Buy Now @ ₹ 15.00
Preview
ಮುಖಪುಟ ಲೇಖನ
ಭಟ್ಟ ಬಂದ ಭಟ್ಟ ಹೋದ ಢಮ್ ಢಮ್ ಢಮ್
ವಿಶ್ವೇಶ್ವರನ ಆಟಗಳು, ಹುನ್ನಾರಗಳು ಹೇಳಲು ಕುಳಿತರೆ ಸಾಕಷ್ಟಿವೆ. ಈ ಮನುಷ್ಯ ಕನ್ನಡಕ್ಕೆ ಸಂಬಂಧಿಸಿದಂತೆ ಮಾಡಿದ್ದೇನು ಸುಮ್ಮನಿರಲಾರದೆ ಇವನ ಪಟಾಲಂ ‘ಅಂಗವಿಕಲ’ ಎಂಬುದರ ಬದಲಾಗಿ ‘ವಿಕಲ ಚೇತನ’ ಎಂಬ ಪದ ಹುಡುಕಿತು. ಹಾಗಂದರೆ ಏನರ್ಥ ಚೇತನದ ವಿಕಲತೆಯೇ ಹಾಗಂತ ಅನ್ನಲು ಸಾಧ್ಯವೇ ಇಲ್ಲ. ಅವರ ಚೈತನ್ಯಕ್ಕೆ ಏನೂ ಆಗಿರುವುದಿಲ್ಲ. ಅವರನ್ನು ‘ವಿಭಿನ್ನ ಚೇತನ’ರು ಅನ್ನಿ. ‘ವಿಶಿಷ್ಟ ಚೇತನ’ರು ಅನ್ನಿ. ಇಂಗ್ಲಿಷಿನಲ್ಲಿ differently challenged ಅಂತಾರೆ. ಭಟ್ಟನ ಪಟಾಲಂನ ಪ್ರಯೋಗ ಏನಾಯಿತೆಂದರೆ, ಅವನದೇ ವರದಿಗಾರನೊಬ್ಬ ಹೀಗೆ ಬರೆದ. “ಸೈಕಲ್ ಮೇಲೆ ಬರುತ್ತಿದ್ದ ಆತನಿಗೆ ಲಾರಿ ಹಾಯ್ದು, ಆತ ಕೆಳಕ್ಕೆ ಬಿದ್ದು ಕಾಲು ಮುರಿದುಕೊಂಡು ವಿಕಲಚೇತನನಾಗಿದ್ದಾನೆ ಅಂತ ಬರೆದು ಬಿಟ್ಟ. ಇದಕ್ಕಿಂತ ಕಳಪೆ ಅಂದರೆ, ಭಟ್ಟರನ ಗುಂಪಿನ ಇನ್ನೊಂದು ಪ್ರಯೋಗ. ನೀವು ‘ಅತ್ಯಾಚಾರ’ ಎಂಬ ಶಬ್ದ ಕೇಳಿದ್ದೀರಿ. ಅತ್ಯಾಚಾರವೆಸಗಿ, ಹುಡುಗಿಯನ್ನು ಕೊಂದು ಬಿಡುವ ಪ್ರಕರಣಗಳೂ ಇರುತ್ತವೆ. ಅದಕ್ಕವರು ಅನ್ವೇಷಿಸಿದ ಸೆಂಟೆನ್ಸ್ ‘ಹತ್ಯಾಚಾರ’! ಈ ಯಡವಟ್ಟಿಗೆ ಏನಂತೀರಿ
ರವಿ ಬೆಳಗೆರೆ