Buy Now @ ₹ 20.00
Preview
ಸ್ನೇಹ, ಪ್ರೀತಿ, ಸೆಕ್ಸ್,ಜಗಳ, ಬ್ರೇಕಪ್ಪು ಅನ್ನುವ ಒಬ್ಬರನ್ನೊಬ್ಬರು ಮುಟ್ಟದೇ ಆಡುವ ಆಟ!
ಇನ್ನೊಂದು ಸಂಸಾರ....
ಟಚ್ ಮಿ ನಾಟ್!
ನಮ್ಮ ಬದುಕು ಹೀಗೆ ಶುರುವಾಗುತ್ತದೆ. ಆರ್‌ಜೆ ಮಾತಾನಂದಮಯಿ ಮಾತಾಡುತ್ತಾಳೆ, ಆ ಕಡೆಯಿಂದ ಫೋನು ರಿಂಗು ಮಾಡಿ ಇನ್ಯಾರೋ ಹರಟುತ್ತಾರೆ, ಬೆರಳಿನ ತುದಿ ಸವೆಯುವಂತೆ ನಾವು ಗೊತ್ತಿದ್ದವರ ಜೊತೆ, ಗೊತ್ತಿಲ್ಲದವರ ಜೊತೆ ಚಾಟ್ ಮಾಡುತ್ತಾ, ಲೈಕು, ಕಾಮೆಂಟು ಕುಟ್ಟುತ್ತಾ ಬದುಕುತ್ತೇವೆ. ಇಂಥ ಬದುಕಲ್ಲಿ ಬಂದು ಸೇರಿಕೊಳ್ಳುತ್ತದೆ ಒಂದು ಅದ್ಭುತ, ಅಪೂರ್ವ ರಿಲೇಷನ್ನು. ಅದನ್ನು ಇಮೋಷನಲ್ ಅಫೇರ್ ಅಂತಾರೆ, ಫ್ಲರ್ಟೈಷನ್‌ಶಿಪ್ಪು ಅಂತಾರೆ, ವರ್ಚುವಲ್ ರಿಲೇಷನ್ನು ಅಂತಾನೂ ಕರೀತಾರೆ. ಒಂದಕ್ಕೊಂದು ತಾತ್ವಿಕವಾಗಿ ಎಷ್ಟೇ ವ್ಯತ್ಯಾಸಗಳಿದ್ದರೂ ಎಲ್ಲದರ ನೀತಿ ಒಂದೇ-ಕಣ್ಣ ಮುಂದೇ ಇರು, ಕೈಗೆ ಸಿಕ್ಬೇಡ, ಮಾತಾಡ್ತಾ ಇರು, ಮೈ ಮುಟ್ಬೇಡ. ಇದೇ ಮತ್ತೊಂದು ಸಂಸಾರ.