O Manase


Buy Now @ ₹ 20.00 Preview
ನೀವು ಯಾಕೆ ಚಿಕ್ಕ ಮಕ್ಳಂತೆ ಆಡ್ತೀರಾ ಮಕ್ಕಳು ಮಕ್ಕಳ ಥರ ಇದ್ದರೆ ಚೆನ್ನ, ದೊಡ್ಡವರು ದೊಡ್ಡವರ ಹಾಗೇ ಆಡಿದರೆ ಚೆನ್ನ. ಆದರೆ ಇವತ್ತು ಜಗತ್ತು ಉಲ್ಟಾಪಲ್ಟಾ ಆಗಿಬಿಟ್ಟಿದೆ. ದೊಡ್ಡವರು ಮಕ್ಕಳಂತೆ ಆಡುತ್ತಾರೆ, ಮಕ್ಕಳು ದೊಡ್ಡವರ ಥರ ವರ್ತಿಸ ತೊಡಗಿದ್ದಾರೆ. ಕೃಪೆ-ಮೀಡಿಯಾ, ಇಂಟರ್ನೆಟ್, ಕೈಲಿರುವ ಗ್ಯಾಜ್ಗೆಟ್ಸ್, ಕಾಲಿಗೆ ಸಿಗೋ ಆಧುನಿಕತೆ. ನಿಮ್ಮನ್ನು ನೀವು ಪ್ರಬುದ್ಧ ಕರ್ನಾಟಕದಂತೆ ಬಿಂಬಿಸಿಕೊಳ್ಳುತ್ತಿದ್ದರೂ ನೀವು ತೀರಾ ಮಕ್ಕಳ ಥರ ಆಡುತ್ತೀರಿ, ನೆಗೆಯುತ್ತೀರಿ, ವರ್ತಿಸುತ್ತೀರಿ. ಮಕ್ಕಳಿಗೆ ಅವರು ಮಕ್ಕಳು ಎನ್ನುವುದೇ ಮರೆತು ಹೋಗುತ್ತಿದೆ. ಈ ಲೇಖನ ಓದಿಕೊಂಡು ಬನ್ನಿ, ನೀವೂ ಮಕ್ಕಳಂತೇ ಆಡುತ್ತಿದ್ದೀರಾ ಅಥವಾ ನಿಮ್ಮ ಮಕ್ಕಳು ನಿಮಗಿಂತ ದೊಡ್ಡವರಂತೆ ಆಡುತ್ತಿದ್ದಾರಾ ಅನ್ನುವುದು ಗೊತ್ತಾಗಬಹುದು. ಇದರ ಹಿಂದೆ ಸುಮಾರಷ್ಟು ಸಮಾಜವಾದ, ಸೈಕಾಲಜಿಗಳೆಲ್ಲಾ ವರ್ಕ್ ಆಗುತ್ತಿದೆ. ಎಲ್ಲಿದ್ದೀಯಾ ನೀನು ಹನ್ನೆರಡಾಣೆ ಪತ್ರಕರ್ತ ಜರ್ನಲಿಸಂ ಅನ್ನೋದು ಒಂದು ಕಾಲಕ್ಕೆ ಯಾರಿಗೂ ಬೇಡವಾದ ಉದ್ಯೋಗ. ನ್ಯೂಸ್ ಚಾನೆಲ್ಲುಗಳು ಶುರುವಾದ ಮೇಲೆ ಅದಕ್ಕೆ ಗ್ಲಾಮರ್ ಬಂತು. ಈಗ ಕೈತುಂಬಾ ಸಂಬಳವೂ ಬರುತ್ತಿದೆ. ಪತ್ರಕರ್ತರಿಗೆ ಹೆಣ್ಣುಕೊಡುವ ಮಾವಂದಿರೂ ಸಿಗುತ್ತಿದ್ದಾರೆ. ಈ ಪ್ರಕ್ರಿಯೆಯಲ್ಲಿ ಪತ್ರಿಕೋದ್ಯಮ ಅನ್ನೋದು ಸೀರಿಯಸ್ನೆಸ್ ಕಳಕೊಂಡಿದ್ಯಾ ಬೇರೆಯವರು ಕೂಡ ಪತ್ರಕರ್ತರನ್ನು ಸೀರಿಯಸ್ ಆಗಿ ನೋಡೋದನ್ನು ನಿಲ್ಲಿಸಿದ್ದಾರಾ ಹನ್ನೆರಡಾಣೆ ಪತ್ರಕರ್ತರು ಎಲ್ಲಿದ್ದಾರೆ ಮಾತಾಡುವ ಟೀವಿ ಚಾನಲ್ಲುಗಳ ಸ್ಟಾರ್ ಜರ್ನಲಿಸ್ಟುಗಳ ಮುಂದೆ ಬರೆಯುವ ಪತ್ರಕರ್ತರು ಸೋತುಹೋದರಾ ಇವೆಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಇಲ್ಲಿದೆ. ಇದು ಬರೆಯುವ ಪತ್ರಕರ್ತರ ದೃಷ್ಟಿಕೋನವೆಂದು ತಳ್ಳಿಹಾಕಬೇಕಾಗಿಲ್ಲ. ನಾನೂ.. .. ನನ್ನ ಕನಸು ಜಗತ್ತು ಅನ್ನುವುದು ಕಿಕ್ಕಿರಿದ ಕನಸುಗಳ ಮಾರುಕಟ್ಟೆ. ಕನಸು ಕಾಣುವವರು, ಕನಸು ಮಾರುವವರು, ಕನಸು ಕೊಳ್ಳುವವರು, ನಿಮ್ಮ ಕನಸಿಗೊಂದು ಕಣ್ಣು ಕೊಡುವವರು, ಹೀಗೆ ಥರಹೇವಾರಿ ಜನರು ಇಲ್ಲಿದ್ದಾರೆ. ಇಲ್ಲಿ ಎಲ್ಲರೂ ರವಿಚಂದ್ರನ್ ಥರ ಕನಸುಗಾರರೇ. ಆದರೆ ಆ ಕನಸು ಸಾಕಾರಗೊಳ್ಳುವುದು ಸುಲಭ ಅಲ್ಲ. ಅದಕ್ಕೆ ಪರಿಶ್ರಮ ಪಡಬೇಕು, ಶ್ರದ್ಧೆ ಇರಬೇಕು, ಒಂಚೂರು ಅದೃಷ್ಟವೂ ಜೊತೆಗಿರಬೇಕು. ಅಂದಹಾಗೆ ನೀವು ಕಂಡ ಕನಸೇನು ಅದು ಫಲಿಸಿದೆಯಾ ಅದು ಸಾಧ್ಯವಾಗಿದ್ದು ಹೇಗೆ ಫಲಿಸಲಿಲ್ಲವಾ ಹಾಗಿದ್ದರೆ ಅದಕ್ಕೆ ಕಾರಣಗಳೇನು ನೀವೀಗ ಏನಾಗಿದ್ದೀರಿ ನಿಮ್ಮ ಇಂದಿನ ಸ್ಥಿತಿಗತಿ ನಿಮಗೆ ನೆಮ್ಮದಿಯನ್ನು ನೀಡಿದೆಯಾ ಇವಿಷ್ಟು ಪ್ರಶ್ನೆಗಳನ್ನು ಓದುಗರ ಮುಂದಿಟ್ಟು ಅವರ ಅನುಭವಗಳನ್ನು ಲೇಖನರೂಪದಲ್ಲಿ ಬರೆಯುವಂತೆ ಆಹ್ವಾನಿಸಿದ್ದೆವು. ನಮ್ಮ ನಿರೀಕ್ಷೆಗೂ ಮೀರಿ ಓದುಗರು ಸ್ಪಂದಿಸಿದ್ದಾರೆ. ಆ ಪೈಕಿ ಆಯ್ದ ಲೇಖನಗಳನ್ನು ಈ ಸಂಚಿಕೆಯಿಂದ ಪ್ರಕಟಿಸುತ್ತಿದ್ದೇವೆ. ನೀವೂ ಬರೆಯಿರಿ. ನೀನ್ಯಾರಿಗಾದೆಯೋ ಎಲೆ ಮಾನವಾ... ಬೈಕ್ ಸವಾರನೊಬ್ಬ ಬಸ್ಸಿನ ಚಾಲಕನನ್ನು ಹೊಡೆದು ಕೊಲ್ಲುತ್ತಾನೆ. ಶಿಂದರ್ಕೌರ್ ಎನ್ನುವ ದಲಿತ ಹೆಣ್ಣು ಮಗಳನ್ನು ಅವಳ ಹದಿಮೂರು ವರ್ಷದ ಮಗಳು ಅರ್ಶದೀಪಳೊಂದಿಗೆ ಅತ್ಯಂತ ಅಮಾನುಷ ರೀತಿಯಲ್ಲಿ ಲೈಂಗಿಕ ಕಿರುಕುಳ ಕೊಟ್ಟು ಚಲಿಸುತ್ತಿರುವ ಬಸ್ಸಿನಿಂದ ಹೊರನೂಕಲಾಗುತ್ತದೆ. ಹದಿಮೂರರ ಬಾಲಕಿ ಸ್ಥಳದಲ್ಲೇ ಅಸುನೀಗುತ್ತಾಳೆ. ಮಹಾನಗರದ ಮಹಾ ಜನರು ನೋಡುತ್ತಲೇ ಇದ್ದರು, ಈ ಜೀವಂತ ಸ್ಟಂಟ್ ದೃಶ್ಯವನ್ನು. ಜನರ ಮಾನವೀಯತೆಗೆ ಲಕ್ವಾ ಹೊಡೆದಿದೆಯೇ ಯಾಕೆ ಯಾರೂ ಮಾತಾಡುವುದಿಲ್ಲ ಇಂಗ್ಲಿಷ್ ಬಾರದ ಕನ್ನಡತಿಯ ಅಳಲು ನನ್ನ ಆಫೀಸು ಶುದ್ಧ ಕೊಳಕು. ಚಾಡಿ, ಗೇಲಿ, ಗಾಸಿಪ್ಗಳಿಂದ ತುಂಬಿ ಹೋಗಿದೆ. ಸರಿಯಾದ ವರಮಾನವೂ ಅಲ್ಲಿ ಇಲ್ಲ. ಸರಿ, ಇದನ್ನೆಲ್ಲಾ ಪಕ್ಕರಿಸಿ ಊರಿಗೆ ಹೋಗಿ ಬಿಡೋಣ ಅಂದು ಕೊಂಡರೆ, ಅಲ್ಲಿ ತೋಟ-ಗದ್ದೆಗಳೆಲ್ಲಾ ಪಾಳು ಬಿದ್ದಿವೆ. ಅತ್ತ ದರಿ, ಇತ್ತ ಪುಲಿ ಎಂಬಂತಹ ಸ್ಥಿತಿ. ನನ್ನ ತಂದೆ ತೀರಿ ಹೋದ ನಂತರ ಅಮ್ಮನನ್ನು ನೋಡಿಕೊಳ್ಳುತ್ತಿರುವುದು ನಾನು. ಹಳ್ಳಿಯಲ್ಲೇ ಕೊಂಚ ಸುಖವಾಗಿದ್ದೆ ಅನ್ನಿಸುತ್ತದೆ. ಸಿಟಿಯಲ್ಲಿ ಇಂಗ್ಲಿಷ್ ಬೇಕು.. ನನಗೆ ಅದೇ ಸಾಧ್ಯವಾಗಿಲ್ಲ’. ಇದು ಸಮಾಧಾನ ಅಂಕಣಕ್ಕೆ ಯುವತಿಯೊಬ್ಬಳು ಬರೆದ ಪತ್ರ. ಆಕೆಗೆ ರವಿ ಬೆಳಗೆರೆಯವರು ನೀಡಿದ ಸಮಾಧಾನವಾದರೂ ಏನು ವರ ಕೊಡುತ್ತಾಳಾ ವರಮಹಾಲಕ್ಷ್ಮಿ ಶ್ರಾವಣ ಶುಕ್ಲದ ಪೌರ್ಣಿಮ ಮುನ್ನದ ಶುಕ್ರವಾರ ವರಮಹಾಲಕ್ಷ್ಮಿ ವ್ರತ ಆಚರಿಸಿದರೆ ಸರ್ವಸಿದ್ಧಿಯಾಗುತ್ತದೆ. ಇದು ನಂಬಿಕೆ. ವಾಸ್ತವವಾಗಿ ಲಕ್ಷ್ಮೀವ್ರತ ಅಂದ್ರೆ ಏನು ಯಾರು ಈ ವ್ರತ ಮಾಡಬೇಕು ಮಾಡಿದರೆ ಏನು ಫಲ ವ್ರತವನ್ನ ಆಚರಿಸುವ ಸರ್ವರಿಗೂ ಈ ಪ್ರಶ್ನೆ ಹುಟ್ಟುತ್ತೆ. ಉತ್ತರ ತಿಳಿದು ಆಚರಿಸುವವರು ಕೆಲವರು. ತಿಳಿಯದೇ ಆಚರಿಸುವವರು ಹಲವರು. ಈ ವ್ರತ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿದೆ. ಉಪಮೆ ಅನ್ನುವುದು ಉಪ್ಪಿಟ್ಟಿನಂತಲ್ಲ! ಮೇಲ್ನೋಟಕ್ಕೆ ಸಂಬಂಧವೇ ಇಲ್ಲದಂತೆ ಕಾಣುವ ಎರಡು ಸಂಗತಿಗಳನ್ನು ಥಟ್ಟನೆ ಜೊತೆಜೊತೆಯಾಗಿ ಕೂರಿಸಿ ಮನಸ್ಸಿಗೊಂದು ಆಹಾ ಎಂಬಂಥ ಅನುಭವ ಕೊಡುವುದು ಉಪಮೆಯ ಕೆಲಸ. ಉಪಮೆ ಎನ್ನುವುದೊಂದು ಅಲಂಕಾರ. ಸಾಹಿತ್ಯವನ್ನು ಚಂದಗಾಣಿಸುವ ಪ್ರತಿಭಾ ವಿಶೇಷವೇ ಅಲಂಕಾರ. ಉಪಮೆ ಎಂದರೆ ಹೋಲಿಕೆ. “ಎಲೆ ಹೆಣ್ಣೆ, ನಿನ್ನ ಮೊಗ ಹುಣ್ಣಿಮೆಯ ಚಂದಿರನಂತಿದೆ ಎನ್ನುವ ಉಪಮಾಲಂಕಾರದಲ್ಲಿ, ಹೋಲಿಸಿಕೊಳ್ಳುತ್ತಿರುವ ಹೆಣ್ಣಿನ ಮೊಗ ಉಪಮೇಯ. ಯಾವುದರ ಜೊತೆ ಅದನ್ನು ಹೋಲಿಸಲಾಯಿತೋ ಅಂಥ ಚಂದ್ರ ಉಪಮಾನ. ಮದುಮಗನಿಗೆ ಉಡಿಸಿದ ಜರಿಪೇಟದಂತೆ, ಉಪಮೆ ಸಾಹಿತ್ಯಕ್ಕೆ ಭೂಷಣ. ಅತ್ಯಾಚಾರಿಗೆ ಪೊಲೀಸರ ಕುಮ್ಮಕ್ಕು, ಅವಳಿಗೆ ದೇವರೆ ದಿಕ್ಕು ‘ನಾನು ಬಡಕುಟುಂಬದ, ಕೆಳವರ್ಗದ ಅಶಿಕ್ಷಿತ ಹೆಣ್ಣು ಮಗಳು ನಿಜ. ಆದರೆ, ನಾನು ನನ್ನ ಬದುಕಿನುದ್ದಕ್ಕೂ ಯಾರೊಬ್ಬರ ವ್ಯವಹಾರಗಳಿಗೂ ಮೂಗು ತೂರಿಸಿದವಳಲ್ಲ. ವಿಶೇಷವಾಗಿ ಪುರುಷರ ಜಗತ್ತಿನೊಳಗೆ ಅತಿಕ್ರಮ ಪ್ರವೇಶ ಮಾಡಿದವಳಲ್ಲ ನನಗೆ ಕಿವಿಗಳಿದ್ದವು ಕೇಳಿಸಿಕೊಳ್ಳುತ್ತಿದ್ದೆ. ಕಣ್ಣುಗಳಿದ್ದವು ನೋಡುತ್ತಿದ್ದೆ. ಮಾತನಾಡಲು ನಾಲಿಗೆಯಿತ್ತು ಮಾತನಾಡುತ್ತಿದ್ದೆ. ಆದರೆ ನನ್ನೊಳಗೆ ಮಾತ್ರ ನಾನು ಮಾತನಾಡಿಕೊಳ್ಳುತ್ತಿದ್ದೆ.’ ಇಂತಿದ್ದ ಮುಖ್ತರ್ ಮಾಯಿ ಪೊಲೀಸ್ ಠಾಣೆಯಲ್ಲಿ ಪಟ್ಟ ಕಷ್ಟಗಳೇನು ‘ಮೂಕಹಕ್ಕಿಯ ಹಾಡು’ ಧಾರಾವಾಹಿಯ ಮುಂದಿನ ಕಂತು ಓದಿ ಮನೋಲ್ಲಾಸಕ್ಕೆ ಕವನಗಳು. ಜ್ಞಾನದಿಗಂತ ವಿಸ್ತಾರಕ್ಕೆ ಸಿಂಪಲ್ ಸಯನ್ಸ್ ಮತ್ತು ವಿಜ್ಞಾನಪುಟಗಳು. ಪದಸಂಪತ್ತಿಗೆ ವಾಗರ್ಥ ಚೂಡಾಮಣಿ. ನೊಂದ ಮನಸ್ಸುಗಳಿಗೆ ಸಮಾಧಾನ. ಆರೋಗ್ಯ ರಕ್ಷಣೆಗೆ ಗುಣಮುಖ. ದೇವದಾನವರ ಕತೆಗಳಿಗೆ ಪುರಾಣ ಪ್ರಪಂಚ. ವೈವಿಧ್ಯಮಯ ಅಂಕಣಗಳು, ನವನವೀನ ಲೇಖನಗಳು. ಓ ಮನಸೇಯ ೧೧೭ನೇ ಸಂಚಿಕೆಯಲ್ಲಿ...