Buy Now @ ₹ 20.00
Preview
ಆಪ್‌ಗಳು ನಮ್ಮನ್ನು ಆಳುತ್ತಿವೆ.. ಅಳಿಸುತ್ತಲೂ ಇವೆ... ಪ್ರೀತಿ ಸೋಲುತ್ತದೆ.. ಟೆಕ್ನಾಲಜಿ ಗೆಲ್ಲುತ್ತದೆ
Happy ಲೈಫು
ಆಪ್‌ಗಳನ್ನು ಡೌನ್‌ಲೋಡ್ ಮಾಡೋ ಮುನ್ನ ಓದಿಬಿಡಿ...
ಬೇಕುಬೇಕಾದ ಆಪ್‌ಗಳನ್ನೆಲ್ಲಾ ಬಳಸಿ ಹ್ಯಾಪ್‌ಮೋರೆ ಹಾಕಿರೋ ಮಾಡರ್ನ್ ಜನರೇಷನ್ನಿನ ಜಾಣಜಾಣೆಯರ ಜಗತ್ತು ಇದು. ಮುಟ್ಟಿ ಸಂತೋಷ ಪಡುತ್ತಿದ್ದ ಕಾಲಕ್ಕೆ ಲೈಕುಗಳ ಆಳ್ವಿಕೆ ಶುರುವಾಗಿ ಅಲ್ಲಿ ಇಲ್ಲಿ ಲೈಕು ಒತ್ತಿ ಅಲೆದಾಡಿ, ನದಿ ದಂಡೆಯಲ್ಲಿ ಕಾಲು ಚಾಚಿ ಕೂತು ಖುಷಿ ಪಡುವ ಅವಕಾಶವನ್ನು ಇಂಚಿಂಚಾಗಿ ದೂರ ಮಾಡಿಕೊಂಡು ಆಪ್‌ನಲ್ಲೇ ‘ಫೀಲ್ ಮೀ’ ಅಂತ ಕಣ್ಣು ಹೊಡೆಯುವವರ ಆಸೆ, ಆತಂಕ, ಬೇಸರ, ಅನುಮಾನ, ಭಯ, ಬೆರಗು, ನೋವು ಎಲ್ಲವನ್ನೂ ತುಂಬಿಕೊಂಡಿರುವ ವಿಚಿತ್ರ ಕತೆ ಇದು.