಂಥ ಗಾಯಕ ಇನ್ನಿಲ್ಲ
ಹೀಗೆಂದೊಡನೆಯೇ ಇಂದಿನ ಪೀಳಿಗೆಗೆ ಇದರ ತಲೆಬುಡ ಅರ್ಥವಾಗದೇ ಹೋದರೂ ಹಿಂದಿನ ಪೀಳಿಗೆಯವರಿಗೆ ಥಟ್ಟನೆ ಗೊತ್ತಾಗಿಬಿಡುತ್ತದೆ ಅವರು ಯಾರು ಅಂತ. ಹೌದು ಅವರು ಬೇರೆ ಯಾರೂ ಅಲ್ಲ “ಅಂತಿಂಥ ಹೆಣ್ಣು ನೀನಲ್ಲಾ ನಿನ್ನಂಥ ಹೆಣ್ಣು ಬೇರಿಲ್ಲ ಎಂಬ ಹಾಡಿನ ಖ್ಯಾತಿಯ ಕನ್ನಡದ ಗಂಡು ಕೋಗಿಲೆ ಶ್ರೀಮಾನ್ ದಿ ಪಿ.ಕಾಳಿಂಗರಾಯರು. ಆ ಚಿತ್ರದಲ್ಲಿ ಅವರ ಕಂಚಿನ ಕಂಠದ ಸುಮಧುರ ಕವಿ ಶ್ರೀ ಕೆ.ಎಸ್. ನರಸಿಂಹಸ್ವಾಮಿ ವಿರಚಿತ ಹಾಡು ಹೀಗಿದೆ: “ಅಂತಿಂಥ ಹೆಣ್ಣು ನೀನಲ್ಲಾ ನಿನ್ನಂಥ ಹೆಣ್ಣು ಇನ್ನಿಲ್ಲಾ ಅದನ್ನು ‘ತುಂಬಿದ ಕೊಡ’ ಚಿತ್ರದಲ್ಲಿ ತಾವೇ ಅಭಿನಯಿಸಿ ಹಾಡಿದ್ದಾರೆ.
ಎಂ.ವಿ. ರೇವಣಸಿದ್ದಯ್ಯ