O Manase


Buy Now @ ₹ 20.00 Preview
ಕಣ್ಣುಗಳ ಪಿಸುಮಾತನ್ನೂ ಪದಗಳಲ್ಲಿ ಹಿಡಿದಿಟ್ಟ ಭಾಷೆಯುಂಟು ಎಷ್ಟೋ ಸಲ ನಮ್ಮ ಭಾವನೆಗಳನ್ನು ಭಾಷೆಯಲ್ಲಿ ಹೇಳಲಾಗದ ಅಸಹಾಯಕ ಸ್ಥಿತಿಯಲ್ಲಿರುತ್ತೇವೆ. ಅಂಥಾದ್ದೊಂದು ಭಾವನೆಗೂ ಒಂದು ಶಬ್ದ ಇದ್ದರೆ ಚೆನ್ನಾಗಿತ್ತೆಂದು ಅನಿಸುತ್ತದೆ. ಭಾವನೆಗಳ ರಿಲೇ ಓಟದಲ್ಲಿ ಭಾಷೆ ಸೋಲುವುದು ಹೀಗೆ. ತನ್ನ ಭಾಷೆಯೇ ಶ್ರೇಷ್ಠ ಎನ್ನುವ ಯಾರ ಬತ್ತಳಿಕೆಯಲ್ಲೂ ಹೀಗೆ ಎಲ್ಲಾ ಭಾವನೆಗಳಿಗೆ ನಾಲಗೆ ಕೊಡುವ ಕಸುವು ಇರುವುದಿಲ್ಲ. ಅಲ್ಲೊಮ್ಮೆ ಇಲ್ಲೊಮ್ಮೆ ಭಾವನೆಯ ಅನಂತರೂಪಕ್ಕೆ ಭಾಷೆ ಬೆರಗಾಗಿ ಸೋಲಲೇಬೇಕು. ಹಾಗೆ ಸೋತರೇನೇ ಅದು ಜೀವಂತಭಾಷೆ. ಮಾತನ್ನು ಸೋಲಿಸುವ ಅಂಥಾ ಭಾವನೆಗಳಾದರೂ ಯಾವುವು ಭಾವಜೀವಿಗಳು ಓದಲೇಬೇಕಾದ ಲೇಖನಃ ಭಾಷೆಗು ಮೀರಿದ ಭಾವಗೀತೆ ತಂತ್ರಜ್ಞಾನ ಅನ್ನೋದು ತುಂಬ ಕೆಟ್ಟದ್ದು ಅಥವಾ ಒಳ್ಳೆಯದು. ಅದು ನಿಮ್ಮ ಜಾತಕ ಕೇಳುವುದಿಲ್ಲ, ಬುದ್ಧಿಮತ್ತೆ ಪರಿಗಣಿಸುವುದಿಲ್ಲ. ನೀವು ಯಾವ ಹುದ್ದೆಯಲ್ಲಿದ್ದೀರಿ ಅನ್ನುವುದನ್ನು ಕಣ್ಣೆತ್ತಿ ನೋಡುವುದಿಲ್ಲ. ತನ್ನ ನಿರ್ದಾಕ್ಷಿಣ್ಯ ಕೈಯನ್ನು ನಿಮ್ಮ ಮುಂದೆ ಹಿಡಿದು ಹೋಗು ನಿಂಗೆ ವಯಸ್ಸಾಗಿದೆ ಅನ್ನುತ್ತೆ. ಹೊಸಹೊಸ ಮೊಬೈಲ್, ಕಂಡುಕೇಳರಿಯದ ಆಪ್ ತಂತ್ರಜ್ಞಾನ, ಸರಕ್ಕನೆ ದಾಟಿಹೋಗುವ ಕಾಲಮಾನ, ಎಂಥಾ ಹೊಸತು ಕೂಡಾ ಹಳತಾಗೋ ಕೆಟ್ಟವೇಗ...ಸ್ಪೀಡಾಗಿದೆ ಜಮಾನಾ. ಯೋಚನೆ ಮಾಡಿ, ನಿಮಗೂ ವಯಸ್ಸಾಗ್ತಿದೆ ಅಂತ ಅನಿಸೋದಕ್ಕೆ ಶುರುವಾಗಿದ್ಯಾ ತಂತ್ರಜ್ಞಾನದ ಮುಂದೆ ಸೋತವರ ಕತೆಯಿದುಃ ನಿನ್ನ ಮುಪ್ಪಿಗೆ ನೀನೇ ಕಾರಣ ಚಿರಾಪುಂಜಿಯಲ್ಲೇ ಮಳೆಯಿಲ್ಲ, ಪ್ರಕೃತಿ ಮುನಿದಿದೆ ಅಂತಾರೆ. ಅದು ಮುನಿಯುವುದಿಲ್ಲ, ತನ್ನ ಪತನಕ್ಕೆ ಕಾರಣವಾದ ಮನುಷ್ಯನನ್ನು ಬರ್ಬರವಾಗಿ ಹಿಂಸಿಸುತ್ತದೆ. ಅದರ ಬರ್ಬರತೆಗೆ ಸಿಕ್ಕರೆ ಎಂಥಾ ಮನುಷ್ಯನೂ ನೆಲಕ್ಕೆ ಬೀಳುತ್ತಾನೆ. ಮಲೆನಾಡಿನಲ್ಲಿ ಈಗ ಮಳೆಯಿಲ್ಲ, ಮರವಿಲ್ಲ. ಮರ ಕಡಿದು ಮನೆ ಮಾಡಿದ್ದಾರೆ. ಹಾಗಾಗಿ ನೆರಳೂ ಇಲ್ಲ. ತಪ್ಪು ನಮ್ಮದೇ. ಯಾರಾದರೂ ಅಷ್ಟೇ ಬದುಕಿನ ವಿರುದ್ಧ ಗೊಣಗಬಾರದು, ಕಂಪ್ಲೇಂಟ್ ಮಾಡಬಾರದು. ಬದುಕು ದುಷ್ಟ ವ್ಯಕ್ತಿಯಲ್ಲ. ಅದು ಎಲ್ಲವನ್ನೂ ಕೊಡುತ್ತದೆ. ಹಾಗಂತ ರವಿ ಬೆಳಗೆರೆ ಬರೀತಾರೆ. ಮನಸಿನ್ಯಾಗಿನ ಮಾತು ನಾನು ಒಬ್ಬರನ್ನು ಪ್ರೀತಿಸಿ ಮದುವೆಯಾದೆ. ಆರಂಭದ ಮೂರು ವರ್ಷ ಚೆನ್ನಾಗಿತ್ತು. ಆದರೆ ಆರುವರ್ಷವಾದರೂ ನಾನು ಗರ್ಭ ಧರಿಸಲಿಲ್ಲ. ವೈದ್ಯರು ಹೇಳಿದರು, ನನ್ನ ಗಂಡನಿಂದ ನಾನು ತಾಯಿಯಾಗಲಾರೆ ಎಂದು. ಅಲ್ಲಿಂದ ಅವರ ಕಿರಿಕಿರಿ ಶುರುವಾಯಿತು. ನನ್ನ ಫೋನ್ ಕಾಲ್ ಗಳನ್ನು ಚೆಕ್ ಮಾಡುವುದಕ್ಕೆ ಶುರುಮಾಡಿದರು. ಹಂಗಿಸಿ ಮಾತಾಡುತ್ತಾರೆ, ಬೈಯ್ಯುತ್ತಾರೆ. ಈ ಕಿರಿಕಿರಿಯಿಂದಾಗಿ ನಾನು ಇನ್ನೊಬ್ಬರ ಸಂಗ ಮಾಡಿದೆ. ಬಂಜೆ ಎಂಬ ಅಪವಾದದಿಂದ ದೂರವಾಗಬೇಕಾಗಿತ್ತು, ನನ್ನದೇ ಮಗುವಿನ ಮಧುರವಾದ ಘಮ ಅನುಭವಿಸಬೇಕಾಗಿತ್ತು. ಈಗ ನನ್ನ ಗಂಡ ನನ್ನ ಜೊತೆ ಮಾತು ಬಿಟ್ಟಿದ್ದಾರೆ. ನಾನೀಗ ಏನು ಮಾಡಲಿ ಸಮಾಧಾನ ಅಂಕಣಕ್ಕೆ ಗೃಹಿಣಿಯೊಬ್ಬಳು ಬರೆದ ಪತ್ರವಿದು. ಈ ಸಮಸ್ಯೆಗೆ ರವಿ ಬೆಳಗೆರೆ ನೀಡಿದ ಉತ್ತರವಾದರೂ ಏನು ಎಷ್ಟು ಜೀವ ತೇಯ್ದರೂ ಅದಕ್ಕೆ ಬೆಲೆಯೇ ಇಲ್ಲ ಕೆಲವರು ವರ್ಷದಲ್ಲೊಂದು ದಿನ ಪ್ಯಾಂಟು ಹಾಕದೇ ಚಡ್ಡಿಯಲ್ಲೇ ಓಡಾಡುತ್ತಾರೆ, ಫ್ಲಾಷ್ ಮಾಬ್ ಹೆಸರಲ್ಲಿ ಹಠಾತ್ತನೆ ಸನ್ನಿ ಹಿಡಿದವರಂತೆ ರೇಲ್ವೇ ಸ್ಟೇಷನ್ನಿನಲ್ಲಿ ಡ್ಯಾನ್ಸ್ ಮಾಡುತ್ತಾರೆ, ಟ್ರಾಫಿಕ್ ಪೊಲೀಸರಿಗೆ ಗುಲಾಬಿ ಹೂ ಕೊಡುತ್ತಾರೆ. ಇವರ್ಯಾರೂ ಹುಚ್ಚರಲ್ಲ. ಇವೆಲ್ಲವೂ ಜನರ ಗಮನವನ್ನು ಸೆಳೆಯುವ ಉಪಾಯಗಳು. ಯಾವುದಾದರೂ ಕೆಲಸಕ್ಕೆ ಜನರ ಬೆಂಬಲ ಗಿಟ್ಟಿಸಬೇಕು ಎಂದರೆ ಅವರಲ್ಲಿ ಕುತೂಹಲ ಹುಟ್ಟಿಸಬೇಕು. ಅದಕ್ಕೆ ಇಂಥಾ ಕ್ರೇಜಿ ಐಡಿಯಾಗಳೇ ಬೇಕು. ಅದರಿಂದ ಜಗತ್ತು ಬದಲಾಗುತ್ತದೆ ನೀವೂ ಕ್ರೇಜಿವಾಲಾ ಆಗಬಹುದು ಮನಸ್ಸು ನೆನೆಯುತ್ತದೆ, ಉರಿವ ಒಲೆಗಳ ಮುಂದೆ ಕಳೆದ ದಿನಗಳನ್ನು. ಕಿಚ್ಚಲ್ಲದ ಧಗೆಯನ್ನು ಹೊತ್ತಿಸಿದ ತಾರುಣ್ಯದ ಸಂಬಂಧಗಳನ್ನು, ಗಡಿಯಾರದೊಳಗಿಂದ ಯಾವಾಗಲೋ ಬಂದು ಮನಸ್ಸನ್ನು ಕದ್ದ ಸಂಗಾತಿಯನ್ನು. ಅವನೊಡನೆ ತಾನಿಟ್ಟ ಹೆಜ್ಜೆಗಳನ್ನು. ಉರಿವ ಒಲೆಯ ಮುಂದೆ ನಾನೂ ಉರಿಯುತ್ತಿದ್ದೇನೆ, ನಿರಂತರವಾಗಿ, ಹಿಡಿಪ್ರೀತಿಗಾಗಿ. ದೆಹಲಿಯಿಂದ ರೇಣುಕಾ ಕಳಿಸಿದ ರಾಜಧಾನಿ ಮೇಲ್ ಬಂದಿದೆಃ ಉರಿವ ಒಲೆಗಳ ಮುಂದೆ ಜಾತ್ರೆ ಯಾಕೆ ನೋಡಬೇಕು ರಥ ಯಾಕೆ ಎಳೀಬೇಕು ಉತ್ತರ ‘ಆಚಾರ ವಿಚಾರ’ದಲ್ಲಿದೆ. ಆನ್ ಲೈನ್ ನಲ್ಲಿ ದುಡ್ಡು ಕಳಕೊಳ್ಳುವ ಮುನ್ನ ‘ಲಾ ಪಾಯಿಂಟ್’ ಓದಿ. ನಾವು ಸೇವಿಸುವ ಆಹಾರ ಹೇಗಿರಬೇಕು ‘ಹಸನ್ಮುಖಿ’ ಅಂಕಣದಲ್ಲಿ ವಿವರಗಳಿವೆ. ಕೈಯಲ್ಲೇ ಹಿಡಿದುಕೊಂಡು ಓಡಾಡಬಹುದಾದ ಮಿನಿ ಕಂಪ್ಯೂಟರ್ ಒಂದು ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ ಗೊತ್ತಾ ‘ವಾಟ್ಸ್ ಅಪ್’ ಅಂಕಣದಲ್ಲಿ ಫುಲ್ ಡೀಟೇಲ್ಸ್. ರೈತನ ಮಗ ಗುಮಾಸ್ತನಾಗುತ್ತಾನೆ, ಗುಮಾಸ್ತನ ಮಗ ರೈತನಾಗುತ್ತಾನೆ. ಯಾಕೆ ಹೀಗೆ ಜಾನಕಿಯ ‘ತಂದೆತಾಯಿ ದೇವರಲ್ಲ’ ಅಂಕಣ ಓದಿ. ಮೊದಲ ಪ್ರೇಮಪತ್ರದ ಮೂರನೇ ಭಾಗದಲ್ಲಿ ಪ್ರೇಮಾಚಾರಿಗಳ ಕಲರವವಿದೆ. ‘ಸೈಡ್ ವಿಂಗ್’ ನಲ್ಲಿ ಮೊದಲರಾತ್ರಿ ಕುರಿತಾದಂತೆ ಒಂದು ಟಿಪ್ಪಣಿ ಇದೆ. ನವವಿವಾಹಿತರು ಓದಿಕೊಳ್ಳಿ. ಆಕಾಶದಲ್ಲಿ ಚಂದ್ರನೇ ಇರದಿದ್ದರೆ ಏನಾಗ್ತಿತ್ತು ಅಂತ ‘ಸೈನ್ಸ್ ಪೇಜ’ಲ್ಲಿ ವಿನಯ್ ಭಟ್ ಬರೆದಿದ್ದಾರೆ. ‘ಸಮಾಧಾನ’ ಈ ಬಾರಿ ಭರ್ತಿ ಎಂಟು ಪುಟಗಳಿವೆ ಅನ್ನೋದೇ ಈ ಸಂಚಿಕೆಯ ವಿಶೇಷ. ಜೊತೆಗೆ ಮಿಕ್ಕೆಲ್ಲಾ ಅಂಕಣಗಳು ಉಂಟು. ‘ಓ ಮನಸೇ’ – ಇದು ಹೊತ್ತಲ್ಲದ ಹೊತ್ತಲ್ಲಿ ಸುರಿಯುವ ಬೆಂಗಳೂರಿನ ಮಳೆಯಂತಲ್ಲ, ವರ್ಷಪೂರ್ತಿ ಮನಸ್ಸಿಗೆ ತಂಪೆರೆಯುವ ಸೋನೆಮಳೆ. ತಪ್ಪದೇ ಓದಿ, ಮನಸ್ಸು ತಂಪಾಗಿಸಿಕೊಳ್ಳಿ.