Buy Now @ ₹ 15.00
Preview
ಸೃಷ್ಟಿ 1028 ಸಂಪುಟ 20, ಸಂಚಿಕೆ 40, ಜುಲೈ 2, 2015
ಖಾಸ್‌ಬಾತ್
ನಿಮ್ ಜೊತೆ ಒಂದೇ ಒಂದು ಫೊಟೋ ತೆಗಿಸ್ಕೋತೀನಿ ಸರ್, ಸೇಫ್ಟಿಗೆ! ಜವಾಬ್ದಾರಿ ಮುಗೀತು.
ತೀರ ಮುಗಿದೇ ಹೋಯ್ತು ಅನ್ನಲಾರೆ. ಏಕೆಂದರೆ ಹಿಮ ಇನ್ನೂ ಚಿಕ್ಕವನು. ಅವನಿಗೆ ಮದುವೆ ಮಾಡಲಿಕ್ಕೆ ಇನ್ನೂ ಇನ್ನೂ ಸಮಯವಿದೆ. ಮೊದಲ ಕುಟುಂಬಕ್ಕೆ ಸಂಬಂಸಿದಂತೆ ಹೇಳುವುದಾದರೆ, ಬಾಕಿ ಅಂತ ಇದ್ದುದು ಕರ್ಣನ ಮದುವೆಯೊಂದೇ. ಚೇತನಾ ಮದುವೆಯಾಗಿ ಎಂಟು ವರ್ಷಗಳಾದವಾ Mostly. ಭಾವನಾಗೆ ಇದು ಐದನೇ ಆನಿವರ್ಸರಿ. ಕನ್ನಡದಲ್ಲಿ ನಾನದನ್ನ ‘ಮದುವೆ ಹಬ್ಬ’ ಅನ್ನುತ್ತೇನೆ. ಮೊನ್ನೆ ಕರ್ಣನ ಮದುವೆಯ ಸಂಭ್ರಮದ ಮಧ್ಯೆ ನನ್ನ-ಲಲಿತಾಳ ಮದುವೆ ಹಬ್ಬ ಬಂದಿತ್ತು. ಅದು mostly ನಮ್ಮ ಮೂವತ್ತಾರನೇ ಮದುವೆ ಹಬ್ಬ. ಹಾಗೆ, ನನ್ನ ಮತ್ತು ಲಲಿತಳ ಸ್ನೇಹಕ್ಕೆ ಮೊನ್ನೆ ಜನವರಿ ಒಂದಕ್ಕೆ ಪೂರ್ತಿ ನಲವತ್ತು ತುಂಬಿದವು. ನನ್ನ ಫಜೀತಿ ಅಂದರೆ ಮರೆವು! ನನ್ನ ಮಿತ್ರ ಉಮಾಪತಿ ನನ್ನದನ್ನ ಎಲಿಫಂಟೇನ್ ಮೆಮೊರಿ ...
ರವಿ ಬೆಳಗೆರೆ
ಸಾಫ್ಟ್‌ಕಾರ್ನರ್
ನಾವು ಹಾಗೆ ನುಗ್ಗುವವರಲ್ಲ; ಏಕೆಂದರೆ ನಮ್ಮ ದೇಶ ಮಹಾನ್!
ಇಷ್ಟೆ. ನಾನು ಕೇಳೋದಕ್ಕಿರೋದು. ಅವರ ಪಾರ್ಥಿವ ದೇಹಗಳನ್ನು ಏನು ಮಾಡ್ತೀರಿ ನಿಮಗೆ ಹಿಮಾಲಯ ಗೊತ್ತು. At least ಕೇಳಿ ಗೊತ್ತು. ನಾನು ತಿಂಗಳುಗಟ್ಟಲೆ ಅಲ್ಲಿ ಇದ್ದು ಬಂದವನು. ಅದು ನಮ್ಮ ಹೆಮ್ಮೆ. ಭಾರತ ಮಾತೆಯ ನೆತ್ತಿಯ ಮೇಲಿರುವ ಪ್ರಖರ ಶಿಖರ! ಅಲ್ವಾ ಅದೇ ಹಿಮಾಲಯದ ಗರಿಮೆ. ಅದಕ್ಕೆ ಸರಿಸಮಾನವಾಗಿ ಹಿಮಾಲಯ, ನಮ್ಮ ಪಾಲಿಗೊಂದು ಪೀಡೆ. ಅದರ ವಿವರ ...
ರವಿ ಬೆಳಗೆರೆ
ಬಾಟಮ್ ಐಟಮ್
ಕನಸೆಂಬ ಬೀಜಕ್ಕೆ ನೀವೇ ನೀರು ಹಾಕಿ ಮತ್ತೊಬ್ಬರನ್ನು ಕಾಯುತ್ತಾ ಕೂರಬೇಡಿ
ನಿಮ್ಮ ಬದುಕಿನಲ್ಲಿ ನೀವು ಏನನ್ನಾದರೂ ಸಾಸಬೇಕೆಂದಿದ್ದರೆ, ಗುರಿ ಮುಟ್ಟಬೇಕೆಂದಿದ್ದರೆ ನೀವು ಬಿತ್ತಿಕೊಂಡ ಕನಸಿನ ಬೀಜಕ್ಕೆ ಸದಾಕಾಲ ನೀರು ಎರೆಯುವವರು ಸಿಗಲಿ ಎಂದು ಕಾಯಬೇಡಿ. ಒಂದು ವೇಳೆ ನೀವು ಆ ರೀತಿ ಕಾಯುವವರಾಗಿದ್ದರೆ ಸಾರಿ, ನೀವು ಬಿತ್ತಿಕೊಂಡ ಬೀಜ ಮರವಾಗಿ ಬೆಳೆಯುವುದು ಹಾಗಿರಲಿ, ಟಿಸಿಲೊಡೆದು ಆಕಾಶಕ್ಕೆ ಚಿಮ್ಮಲು ತಯಾರಾಗುವ ಮುನ್ನವೇ ಸಾರ ಕಳೆದುಕೊಂಡು ಬಿಡುತ್ತದೆ.
ರವಿ ಬೆಳಗೆರೆ
ಹಲೋ
ಸರ್ವಾಕಾರಿ ಮೋದಿಯ ವಿರುದ್ಧ ಅಡ್ವಾಣಿ ಕೊನೆಗೂ ತಿರುಗಿ ಬಿದ್ದರು
ಬಿಜೆಪಿಯ ಹಿರಿಯ ನಾಯಕ, ಮಾಜಿ ಉಪ ಪ್ರಧಾನಿ ಅಡ್ವಾಣಿ ಹೆಚ್ಚು ಕಡಿಮೆ ಒಂದೇ ಕಾಲಕ್ಕೆ ಎರಡು ಬಾಂಬ್‌ಗಳನ್ನು ಸಿಡಿಸಿದ್ದಾರೆ. ಮೊದಲನೆಯದು, ಈ ದೇಶದಲ್ಲಿ ಮತ್ತೆ ತುರ್ತು ಪರಿಸ್ಥಿತಿ ಹೇರುವ ಕಾಲ ಬರುವುದಿಲ್ಲ ಎನ್ನಲು ಸಾಧ್ಯವಿಲ್ಲ ಎಂಬುದು. ಎರಡನೆಯದು, ಏಕಚಕ್ರಾಪತ್ಯವೂ ಅಸ್ಥಿರತೆಯನ್ನು ಸೃಷ್ಟಿಸಬಹುದು ಎಂಬುದು. ಅಂದ ಹಾಗೆ ಯಾರೇನೇ ಹೇಳಲಿ, ಈ ಮಾತನ್ನವರು ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಕುರಿತು ಆಡಿದ್ದು ಎಂಬುದು ಸಾಮಾನ್ಯ ಜ್ಞಾನ ಇರುವ ಎಲ್ಲರಿಗೂ ಗೊತ್ತು. ಎಲ್ಲಕ್ಕಿಂತ ಮುಖ್ಯವಾಗಿ ಅವರು ಈ ಮಾತುಗಳನ್ನು ಆಡಬೇಕೆಂದರೆ ಸಂವಿಧಾನಕ್ಕೂ ಅತೀತವಾದ ಶಕ್ತಿಯೊಂದನ್ನು ಗಳಿಸಿಕೊಳ್ಳಲು ಮೋದಿ ಹೊರಟಿದ್ದಾರೆ ಎಂಬುದು ಅವರಿಗೆ ಮನದಟ್ಟಾಗಿದೆ.
ರವಿ ಬೆಳಗೆರೆ
ಮುಖಪುಟ ವರದಿ
ಅಕ್ಷತಾ ಎಂಬ ಹುಡುಗೀನ ಕಾಡಲ್ಲಿ ಕೊಂದದ್ದು ಕಿಲ್ಲರ್ ಸುನೀಲ!
ಕಾಲೇಜಿಗೆ ಹೋದ ಹುಡುಗಿ ಇನ್ನೂ ಯಾಕೆ ಮನೆಗೆ ಬಂದಿಲ್ಲ ಎಂದು ಆತಂಕಿತರಾದ ಮನೆಯವರು, ಆಕೆಯ ಸಹೋದರಿ ಹಾಗೂ ಸ್ಥಳೀಯರೆಲ್ಲರೂ ಸೇರಿ ಅಕ್ಷತಾಳನ್ನು ಹುಡುಕಿದ್ದಾರೆ. ಬೈಂದೂರು ಪೊಲೀಸ್ ಠಾಣೆಯ ಪಿಎಸ್ಸೈಗೂ ದೂರವಾಣಿ ಮೂಲಕ ವಿಷಯವನ್ನು ತಿಳಿಸಿದ್ದಾರೆ. ಹುಡುಕಲು ಆರಂಭಿಸಿದ ಕೆಲವೇ ಸಮಯದಲ್ಲಿ ಅಕ್ಷತಾಳ ಶವ ಸಿಕ್ಕಿದೆ. ಆಕೆ ಯೋಜನ ನಗರ ದಾಟಿ ಹೋಗಿದ್ದನ್ನು ಕಂಡವರಿದ್ದಾರೆ ಮತ್ತು ಯೋಜನ ನಗರದಿಂದ ಆಕೆಯ ಮನೆಗೆ ಹೆಚ್ಚು ಅಂತರವಿರಲಿಲ್ಲ. ಈ ನಡುವಿನಲ್ಲೇ ಏನಾದರು ಅನಾಹುತ ನಡೆದಿರಬಹುದು ಎಂದು ಅಕೇಶಿಯಾ ಪ್ಲಾಂಟೇಶನ್ನಿನಲ್ಲಿ ಹುಡುಕಿದಾಗ ಕಂಡು ಬಂದದ್ದು ವಿದ್ಯಾರ್ಥಿನಿ ಅಕ್ಷತಾಳ ಶವ. ರತ್ನಾ ಕೊಠಾರಿಯ ಮಾದರಿಯಲ್ಲಿಯೇ ಅಕ್ಷತಾಳ ಸಾವಿನ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿದೆ. ಅವಳಿ ಜಿಲ್ಲೆಯಾದ್ಯಂತ ದೊಡ್ಡ ಮಟ್ಟದ ಹೋರಾಟಗಳೂ ನಡೆದವು. ವಿದ್ಯಾರ್ಥಿಗಳು ಬೀದಿಗಿಳಿದರು, ಸಾಮಾಜಿಕ ಜಾಲ ತಾಣದಲ್ಲೂ ದೊಡ್ಡ ಮಟ್ಟದ ಆಕ್ರೋಶ ವ್ಯಕ್ತವಾಯಿತು. ದೇವಾಡಿಗ ಸಂಘಟನೆಯೂ ಹೋರಾಟಕ್ಕಿಳಿಯಿತು.
ವಸಂತ್ ಗಿಳಿಯಾರ್
ರಾಜಕೀಯ
ಒಂದೇ ಕಲ್ಲಿಗೆ ಮೂರು ಹಕ್ಕಿ ಹೊಡೀತಾರಾ ಮೋದಿ-ಷಾ ಎಂಬ ಜೋಡಿ ಹಕ್ಕಿ
ಏಕಕಾಲಕ್ಕೆ ಕರ್ನಾಟಕದಲ್ಲಿ ಮೂವರು ನಾಯಕರನ್ನು ಮಣಿಸಿದರೆ ಮಾತ್ರ ಮುಂದಿನ ದಿನಗಳಲ್ಲಿ ತಮಗೆ ಸರಾಗವಾದ ಅವಕಾಶ ದಕ್ಕುತ್ತದೆ ಅಂತ ಅದು ಭಾವಿಸಿದೆ. ಈ ಪೈಕಿ ಸಿದ್ದರಾಮಯ್ಯ ಹಾಗೂ ಡೀಕೇಶಿ ಜೊತೆ ಮಾಜಿ ಸಿಎಂ ಯಡಿಯೂರಪ್ಪ ಕೂಡ ಇರುವುದು ವಿಶೇಷ. ಅಂದಹಾಗೆ ಯಡಿಯೂರಪ್ಪನವರೇನೂ ಮೋದಿ ವಿರೋಧಿಯಲ್ಲ. ಆದರೆ ವಿರೋಧಿಯಲ್ಲದಿದ್ದರೇನಂತೆ. ಜನನಾಯಕ ಅನ್ನಿಸಿಕೊಂಡವರು ತಲೆ ಎತ್ತಕೂಡದು ಎಂಬುದು ಮೋದಿ ಲೆಕ್ಕಾಚಾರ. ಹಾಗೆಯೇ ಕರ್ನಾಟಕದಲ್ಲಿ ಸಿದ್ದರಾಮಯ್ಯ ಹಾಗೂ ಡೀಕೇಶಿಯನ್ನು ಅಲುಗಾಡಿಸುವ ಯತ್ನಕ್ಕೆ ಕೈ ಹಾಕಿರುವ ಮೋದಿ ಮತ್ತು ಷಾಗೆ ಸಿಬಿಐ ಈಗ ಭಯಾನಕ ಅಸ್ತ್ರವಾಗಿದಕ್ಕಿದೆ. ಅದೀಗ ಹಿರಿಯ ಐಎಎಸ್ ಅಕಾರಿ ಡಿ.ಕೆ.ರವಿ ಸಾವಿನ ಪ್ರಕರಣದ ಹಿಂದೆ ರಿಯಲ್ ಎಸ್ಟೇಟ್ ಮಾಫಿಯಾ ಕೈವಾಡವಿದೆ ಎಂಬ ಲೆಕ್ಕಾಚಾರಕ್ಕೆ ಬಂದಿದೆ.
ಆರ್.ಟಿ.ವಿಠ್ಠಲಮೂರ್ತಿ
ವರದಿ
ಪೂಜಾರಿಗಳೇ ಕಳ್ಳರಾದರೆ ಬನಶಂಕರಮ್ಮ ಏನು ಮಾಡ್ತಾಳೆ
ಕೋಟಿ ಕೋಟಿ ಆದಾಯವಿರುವ ದೇವಸ್ಥಾನದಲ್ಲಿ ಬನಶಂಕರಿ ಅಮ್ಮನವರ ಮೂಲ ವಿಗ್ರಹಕ್ಕೆ ಪೂಜೆ ಮಾಡಲು ಅಕಾರ ಇರುವುದು ಸತ್ಯನಾರಾಯಣ ಶಾಸ್ತ್ರಿ, ಸೋಮಶೇಖರ್ ಶರ್ಮಾ, ನಾಗರಾಜರಾವ್ ಹಾಗೂ ಸತೀಶ್ ಶರ್ಮ ಎಂಬ ನಾಲ್ವರಿಗೆ ಮಾತ್ರ. ನಾಲ್ಕು ವರ್ಷಗಳ ಹಿಂದೆ ಪರಿಚಾರಕನಾಗಿ ಸೇರಿಕೊಂಡ ಸೋಮಶೇಖರ್ ಶರ್ಮನಿಗೆ ಪೂಜೆ ಮಾಡುವ ಅಕಾರವಿರಲಿಲ್ಲ. ಆದರೆ ಪೂಜೆ ಮಾಡುವ ಅಕಾರವನ್ನ ಪಡೆದುಕೊಂಡು ಬಿಟ್ಟಿದ್ದಾನೆ. ಅದಕ್ಕೆ ಕಾರಣ ಎಂದರೆ ಈ ಸೋಮಶೇಖರ್ ಶರ್ಮಾ, ಸತ್ಯನಾರಾಯಣ ಶಾಸ್ತ್ರಿಯ ಖಾಸಾ ಚಿಕ್ಕಪ್ಪನ ಮಗ. ಈ ನಾಲ್ವರ ಮೇಲೆಯೇ ಇದೀಗ ಕಳ್ಳತನ ಆರೋಪ ಬಂದಿರುವುದು. ಯಾಕೆಂದರೆ ಈ ನಾಲ್ವರನ್ನ ಹೊರತುಪಡಿಸಿದರೆ ದೇವಿಯ ಗರ್ಭಗುಡಿಯ ಒಳಗಡೆ ಮತ್ತಿನ್ಯಾರಿಗೂ ಸಹ ಪ್ರವೇಶವಿರುವುದಿಲ್ಲ ಎಂಬುದು ನೆನಪಿಡಬೇಕಾದ ಸಂಗತಿ.
ಅಶ್ವಿನ್ ಕುಮಾರ್
ವರದಿ
ಅತ್ತ ಮಹೇಶ ಹೊಂಟ ಜೈಲಿಗೆ ಈಗ ಕಾಂಗ್ರೆಸ್ ನೆಂಟ ಸಂಗಮೇಶಿ
ಮಹೇಶ್ ಕುಮಾರ್ ವಂಚನೆ ಕೇಸಲ್ಲಿ ಜೈಲು ಸೇರಿರುವಾಗ ಇತ್ತ ಮಾಜಿ ಶಾಸಕ ಬಿ.ಕೆ. ಸಂಗಮೇಶ್ ಕಾಂಗ್ರೆಸ್ ಸೇರಿದ್ದಾರೆ. ಇವೆರಡಕ್ಕೂ ಸಂಬಂಧವಿಲ್ಲವಾದರೂ ಮಹೇಶ್ ಕುಮಾರ್‌ನನ್ನು ಜೈಲಿಗೆ ಕಳುಹಿಸಲು ಈ ಸಂಗಮೇಶ್ ಇನ್ನಿಲ್ಲದ ಪ್ರಯತ್ನ ಮಾಡಿ ಸೋತಿದ್ದರು ಎಂಬುದಂತೂ ನಿಜವೇ. ಭದ್ರಾವತಿ ಠಾಣೆಗಳಲ್ಲಿ ಹತ್ತು ಹಲವು ಕೇಸು ಜಡಿಸಿಕೊಂಡಿದ್ದ ಮಹೇಶ್ ಕುಮಾರ್ ತನ್ನ ಅಕ್ಕನ ಮೇಲಾದ ಹಲ್ಲೆ ಪ್ರಕರಣಕ್ಕೆ ಸಂಬಂಸಿದಂತೆ ಸಂಗಮೇಶ್ ಸೋದರರನ್ನು ಹೊಣೆ ಮಾಡಿ ಕೇಸು ಮಾಡಿ ಆಟವಾಡಿಸಿದ್ದ. ಅವತ್ತಿನಿಂದಲೂ ಮಹೇಶ್ ಕುಮಾರ್ ಎಲ್ಲೆಲ್ಲಿ ಏನೇನು ಹಲ್ಕಾ ಕೆಲಸ ಮಾಡಿದ್ದಾನೆ, ಕೇಸು ಹಾಕಿಸಿಕೊಂಡಿದ್ದಾನೆ ಎಂಬುದರ ದಾಖಲೆಗಳನ್ನು ಕಂಡ ಕಂಡವರಿಗೆಲ್ಲ ಕೊಟ್ಟು ಮಹೇಶ್ ಕುಮಾರ್ ಮೇಲೆ ಬರೆಯಿರಿ ಅಂತ ಪತ್ರಕರ್ತರಿಗೆ ದುಂಬಾಲು ಬಿದ್ದಿದ್ದ ಈ ಸಂಗಮೇಶ್. ಅದರಲ್ಲೂ ಮಹದೇವಿ ಎಂಬಾಕೆಯನ್ನು ಮದುವೆಯಾಗಿ ವಂಚಿಸಿದ ಮಹೇಶ್ ಕುಮಾರ್‌ನನ್ನು ಸಂಗಮೇಶ್ ಸಾಕಷ್ಟು ಆಟವಾಡಿಸಿದ್ದ.
ಶೃಂಗೇಶ್
ವರದಿ
ಬೆಂಗಳೂರು ಪಾಲಿಕೆಗೆ ಕಡೆಗೂ ಚುನಾವಣೆ
ಈಗಿರುವ ಪರಿಸ್ಥಿತೀಲಿ ಪಾಲಿಕೆ ಕನಿಷ್ಟ ಎರಡು ವರ್ಷ ಸುಧಾರಿಸಿಕೊಂಡರೂ ಸಾಲದು. ಉಳಿದಂತೆ ಅಧೋಗತಿಗಿಳಿದಿರುವ ಪಾಲಿಕೆ ಸುಧಾರಿಸಿಕೊಳ್ಳುವ ಯಾವ ಲಕ್ಷಣಗಳೂ ಇಲ್ಲ. ಇನ್ನೂ ಚುನಾವಣೆಯಾದರೆ ನೂರತ್ತೊಂಬತ್ತೆಂಟು ಕಾರ್ಪೋರೇಟರ್‌ಗಳ ಸಾರಿಗೆ, ಸಂಬಳ, ಕಮಾಯಿ, ಊಟ, ಲೂಟಿಗೆ ಪಾಲಿಕೆ ತಲೆಕೊಡಲೇಬೇಕು. ಇರುವ ಬಾಬತ್ತನ್ನು ಉಳಿಸಿಕೊಂಡು ಪಾಲಿಕೆಯ ಸಾಲದ ಬಡ್ಡಿ ಸರಿದೂಗಿಸುವ ದೊಡ್ಡ ತಲೆನೋವು ಸಿದ್ದು ಸರ್ಕಾರದ್ದು. ಕೇವಲ ಮುಖ್ಯಮಂತ್ರಿಯೇ ಅಲ್ಲ ಉಸ್ತವಾರಿ ಸಚಿವ ರಾಮಲಿಂಗರೆಡ್ಡಿಗೂ ತಕ್ಷಣದ ಪಾಲಿಕೆ ಚುನಾವಣೆ ಇಷ್ಟವಿರಲಿಲ್ಲ.
ವರದಿಗಾರ
ವರದಿ
ಯಲ್ಲಾಲಿಂಗನ ಕೊಲೆ ಸುತ್ತ ಹೀನ ರಾಜಕೀಯ!
ಕನಕಾಪುರದಿಂದ ಗದಗಕ್ಕೆ ಹೋಗಿ ಶಿಕ್ಷಣ ಪಡೆಯುತ್ತಿದ್ದ ಯಲ್ಲಾಲಿಂಗ ಅಲ್ಲಿ ಲವ್ವಿಗೆ ಬಿದ್ದಿದ್ದಾನೆ. ಇದೀಗ ಆರೋಪಿ ಸ್ಥಾನದಲ್ಲಿ ನಿಂತಿರುವ ಹನುಮೇಶ್‌ನಾಯಕನ ಮಗಳು ಗದಗದಲ್ಲಿನ ಆತನ ಅಕ್ಕನ ಮನೆಯಲ್ಲಿದ್ದಳು. ಹಾಗೂ ಅಲ್ಲಿಂದಲೇ ಕಾಲೇಜಿಗೂ ಹೋಗುತ್ತಿದ್ದಳು. ಆಜುಬಾಜು ಗ್ರಾಮಗಳಿಂದ ಗದಗಕ್ಕೆ ಬಂದ ಇವರಿಬ್ಬರಿಗೆ ಅಲ್ಲಿ ಪರಿಚಯವಾಗಿದೆ. ಪರಿಚಯ-ಸ್ನೇಹವನ್ನೇ ಯಲ್ಲಾಲಿಂಗ ಪ್ರೇಮ ಅಂದುಕೊಂಡನಾ ಅಲ್ಲಿಗೆ ಯಲ್ಲಾಲಿಂಗನನ್ನು ಕರೆಸಿದ ಹನುಮೇಶ್ ನಾಯಕ ವಾರ್ನ್ ಮಾಡಿ ಕಳಿಸಿದ್ದಾರೆ. ಬಹುಶಃ ಆ ವಿಷಯ ಅಲ್ಲಿಂದ ಮುಂದುವರೆದಂತಿಲ್ಲ. ಆ ನಂತರ ಯಲ್ಲಾಲಿಂಗನಿಗೆ ತನ್ನದೇ ಕನಕಾಪುರದ ಬಾಳನಗೌಡರ ಮಗಳಲ್ಲಿ ಪ್ರೇಮಾಂಕುರವಾಗಿದೆ. ಈ ಬಾಳನಗೌಡ, ಹನುಮೇಶ್‌ನಾಯಕನ ಖಾಸಾ ಶಿಷ್ಯ. ಒಂದೊಮ್ಮೆ ವಿಷಯ ಹನುಮೇಶ್ ನಾಯಕನ ಪಂಚಾಯಿತಿಗೆ ಹೋಗಿದೆ.
ಸತೀಶ್ ಬಿಲ್ಲಾಡಿ
ನೇವಿ ಕಾಲಂ
ನಮಗವನು ಒಬ್ಬನೇ; ಅವರಿಗವನು ಅವರೊಳಗೊಬ್ಬ!
ಅವನು ಸತ್ತಿದ್ದಾನೆ. ಅವನ ಸುತ್ತ ತುಂಬ ಜನ ಸೇರಿದ್ದಾರೆ. ಪರವಾಗಿಲ್ಲ, ತುಂಬ ಜನ ಸೇರಿದ್ದಾರೆ, ತುಂಬ ಜನಬಳಕೆ ಇತ್ತಂತ ಕಾಣುತ್ತದೆ ಅಂತ ಜನ ಮಾತಾಡಿಕೊಂಡರು, ಸತ್ತದ್ದಕ್ಕೆ ಏನು ಕಾರಣ ಅಂತ ವಿಚಾರಿಸಿಕೊಂಡು ತ್ಚು ತ್ಚು... ಅಂತ ವಿಷಾದ ವ್ಯಕ್ತಪಡಿಸಿದರು. ಅಲ್ಲಿ ಸೇರಿದವರಿಗೂ ಸತ್ತ ವ್ಯಕ್ತಿಗೂ ಒಂದಲ್ಲಾ ಒಂದು ಬಗೆಯ ಸಂಬಂಧವಿತ್ತು.
ನೇವಿ
ಜಾನಕಿ ಕಾಲಂ
ಕಸೂತಿಯ ನಡುವೆ ಉಕ್ಕುವ ಹಾಡಿಗೆ ಮರುಳಾಗಿ
ಮನುಷ್ಯನ ಜೀವನದ ಅತ್ಯಂತ ನಿರ್ಣಾಯಕ ಘಳಿಗೆ ಯಾವುದು ಎಂದು ಕೇಳಿಕೊಳ್ಳಿ. ಅದನ್ನು ಇನ್ನಷ್ಟು ಸರಳಗೊಳಿಸಿ ‘ನನ್ನ ಜೀವನದ ಅತ್ಯಂತ ಮಹತ್ವದ ಕ್ಷಣ ಯಾವುದಾಗಿರುತ್ತದೆ’ ಅಂತ ಪ್ರಶ್ನಿಸಿ ಕೊಳ್ಳಿ. ತಕ್ಷಣಕ್ಕೆ ಉತ್ತರ ಸಿಕ್ಕುವುದಿಲ್ಲ. ‘ನಾನು ಇಂತಿಂಥವರ ಮಗನಾಗಿಯೋ ಮಗಳಾಗಿಯೋ ಹುಟ್ಟಿದ್ದು. ಇಂಥ ಸ್ಕೂಲಿಗೆ ಹೋಗಲು ಇಚ್ಚಿಸಿದ್ದು. ಇಂಥ ಕೋರ್ಸು ತೆಗೆದುಕೊಂಡದ್ದು, ಇಂತಿಂಥಾ ಗೆಳೆಯರನ್ನು ಆರಿಸಿಕೊಂಡಿದ್ದು. ಇಂಥಾ ಕೆಲಸಕ್ಕೆ ಸೇರಿದ್ದು. ಇಂಥ ಹುಡುಗನಿಗೆ ಮನಸೋತದ್ದು..’ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಪ್ರತಿಯೊಂದೂ ನಿರ್ಣಾಯಕವೇ ಅನ್ನಿಸಿಬಿಡುತ್ತದೆ. ಒಂದು ವೇಳೆ ನಮ್ಮೂರಿನಲ್ಲಿ ಕಾಲೇಜು ಮುಗಿಸಿ ಮೈಸೂರು ಯೂನಿವರ್ಸಿಟಿಗೆ ಬಂದಿದ್ದರೆ ಒಳ್ಳೆಯ ಮೇಷ್ಟರ ಕೈಲಿ ಪಾಠ ಹೇಳಿಸಿಕೊಳ್ಳಬಹುದಿತ್ತು.
ಜಾನಕಿ
ಅಂಕಣ : ಒಲಿದಂತೆ ಹಾಡುವೆ
ಲಖನೌ: ಆಗ ತೇಲಿ ಬಂದದ್ದು ತಂಗಾಳಿಯಲ್ಲ
ಬಿಸಿಲು ನನಗೆ ಹೊಸತಲ್ಲ. ಈಜಿಪ್ಟ್‌ನ ಮರಳು ಗಾಡಿನಲ್ಲಿ ಅಡ್ಡಾಡುವಾಗ ಲಕ್ಸರ್ ಮತ್ತು ಕಾರ್ನಾಕ್‌ಗೆ ಭೆಟ್ಟಿ ನೀಡಿದಾಗ ಬೆಳಗಿನ ಐದು ಗಂಟೆಗೆ ಸುಡುವ ಸೂರ್ಯನನ್ನು ಕಂಡಿದ್ದೇನೆ. ಈ ಬಾರಿ ಬೇಸಗೆಯಲ್ಲಿ ನಮ್ಮ ರಾಯಚೂರು, ಗುಲ್ಬರ್ಗಾ ಮತ್ತು ಬೀದರ್ ನಗರಗಳಲ್ಲಿ ಅಡ್ಡಾಡಿ ಬಂದಿದ್ದೇನೆ. ಮರಳುಗಾಡಿನ ವಿಶೇಷವೆಂದರೆ ರಾತ್ರಿಯ ತಾಪಮಾನ ತಗ್ಗುತ್ತಾ ಹೋಗುವುದು. ಆದರೆ ಈ ಲಖನೌನಲ್ಲಿ ಮಧ್ಯರಾತ್ರಿಯಲ್ಲಿ, ಮರ-ಗಿಡಗಳಿಂದ ಆವೃತವಾದ...
ಚಂದ್ರಶೇಖರ ಆಲೂರು
ಅಂಕಣ : ಆಕಾಶಬುಟ್ಟಿ
ನೆಮ್ಮದಿ ಅರಸಿ ಬಂದವರು
ನನ್ನ ಅನೇಕ ಬಸ್ಸು ಯಾನಗಳಲ್ಲೊಂದರಲ್ಲಿ ಆಕೆ ಸಿಕ್ಕಳು. ಫಾರಿನರ್. ಹೊಂಬಣ್ಣದ ಕೂದಲು, ಹೆಂಗ್ಹೆಂಗೋ ತಿರುಚಿ ಕಟ್ಟಿಕೊಂಡಿದ್ದಳು ಶೆಕೆಗೆ. ಅವಳ ಮೈಬಣ್ಣಕ್ಕೆ ಅದೂ ಸ್ಟೈಲ್ ಆಗಿ ಕಾಣುತ್ತಿತ್ತು. ಆಕೆಯೊಂದಿಗೆ ಇಬ್ಬರು ಎತ್ತರದ ಅಗಲ ಭುಜಗಳ ಸ್ಟ್ರಾಂಗ್ ತರುಣರು. ಇಡೀ ಬಸ್ಸು ಖಾಲಿಯಿತ್ತು. ಆದರೂ ನಾನು ಹೋಗಿ ಆಕೆಯ ಪಕ್ಕವೇ ಕೂತೆ. ನಾನು ಕಂಡ ಬಹುತೇಕ ಫಾರಿನರ್‌ಗಳಂತೆ ಈಕೆಯೂ ಗಂಭೀರಳಾಗಿ ತನ್ನಷ್ಟಕ್ಕೆ ಕೂತಿದ್ದಳು. ಇನ್ನೂ ಎರಡು ಗಂಟೆಯ ಪ್ರಯಾಣ. ಕಿಟಕಿಯಲ್ಲಿ ಹಿಂದೆ ಸರಿವ ಅವವೇ ದೃಶ್ಯಗಳು. ಬಿಸಿಲು. ಬೇಸರ. ಫಾರಿನರ್ ತಾಯಿ ಯನ್ನಾದರೂ ಮಾತಾಡಿಸೋಣ ಅಂತ ಶುರು ಮಾಡಿದೆ.
ಎಚ್.ಡಿ. ಸುನೀತಾ
ಅಂಕಣ : ನೂರು ಮುಖ ಸಾವಿರ ದನಿ
ಹಡೆದವ್ವನನ್ನು ಮರೆಯಬೇಡಿ ಮಕ್ಕಳೇ...!
ಐವತ್ತು ವರ್ಷಗಳ ಹಿಂದೆ ಭದ್ರಾವತಿಯ ಹಳೇ ನಗರದ ವಿನಾಯಕ ಟಾಕೀಸಿನಿಂದ ಸ್ವಲ್ಪ ಕೆಳಗೆ ಇದ್ದ “ವಾಸವಿ ಕಾಲೋನಿಯಲ್ಲಿ ನನ್ನ ಎರಡನೇ ಅಣ್ಣ ಬಿ.ವಿ. ನಂಜುಂಡಯ್ಯನವರ ಜೊತೆ ನಾನು, ನನ್ನ ತಂದೆ ಇದ್ದೆವು. ನಾನಾಗ ಹೈಸ್ಕೂಲ್ ಸೆಕೆಂಡ್ ಇಯರ್. ನನ್ನ ಮೊದಲ ಅಣ್ಣ ಬಿ.ವಿ. ಹಾಲಯ್ಯ ನ್ಯೂ ಮಾಡೆಲ್ ಕಾಲೋನಿಯಲ್ಲಿ ತನ್ನ ಹೆಂಡತಿಯೊಂದಿಗೆ ಪ್ರತ್ಯೇಕವಾಗಿ ಸಂಸಾರ ನಡೆಸಿದ್ದರು. ನನ್ನ ಮೂರನೇ ಅಣ್ಣ ಆಗ ಅವಿವಾಹಿತ ರುದ್ರಯ್ಯ ಸಹ ಪಕ್ಕದ ಹಳ್ಳಿಯಲ್ಲಿದ್ದ. ನನ್ನ ತಮ್ಮ ಶ್ರೀರಂಗಪಟ್ಟಣ ಸಮೀಪದ ಅರಕೆರೆಯಲ್ಲಿದ್ದ ನಮ್ಮ ಅದೇ ಅಕ್ಕನ ಮನೆಯಲ್ಲಿದ್ದು ಪ್ರೈಮರಿಯಲ್ಲಿ ಓದುತ್ತಿದ್ದ.
ಎಂ.ವಿ. ರೇವಣಸಿದ್ದಯ್ಯ