O Manase


Top Clips From This Issue
ಕೊಲ್ಲು ಬಾರೋ ನನ್ನ - ಕೂಡಿ ಕಳೆಯೋಣ ಅವಳಿಗೆ ಒಡವೆ, ವಸ್ತ್ರ, ಸಂಪತ್ತು, ದುಡ್ಡು ಎಲ್ಲವೂ ಸಿಗುತ್ತಿದೆ. ಮಾತಿಗೆ ಮಂದಿಯಿದ್ದಾರೆ. ಹೊತ್ತು ಕಳೆಯುವುದಕ್ಕೆ ಸಾಮಾಜಿಕ ಜಾಲತಾಣಗಳಿವೆ. ಸುತ್ತಾಡುವುದಕ್ಕೆ ಮಾಲು, ತಿನ್ನುವುದಕ್ಕೆ ಅವಳದೇ ಪಾಲು, ಎಲ್ಲ ಸಂಪತ್ತಿಗೂ ಸವಾಲು-ಎಲ್ಲವೂ ಅವಳದ್ದೇ. ಅವಳನ್ನು ಕೆರಳಿಸುವುದಕ್ಕೆ ವೆಬ್ಸೈಟುಗಳಿವೆ, ಫೋರ್ನೋಗ್ರಫಿ ವಿಡಿಯೋಗಳಿವೆ. ಬೇಕೆನ್ನುವುದೆಲ್ಲ ಅವಳ ಕೈಯ ಅಳತೆಯಲ್ಲೇ ಇವೆ. ಅವಳಿಗೆ ಬೇಕಾದ ಅದೊಂದು ಮಾತ್ರ ಸಿಗುವುದಿಲ್ಲ.ಮಧುಚಂದ್ರ ಮಂಚದಲ್ಲಿ ಅವಳದು ರಸಹೀನ ರಾತ್ರಿ. ಅಲ್ಲಿ ಅವನಿರುವುದಿಲ್ಲ. ಅವನ ಸಂತೋಷಗಳೇ ಬೇರೆ ಇವೆ. ಯಾಕೆ ಹೀಗೆ ಕಣ್ಣಾಮುಚ್ಚೇ ಕಾಡೆಕೂಡೆ ಭಾಗ -2 ಲೇಖನವನ್ನು ಓದಿರಿ. ಒಬ್ಬಳು ಹಳ್ಳಿ ಹುಡುಗಿ, ಒಬ್ಬ ಶ್ರೀಮಂತ ಹುಡುಗ, ಅವರ ಮದುವೆ, ಅಲ್ಲೊಬ್ಬಳು ವ್ಯಾಂಪ್, ಅಲ್ಲೊಂದು ಸಂಚು, ಅದ್ದೂರಿ ಮನೆಗಳು, ಝರಿಝರಿ ಸೀರೆಗಳು, ಜಗಮಗ ಒಡವೆಗಳು, ಕಲರ್ ಕಲರ್ ಲಿಪ್ಸ್ಟಿಕ್ಗಳು, ಆಗಾಗ ಪ್ರೇಕ್ಷಕರ ಜೊತೆ ಮುಖಾಮುಖಿ, ಊರೂರಲ್ಲಿ ಸೀರಿಯಲ್ ಸಂತೆ, ಜನಜಾತ್ರೆ, ಕುಣಿತಗಳು, ಚಿತ್ತಾರಗಳು ಎಲ್ಲವೂ ಹಿಂದಿಯ ಕಾಪಿಕ್ಯಾಟ್. ಎಲ್ಲ ಧಾರಾವಾಹಿಗಳ ಕತೆಯೂ ಒಂದೇ. ಧಾರಾವಾಹಿಗಳು ಮಾತ್ರವಲ್ಲ, ರಿಯಾಲಿಟಿ ಶೋಗಳದೂ ಇದೇ ಕತೆ. ಎಲ್ಲವೂ ಅಲ್ಲಿಯ ಎರವಲು. ಟೀಆರ್ಪಿ ಎಂಬ ಮಾಯೆಯ ಮುಂದೆ ಅಭಿರುಚಿ ಸಮಾಯಾಗಿದೆ. ರೀಮೇಕು ಸೀರಿಯಲ್ಲುಗಳ ಅಬ್ಬರ ವೀಕ್ಷಕರ ಆಕ್ರಂದನವನ್ನೂ ಮೀರಿ ನಿಂತಿದೆ. - ಸೀರಿಯಲ್ ಸಂತೆಯಲ್ಲಿ ಕಳ್ಳರ ತಳ್ಳಾಟ ಸಣ್ಣದು ಸುಂದರ ಎನ್ನುವ ಸಿದ್ಧಾಂತವನ್ನು ತಮ್ಮ ಮಾತು-ಕೃತಿಗಳಲ್ಲಿ ತೋರುವ ಜಪಾನೀಯರಿಗೆ, ನಾಯಿಗಿಂತಲೂ ಚಿಕ್ಕ-ಚೊಕ್ಕ ಅತಿಥಿಯಾದ ಬೆಕ್ಕು ಇಷ್ಟವಾಯಿತು. ಅಲ್ಲದೆ ಅದು ಸ್ವತಂತ್ರಜೀವಿ ಬೇರೆ. ಅವುಗಳನ್ನು ಮನೆಗಳಲ್ಲಿ ಸಾಕಿಕೊಳ್ಳುವುದು ಫ್ಯಾಶನ್. ಇಂದಿಗೂ ಅಲ್ಲಿ ಕೆಲವು ಊರುಗಳಲ್ಲಿ ಬೆಕ್ಕುಗಳ ಜನಸಂಖ್ಯಾಸೋಟವೇ ಆಗಿದೆ. ಒಂದೊಂದು ಮನೆಯೂ ಮಾರ್ಜಾಲಗಳ ಹಾಸ್ಟೆಲ್ ಆಗಿದೆ! ಅಷ್ಟಾದರೂ ಅವರು ಈ ಪುಟಾಣಿ ದೆವ್ವಗಳನ್ನು ದೇವತೆಯಂತೆಯೇ ನೋಡಿಕೊಳ್ಳುತ್ತಾರೆ. - ಬೆಕ್ಕು ಹಾರುತಿದೆ ನೋಡಿದಿರಾ ಮೈಚಾಚಿ, ಬಿಡುಬೀಸಾಗಿ ಗತ್ತಿನಿಂದ ನಡೆಯುವುದು, ಕುಳಿತುಕೊಳ್ಳುವುದು ಅಥವಾ ಮಲಗುವುದು ಗಂಡಸರಲ್ಲಿ ವಂಶಪಾರಂಪರ್ಯವಾಗಿ ಬಂದಿರುವ ಬೇರೆಯವರ ಮೇಲೆ ಸವಾರಿ ಮಾಡುವ ಕೆಟ್ಟ ಗುಣ. ನಾನಿರೋದೇ ಹೀಗೆ, ಏನ್ ಮಾಡ್ಕೋತೀರಾ ಮಾಡ್ಕೊಳಿ ಹೋಗಿ ಎಂದು ಅವರ ಮನಸ್ಸು ಸದಾ ಹೇಳುತ್ತಿರುತ್ತದೆ. ಅದು ಅವರ ಪ್ರತಿ ನಡೆಯಲ್ಲೂ ವ್ಯಕ್ತವಾಗುತ್ತಿರುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಹೆಂಗಸರು ಮುಜುಗರ, ಸುರಕ್ಷತೆ, ಆದೇಶಪಾಲನೆ ಮುಂತಾದ ಕಾರಣಗಳಿಗಾಗಿ ಮುದುಡಿ ಕುಳಿತುಕೊಳ್ಳುತ್ತಾರೆ. ಕಂಡಕಂಡಲ್ಲಿ ಕಾಲಗಲಿಸಿ ಕುಳಿತು ಕಿರಿಕಿರಿ ಮಾಡುವ ಗಂಡುಸಂತಾನದ ಬಗ್ಗೆ ಒಂದು ಅಸಹನೆಯ ಸಂಶೋಧನೆ -ಕಿಸಗಾಲುದಾಸರು ಕನ್ನಡ ಚಿತ್ರರಂಗದ ನಿಘಂಟುವಿನಲ್ಲಿ ಹುಡುಕಿದರೆ ಶ್ರೀಧರ್ ಎಂಬ ಹೆಸರಿಗೆ ಸಭ್ಯ, ಸಂಭಾವಿತ, ಸಂಸ್ಕಾರವಂತ, ವಿನಯಶೀಲ ಇತ್ಯಾದಿ ಅರ್ಥಗಳು ದೊರಕುತ್ತವೆ. ಹೇಳಿಕೇಳಿ ಪುಟ್ಟಣ್ಣ ಅವರ ಗರಡಿಯಿಂದ ಬಂದ ಪ್ರತಿಭೆ, ಆ ಕಾರಣಕ್ಕೇ ಅಭಿನಯ ಅಂದರೆ ಇವರ ಪಾಲಿಗೆ ತಪಸ್ಸು. ಭರತನಾಟ್ಯಕ್ಕೆ ತಾಲೀಮು ನಡೆಸಿದಷ್ಟೇ ಶ್ರದ್ಧೆಯಿಂದ ತಮ್ಮ ಪಾತ್ರಕ್ಕೂ ತಯಾರಿ ನಡೆಸುವವರು. ಕಲಾತ್ಮಕ, ಕಮರ್ಷಿಯಲ್ ಮತ್ತು ಸಮಾನಾಂತರ - ಈ ಮೂರು ಪ್ರಕಾರದ ಚಿತ್ರಗಳಲ್ಲೂ ನಟಿಸಿದ ಹೆಗ್ಗಳಿಕೆ. ಈ ಮೂರು ವಿಭಾಗಕ್ಕೂ ಸೇರದ ಸಂತ ಶಿಶುನಾಳ ಶರೀಫ ಚಿತ್ರ ಶ್ರೀಧರ್ ಅವರನ್ನು ದೇವಮಾನವನ ಪಟ್ಟಕ್ಕೇರಿಸಿದ್ದು ಒಂದು ದಂತಕತೆ. ಅಲ್ಲಿಂದಾಚೆಗೆ ಅವರ ಬದುಕೇ ಬದಲಾದದ್ದು ಇನ್ನೊಂದು ಕತೆ. ಆ ಕತೆಯನ್ನು ಅವರ ಬಾಯಿಂದಲೇ ಕೇಳುವಂತವರಾಗಿ. -ಶರೀಫ ಎಂಬ ಗುರುವಿನ ಪಾದ ನನ್ನನೇ ನುಂಗಿತ್ತಾ.. ಅನ್ಯಾಯದ ವಿರುದ್ಧ ಹೋರಾಟಕ್ಕೆ ಇಳಿಯುವವರೆಗೂ ನನಗೆ ಪಾಕಿಸ್ತಾನದಲ್ಲಿ ಸಂವಿಧಾನ ಮತ್ತು ಕಾನೂನು ಕುರಿತಂತೆ ಗ್ರಂಥಗಳಿವೆ, ವಕೀಲರು, ನ್ಯಾಯಧೀಶರು ಹಾಗೂ ನ್ಯಾಯಾಲಯಗಳಿವೆ ಎಂಬ ಪರಿಕಲ್ಪನೆ ಕೂಡ ಇರಲಿಲ್ಲ. ನಾನು ದೂರನ್ನು ದಾಖಲಿಸುವ ಬಗೆ ಹೇಗೆ ನನ್ನ ಲಿಖಿತ ದೂರು ನನ್ನ ಹೋರಾಟವನ್ನು ಎಲ್ಲಿಗೆ ಕೊಂಡೊಯ್ಯಬಹುದು ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡತೊಡಗಿದೆ. ನಿರಂತರ ಇಪ್ಪತ್ನಾಲ್ಕು ಗಂಟೆಗಳ ಸಾಮೂಹಿಕ ಅತ್ಯಾಚಾರದದಲ್ಲಿ ನಾನು ಬದುಕುಳಿದದ್ದು, ನನ್ನ ಈ ಕಾನೂನು ಹೋರಾಟಕ್ಕೆ ಚಿಮ್ಮು ಹಲಗೆಯಾಗಿ ಪರಿಣಮಿಸಿತು. ಹೀಗಂತಾಳೆ ಮುಕ್ತರನ್ ಮಾಯಿ ಮೂಕಹಕ್ಕಿಯು ಹಾಡು ಧಾರಾವಾಹಿಯ ನಾಲ್ಕನೇ ಅಧ್ಯಾಯದಲ್ಲಿ. -ಮುಗ್ಧ ಮುಕ್ತರನ್ ಬೀಬಿ, ಹೋರಾಟಗಾತಿ ಮುಕ್ತರ್ ಮಾಯಿ ಆದದ್ದು ಮನುಷ್ಯ ಮುಂದುವರಿದಂತೆ ಅವನ ಮಾನವೀಯ ಕಳಕಳಿ, ಅಂತಃಕರಣಗಳು ಜಂಗು ಹಿಡಿಯುತ್ತಿವೆಯೋ ಎಂದು ಗಾಬರಿಯಾಗುತ್ತದೆ. ಎಲ್ಲ ನಡುಗಡ್ಡೆಗಳಂಥ ನ್ಯಾನೋ ಕುಟುಂಬಗಳು ನಾನು, ನನ್ನ ಮನೆ, ನನ್ನ ಮಗು ಇಷ್ಟೆ ನೆಮ್ಮದಿಯಾಗಿದ್ದರೆ ಸಾಕು “ಬಾಕಿ ದುನಿಯಾ ಜಾಯ್ ಭಾಡ್ ಮೇ ಎಂಬಂತಿದೆ. ಮೊನ್ನೆ ಮೊನ್ನೆ ಉತ್ತರಭಾರತವನ್ನು ಭೂಕಂಪ ನಡುಗಿಸಿ ಹತ್ತಿರದ ನೇಪಾಳದಲ್ಲಿ ಸಾವಿರಾರು ಜನರನ್ನು ಬಲಿ ತೆಗೆದುಕೊಂಡಾಗಲಂತೂ ಬದುಕು ನೀರ ಮೇಲಿನ ಗುಳ್ಳೆ ಅನಿಸಿತು. ದೆಹಲಿಯಿಂದ ಬರೀತಾರೆ ರೇಣುಕಾ ನಿಡಗುಂದಿ ರಾಜಧಾನಿ ಮೇಲ್ ಅಂಕಣದಲ್ಲಿ -ಹಸಿವೆಗೆ ಯಾವ ಜಾತಿಯಿದೆ ಹೇಳು ವೇದರಾಶಿಯನ್ನು ಕೃಷ್ಣದ್ವೈಪಾಯನರು ಈ ಋಗ್, ಯಜು, ಸಾಮ, ಅಥರ್ವ ಎಂಬ ನಾಲ್ಕು ಭಾಗಗಳನ್ನ ಮಾಡಿ ಉಪಕರಿಸಿದ್ದಾರೆ. ಕೃಷ್ಣದ್ವೈಪಾಯನರು ವೇದವ್ಯಾಸರೆನಿಸಿಕೊಂಡಿದ್ದೇ ವೇದಗಳನ್ನ ವಿಭಜಿಸಿದ್ದರಿಂದ. ಅಷ್ಟಕ್ಕೂ ಈ ವೇದಗಳಲ್ಲಿ ಏನು ಅಡಗಿದೆ ಈ ಬಾರಿಯ ಆಚಾರ ವಿಚಾರ ಅಂಕಣ ಓದಿರಿ -ವೇದದೊಳಗೆ ಅಡಗಿದೆ ಬ್ರಹ್ಮಾಂಡ ಮನೋಲ್ಲಾಸಕ್ಕೆ ಕತೆ, ಕವನಗಳು. ಜ್ಞಾನದಿಗಂತ ವಿಸ್ತಾರಕ್ಕೆ ಸಿಂಪಲ್ ಸಯನ್ಸ್ ಮತ್ತು ವಿಜ್ಞಾನಪುಟಗಳು. ಪದಸಂಪತ್ತಿಗೆ ವಾಗರ್ಥ ಚೂಡಾಮಣಿ. ನೊಂದ ಮನಸ್ಸುಗಳಿಗೆ ಸಮಾಧಾನ. ಆರೋಗ್ಯ ರಕ್ಷಣೆಗೆ ಗುಣಮುಖ. ದೇವದಾನವರ ಕತೆಗಳಿಗೆ ಪುರಾಣ ಪ್ರಪಂಚ. ವೈವಿಧ್ಯಮಯ ಅಂಕಣಗಳು, ನವನವೀನ ಲೇಖನಗಳು. ಓ ಮನಸೇಯ 116ನೇ ಸಂಚಿಕೆ.