Buy Now @ ₹ 20.00
Preview
ಶೇಮ್ ಶೇಮ್ ಪಪ್ಪಿ ಶೇಮ್
ಹಳೆಯ ಗೆಳೆಯರೆಲ್ಲಾ ಒಂದೆಡೆ ಸೇರಿ ಒಂದು ದಟ್ಟ ಕಾಡಿಗೆ ಟ್ರೆಕ್ಕಿಂಗ್ ಹೋಗಿ ಅಲ್ಲಿ ಟೆಂಟ್ ಹಾಕಿ ಫೊಟೋ ತೆಗೆಸಿಕೊಂಡು ಫೇಸ್‌ಬುಕ್ಕಿಗೋ ವಾಟ್ಸಪ್ಪಿಗೋ ಹಾಕಿ ಖುಷಿಯಾಗುತ್ತಿದ್ದ ಕಾಲದಲ್ಲೇ ಒಂದು ಟ್ವಿಸ್ಟು. ನಾವೊಂಚೂರು ಬದಲಾಗಿದ್ದೇವೆ. ನಮ್ಮ ಜಗತ್ತಲ್ಲಿ ಸಣ್ಣದೊಂದು ಸುನಾಮಿ ಎದ್ದಿದೆ. ಆ ಸುನಾಮಿ ಎದ್ದಿದೇ ಅನ್ನುವುದೇ ನಮಗೆ ಗೊತ್ತಾಗಿಲ್ಲ. ಇದು ಎಫ್‌ಬಿ, ವಾಟ್ಸಪ್ ಬಳಸೋರು ಓದಲೇಬೇಕಾದ ಬರಹ. ಒಂದ್ಸಲ ಓದಿ - ಫೇಸ್ ಬುಕ್ಕಲ್ಲಿ ಒಂದು ಡೇಂಜರಸ್ ಗೇಮ್
ಓಡುವೆ.. ನಾ ಓಡುವೆ
ಪಾಪ, ನಿಮಗೆ ವ್ಯಾಯಾಮ ಮಾಡಬೇಕು ಅನ್ನೋ ಆಸೆ, ಆದರೆ ಮಾಡೋದಕ್ಕಾಗ್ತಿಲ್ಲ. ಕೈಕಾಲು ನಿಮ್ಮ ಮಾತು ಕೇಳ್ತಾ ಇಲ್ಲ. ನಿಮ್ಮಂಥವರಿಗೆ ಎಂದೇ ಒಂದು ಮದ್ದು ತಯಾರಾಗ್ತಿದೆ. ಇದೇ ಜೀನ್ ಉದ್ದೀಪನಾ ಮದ್ದು. ಇದರಿಂದ ವ್ಯಾಯಾಮಕ್ಕೆ ಪ್ರೇರಣೆ ಸಿಗಬಹುದು, ಜತೆಗೆ ಬೊಜ್ಜು ಕರಗುವ ವೇಗ ಜಾಸ್ತಿಯಾಗಬಹುದು. ಜೀನ್ ಉದ್ದೀಪನಾ ಮದ್ದನ್ನು ನಿಯಮಿತವಾಗಿ ಸೇವಿಸಿದಾಗ ನಿಮ್ಮ ಸ್ನಾಯುಗಳು ಹೆಚ್ಚು ಚಟುವಟಿಕೆಯಲ್ಲಿರುವಂತೆ ಭ್ರಮೆ ಮೂಡುತ್ತದೆ, ಆಗ ನೀವು ಹೆಚ್ಚು ಚಲನಶೀಲರಾಗುತ್ತೀರಿ, ಎದ್ದೆದ್ದು ಎದ್ದುಬಿದ್ದು ಓಡುತ್ತೀರಿ. ಇದನ್ನು ನಾವು ಸೋಮಾರಿಗಳಿಗೊಂದು ಮದ್ದಿನ ಗುದ್ದು ಅಂತ ಕರೀತೀವಿ
ಸೊಂಟದ ವಿಷ್ಯ ಬ್ಯಾಡವೋ ಶಿಷ್ಯ
ಪೋರ್ಸೆಲಾನ ಎಂದರೆ ಕವಡೆ ಎಂದು ಅರ್ಥ. ಕವಡೆಯ ಮೈ ಕೂಡ ಪಿಂಗಾಣಿಯಂತೆ ನುಣುಪಾಗಿರುವುದರಿಂದ ಪಿಂಗಾಣಿಗೆ ಆ ಹೆಸರು ಇಟ್ಟದ್ದು ಸೂಕ್ತವೇ. ಆದರೆ, ಪೋರ್ಸೆಲಾನ ಎನ್ನುವ ಪದಕ್ಕೂ ಇನ್ನೊಂದು ಮೂಲವುಂಟು. ಅದು “ಪೋರ್ಸೆಲ್ಲ. ಯಾವುದೋ ಪಂಡಿತನಿಗೆ ಸಮುದ್ರದಲ್ಲಿ ಸಿಗುವ ಕವಡೆ ಕೂಡ ಪ್ರಾಣಿಯ ಮರ್ಮಾಂಗದಂತೆ ಕಂಡಿರಬೇಕು! ಯಾಕೆಂದರೆ ಪೋರ್ಸೆಲ್ಲದ ಅರ್ಥ - ಹೆಣ್ಣುಹಂದಿಯ ಮರ್ಮ ಎಂದು! ಇನ್ನೂ ಹೆಚ್ಚಿನ ಡೀಟೇಲ್ಸ್ ಬೇಕು ಅಂದರೆ ವಾಗರ್ಥ ಚೂಡಾಮಣಿ ಓದಿರಿ.
ನಿಮ್ಮ ಮಗನನ್ನು ನೀವು ಏನೂ ಮಾಡಲಾರಿರಿ
ಅಪ್ಪನ ಆದರ್ಶ ಮತ್ತು ದುಡಿಮೆಯನ್ನು ನೋಡುತ್ತಾ ಬೆಳೆದ ಮಕ್ಕಳಿಗೆ ತಾವು ಹಾಗಾಗಕೂಡದು ಅನ್ನಿಸುತ್ತದೆ. ನೀನು ಹೀಗೇ ಆಗಬೇಕು ಅಂತ ತಂದೆ-ತಾಯಿ ಅಪ್ಪಣೆ ಮಾಡುತ್ತಿದ್ದಂತೆ ಅದರ ವಿರುದ್ಧ ಮಗನ ಹೋರಾಟ ಶುರುವಾಗುತ್ತದೆ. ಅಪ್ಪನ ಮಗ ಮತ್ತು ತನ್ನತನದ ನಡುವೆ ಘರ್ಷಣೆ ಉಂಟಾಗುತ್ತದೆ. ಅದರಲ್ಲಿ ಕೊನೆಗೂ ಗೆಲ್ಲುವುದು ಯಾರು ಜಾನಕಿ ತಮ್ಮ ಅಂಕಣದಲ್ಲಿ ಬರೆದಿದ್ದಾರೆ ಓದಿ.
ಈ ಕ್ರೂರಿ ಗಂಡನಿಂದ ಹೇಗೆ ಪಾರಾಗಲಿ
ಗಂಡ ಭಯಾನಕ ಕುಡುಕ, ಮಗನೂ ಕುಡುಕ. ಗಂಡ ಕುಡಿದಮತ್ತಲ್ಲಿ ಹೆಂಡತಿಗೆ ಬಡಿಯುತ್ತಾನೆ. ಇಂಥಾ ಹೊತ್ತಲ್ಲಿ ಹೆಂಡತಿಗೊಬ್ಬ ಗೆಳೆಯ ಸಿಗುತ್ತಾನೆ. ಗಂಡ ನೀಡದೇ ಇರುವ ಸಾಂತ್ವನ ಅವನಲ್ಲಿ ಸಿಗುತ್ತದೆ. ಮುಂದೆ ಅವನ ಜೊತೆ ಓಡಿಹೋಗುವುದಾ, ಗಂಡನಿಗೆ ವಿಚ್ಛೇದನ ಕೊಡುವುದಾ, ಇನ್ನೊಂದು ಮದುವೆಯಾಗುವುದಾ ಇಂಥಾ ಹತ್ತಾರು ಪ್ರಶ್ನೆಗಳಿಗೆ ಉತ್ತರ ಇದೆ ಸಮಾಧಾನದಲ್ಲಿ
ತಲೆಯಲ್ಲಿರಬೇಕಾದ್ದು ಎದೆಗೆ ಬರಬಾರದು!
ನಮ್ಮ ದೇಹದಲ್ಲಿ ಪ್ರೀತಿಗೊಂದು ಹಾಗೂ ಇನ್ನುಳಿದ ನಿರ್ಣಾಯಕ ಕೆಲಸಗಳಿಗೊಂದು ಹೀಗೆ ಎರಡು ಪ್ರತ್ಯೇಕ ವ್ಯವಸ್ಥೆಗಳಿವೆ. ಮೊದಲನೆಯದನ್ನು ಮನಸ್ಸು ಎನ್ನುತ್ತೇವೆ. ಎರಡನೆಯದನ್ನು ಮೆದುಳು ಎನ್ನುತ್ತೇವೆ. ಮನಸ್ಸಿನ ಕೆಲಸವನ್ನು ಮೆದುಳು ಮಾಡಬಾರದು. ಮೆದುಳಿನ ಕೆಲಸವನ್ನು ಮನಸ್ಸು ಮಾಡಬಾರದು.
ಎದೆಯಲ್ಲಿರಬೇಕಾದ್ದು ಎದೆಯಲ್ಲೇ ಇರಬೇಕು,
ತಲೆಯಲ್ಲಿರಬೇಕಾದ್ದು ತಲೆಯಲ್ಲೇ ಇರಬೇಕು.
ಇವೆರಡರ ಜಾಗ ಅದಲುಬದಲು ಮಾಡಿದರೆ ನೀವು ಡಿ.ಕೆ.ರವಿ ಆಗಬಹುದು ಅಥವಾ ಹಿಟ್ಲರ್ ಕೂಡಾ ಆಗಬಹುದು.
ರಾಮಮಂತ್ರ ಮತ್ತು ಕುಹಕಿಗಳ ಕುತಂತ್ರ
ರಾಮ ಶತ್ರುವಿನ ಮನಸ್ಸಲ್ಲೂ ಮೂರ್ಧನ್ಯ ಸ್ಥಿತಿಯಲ್ಲಿ ನಿಂತವನು. ಕೆಲವರು ರಾಮನ ಕೆಲ ನಿಲುವುಗಳನ್ನ ನಿಂದಿಸ್ತಾರೆ. ಶೂರ್ಪನಖಾ ಸಂದರ್ಭ, ಸೀತಾ ಅಗ್ನಿಪ್ರವೇಶ ಸಂದರ್ಭ, ವಾಲಿ ವಧೆ, ಅಗಸನ ಮಾತು ಕೇಳಿ ಸೀತೆಯನ್ನ ಕಾಡಿಗೆ ಕಳಿಸಿದ್ದು, ಶಂಭೂಕನ ವಧೆ, ಹೀಗೆ . ಆದ್ರೆ ಈ ಎಲ್ಲ ಕಾರಣಗಳ ಹಿಂದೆಯೂ ಧರ್ಮವಿದೆ. ಸತ್ಯವಿದೆ. ಸದುದ್ದೇಶವೇ ಇದೆ. ಇದೆಲ್ಲ ಅರ್ಥವಾಗಬೇಕಿದ್ದರೆ ನಾವು ಪುರಾಣದಲ್ಲಿ ಉಲ್ಲೇಖವಾಗಿರುವ ರಾಮಾಯಣವನ್ನೂ ಓದಿಕೊಳ್ಳಬೇಕು. ಭಗವಾನರು ಹೇಳಿದ್ದೇ ಸತ್ಯವಲ್ಲ.
ಇದು ಈ ಬಾರಿಯ ಓ ಮನಸೇಯ ಹೂರಣ.
ರೋಚಕ, ವಿಚಾರ ಪ್ರಚೋದಕ, ಒಂದಿಷ್ಟು ಪುಳಕ. ಸಮೃದ್ಧ ಓದಿಗಾಗಿ ಇಂದೇ ಖರೀದಿಸಿ.