Buy Now @ ₹ 15.00
Preview
ಸೃಷ್ಟಿ 1025 : ಸಂಪುಟ 20, ಸಂಚಿಕೆ 37, ಜೂನ್ 11, 2015
ಖಾಸ್‌ಬಾತ್
ಅವರನ್ನು ಆ ಮುಪ್ಪಿನಲ್ಲಿ ಜನಕ್ಕೆ ತೋರಿಸಲೇ ಬಾರದೆಂಬ ನಿಲುವು!
ಏನಾಗಿದೆ ದೇವರಾಣೆ ಗೊತ್ತಿಲ್ಲ. ಆತ ಮಾತೇ ಆಡುವುದಿಲ್ಲ. Whats wrong with him ನಾನು ಮಹಾನ್ ನಟ ದಿಲೀಪ್ ಕುಮಾರ್ ಬಗ್ಗೆ ಮಾತಾಡುತ್ತಿದ್ದೇನೆ. ನೋಡಿದ್ದೇನಲ್ಲ, ಒಂದೆರಡು ಅವಾರ್ಡ್ ಸಮಾರಂಭಕ್ಕೆ ಆತ ಬಂದಿದ್ದರು. ಪಕ್ಕದಲ್ಲೇ ಪತ್ನಿ ಸಾಯಿರಾ ಬಾನು. ದಿಲೀಪ್‌ಗೆ ಇದು ಅಪ್ರಜ್ಞಾ ಸ್ಥಿತಿಯಾ ಏನೂ ಕೇಳಿಸುತ್ತಿಲ್ಲವಾ ಕಾಣಿಸುತ್ತಿಲ್ಲವಾ ಅಸಲು ಕಣ್ಣೆದುರಿಗೆ ಏನು ನಡೆಯುತ್ತಿದೆ ಎಂಬುದು ದಿಲೀಪ್‌ಗೆ ಗೊತ್ತೇ ಆಗುತ್ತಿಲ್ಲವಾ I get worried. ಆತ ನನ್ನ ಪಾಲಿಗೆ ಪ್ರಾಣ, ಪ್ರಾಣದಂತಹ ನಟ. ಚಿಕ್ಕಂದಿನಿಂದಲೂ ನಾನು ಕೊಂಚ pathoಗಳ ಆರಾಧಕ. ಮುಕೇಶ್ ಹಾಡಬೇಕು. ಅದಕ್ಕೆ ದಿಲೀಪ್ ನಟಿಸಬೇಕು. Of course, ಮುಕೇಶ್‌ಗಾಗಿಯೇ ಕೆಲವರು ಹುಟ್ಟಿದಂತಿದ್ದರು. ರಾಜ್ ಕಪೂರ್ ಬಿಡಿ: ಆತನಿಗೆ ಮುಕೇಶ್ ದನಿಯೇ ದನಿ. ಮುಕೇಶ್ ತೀರಿಕೊಂಡಾಗ ರಾಜ್ ಕಪೂರ್ ಅಂದದ್ದು ಒಂದೇ ಮಾತು: I have lost my voice!
ರವಿ ಬೆಳಗೆರೆ
ಸಾಫ್ಟ್‌ಕಾರ್ನರ್
ಇದೊಂದು ಸಂಗತಿ ಮಾತ್ರ ಲೆಕ್ಕಾಚಾರವೇ ಇಲ್ಲದಂತಹುದು!
ಸಾವಿಗೆ logic ಇರುವುದಿಲ್ಲ. ಕೆಲವರು ಅಷ್ಟು ಒಳ್ಳೆಯವರಿರುತ್ತಾರೆ. ಯಾಕೆ ಇದ್ದಕ್ಕಿದ್ದ ಹಾಗೆ ಸಾಯುತ್ತಾರೆ ನನ್ನ ಸ್ನೇಹಿತ, ಪರ್ತಕರ್ತ ಪ್ರಕಾಶ್‌ನ ಆ ಮೂರು ವರ್ಷದ ಕಂದ ಯಾಕೆ ತೀರಿಕೊಂಡಿತು ಹಾಗೆ ತುಂಬ ಉದಾಹರಣೆಗಳನ್ನು ಕೊಡಬಲ್ಲೆ. ಕೆಲವರು ಖಾಯಿಲೆ ಕಸಾಲೆ ತಂದುಕೊಂಡು ಸಾಯುತ್ತಾರೆ. ಅವರನ್ನು ಬಿಟ್ಟುಬಿಡಿ. ಯಾಕೋ ಕಾಣೆ, ಈ ಇತ್ತೀಚೆಗೆ ನನ್ನ ಅನೇಕ ಸ್ನೇಹಿತರು, ಪರಿಚಿತರು ಸತ್ತು ಹೋದರು. ಆ ಪೈಕಿ ಕೆಲವರು ತುಂಬ ಚಿಕ್ಕವರು. ಇಂತಿಷ್ಟನೇ ವಯಸ್ಸಿಗೆ ಸಾಯಬೇಕು ಅಂತ ಕರಾರು ಎಲ್ಲಿದೆ “ನಿಮಗೆ ಹೇಗೆ ಸಾಯಬೇಕು ಅಂತ ಅನ್ನಿಸುತ್ತೆ ಎಂದು ಯಾರನ್ನೂ, ಯಾರೂ ಕೇಳಬಾರದು. ನಮಗೇ ಒಳಗೊಳಗೇ ಹಾಗೆಲ್ಲ ಅನ್ನಿಸಬಹುದು. ಹಠಾತ್ತನೆ ಸಾಯಬೇಕು, ಸಾಯ್ತಿದೀನಿ ಅಂತ ಗೊತ್ತೇ ಆಗಬಾರದು, ನಿದ್ದೇಲಿ ಸಾಯಬೇಕು, ಸರಿಯಾಗಿ ನೂರು ವರ್ಷ ತುಂಬಿದ ದಿನ ಸಿಗಲಿ Gate pass ಎಂದು ತಲೆಗೊಬ್ಬರಂತೆ ಮಾತಾಡುತ್ತೇವೆ. ಇಚ್ಛೆ ಪೂರೈಸಲಿಕ್ಕೆ ನಮಗೆ ಅದ್ಯಾವ ದೇವರಿದ್ದಾರೆ, ನೆಂಟನಂಥವರು
ರವಿ ಬೆಳಗೆರೆ
ಬಾಟಮ್ ಐಟಮ್
ಎಲ್ಲರ ಬದುಕೂ ರೈಲಿನಂತಿರುವುದಿಲ್ಲ ಗೊತ್ತಾ
ಬದುಕೆಂದರೆ ರೈಲಿದ್ದಂತೆ. ಅದರಲ್ಲಿ ನೂರಾರು ಜನ ಹತ್ತುತ್ತಾರೆ, ಇಳಿಯುತ್ತಾರೆ. ಒಂದು ನಿಲ್ದಾಣದಲ್ಲಿ ಹತ್ತಿದವರು ಇನ್ನೊಂದು ನಿಲ್ದಾಣದಲ್ಲಿ ಇಳಿದು ಹೋಗುತ್ತಾರೆ ಅನ್ನುವ ಮಾತನ್ನು ಯಾವುದಾದರೂ ಒಂದು ಸಂದರ್ಭದಲ್ಲಿ ನಾವು ಕೇಳಿಯೇ ಇರುತ್ತೇವೆ. ಬದುಕನ್ನು ರೈಲಿಗೆ ಹೋಲಿಸಿರುವುದು ಸರಿಯೇ. ಆದರೆ ನನ್ನ ಪ್ರಕಾರ ಎಲ್ಲರ ಬದುಕೂ ರೈಲು ಇದ್ದಂತೆ ಇರಲು ಸಾಧ್ಯವಿಲ್ಲ. ನಿಜವಾದ ರೈಲು ಒಂದು ಗಮ್ಯದ ಕಡೆ ಸಾಗುತ್ತಲೇ ಇರುತ್ತದೆ. ಆದರೆ ತುಂಬ ಜನರ ಬದುಕನ್ನು ನೋಡಿ. ಅದಕ್ಕೆ ಗೊತ್ತು ಗುರಿಯೇ ಇರುವುದಿಲ್ಲ. ಹೀಗಾಗಿ ಬದುಕನ್ನು ರೈಲಿಗೆ ಹೋಲಿಸುವಾಗ ನಮಗೆ ನಾವೇ ಕೆಲವು ಅಂಶಗಳನ್ನು ಸ್ಪಷ್ಟಪಡಿಸಿಕೊಳ್ಳಬೇಕು. ಮೊದಲನೆಯದಾಗಿ ನಮ್ಮ ಬದುಕಿಗೆ ಒಂದು ಉದ್ದೇಶವಿದೆಯಾ ಅನ್ನುವುದನ್ನು ನೋಡಿಕೊಳ್ಳಬೇಕು. ಯೆಸ್, ನಮ್ಮ ಬದುಕಿಗೆ ಒಂದು ಉದ್ದೇಶವಿದೆ ಅಂತ ಕನ್‌ಫರ್ಮ್ ಆದರೆ ರೈಲನ್ನು ಅಂತಹ ವ್ಯಕ್ತಿಯ ಬದುಕಿಗೆ ಹೋಲಿಸಬಹುದು. ಉದ್ದೇಶ, ಗುರಿ ಇಟ್ಟುಕೊಂಡ ಮನುಷ್ಯ ತನ್ನ ದಾರಿಯಲ್ಲಿ ನಡೆಯುವಾಗ ಯಾರೇ ಬರಲಿ, ಹೋಗಲಿ, ತನ್ನ ಗಮ್ಯದ ಕಡೆ ಸಾಗುತ್ತಿರುತ್ತಾನೆ. ಹೀಗೆ ಸಾಗುವ ರೈಲು ತನ್ನ ಓಡುವಿಕೆಗೆ ಅಗತ್ಯವಾದ ಕಲ್ಲಿದ್ದಲನ್ನೋ, ಕರೆಂಟನ್ನೋ ಹೊಂದಿರಬೇಕು, ಜೀವನೋತ್ಸಾಹವನ್ನು ಹೊಂದಿರಬೇಕು. ನಿಮ್ಮಲ್ಲಿ ಅಂತಹ ಜೀವನೋತ್ಸಾಹ ಇದ್ದರೆ ನೀವು ನಿಜವಾದ ರೈಲಿನಂತಾಗುತ್ತೀರಿ.
ರವಿ ಬೆಳಗೆರೆ
ಹಲೋ
ನಡೆಸುವ ದೋಣಿಯ ಮೇಲೆ ನಾವಿಕರಿಗೆ ಹಿಡಿತವೇ ಇಲ್ಲದಿದ್ದರೆ ಹೇಗೆ
ಒಂದು ಸಣ್ಣ ಕತೆಯಿದೆ. ಬಹುಶಃ ಕಾಲದಿಂದ ಕಾಲಕ್ಕೆ ಅದು ಕೇಳುತ್ತಲೇ ಇರುತ್ತದೆ. ನಿಮಗೂ ಅದು ಗೊತ್ತಿರಬಹುದು. ಒಂದು ದ್ವೀಪ ಇರುತ್ತದೆ. ಅಲ್ಲಿಂದ ಯಾವುದೇ ಹೊರ ಊರುಗಳಿಗೆ ಸಂಪರ್ಕ ಬೇಕು ಎಂದರೆ, ಜನ ದೋಣಿಯನ್ನು ಅವಲಂಬಿಸುವುದು ಅನಿವಾರ್ಯ. ಹೀಗಾಗಿ ಊರವರೆಲ್ಲ ಸೇರಿ ಒಂದು ದೋಣಿಯನ್ನು ಖರೀದಿಸಿ, ಅತ್ಯುತ್ತಮ ಹುಟ್ಟುಗಾರನೊಬ್ಬನನ್ನು ಈ ದೋಣಿಯಲ್ಲಿ ನದಿ ದಾಟಿಸುವ ಕೆಲಸಕ್ಕೆ ನೇಮಕ ಮಾಡಿಕೊಳ್ಳುತ್ತಾರೆ. ಆರಂಭದಲ್ಲಿ ಕೇವಲ ನಾಲ್ಕಾಣೆ ದರ ನಿಗದಿ ಮಾಡಿರುತ್ತಾರೆ. ಜನರೂ ಸಂತೋಷದಿಂದ ದೋಣಿಯಲ್ಲಿ ಪ್ರಯಾಣ ಮಾಡುತ್ತಿರುತ್ತಾರೆ. ಇದ್ದಕ್ಕಿದ್ದಂತೆ ಒಂದು ದಿನ ಪ್ರಯಾಣದ ದರ ಎಂಟಾಣೆಗೆ ಏರಿಕೆಯಾಗುತ್ತದೆ. ಕುಟುಂಬವನ್ನು ಸಂಭಾಳಿಸಲು ಎಂಟಾಣೆ ನೀವು ಫಿಕ್ಸು ಮಾಡಬೇಕು. ಇಲ್ಲದಿದ್ದರೆ ನಾನು ಬೇರೆ ಕೆಲಸ ನೋಡಿಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ದೋಣಿಯವನು ಹೇಳುತ್ತಾನೆ. ಆಗ ಜನರಿಗೆ ಕೋಪ ಬರುತ್ತದೆ. ವಿಷಯ ಊರಿನ ಗ್ರಾಮಪಂಚಾಯ್ತಿಯ ಮೆಟ್ಟಿಲೇರುತ್ತದೆ. ನಾಲ್ಕಾಣೆ ಇದ್ದ ಸಂಚಾರ ದರ ಎಂಟಾಣೆಗೆ ಏರುವುದು ಎಂದರೇನು ಹೀಗಾಗಿ ಆತನನ್ನು ಕೆಲಸದಿಂದ ಕಿತ್ತು ಹಾಕಿ ಎಂದೇ ಎಲ್ಲರೂ ವಾದಿಸುತ್ತಾರೆ.
ರವಿ ಬೆಳಗೆರೆ
ಮುಖಪುಟ ವರದಿ
ಕಿಮ್ಮನೆ ಶಿಷ್ಯ ಫ್ಲವರ್ ಕುಮಾರ್‌ಗೆ ನಟಿ ರಜಿನಿ ಬೇಕು!
ಈ ಫ್ಲವರ್ ಕುಮಾರ ಶಿವಮೊಗ್ಗದ ರೌಡಿಗಳ ಸಹವಾಸದಲ್ಲಿದ್ದವ. ಸಣ್ಣಪುಟ್ಟ ಕೇಸುಗಳೂ ಇದ್ದವು. ಮುಖ್ಯವಾಗಿ ಈತ ತಗುಲಿಕೊಂಡಿದ್ದು ಬಿಎಸ್‌ಎನ್‌ಎಲ್ ಕೇಸಿನಲ್ಲಿ. ಶಿವಮೊಗ್ಗದ ಬಿಎಸ್‌ಎನ್‌ಎಲ್ ಗುತ್ತಿಗೆ ವ್ಯವಹಾರವೊಂದರಲ್ಲಿ ಗುತ್ತಿಗೆದಾರರನ್ನೇ ಬೆದರಿಸಿ ಇಂತಹವರೇ ಟೆಂಡರ್ ಹಾಕುವಂತೆ ಹಡಬೆ ವ್ಯವಹಾರವೊಂದನ್ನು ಮಾಡುವಾಗ ಈ ಫ್ಲವರ್ ಕುಮಾರ ಸೇರಿದಂತೆ ಹತ್ತು-ಹನ್ನೆರಡು ಜನರ ಮೇಲೆ ಕೇಸಾಗಿತ್ತು.
ವರದಿಗಾರ
ರಾಜಕೀಯ
ರಾಜ್ಯದಲ್ಲಿ ಕಾಂಗೈ ಧೂಳಿಪಟ ಮಾಡಲು ಒಂದಾಗಲಿದ್ದಾರಾ ಮೋದಿ-ದೇವು
ಈಗಾಗಲೇ ರಾಹುಲ್ ಗಾಂಗೆ ಲೋಕಸಭೆಯಲ್ಲಿ ಸಂಸದೀಯ ಪಕ್ಷದ ಸ್ಥಾನಮಾನ ನೀಡಿದರೆ, ನಿಮಗೆ ಅಧಿಕೃತ ವಿರೋಧ ಪಕ್ಷದ ಸ್ಥಾನಮಾನ ನೀಡಲು ಸಿದ್ಧ ಎಂದು ಮೋದಿ ಅವರು ಸೋನಿಯಾ ಗಾಂಧಿಗೆ ಚಾಕಲೇಟ್ ತಿನ್ನಿಸಿದ್ದಾರೆ. ಅರ್ಥಾತ್, ಈಗ ಆ ಸ್ಥಾನದಲ್ಲಿರುವ ಮಲ್ಲಿಕಾರ್ಜುನ ಖರ್ಗೆ ಕೆಳಗಿಳಿದರೆ ಅವರನ್ನು ಕರ್ನಾಟಕದ ಸಿಎಂ ಹುದ್ದೆಗೆ ಕಳಿಸಬೇಕು. ಇಲ್ಲವಾದರೆ ದಲಿತ ಸಮುದಾಯಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂಬುದು ಮೋದಿ ಲೆಕ್ಕಾಚಾರ. ಈ ಲೆಕ್ಕಾಚಾರದ ನಡುವೆಯೇ ದೇವೆಗೌಡ, ರಾಜ್ಯವನ್ನು ಕಾಂಗ್ರೆಸ್ ಮುಕ್ತಗೊಳಿಸಲು ಸಿದ್ದರಾಮಯ್ಯ ಹಾಗೂ ಡೀಕೇಶಿಯನ್ನು ಇಕ್ಕಳದಲ್ಲಿ ಸಿಲುಕಿಸುವುದು ಅನಿವಾರ್ಯ ಎಂದು ಮೋದಿಗೆ ಅಂಕಿ ಅಂಶಗಳ ಸಮೇತ ವಿವರಿಸಲಿದ್ದಾರೆ. ಈ ಅಜೆಂಡಾ ಮೋದಿಗೆ ಇಷ್ಟವಾದರೆ ಅನುಮಾನವೇ ಬೇಡ. ಸಿದ್ದರಾಮಯ್ಯನವರ ಸರ್ಕಾರ ನೆಮ್ಮದಿಯಾಗಿ ನಡೆಯಲು ಸಾಧ್ಯವೇ ಇಲ್ಲ. ಹಾಗಾಗುತ್ತದಾ ಕಾದು ನೋಡಬೇಕು.
ಆರ್.ಟಿ.ವಿಠ್ಠಲಮೂರ್ತಿ
ವರದಿ
ಕೋಟ್ಯಾನ್ ಬ್ರದರ್ಸ್ ಕಾರ್ಕಳಕ್ಕೇ ಒಂದು ಹೆಡ್ಡೇಕ್
ಎಲೆಕ್ಷನ್ ಬಂತೆಂದರೆ ತನ್ನ ಓಪನ್ ಜೀಪಿನ ತುಂಬಾ ಹುಡುಗರನ್ನು ತುಂಬಿಸಿಕೊಂಡು ಅದರಲ್ಲಿ ಹತ್ಯಾರುಗಳನಿಟ್ಟುಕೊಂಡು ಊರೆಲ್ಲಾ ಸುತ್ತಿ ಭಯದ ವಾತಾವರಣ ಮೂಡಿಸುವ ಉದಯ್ ಕೋಟ್ಯಾನ್ ಉಪಟಳದಿಂದಾಗಿಯೇ ಎದುರಾಳಿಗಳ್ಯಾರೂ ಇವರಿಗಿಲ್ಲ ಎಂಬಂತಹ ಪರಿಸ್ಥಿತಿ ಬಂದೊದಗಿದೆ. ಇವರದ್ದು ಬಿಜೆಪಿ ಪಕ್ಷವಾದ್ದರಿಂದ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಳ್ಳಲು ಯಾರೂ ಮುಂದೆ ಬರುವುದೇ ಇಲ್ಲ. ಬಂದರೆಂದರೆ ಅವರಿಗೆ ಉಳಿಗಾಲವೂ ಇಲ್ಲ. ಪಾಳೇಗಾರಿಕೆಯ ಮಾದರಿಯಲ್ಲಿ ದಬ್ಬಾಳಿಕೆ ನಡೆಸುವ ಸಹೋದರರು ಯಾವುದೇ ತಗಾದೆಗಳಾದರೂ ಅದನ್ನು ತಮ್ಮ ಮಧ್ಯಸ್ಥಿಕೆಯಲ್ಲಿಯೇ ಮಾತುಕತೆ ಮಾಡಿ, ಬೆದರಿಸಿ ಸರಿ ಮಾಡುತ್ತಾರೆಯೇ ಹೊರತು ಹೊರಗೆಲ್ಲೂ ಅದರ ಚಹರೆ ಸಿಗಲಿಕ್ಕೂ ಬಿಡುವವರಲ್ಲ, ಹೀಗೆ ಊರಿಡೀ ಮೆರೆದಾಡುತ್ತಿರುವ ಈ ಸಹೋದರರ ಮೇಲೆ ಪೊಲೀಸರಿಗೂ ಕಣ್ಣಿದ್ದದ್ದು ಹೌದಾದರೂ ಹೈ ಲೆವೆಲ್ ಪೊಲಿಟಿಕಲ್ ಟಚ್ ಬಳಸಿ ಅದೆಲ್ಲವನ್ನೂ ಮ್ಯೂಟ್ ಮಾಡುವುದು ಈ ಅಣ್ಣತಮ್ಮಂದಿರಿಗೆ ಚೆನ್ನಾಗಿ ಗೊತ್ತೇ ಇದೆ.
ವಸಂತ್ ಗಿಳಿಯಾರ್
ವರದಿ
ಕಸ್ತೂರಿ ಛಾನಲ್ ನಂಬಿದ ಕೈಲಾಸ್ ಅಲ್ಲೇ ಅಂಬೋ ಅಂದ!
ಕಸ್ತೂರಿ ಎಂಟರ್‌ಟೈನ್‌ಮೆಂಟ್ ಜೊತೆ ಅದೇ ಹೆಸರಿನ ನ್ಯೂಸ್ ಛಾನಲ್ ಏನೋ ಶುರುವಾಯ್ತು. ಆದರೆ ಯಾವಾಗ ನೋಡಿದರೂ ಕುಮಾರಸ್ವಾಮಿ, ಅವರ ಫಾದರ್ ಗೌಡ್ರು, ಪಟೇಲ್‌ರು ಈ ತರಹದ್ದೇ ಸುದ್ದಿಗಳ ಬಿತ್ತರ ಶುರುವಾಯಿತು. ಅಷ್ಟೇ ಅಲ್ಲ, ಅವರದೇ ಕುಟುಂಬದ ಮತ್ತೊಂದು ಕುಡಿ ರೇವಣ್ಣ. ಯಾವುದೇ ಕಾರಣಕ್ಕೂ ರೇವಣ್ಣನ ನ್ಯೂಸ್ ಕಸ್ತೂರಿಯಲ್ಲಿ ಬರಬಾರದು ಎಂಬ ಠರಾವು ಒಳಗೊಳಗೆ ಘೋಷಣೆಯಾಯಿತು. ಕುಮಾರಸ್ವಾಮಿಗೆ ವಿರುದ್ಧವಾಗಿ ಯಾವುದೇ ಹೇಳಿಕೆಗಳು ಬಂದರೆ ಅದು ‘ಕಸ್ತೂರಿ’ಯಲ್ಲಿ ಪ್ರಸಾರವಾಗುತ್ತಿರಲಿಲ್ಲ. ಬರೀ ಒನ್ ಸೈಡೆಡ್ ಸ್ಟೋರಿಗಳೇ ಕಸ್ತೂರಿ ನ್ಯೂಸ್ ಛಾನಲ್‌ನಲ್ಲಿ ಫಳಫಳಿಸ ತೊಡಗಿದವು. ಸುದ್ದಿ ಸಂಪಾದಕರಿಗಂತೂ ಒಂದು ಸುದ್ದಿ ಹಾಕಬೇಕು ಅಂದರೆ ಕುಮಾರಸ್ವಾಮಿ ಪಿಎಗೋ, ಅನಿತಾಕುಮಾರಸ್ವಾಮಿಗೋ, ಫೋನ್ ಮಾಡಿ ಪರ್ಮಿಷನ್ ತಗೊಳೊ ಸ್ಥಿತಿ ನಿರ್ಮಾಣವಾಯ್ತು. ಈ ನಡುವೆ ಉಳಿದ ಛಾನಲ್‌ಗಳ ಭರಾಟೆ ನಡುವೆ ಕಸ್ತೂರಿ ನ್ಯೂಸ್‌ನ ಟಿ.ಆರ್.ಪಿ. ಏದುಸಿರು ಬಿಡುತ್ತಾ ಸಾಗಿತು.
ವರದಿಗಾರ
ವರದಿ
ಅರಿವು ಗೇಡಿ ಮಂತ್ರಿ ಪರಮೇಶ್ ನಾಯ್ಕನದು ಅತೀ ಆಯ್ತು!
ಹರಪನಹಳ್ಳಿ ತಾಲೂಕಿನ ಚಿಕ್ಕಲಕ್ಷ್ಮೀಪುರ ತಾಂಡ ಎಂಬ ಕುಗ್ರಾಮದಿಂದ ಬಂದ ಈ ಪರಮೇಶ್ವರ ನಾಯ್ಕನ ಕುರಿತು ಸುತ್ತಳ್ಳಿಯಲ್ಲಿ ಹಲವು ವಿಚಿತ್ರ ಕತೆಗಳೇ ಇವೆ. ಈತ ರಾಜಕೀಯಕ್ಕೆ ಎಂಟ್ರಿ ಕೊಡುವ ಮೊದಲು ಸ್ವಗ್ರಾಮ ಚಿಕ್ಕಲಕ್ಷ್ಮೀಪುರ ತಾಂಡಾದ ಸುತ್ತಮುತ್ತ ರೌಡಿಸಂ ಮೈಗೂಡಿಸಿಕೊಂಡಿದ್ದರ ಬಗ್ಗೆ ಸಾಕಷ್ಟು ಪುರಾವೆಗಳೇ ಸಿಗುತ್ತವೆ. ನೀವು ನಂಬಲಿಕ್ಕಿಲ್ಲ. ಅಡಾವುಡಿ ಸ್ವಭಾವದ ಈ ಪರಮೇಶ್ವರ ನಾಯ್ಕ ಮದುವೆಯಾಗಿ ಬಂದ ಹೊಸ ದಂಪತಿಗಳ ಮೊದಲ ರಾತ್ರಿಯ ಚಟುವಟಿಕೆಗಳನ್ನ ಕಿಟಕಿ-ಬಾಗಿಲುಗಳ ಮುಖಾಂತರ ಇಣುಕಿ ನೋಡುವುದು, ಗ್ರಾಮದ ಮಾಳಿಗೆಗಳನ್ನೇರಿ ವೆಂಟಿಲೇಟರ್‌ಗಳ ಮುಖಾಂತರ ಕದ್ದು ನೋಡುವ ವಿಲಕ್ಷಣ, ವಿಪರೀತಗಳನ್ನು ಅಂಟಿಸಿಕೊಂಡಿದ್ದ ಎಂದರೆ ಎಂತಹವರಿಗೂ ಆಶ್ಚರ್ಯವಾಗಬಹುದು.
ವರದಿಗಾರ
ವರದಿ
ಕಣ್ಣು ಪತ್ರಿಕೆಯ ಶಿವನ ಕೈಗೆ ನೀವು ಸಿಕ್ಕರೆ ಅಷ್ಟೇ!
ಕಣ್ಣು ಶಿವಕುಮಾರನಿಗೆ ಒಬ್ಬರಲ್ಲಾ ಇಬ್ಬಿಬ್ಬರು ಹೆಂಡತಿಯರಿದ್ದಾರೆ. ಮೊದಲನೇ ಹೆಂಡತಿ ಖಾಸಾ ತನ್ನ ಅಕ್ಕನ ಮಗಳು ಇಂದ್ರಾಣಿ. ಇವರಿಬ್ಬರ ದಾಂಪತ್ಯದ ಫಲವಾಗಿ ನವೀನ್‌ಕುಮಾರ್ ಎಂಬ ಮಗನಿದ್ದಾನೆ. ಇದಲ್ಲದೇ ಎರಡನೇ ಹೆಂಡತಿಯನ್ನಾಗಿ ಲೀಲಾವತಿ ಎಂಬಾಕೆಯನ್ನು ಮದುವೆಯಾದ. ಇದರ ಕುರುಹಾಗಿ ಭರತ್‌ಕುಮಾರ್ ಹುಟ್ಟಿದ. ಎರಡನೇ ಪತ್ನಿ ಲೀಲಾವತಿಯನ್ನು ಈತ ಮದುವೆಯಾದದ್ದೇ ವಿಚಿತ್ರದ ಸಂಗತಿ. ಖ್ಯಾತ ಕ್ಯಾಮರಾಮನ್ ರಾಜರಾಂರವರ ಬಳಿ ಸಹಾಯಕರಾಗಿದ್ದ ಸುಬ್ರಹ್ಮಣಿಯವರ ಪತ್ನಿಯೇ ಲೀಲಾವತಿ. ಅವರು ಬದುಕಿದ್ದಷ್ಟೂ ದಿವಸ ಲೀಲಾವತಿಯವರನ್ನು ತನ್ನ ತಂಗಿ ಅಂತಲೇ ಸುಬ್ರಹ್ಮಣಿಯವರ ಬಳಿ ಹೇಳುತ್ತಿದ್ದ ಈ ವಂಚಕ. ಅವರು ಅಕಾಲಿಕ ಸಾವಿಗೀಡಾಗುತ್ತಿದ್ದಂತೆ ಅದೇ ತಂಗಿಯನ್ನ ಮದುವೆಯಾಗಿ ಈಗ ಸಂಸಾರ ಹೂಡಿದ್ದಾನೆ.
ವರದಿಗಾರ
ನೇವಿ ಕಾಲಂ
ಅವಳ ಜಗದೊಳಗೆ ಪ್ರವೇಶಿಸಲು ಹೊರಟಾಗ ಗೊತ್ತಾಯಿತು
ಇದೊಂದು ಅಂಥ ಯಾವುದೇ ರೋಚಕತೆ ಇಲ್ಲದ ಕೊಲೆ ಪ್ರಕರಣ. ಒಂದು ಅಪಾರ್ಟ್‌ಮೆಂಟ್‌ನ ಫ್ಲಾಟ್‌ನಲ್ಲಿ ಒಬ್ಬ ಮಧ್ಯವಯಸ್ಕ ಹೆಂಗಸು ಕೊಲೆಯಾಗಿದ್ದಳು. ಇಂಥ ಕೊಲೆಗೆ ರೋಚಕತೆ ಯಾಕೆ ಇರಲಿಲ್ಲವೆಂದರೆ ಕೊಲೆ ಮಾಡಿದ ವ್ಯಕ್ತಿ ಶವದ ಬಳಿಯೇ ಅರ್ಧ ಗಂಟೆಯಿಂದ ಕುಳಿತಿದ್ದ ಮತ್ತು ಪೊಲೀಸರು ಬಂದಾಗ ಶರಣಾದ. ಅದರ ಕೋರ್ಟು ಕೇಸು, ಅನಂತರ ಅವನಿಗೊಂದು ಶಿಕ್ಷೆ ಮತ್ತು ಸಾರ್ವಜನಿಕ ಮರೆವಿನಲ್ಲಿ ಆ ಪ್ರಕರಣ ಕೊನೆಗೊಂಡಿತು. ಆದರೆ ಅದಾಗಿ ಎಷ್ಟೋ ದಿನಗಳ ನಂತರ ತೀವ್ರ ಆಸಕ್ತಿಕರವಾದ ವಿಷಯಗಳೆಲ್ಲಾ ಬೆಳಕಿಗೆ ಬಂದವು.
ನೇವಿ
ಜಾನಕಿ ಕಾಲಂ
ಊರಿಗೆ ಒಂದು ಪ್ರವೇಶ ಪತ್ರ ಭಾಗ-೨
ಇಡೀ ಉಪ್ಪಿನಂಗಡಿಯೇ ಕಂಪಿಸಿದಂತೆ ಒಂದರ ಹಿಂದೊಂದರಂತೆ ರಾತ್ರಿ ಮೆರವಣಿಗೆಯಲ್ಲಿ ಸಾಗುವ ಬಸ್ಸು, ಲಾರಿ, ಟ್ರಕ್ಕುಗಳು. ಇಲ್ಲಿ ಕತೆ ಹುಟ್ಟುತ್ತದಾ ಗೋಪಿಯನ್ನು ಕೇಳಿದರೆ ನಿನ್ನ ಕತೆಗಳೆಲ್ಲ ಹುಟ್ಟಿರೋದು ಅಲ್ಲಿಯೇ ಅನ್ನುತ್ತಾನೆ. ನಾವು ಹುಟ್ಟಿದ ನೆಲಕ್ಕೆ ಅಂಥದ್ದೊಂದು ಶಕ್ತಿಯಿರುತ್ತದೆ. ಬೆಳೆದ ಜಾಗ ಅಂಥದ್ದೊಂದು ಪವಾಡ ಮಾಡುತ್ತದೆ. ಓದಿದ ಊರು ಮತ್ತೆ ಮತ್ತೆ ಹೋಗಿ ನೋಡಿದಾಗ ವಿಚಿತ್ರವೂ ವಿಸ್ಮಯದ ಮೂಟೆಯೂ ಆಗಿ ಕಾಣಿಸುತ್ತದೆ. ಎಷ್ಟೋ ವರ್ಷಗಳ ನಂತರ ಕಾಕನ ಹೊಟೆಲಿನಲ್ಲಿ ತಿಂದ ಕಲ್ತಪ್ಪದ ರುಚಿ ನಾಲಗೆಯ ತುದಿಯಲ್ಲಿ ಹಾಗೆಯೇ ಉಳಿದಿರುತ್ತದೆ.
ಜಾನಕಿ
ಅಂಕಣ : ಒಲಿದಂತೆ ಹಾಡುವೆ
ವಿದಾಯ ಹೇಳಿದ ಒಂದು ಸುಂದರ ಮನಸ್ಸು ಭಾಗ-೨
ನ್ಯಾಷ್ ಸ್ವಿಝರ್‌ಲಂಡ್‌ಗೆ ಹೋಗಿ ಅಲ್ಲಿನ ಪೌರತ್ವ ಸ್ವೀಕರಿಸಲು ಯತ್ನಿಸಿದ. ಅಮೆರಿಕನ್ ಪಾಸ್‌ಪೋರ್ಟನ್ನು ನಾಶ ಮಾಡಲು ಯತ್ನಿಸಿದ. ಈ ಸುದ್ದಿ ಅಮೆರಿಕಾ ತಲುಪಿತು. ಹಲವರು ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸಲು ಆತನನ್ನು ಕೋರಿದರು. ಆದರೆ ನ್ಯಾಷ್ ನಿರಾಕರಿಸಿದ. ಅಂತಿಮವಾಗಿ ಆತನನ್ನು ಅಲಿಷಿಯಾಳೊಂದಿಗೆ ಬಲಾತ್ಕಾರವಾಗಿ ಅಮೆರಿಕಾಕ್ಕೆ ಅಟ್ಟಲಾಯ್ತು. ಇಂಥ ಉನ್ಮತ್ತ ಸ್ಥಿತಿಯಲ್ಲೂ ನ್ಯಾಷ್ ತನ್ನಲ್ಲಿದ್ದ ಹಣವನ್ನು ಬಹಳ ಮಿತವಾಗಿ ವ್ಯಯಿಸುತ್ತಿದ್ದ. ತೀರಾ ಸಾಮಾನ್ಯ ಹೊಟೆಲುಗಳಲ್ಲಿ ಉಳಿದುಕೊಳ್ಳುತ್ತಿದ್ದ. ತನ್ನ ತಾಯಿಗೆ, ಅಕ್ಕನಿಗೆ; ಕೆಲವು ಗೆಳೆಯರಿಗೆ ಹಾಗೂ ವಿವಿಧ ದೇಶಗಳ ಮುಖ್ಯಸ್ಥರಿಗೆ ಕಾಗದ ಬರೆಯುತ್ತಿದ್ದ. ಇಡೀ ವಿಶ್ವವನ್ನು ಒಗ್ಗೂಡಿಸಲು ದೇವರು ತನ್ನನ್ನು ಕಳುಹಿಸಿದ್ದಾನೆಂದು ಹೇಳಿಕೊಳ್ಳುತ್ತಿದ್ದ ನ್ಯಾಷ್ ಒಂದು ಕ್ಷಣ ಸರ್ವಶಕ್ತನ ಠೀವಿಯಿಂದ ವರ್ತಿಸಿದರೆ ಮರುಕ್ಷಣ ಖಿನ್ನನಾಗಿ ಶಕ್ತಿಹೀನನಂತೆ, ನಪುಂಸಕ ಮನೋಭಾವ ತಾಳುತ್ತಿದ್ದ. ಅವನ ಯೋಚನಾಲಹರಿಗೆ ತಾಳಮೇಳವೇ ಇರಲಿಲ್ಲ.
ಚಂದ್ರಶೇಖರ ಆಲೂರು
ಅಂಕಣ : ಆಕಾಶಬುಟ್ಟಿ
ಕಾಲೇಜು ಓದುವಾಗ ‘M’ ಮದುವೆಯಾದ ಮೇಲೆ ‘L’ ಮಗುವಾದ ಮೇಲೆ ‘XL’ ಸೈಜ್ ಟಾಪು....
ಕಳ್ಳನದು, ಸುಳ್ಳನದು, ಮಳ್ಳನದು... ಎಲ್ಲರ ಸಂದರ್ಶನಗಳೂ ಬರುತ್ತವೆ-ಮಾಧ್ಯಮಗಳಲ್ಲಿ. ಇಂಥದ್ದರಲ್ಲಿ ತಾಯಿಯೊಬ್ಬಳನ್ನು ಇಂಟರ್‌ವ್ಯೂ ಮಾಡಿದರೆ ಹೇಗಿರುತ್ತೆ ಅನ್ನಿಸಿತು. ಸುತ್ತಮುತ್ತ ಇರುವವರೆಲ್ಲಾ ಅವರೇ. ಮಾಮ್ಸ್ ಅಥವಾ ಟು ಬಿ ಮಾಮ್ಸ್... ಸೋ, ಮಾತೆಯಾಗಿ ನಾನೇ ಒಂದಷ್ಟು ಮಾತೆಯರನ್ನು ಮಾತಾಡಿಸಿದೆ. ಅವರು ನೀಡಿದ ಉತ್ತರಗಳಲ್ಲಿ ಬೆಸ್ಟ್ ಅನ್ನಿಸಿದ್ದು ಎತ್ತಿ ಇಲ್ಲಿಟ್ಟಿದ್ದೇನೆ. ಪ್ರಶ್ನೆ: ತಾಯ್ತನ-ಒಂದು ಪದದಲ್ಲಿ ಉತ್ತರಿಸಿ. ತಾಯಿಯ ಉತ್ತರ: ಅಮ್ಮ!
ಎಚ್.ಡಿ. ಸುನೀತಾ
ಅಂಕಣ : ನೂರು ಮುಖ ಸಾವಿರ ದನಿ
ಸಾಮರಸ್ಯದ ಕುಟುಂಬ ಆರೋಗ್ಯಕರ ಸಮಾಜದ ಭದ್ರ ಬುನಾದಿ
ಗಂಡ-ಹೆಂಡಿರ ಜಗಳ “ಗಂಧ ತೀಡಿದ್ಹಾಂಗ ಇದ್ದಾರೆ ಒಳ್ಳೆಯದು. ಆದರೆ ಅವರ ಜಗಳ ವ್ಯಾಜ್ಯಕ್ಕೆ ಪರಿವರ್ತಿತವಾದರೆ “ದುರ್ಗಂಧ ಹರಡಿದ್ಹಾಂಗ ಅಲ್ಲವೇ. ಅನೇಕ ರಾಷ್ಟ್ರಗಳು ಸೇರಿ ವಿಶ್ವ. ಅನೇಕ ರಾಜ್ಯಗಳು ಸೇರಿ ದೇಶ ಅಥವಾ ರಾಷ್ಟ್ರ. ಅನೇಕ ಜಿಲ್ಲೆಗಳು ಸೇರಿ ರಾಜ್ಯ. ಅನೇಕ ತಾಲ್ಲೂಕುಗಳು ಸೇರಿ ಒಂದು ಜಿಲ್ಲೆ. ಅನೇಕ ಹೋಬಳಿಗಳು ಸೇರಿ ಒಂದು ತಾಲ್ಲೂಕು. ಅನೇಕ ಹಳ್ಳಿಗಳು ಸೇರಿ ಒಂದು ಹೋಬಳಿ. ಅನೇಕ ಮನೆಗಳು ಕುಟುಂಬಗಳು ಸೇರಿ ಒಂದು ಹಳ್ಳಿ. ಒಬ್ಬರಿಗಿಂತ ಹೆಚ್ಚು ಜನ ಸೇರಿ ಒಂದು ಕುಟುಂಬ. ಒಂದು ಕಾಲದಲ್ಲಿ “ಕುಟುಂಬ ಎಂದರೆ ಬೆಂಗಳೂರು ಸಮೀಪದ ಆಲದಮರ ಇದ್ದಂತೆ. ಅಜ್ಜ-ಅಜ್ಜಿ, ಹೆಣ್ಣು-ಗಂಡು ಸೇರಿ ಒಂದು ಡಜನ್‌ಗೆ ಕಡಿಮೆ ಇಲ್ಲದ ಅವರ ಮಕ್ಕಳು. ಅಳಿಯಂದಿರು, ಸೊಸೆಯಂದಿರು ಹಾಗೂ ಮೊಮ್ಮಕ್ಕಳು ಸೇರಿ ಐವತ್ತರಿಂದ ನೂರು ನೂರೈವತ್ತು ಜನ ಇರುವ ಒಟ್ಟು ಕುಟುಂಬಗಳು ಇದ್ದವು: ಒಂದಾನೊಂದು ಕಾಲದಲ್ಲಿ. ನಂತರ ನೂರು, ತದನಂತರ ಐವತ್ತು, ಆನಂತರ ಇಪ್ಪತ್ತೈದಕ್ಕೂ ಇಳಿದಿತ್ತು. ಕ್ರಮೇಣ ಹದಿನೈದು ಹತ್ತು ಹಾಗೂ ಐದು ಮಂದಿಯ ಗಂಡ-ಹೆಂಡತಿ, ಮಗ-ಸೊಸೆ ಒಬ್ಬ ಮೊಮ್ಮಗ ಒಂದು ಕುಟುಂಬ.
ಎಂ.ವಿ. ರೇವಣಸಿದ್ದಯ್ಯ