Buy Now @ ₹ 20.00
Preview
ದೂರ ದೂರ ಅಲ್ಲೇ ನಿಲ್ಲಿ ನನ್ನ ದೇವರೆ..
ಸುಡುತಿದೆ ವಿರಹ ಬಯಸಿ ಸನಿಹ....
ನೀನಿದ್ದರೇನು ಹತ್ತಿರಾ, ಎಷ್ಟೊಂದು ನಡುವೆ ಅಂತರ ಎಂದು ಈಗಿನ ಪ್ರೇಮಿಗಳು ಹಾಡುವುದಿಲ್ಲ. ಅಂದರೆ ವಿರಹ ಕೂಡಾ ಮಾಡರ್ನ್ ಆಗಿ ಬದಲಾಗಿದೆಯಾ ಒಂದು ಕಾಲಕ್ಕೆ ಪತ್ರದ ಮೂಲಕ, ಫೋನಿನ ಮೂಲಕ ಪ್ರೀತಿ ಹಂಚಿಕೊಳ್ಳುತ್ತಿದ್ದ ಪ್ರೇಮಿಗಳು ಇವತ್ತು ಚಾಟ್, ವಿಚಾಟ್, ಸೆಲ್‌ಫೋನ್‌ಗಳಿಂದ ಒಂದು ಹೊಸ ಸಂಬಂಧವನ್ನು ದೂರದಿಂದಲೇ ಕಂಡುಕೊಂಡು ಅದರಲ್ಲೊಂದು ವಿಚಿತ್ರ ಥ್ರಿಲ್ ಅನುಭವಿಸುತ್ತಾರೆ.. ಇಂಥ ದೂರದ ಸಂಬಂಧಗಳನ್ನು ಹೊಂದುವ ಹೊಸ ಜನರೇಷನ್‌ನ ಸಂಖ್ಯೆ ಹೆಚ್ಚುತ್ತಿದೆ. ದುರಾದೃಷ್ಟವಶಾತ್ ಅಂಥವುಗಳಲ್ಲಿ ಶಾಶ್ವತವಾಗಿ ಉಳಿದುಕೊಳ್ಳುವ ಸಂಬಂಧಗಳ ಸಂಖ್ಯೆ ತೀರಾ ಕಡಿಮೆ. ಅದಕ್ಕೆ ಕಾರಣವೇನು ಮಾಡರ್ನ್ ವಿರಹದ ನೋವಿನ ಬಗ್ಗೆ ನೇವಿ ಬರೆಯುತ್ತಾರೆ
ಕರುಳಿನ ಕರೆ, ಅದೆಷ್ಟು ಖರೆ!
ತಲೆಯಲ್ಲಿರುವ ಮಿದುಳು ತಂದೆ , ಹೊಟ್ಟೆಯಲ್ಲಿರುವ ಕರುಳು ತಾಯಿ
ಅದೆಷ್ಟೋ ಬಾರಿ ತಲೆಯಲ್ಲಿನ ಮಿದುಳಿಗಿಂತ ಹೊಟ್ಟೆಯಲ್ಲಿನ ಮಿದುಳು ಚುರುಕಾಗಿ, ತರ್ಕಕ್ಕೆ ಸಿಗದಂಥ ಕೆಲಸ ಮಾಡುತ್ತದೆ. ನಮಗೆ ಬಾಯಾರಿಕೆ ಆಗಿದೆ ಎಂಬುದಕ್ಕೆ ಏನೇನೋ ಸಂಕೇತಗಳು ಬರುತ್ತಿರುತ್ತವೆ. ಗಂಟಲು ಒಣಗುತ್ತದೆ. ಅವೆಲ್ಲ ಸಂಕೇತಗಳು ಮಿದುಳಿನಿಂದಲೇ ಬರುತ್ತವೆ. ಒಂದೊಂದೂವರೆ ಲೋಟ ನೀರು ಕುಡಿದ ಮೇಲೆ ‘ಸಾಕು’ ಎಂಬ ಸಂಕೇತ ಎಲ್ಲಿಂದ ಬರುತ್ತದೆ. ತೃಪ್ತಿಯ ಆ ಸಂಕೇತ ನಿಮಗೆ ಮಿದುಳಿನಿಂದ ಅಲ್ಲ, ಕರುಳಿನಿಂದ ಬರುತ್ತದೆ. ‘ನವರಸ’ಗಳಿಗೆ ಬೇಕಾದ ಬಹುಪಾಲು ರಸಮೂಲಗಳೆಲ್ಲ ಕರುಳಿನ ಫ್ಯಾಕ್ಟರಿಯಲ್ಲೇ ತಯಾರಾಗುತ್ತವೆ. ಕರುಳಬಳ್ಳಿ ಸಂಬಂಧದ ಬಗ್ಗೆ ನಾಗೇಶ್ ಹೆಗಡೆ ಫಿಸಿಕಲ್ ಸೈಕಾಲಜಿ ಆಂಗಲ್‌ನಿಂದ ಬರೆಯುತ್ತಾರೆ.
ದೇಶ ಸುತ್ತುವ ಹುಮ್ಮಸ್ಸು ಹುಟ್ಟಿಸುವ ವಯಸ್ಸು!
ಒಬ್ಬನೇ ನಿಂತು ಈ ಮಳೆಯನ್ನು ನೋಡುವುದು, ಒಬ್ಬನೇ ಮನೆಯಲ್ಲಿ ಚಹ ಮಾಡಿ ಕುಡಿಯುವುದು, ಏಕಾಂಗಿಯಾಗಿ ಪುಸ್ತಕ ಓದುತ್ತ ಕೂರುವುದು, ದೂರದ ಬೆಟ್ಟದ ತುದಿಯಲ್ಲಿ ಒಬ್ಬನೇ ಇದ್ದು ಗಾಳಿಪಟ ಹಾರಿಸುವುದು, ಛಕ್ಕನೆ ನಿರ್ಧಾರ ಮಾಡಿ ಯಾವ ಪೂರ್ವಸಿದ್ಧತೆ ಇಲ್ಲದೆ ಒಬ್ಬನೇ ಗೊತ್ತಿಲ್ಲದ ಊರಿಗೆ ಪ್ರವಾಸ ಹೊರಡುವುದು -ಇವೆಲ್ಲ ಆತ್ಮಶೋಧನೆಯ ಮಾರ್ಗಗಳು. ಹಾಗನ್ನುವ ಅಪ್ಪ ತನ್ನ ಮಗನಿಗೆ ಗೊತ್ತಿಲ್ಲದ ಊರಿಗೆ ಮ್ಯಾಪಿಲ್ಲದೆ ಹೋಗುವ ಹಾದಿಯನ್ನು ಹೇಳಿಕೊಡುತ್ತಾನೆ. ಇದು ಈ ಬಾರಿಯ ಅಪ್ಪನ ಪತ್ರದ ವಿಶೇಷ
ಎಲ್ಲೆಲ್ಲೂ ಸಂಗೀತವೇ..
ಹಳೆಯ ಹಾಡು ಕೇಳಲು ಬಂದಿದೆ ಹೊಸ ಎಂಪಿತ್ರೀ ಪ್ಲೇಯರ್! ಓದಿ ವಾಟ್ಸ್ ಅಪ್ ಕಾಲಂನಲ್ಲಿ
ಕಾಲವೆಂಬ ಈ ಹಕ್ಕಿ ಎಲ್ಲಿ ನಿಲ್ಲುತ್ತದೆ
ಇಲ್ಲಿ ಪ್ರತಿಯೊಂದು ದೇಹವೂ ಗಾಯಗೊಂಡಿದೆ, ದಾಹಗೊಂಡ ಆತ್ಮ, ನೋಟದಲ್ಲಿ ಗೊಂದಲ, ಮನದಲ್ಲಿ ಹತಾಶೆ. ಇದು ಮಹಾನಗರ! ದೆಹಲಿಯ ಮತ್ತೊಂದು ಮುಖದ ಅನಾವರಣ ಈ ಬಾರಿಯ ರಾಜಧಾನಿ ಮೇಲ್ ನಲ್ಲಿ.
ಹೆಂಗಸರಿದ್ದಾರೆ ಎಚ್ಚರಿಕೆ!
ಹಿಂದೆಲ್ಲ, ಗಂಡಸರಿದ್ದಾರೆ ಹುಷಾರು ಎಂದು ತಾಯಿ ತನ್ನ ಮಗಳಿಗೆ ಕಿವಿಮಾತು ಹೇಳುತ್ತಿದ್ದಳು. ಇಂದು ಹುಡುಗಿಯರಿದ್ದಾರೆ ಎಚ್ಚರಿಕೆ ಕಣಪ್ಪಾ ಎಂದು ಅಪ್ಪ ಮಗನಿಗೆ ಪಾಠ ಹೇಳುವ ಕಾಲ ಬಂದಿದೆ.
ಇವೆಲ್ಲದರ ಜೊತೆಗೆ ಸೈನ್ಸ್ ಪೇಜ್, ಸಮಾಧಾನ, ಗುಣಮುಖ, ಲಾ ಪಾಯಿಂಟು, ಸೈಡ್ ವಿಂಗ್, ಫೇಸ್ ಬುಕ್ ಪದ್ಯಗಳು ಮೊದಲಾದ ಅಂಕಣಗಳು.
ಇನ್ನೆರಡೇ ದಿನಗಳಲ್ಲಿ ಓ ಮನಸೇ ಮಾರುಕಟ್ಟೆಯಲ್ಲಿರುತ್ತದೆ. ಕಿಟಿಕಿಯಾಚೆ ಸುರಿಯುವ ಮಳೆ ನೋಡುತ್ತಾ ಓದುವ ಸುಖ ನಿಮ್ಮದಾಗಲಿ.